'ಹರ ಹರ ಮಹಾದೇವ' ಧಾರಾವಾಹಿ ಖ್ಯಾತಿಯ, ಬಿಗ್‌ಬಾಸ್‌ 10ರಲ್ಲಿ 'ಆನೆ' ಎಂದೇ ಪ್ರಸಿದ್ಧರಾದ ವಿನಯ್ ಗೌಡ, 'ಬಲರಾಮನ ದಿನಗಳು' ಚಿತ್ರದಲ್ಲಿ ಖಡಕ್ ಖಳನಾಯಕನಾಗಿ ನಟಿಸುತ್ತಿದ್ದಾರೆ. ಬನಿಯನ್, ಶರ್ಟ್, ಚಿನ್ನದ ಸರಗಳು, ಉಂಗುರ, ಚಾಕು ಹಿಡಿದ ವಿನಯ್ ಲುಕ್ ವೈರಲ್ ಆಗಿದೆ.  

ಕನ್ನಡ ಕಿರುತೆರೆಯಲ್ಲಿ ಹರ ಹರ ಮಹಾದೇವ (Hara Hara Mahadeva) ಸೀರಿಯಲ್ ನಲ್ಲಿ ಶಿವನ ಪಾತ್ರದ ಮೂಲಕ ರಂಜಿಸಿದ ನಟ ವಿನಯ್ ಗೌಡ, ನಂತರ ಹಲವು ಸೀರಿಯಲ್ ಗಳಲ್ಲಿ ನೆಗೆಟಿವ್ ರೋಲ್ ಗಳಲ್ಲಿ ಕಾಣಿಸಿಕೊಂಡಿದ್ದು ಇದೆ. ಇವರಿಗೆ ಮತ್ತಷ್ಟು ಹೆಸರು ತಂದು ಕೊಟ್ಟದ್ದು ಬಿಗ್ ಬಾಸ್ ಕಾರ್ಯಕ್ರಮ. ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಟಫ್ ಸ್ಪರ್ಧಿಯಾಗಿದ್ದ ವಿನಯ್ ಗೌಡ (Vinay Gowda), ಟಾಪ್ 5 ರಲ್ಲೂ ಇದ್ದರು. ತಮ್ಮ ಬಲವಾದ ದೇಹ, ಕಠಿಣವಾದ ಮಾತು ಹಾಗೂ ಕಠಿಣ ಸ್ಪರ್ಧೆ ಕೊಡುವ ಮೂಲಕ ಎದುರಾಳಿಗೆ ಸ್ಪರ್ಧಿಗೆ ಮುಂದೆ ಟಫ್ ಕಂಟೆಸ್ಟಂಟ್ ಆಗಿ ಠಕ್ಕರ್ ಕೊಡುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ಆನೆ ಎಂದೇ ಕರೆಯಿಸಿಕೊಂಡವರು ವಿನಯ್ ಗೌಡ. 

ಮದುವೆ ಆಗಿರುವ ಬಿಗ್ ಬಾಸ್ ರಜತ್ ಕಿಶನ್‌ಗೆ ಗರ್ಲ್‌ಫ್ರೆಂಡ್ ಇದ್ದಾಳಾ? ಗೆಳೆಯ ವಿನಯ್ ಗೌಡ ಹೇಳಿಕೆ ವೈರಲ್

