ಮೂರನೇ ಬಾರಿ ಮನೆಯ ಕ್ಯಾಪ್ಟನ್‌ ಆದ ಭವ್ಯಾ ಗೌಡ! ಮೋಸ ಮಾಡಿ ನಾಯಕಿಯಾದ್ರಾ?

ಬಿಗ್‌ಬಾಸ್‌ ಕನ್ನಡ 11ರ 13ನೇ ವಾರದಲ್ಲಿ ಭವ್ಯಾ ಗೌಡ ಮೂರನೇ ಬಾರಿಗೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಆದರೆ, ಬಾಲ್ ಹಾಕುವ ಟಾಸ್ಕ್‌ನಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಮನೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Bigg Boss Kannada 11 Bhavya gowda  elected third time as Captain of the house gow

ಬಿಗ್‌ಬಾಸ್‌ ಕನ್ನಡ 11 ಈಗ 13ನೇ ವಾರದ ಕ್ಯಾಪ್ಟನ್‌ ಆಗಿ ಭವ್ಯಾ ಗೌಡ ಆಯ್ಕೆಯಾಗಿದ್ದಾರೆ. ಈ ಮೂಲಕ 14ನೇ ವಾರದ ಕ್ಯಾಪ್ಟನ್‌ ಆಗಿದ್ದಾರೆ. ಜೊತೆಗೆ  15ನೇ ವಾರದಲ್ಲಿ ಸೇವ್‌ ಆಗಿದ್ದಾರೆ. ಇನ್ನು 3 ವಾರದಲ್ಲಿ ಬಿಗ್‌ಬಾಸ್‌ ಫಿನಾಲೆ ನಡೆಯಲಿದೆ. ಇದಕ್ಕೂ ಮುನ್ನ ಕ್ಯಾಪ್ಟನ್‌ ಆಗಿ ಇಮ್ಯೂನಿಟಿ ಪಡೆದು ಉಳಿದುಕೊಳ್ಳಲು ಸ್ಪರ್ಧಿಗಳು ಹೆಣಗಾಡುತ್ತಿದ್ದಾರೆ. ಈ ನಡುವೆ ಮನೆಯ ನೂತನ ಕ್ಯಾಪ್ಟನ್‌ ಆಗಿ ಮೂರನೇ ಬಾರಿಗೆ ಭವ್ಯಾ ಆಯ್ಕೆಯಾಗಿದ್ದು, ಮುಂದಿನ ವಾರ ಕೂಡ ನಾಮಿನೇಷನ್‌ನಿಂದ ಸೇಫ್ ಆಗಿ ಫಿನಾಲೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಫಿನಾಲೆ ಸಮೀಪದಲ್ಲಿರುವ ಮನೆಯ ಸ್ಪರ್ಧಿಗಳು ಮನೆಯ ನಾಯಕತ್ವ ವಹಿಸಿ ಇನ್ನಷ್ಟು ದಿನ ಉಳಿದುಕೊಳ್ಳಲು ಹೆಣಗಾಡುತ್ತಿದ್ದಾರೆ. ಇವೆಲ್ಲದರ ಮಧ್ಯೆ ಮುಂದಿನ ಕ್ಯಾಪ್ಟನ್ ಆಗಲು   ಭವ್ಯಾ ಗೌಡ ಮತ್ತು ಧನ್‌ರಾಜ್ ಆಚಾರ್ ನಡುವೆ  ಪೈಪೋಟಿ ನಡೆದಿದೆ. ಬಾಲ್‌ ಹಾಕುವ ಟಾಸ್ಕ್ ನಲ್ಲಿ ಭವ್ಯಾ ಗೌಡ ಗೆದ್ದು ಮನೆಯ ಕ್ಯಾಪ್ಟನ್‌ ಆಗಿದ್ದಾರೆ.

ವೈಷ್ಣವಿ ಗೌಡ 5 ಅದ್ಭುತ ಬ್ಲೌಸ್ ವಿನ್ಯಾಸಗಳು, ನೀವೂ ಒಮ್ಮೆ ಟ್ರೈ ಮಾಡಿ

ಮೋಸ ಮಾಡಿದ್ರಾ ಭವ್ಯಾ ಗೌಡ:
ಇನ್ನು ಟಾಸ್ಕ್‌ ಆರಂಭವಾಗುವಾಗ ಮೊದಲ ಸುತ್ತಿನಲ್ಲಿ ಬಿಗ್‌ಬಾಸ್‌ ಹೇಳಿದ ನಂಬರ್‌ ನಿಂದ ಬಾಲ್ ತೆಗೆದುಕೊಂಡು ಬಾಕ್ಸ್ ನಲ್ಲಿ ಹಾಕಬೇಕಿತ್ತು.  9 ನಂಬರ್‌  ಬಿಗ್‌ಬಾಸ್‌ ಘೋಷಿಸಿ ಬಾಲ್‌ ತೆಗೆದುಕೊಳ್ಳುತ್ತಿದ್ದಾಗ  ಮೂರನೇ ನಂಬರ್‌ನಿಂದ ಬಾಲ್‌ ಬಿದ್ದಿತ್ತು. ಭವ್ಯಾ ಅವರು ಇದೇ ಬಾಲ್‌ ತೆಗೆದುಕೊಂಡು ಬಾಕ್ಸ್ ಗೆ ಹಾಕಿದ್ದಾರೆ. ಮತ್ತು ಎರಡನೇ ಸುತ್ತಿಗೆ ಆಯ್ಕೆಯಾದರು. ಆಟದ ಕೊನೆಯವರೆಗೂ ಹೋಗಿ ಮೂರನೇ ಬಾರಿ ಮನೆಯ ಕ್ಯಾಪ್ಟನ್‌ ಆಗಿದ್ದಾರೆ.

