ʼಬಿಗ್ ಬಾಸ್ ಕನ್ನಡ ಸೀಸನ್ 10ʼ ಸ್ಪರ್ಧಿ ವಿನಯ್ ಗೌಡ ಅವರು 28 ವರ್ಷಗಳ ಬಳಿಕ ತಾವು ಕಲಿತ ಶಾಲೆಗೆ ಭೇಟಿ ಕೊಟ್ಟಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ರಫ್ & ಟಪ್ ಆಗಿ ಕಾಣುವ ವಿನಯ್ ಗೌಡ ಈ ಬಾರಿ ತುಂಬ ಎಮೋಶನಲ್ ಆಗಿದ್ದಾರೆ. 28 ವರ್ಷಗಳ ಬಳಿಕ ಅವರು ತಾವು ಕಲಿತ ಶಾಲೆಗೆ ಹೋಗಿದ್ದರು. ಆ ಸುಂದರ ಗಳಿಗೆಯ ಬಗ್ಗೆ Asianet Suverna News ಜೊತೆ ಹಂಚಿಕೊಂಡಿದ್ದಾರೆ.
ವಿನಯ್ ಗೌಡ ಏನಂದ್ರು?
“28 ವರ್ಷಗಳ ಬಳಿಕ ನಾನು Anna Hight Schoolಗೆ ಹೋಗಿದ್ದೆ. ನಿಜಕ್ಕೂ ಈ ಕ್ಷಣವನ್ನು ಮರೆಯೋಕೆ ಆಗಲಿಲ್ಲ, ತುಂಬ ಎಮೋಶನಲ್ ಆದೆ. ನಾನು ಶಾಲೆ ಒಳಗಡೆ ಹೋದಕೂಡಲೇ ಎಲ್ಲ ನೆನಪುಗಳು ಒಮ್ಮೆಲೆ ರಪ್ಪನೆ ಬಂದಂತಾಯ್ತು. ಕಳೆದ 35 ವರ್ಷಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿರುವ ನನ್ನ ಶಿಕ್ಷಕವೃಂದ ನೋಡಿದಾಗ, ನಿಜಕ್ಕೂ ಕ್ಷತಜ್ಞತಾ ಭಾವದ ಜೊತೆಗೆ ಗೌರವವೂ ಮೂಡಿಬಂತು. ನನ್ನ ಪ್ರಿನ್ಸಿಪಲ್ ಆಗಿದ್ದವರೊಬ್ಬರು ಈಗ ಮೂರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಕ್ಲಾಸ್ ಟೀಚರ್ ರಾಜಣ್ಣ ಅವರು ನನ್ನೆಡೆಗೆ ಹೆಮ್ಮೆಯಿಂದ ನೋಡಿದರು.ಪದ್ಮಾವತಿ ಮೇಡಂ ನನ್ನನ್ನು ವೇದಿಕೆಯಲ್ಲಿ ಪರಿಚಯಿಸಿದರು” ಎಂದು ʼಬಿಗ್ ಬಾಸ್ ಕನ್ನಡ ಸೀಸನ್ 10ʼ ಖ್ಯಾತಿಯ ವಿನಯ್ ಗೌಡ ಅವರು ಹೇಳಿದ್ದಾರೆ.
ಬಲರಾಮನ ಅಡ್ಡಾಕ್ಕೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಆನೆ ವಿನಯ್ ಗೌಡ… ಖಡಕ್ ಲುಕ್ ವೈರಲ್
.
ವಿನಯ್ ಗೌಡ ಏನು ಹೇಳಿದ್ದಾರೆ?