ಹಲವು ರಿಯಾಲಿಟಿ ಶೋಗಳಲ್ಲಿ ಮಿಂಚಿ, ಬಿಗ್ ಬಾಸ್ (Bigg Boss Season 10) ಆನೆ ಎಂದೆ ಮನೆಯ ಹೊರಗೂ ಒಳಗೂ ಕರೆಯಲ್ಪಟ್ಟ ವಿನಯ್ ಗೌಡ ಅವರು ಈ ಹಿಂದೆ ಪೊಗರು ಹಾಗೂ ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ನಟಿಸಿದ್ದರು. ಆದರೆ ವಿನಯ್ ಗೆ ತಾವೊಂದು ಖಡಕ್ ಪಾತ್ರದಲ್ಲಿ ನಟಿಸಬೇಕು ಎನ್ನುವ ಆಸೆ ಇತ್ತು. ಇದೀಗ ಅವರ ಬಹು ದಿನಗಳ ಕನಸು ನನಸಾಗಿದೆ. ವಿನಯ್ ಗೌಡಗೆ ಭರ್ಜರಿ ಆಫರ್ ಸಿಕ್ಕಿದ್ದು, ಶೀಘ್ರದಲ್ಲೇ ಬೆಳ್ಳಿ ತೆರೆ ಮೇಲೆ ವಿನಯ್ ಗೌಡ ಖಡಕ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ವಿನಯ್ ಗೆ ಚಂದನವನದಲ್ಲಿ ಖಡಕ್ ಪಾತ್ರದಲ್ಲಿ ಅವಕಾಶವೊಂದು ಹುಡುಕಿಕೊಂಡು ಬಂದಿದೆ. ಬಲರಾಮನ ದಿನಗಳು (Baralaramana Dinagalu) ಎನ್ನುವ ಸಿನಿಮಾದಲ್ಲಿ ವಿಲನ್ ಆಗಿ ವಿನಯ್ ಗೌಡ ನಟಿಸಲಿದ್ದಾರೆ. 

ಆಕೆ ಬಿಟ್ಟು ಹೋದಾಗ ನನಗೆ 17 ವರ್ಷ, ಕಾರಣ ಇನ್ನೂ ಗೊತ್ತಿಲ್ಲ: ಬಿಗ್​ಬಾಸ್​ ವಿನಯ್​ ಗೌಡ ನೋವಿನ ನುಡಿ

ಹೌದು, ವಿನೋದ್ ಪ್ರಭಾಕರ್ (Vinod Prabhakar) ನಟಿಸುತ್ತಿರುವ 'ಬಲರಾಮನ ದಿನಗಳು' ಸಿನಿಮಾಕ್ಕೆ ಇದೀಗ ವಿನಯ್ ಗೌಡ ಎಂಟ್ರಿ ಕೊಟ್ಟಿದ್ದಾರೆ. 'ಆನೆ ಬಂತೊಂದ್ ಆನೆ' ಎನ್ನುವ ಹಾಡಿನ ಮೂಲಕ ಚಿತ್ರ ತಂಡ ವಿನಯ್ ಅವರ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಸಿನಿಮಾದ ಪೋಸ್ಟರ್ ನೋಡಿದ್ರೆನೆ ಗೊತ್ತಾಗುತ್ತೆ ಇವರದ್ದು ವಿಲನ್ ರೋಲ್ ಎಂದು. ಬನಿಯನ್ ಧರಿಸಿ, ಮೇಲೊಂದು ಶರ್ಟ್, ಕುತ್ತಿಗೆಯಲ್ಲಿ ಎರಡು ಚಿನ್ನದ ಚೈನ್, ಕೈಬೆರಳಲ್ಲಿ ಉಂಗುರಗಳು, ಉದ್ದವಾದ ಕೂದಲು, ಕೈಯಲ್ಲಿ ಚಾಕು ಹಿಡಿದು ವಿನಯ್ ಗೌಡ ಪೋಸ್ ಕೊಟ್ಟಿದ್ದಾರೆ. ಸದ್ಯ ವಿನಯ್ ಗೌಡ ಲುಕ್ ವೈರಲ್ ಆಗುತ್ತಿದೆ. ವಿನಯ್ ಸ್ನೇಹಿತರು ಹಾಗೂ ಅಭಿಮಾನಿಗಳು ಇವರ ಲುಕ್ ಮೆಚ್ಚಿಕೊಂಡಿದ್ದು, ಭರ್ಜರಿ ಅವಕಾಶಕ್ಕೆ ಶುಭಾಶಯ ಕೋರಿದ್ದಾರೆ. 

View post on Instagram