ಬಿಗ್‌ ಬಾಸ್‌ ಕನ್ನಡ ಸೀಸನ್‌ 11ನ್ನು ಮುಗಿಸಿ ಮನೆಯಿಂದ ಹೊರಗೆ ಬಂದಿರುವ ಬಿಗ್‌ ಬಾಸ್‌ ಸ್ಪರ್ಧಿಗಳು ಸಖತ್‌ ಬ್ಯುಸಿ. ಒಂದಾದ್ಮೇಲೆ ಒಂದು ಶೋನಲ್ಲಿ ಕಾಣಿಸಿಕೊಳ್ತಿದ್ದಾರೆ ಸ್ಪರ್ಧಿಗಳು. ಈಗ ಮಜಾ ಟಾಕೀಸ್‌ ಗೆ ಮಜಾ ಮಾಡಲು ಮಂಜಣ್ಣ, ಗೌತಮಿ, ಭವ್ಯಾ ಗೌಡ, ತ್ರಿವಿಕ್ರಮ್‌ ಬಂದಿದ್ದಾರೆ. 

ವೀಕೆಂಡ್ ನಲ್ಲಿ ವೀಕ್ಷಕರಿಗೆ ಮನರಂಜನೆ ನೀಡಲು ಮಜಾ ಟಾಕೀಸ್ (Maja Talkies) ಈಗಾಗ್ಲೇ ಅದ್ಧೂರಿ ಆರಂಭ ಕಂಡಿದೆ. ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11)ರ ಫಿನಾಲೆ ಮುಗಿತಿದ್ದಂತೆ ಸೃಜನ್ ಲೋಕೇಶ್ (Srujan Lokesh) ತಮ್ಮ ತಂಡದ ಜೊತೆ ಮಜಾ ಟಾಕೀಸ್ ಶುರು ಮಾಡಿದ್ದಾರೆ. ಫೆಬ್ರವರಿ ಒಂದರಿಂದ ಶುರುವಾಗಿರುವ ಶೋನಲ್ಲಿ ಯೋಗರಾಜ್ ಭಟ್ (Yogaraj Bhat) ಹೈಲೈಟ್. ಹಿಂದಿನ ವಾರ, ಯೋಗರಾಜ್ ಭಟ್ ಕುಟುಂಬ ಸಮೇತರಾಗಿ ಮಜಾ ಟಾಕೀಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಎರಡನೇ ದಿನ ನಟ ಶರಣ್ ಹಾಗೂ ತರುಣ್ ಸೃಜನ್ ಲೋಕೇಶ್ ಟೀಂಗೆ ಶುಭಕೋರಿದ್ದರು. ಈಗ ಬಿಗ್ ಬಾಸ್ ಸ್ಪರ್ಧಿಗಳ ಸರದಿ. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಮಂಜು, ಗೌತಮಿ, ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ಈ ಬಾರಿ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಾಲ್ವರ ವಿಡಿಯೋ ವೈರಲ್ ಆಗಿದೆ. ಗುಲಾಬಿ ಬಣ್ಣದ ಡ್ರೆಸ್ ಧರಿಸಿ ಭವ್ಯಾ ಗೌಡ ಮಿಂಚಿದ್ರೆ, ಕೋಟ್ ಧರಿಸಿ ತ್ರಿವಿಕ್ರಮ್ ಬಂದಿದ್ದಾರೆ. ಸಿಂಪಲ್ ಆಗಿರುವ ಮಂಜಣ್ಣಗೆ ಸೀರೆಯುಟ್ಟ ಗೌತಮಿ ಸಾಥ್ ನೀಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಮಜಾ ಟಾಕೀಸ್ ತಮ್ಮ ಇನ್ಸ್ಟಾ ಖಾತೆಯಲಿ ಪ್ರೋಮೋ ಹಂಚಿಕೊಂಡಿದೆ. ಬಿಗ್ ಬಾಸ್ ಮನೆಯ ಜೋಡಿಗಳು ಮಜಾ ಟಾಕೀಸ್ ನಲ್ಲಿ ಭರ್ಜರಿ ಮಜಾ ಮಾಡಿವೆ. ಮಂಜು, ಗೌತಮಿ, ಭವ್ಯಾ ಹಾಗೂ ತ್ರಿವಿಕ್ರಮ್ ಅವರನ್ನು ಒಂದೇ ವೇದಿಕೆ ಮೇಲೆ ಒಟ್ಟಿಗೆ ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ. 