ಈ ಬಾಲ್‌ ಘಟನೆ ಮನೆಯಲ್ಲಿ ಚರ್ಚೆಗೆ ಕಾರಣವಾಯ್ತು. ಭವ್ಯಾ ತೆಗೆದುಕೊಂಡ ಬಾಲ್‌ 9 ನಂಬರ್‌ ನದ್ದು ಅಲ್ಲಾ ಎಂಬ ಚರ್ಚೆ ನಡೆಯಿತು. ಮೋಕ್ಷಿತಾ ಅವರಲ್ಲಿ ಕೇಳಿದಾಗ ಹೌದು ಆದರೆ ಯಾವ ನಂಬರ್‌ ಎಂದು ಗೊತ್ತಿಲ್ಲ ಎಂದರು. ಜೊತೆಗೆ ಈ ಟಾಸ್ಕ್‌ ನ ಉಸ್ತುವಾರಿ ಮಾಡಿದ ಮಂಜು ಮತ್ತು ಚೈತ್ರಾ ಕುಂದಾಪುರ ಇದಕ್ಕೆ ಜವಾಬ್ದಾರರು ಎಂದರು. ಮನೆಯಲ್ಲಿ ಎಲ್ಲರೂ ಇದೊಂದೇ ವಿಚಾರವನ್ನು ಹಲವು ಬಾರಿ ವಿಧದಲ್ಲಿ ಚರ್ಚೆ ನಡೆಸಿದರು. ಮೋಕ್ಷಿತಾಗೆ ಗೊತ್ತು. ಭವ್ಯಾ ಸುಮ್ನಿರಿ ಅಂತ ಮೋಕ್ಷಿಗೆ ಹೇಳಿದ್ದಾರೆ ಎಂದು ರಜತ್‌ ತ್ರಿವಿಕ್ರಮ್‌ ಬಳಿ ಮಾತನಾಡಿದರು.ಈ ಟಾಸ್ಕ್‌ ನಲ್ಲಿ ತಪ್ಪು ಭವ್ಯಾದ್ದಾ? ಮೋಕ್ಷಿದ್ದಾ? ಅಥವಾ ಉಸ್ತುವಾರಿಗಳದ್ದಾ? ಇಲ್ಲವೇ ಈ ವಿಚಾರವನ್ನು ಹೇಳದೆ ರೀ ಮ್ಯಾಚ್‌ ಆಡಿಸದ ಬಿಗ್‌ಬಾಸ್‌ನದ್ದಾ ವೀಕ್ಷಕರೇ ಹೇಳಬೇಕು.

BBK11: ಗೊತ್ತಾಗದೆ ಚಿಕನ್‌ ತಿಂದು ಪೇಚಾಡಿ ದೇವಿ ಮುಂದೆ ಕ್ಷಮೆ ಕೇಳಿದ ವೆಜಿಟೇರಿಯನ್ ಧನ್‌ರಾಜ್!

ಇನ್ನು ಭವ್ಯಾ ಅವರು ಮೂರನೇ ಬಾರಿ ಮನೆಯ ಕ್ಯಾಪ್ಟನ್‌ ಆಗಿದ್ದಕ್ಕೆ ಮನೆಯಲ್ಲಿ ಸ್ವಲ್ಪ ಅಸಮಾಧಾನ ಇದೆ. ಅದರಲ್ಲೂ ತ್ರಿವಿಕ್ರಮ್ ಅವರು ಈ ವಿಚಾರವನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಿರುವುದು ಎದ್ದು ಕಾಣಿಸುತ್ತಿತ್ತು. ಟಾಸ್ಕ್‌ ಒಂದರಲ್ಲಿ ಜೋಡಿಯಾಗಿಬರಲು ಭವ್ಯಾ ಹೇಳಿದಾಗ ಬರದೇ ಇದ್ದುದು ಒಂದು ಉದಾಹರಣೆ.ಕೊನೆಗೆ ಮಂಜು ಅವರನ್ನು ಭವ್ಯಾ ಆಯ್ಕೆ ಮಾಡಿಕೊಂಡರು.

ಬಿಗ್ ಬಾಸ್ ಶೋ ಈಗ 90 ದಿನ ಕಳೆದಿವೆ. ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಈ ವಾರ ಭವ್ಯಾ ಗೌಡ ಮತ್ತು ರಜತ್‌​ ಹೊರತುಪಡಿಸಿ ಉಳಿದ ಎಲ್ಲರೂ ಮನೆಯಲ್ಲಿ ನಾಮಿನೇಟ್ ಆಗಿದ್ದಾರೆ. ಈ ವಾರ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

Latest Videos
Follow Us:
Download App:
  • android
  • ios