“ಪಿಟಿ ಮಾಸ್ಟರ್ ದಯಾನಂದ್ ಅವರನ್ನು ನೋಡಿದಾಗ ಇನ್ನಷ್ಟು ಭಾವುಕಳಾದೆ. ಅವರ ಕಣ್ಣಾಲೆಗಳು ಒದ್ದೆಯಾಗಿದ್ದವು. ನನ್ನ ವಿದ್ಯಾರ್ಥಿ ಜೀವನದಿಂದ ಇಲ್ಲಿಯವರೆಗೆ ಜರ್ನಿಯ ಬಗ್ಗೆ ಹೆಮ್ಮೆಯ ಭಾವನೆಗಳು ಅವರ ಕಣ್ಣಲ್ಲಿ ಕಾಣುತ್ತಿತ್ತು. ಕಾರ್‌ನಿಂದ ವೇದಿಕೆಯತ್ತ ಬರುವಾಗ ಕಂಪ್ಯೂಟರ್ ಸಾಯಿನ್ಸ್ ಟೀಚರ್ ಕೂಡ ಅಲ್ಲಿದ್ದರು. ಅಲ್ಲಿ ನನಗೆ ಪರಿಚಯವಿರುವ ಅನೇಕ ಮುಖಗಳು ಇದ್ದವು. ನನ್ನನ್ನು ಲಂಚ್ ಟೈಮ್‌ನಲ್ಲಿ ಕೇರ್ ಮಾಡುತ್ತಿದ್ದ ಆಯಾ ಕೂಡ ಅಲ್ಲಿದ್ದರು” ಎಂದು ವಿನಯ್ ಗೌಡ ಅವರು ಹೇಳಿದ್ದಾರೆ.
ಮದುವೆ ಆಗಿರುವ ಬಿಗ್ ಬಾಸ್ ರಜತ್ ಕಿಶನ್‌ಗೆ ಗರ್ಲ್‌ಫ್ರೆಂಡ್ ಇದ್ದಾಳಾ? ಗೆಳೆಯ ವಿನಯ್ ಗೌಡ ಹೇಳಿಕೆ ವೈರಲ್
ಧಾರಾವಾಹಿಗಳಲ್ಲಿ ನಟನೆ!
ʼಅಂಬಾರಿʼ, ‘ ಬಯಸದೆ ಬಳಿ ಬಂದೆ’, ʼಹರ ಹರ ಮಹಾದೇವʼ, ʼಮನಸೆಲ್ಲಾ ನೀನೆʼ ಮುಂತಾದ ಧಾರಾವಾಹಿಗಳಲ್ಲಿ ವಿನಯ್ ಗೌಡ ಅವರು ನಟಿಸಿದ್ದಾರೆ. ಪಾಸಿಟಿವ್, ನೆಗೆಟಿವ್ ಪಾತ್ರಗಳು ಸೇರಿದಂತೆ ಪೌರಾಣಿಕ ಪಾತ್ರಗಳಲ್ಲಿಯೂ ವಿನಯ್ ಗೌಡ ನಟಿಸಿ ಹೆಸರು ಮಾಡಿದ್ದಾರೆ. ಇನ್ನು ʼಬಿಗ್ ಬಾಸ್ʼ ಶೋನಲ್ಲಿ ಖಡಕ್ ಡೈಲಾಗ್ ಮೂಲಕ ಆನೆ ಎಂದು ಗುರುತಿಸಿಕೊಂಡಿದ್ದರು. ವಿನಯ್ ಗೌಡ ಆಟಕ್ಕೆ ನಟ ಕಿಚ್ಚ ಸುದೀಪ್ ಕೂಡ ಮೆಚ್ಚುಗೆ ಸೂಚಿಸಿದ್ದರು. ಸದ್ಯ ಅವರು ʼಬಾಯ್ಸ್ v/s ಗರ್ಲ್ಸ್ʼ ಶೋನಲ್ಲಿ ಅವರು ಬಾಯ್ಸ್ ಟೀಂನ ಲೀಡರ್ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಶೋ ಪ್ರಸಾರ ಆಗುತ್ತಿದೆ. ಅಂದಹಾಗೆ ವಿನಯ್ ಗೌಡ ಅವರು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಬೇಕು ಎಂಬ ಆಸೆಯನ್ನು ಹೊಂದಿದ್ದಾರಂತೆ. ಅಂದಹಾಗೆ ಇತ್ತೀಚೆಗೆ ಅವರು ʼಬಲರಾಮನ ದಿನಗಳುʼ ಸಿನಿಮಾದಲ್ಲಿ ನಟಿಸುವ ವಿಷಯ ರಿವೀಲ್ ಆಗಿತ್ತು. ಮುಂದಿನ ದಿನಗಳಲ್ಲಿ ವಿನಯ್ ಗೌಡ ಅವರು ಯಾವ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