ಹನುಮಂತ ನಾಟಕ ಮಾಡ್ತಾನೆ ಅನ್ನೋರು ನೋಡ್ಬೇಕಂತೆ ಇದು.. ಏನಂತೆ 'ಬಿಗ್ ಬಾಸ್'

ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಈ ಸ್ಪರ್ಧಿಗಳು ಒಂದಾದ್ಮೇಲೆ ಒಂದು ಶೋನಲ್ಲಿ ಕಾಣಿಸಿಕೊಳ್ತಿದ್ದಾರೆ. ಕೆಲ ಸ್ಪರ್ಧಿಗಳು ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ರಜತ್, ಹನುಮಂತು ಮತ್ತು ಭವ್ಯಾ ಗೌಡಾಗೆ ಈ ಶೋಗೆ ಆಫರ್ ಬಂದಿತ್ತು. ಆದ್ರೆ ಭವ್ಯಾ ಗೌಡ ಶೋನಲ್ಲಿ ಮಿಸ್ ಆಗಿದ್ದಾರೆ. ಇದನ್ನು ನೋಡಿ ಅಭಿಮಾನಿಗಳಿಗೆ ಅನುಮಾನ ಶುರುವಾಗಿತ್ತು. ಬಾಯ್ಸ್ ವರ್ಸಸ್ ಗರ್ಲ್ಸ್ ನಲ್ಲಿ ಭವ್ಯಾ ಯಾಕಿಲ್ಲ ಎನ್ನುವ ಪ್ರಶ್ನೆ ಕಾಡಿತ್ತು. ಅದಕ್ಕೆ ಭವ್ಯಾ ಉತ್ತರ ನೀಡಿದ್ದಾರೆ. ನನಗೆ ಹುಷಾರಿರಲಿಲ್ಲ. ಹಾಗಾಗಿ ನಾನು ಮಿಸ್ ಆಗಿದ್ದೇನೆ ಎಂದಿದ್ದಾರೆ.

ಇನ್ನು ಗೌತಮಿ ಹಾಗೂ ಮಂಜು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಸಂದರ್ಶನ ನೀಡೋದ್ರಲ್ಲಿ ಬ್ಯೂಸಿಯಾಗಿದ್ದಾರೆ. ಉತ್ತಮ ಸ್ನೇಹಿತರಾಗಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ಅವರು, ಸ್ನೇಹದ ಬಗ್ಗೆ ಅದೆಷ್ಟೇ ಕಮೆಂಟ್ ಬಂದ್ರೂ ತಲೆಕೆಡಿಸಿಕೊಂಡಿಲ್ಲ. ಮಂಜು ಸ್ವಭಾವವನ್ನು ಆಗಾಗ ಹೊಗಳುವ ಗೌತಮಿ, ಬಿಗ್ ಬಾಸ್ ಮನೆಯಿಂದ ವಾಪಸ್ ಬಂದ್ಮೇಲೆ ಎರಡನೇ ಬಾರಿ ತಮ್ಮ ಇಷ್ಟ ದೇವತೆ ವನದುರ್ಗೆಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಮಂಜಣ್ಣ ಕೂಡ ಅವರ ಜೊತೆಗಿದ್ರು.

BBK 11: ನಾನು ಗೌತಮಿ ಜಾಧವ್‌ನನ್ನು ಟಾರ್ಗೆಟ್‌ ಮಾಡ್ಲಿಲ್ಲ, ಆ ಟೈಮ್‌ನಲ್ಲಿ ಬಕೆಟ್‌ ಹೇಳಿ

ಬಿಗ್ ಬಾಸ್ ಸೀಸನ್ 11ರ ರನ್ನರ್ ಅಪ್ ಆಗಿರುವ ತ್ರಿವಿಕ್ರಮ್ ಕೂಡ ಫುಲ್ ಬ್ಯುಸಿ. ಒಂದ್ಕಡೆ ಶೋ ಇನ್ನೊಂದ್ ಕಡೆ ಸಿಸಿಎಲ್. ಕರ್ನಾಟಕ ಬುಲ್ಡೋಜರ್ಸ್ ಟೀಂನಲ್ಲಿ ಕಿಚ್ಚ ಸುದೀಪ್ ಜೊತೆ ತ್ರಿವಿಕ್ರಮ್ ಆಡಲಿದ್ದಾರೆ. ಅದಕ್ಕೆ ಅಭ್ಯಾಸ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿರುವಾಗ್ಲೇ ಸುದೀಪ್ ಈ ಬಗ್ಗೆ ತ್ರಿವಿಕ್ರಮ್ ಅವರಿಗೆ ಹೇಳಿದ್ರು. ಇದೇ ಫೆಬ್ರವರಿ 8ರಿಂದ ಪಂದ್ಯ ಶುರುವಾಗಲಿದೆ. 

View post on Instagram