ವರುಣ್-ವರ್ಷ ಬ್ರೇಕಪ್ ಬೆನ್ನಲೆ ಬಿಗ್ ಬಾಸ್ ಜಶ್ವಂತ್-ನಂದು ಗುಟ್ಟು ರಟ್ಟು; ಚೈನು ಉಂಗುರ ಕೊಡ್ಸಿಲ್ಲ ಇದು ನನ್ನ ದುಡ್ಡು!
ಸೈಲೆಂಟಾಗಿ ನಿಶ್ಛಿತಾರ್ಥ ಮಾಡಿಕೊಂಡ ಜಶ್ವಂತ್. ಸ್ಪ್ಲಿಟ್ಸ್ವಿಲ್ಲಾ 15 ಟ್ರೋಫಿ ಕೈ ಸೇರಿದ ಮೇಲೆ ಒಂದೊಂದೆ ಸತ್ಯ ಬಿಚ್ಚಿಟ್ಟ ನಟ....
ಬಿಗ್ ಬಾಸ್ ಓಟಿಟಿ ಸೀಸನ್ 1ರಲ್ಲಿ ಫೈನಲಿಸ್ಟ್ ಆಗಿದ್ದ ಜಶ್ವಂತ್ ಬೊಪ್ಪಣ್ಣ ಇದೀಗ ಹಿಂದಿ ರಿಯಾಲಿಟಿ ಶೋ ಸ್ಪ್ಲಿಟ್ಸ್ವಿಲ್ಲಾ 15 ಗೆದ್ದಿದ್ದಾರೆ. ಈ ಕಾರ್ಯಕ್ರಮದಲ್ಲಿ ಪರಿಚಯವಾದ ಆಕೃತಿ ನೇಗಿ ಜೊತೆ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಜಶ್ವಂತ್ ತಮ್ಮ ಹಳೆ ಪ್ರೀತಿ, ಬ್ರೇಕಪ್ ಹಿಂದಿನ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.
'ನಂದಿನಿ ಮತ್ತು ನಾನು ಬಿಗ್ ಬಾಸ್ ಕಾರ್ಯಕ್ರಮದ ನಂತರ ಗ್ಯಾಪ್ ಕ್ರಿಯೇಟ್ ಆಗಿದೆ ಇದುವರೆಗೂ ಮಾತನಾಡಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ನಂದು ಸ್ಟೋರಿ ಹಾಕಿದ್ದಾರೆ ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಏಕೆಂದರೆ ನಾನು ಮಾತನಾಡಿದರೆ ವಾತಾವರಣ ಹಾಳಾಗುತ್ತದೆ. ಪ್ರತಿಯೊಂದು ಹೆಣ್ಣಿಗೂ ಒಂದು ಇಮೇಜ್ ಇರುತ್ತದೆ ಹೀಗಾಗಿ ನಾನು ಕಾಮೆಂಟ್ ಮಾಡಲ್ಲ ಅಲ್ಲದೆ ನಾನು ನಿಮ್ಮ ಜೀವನ ಹಾಳು ಮಾಡುವ ಕೆಲಸ ನಾನು ಮಾಡಲ್ಲ. ನನ್ನ ಮೌನ ಅದನ್ನು ಗೌರವಿಸುತ್ತದೆ. ನನ್ನ ಗರ್ಲ್‌ಫ್ರೆಂಡ್ ಆಕೃತಿ ನೇಗಿ ಜೊತೆ ಪ್ರತಿಯೊಂದು ವಿಚಾರಗನ್ನು ಹೇಳಿದ್ದೀನಿ ಅದನ್ನು ಒಪ್ಪಿಕೊಂಡು ನನ್ನ ಜೊತೆಗಿದ್ದಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಜಶ್ವಂತ್ ಮಾತನಾಡಿದ್ದಾರೆ.
ಮಮ್ಮಿ ಆದ್ರೂ ಡುಮ್ಮಿ ಆಗಿಲ್ವಲ್ಲ?; 'ಕೆಂಡಸಂಪಿಗೆ' ಸಾಧನಾ ಫಿಟ್ನೆಸ್ ನೋಡಿ ಕಾಲೆಳೆದ ನೆಟ್ಟಿಗರು!
'ನಾನು ಧರಿಸುವ ಚೇನ್ ಮತ್ತು ಉಂಗುರವನ್ನು ನನಗೆ ಗಿಫ್ಟ್ ಕೊಟ್ಟಿದ್ದು ಎಂದು ಸುಳ್ಳು ಹೇಳಿದ್ದಾರೆ. ನಿಜಕ್ಕೂ ನನ್ನ ದುಡಿಮೆಯಲ್ಲಿ ಖರೀದಿಸಿರುವುದು ಇದನ್ನು ನಾನು ಸೌಥ್ ಆಫ್ರೀಕಾದಲ್ಲಿ ತೆಗೆದುಕೊಂಡಿದ್ದು. ನಿಮಗೆ ಗಮನ ಸೆಳೆಯಬೇಕು ಅನ್ನೊದಾದರೆ ದಯವಿಟ್ಟು ಸತ್ಯ ಮಾತನಾಡಿ ಸುಮ್ಮನೆ ಸುಳ್ಳು ಹೇಳಬೇಡಿ ಎಂದು. ಬಿಗ್ ಬಾಸ್ ಮನೆಯಲ್ಲಿ ನಡೆದ ಪ್ರತಿಯೊಂದು ದೃಶ್ಯಗಳನ್ನು ನನ್ನ ಗರ್ಲ್‌ಫ್ರೆಂಡ್ ಆಕೃತಿ ನೋಡಿ ನನಗೆ ಪ್ರಶ್ನೆ ಮಾಡಿದ್ದಾರೆ...ಸಂಪೂರ್ಣವಾಗಿ ವಿವರಿಸಿದ್ದೀನಿ. ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ನಡೆದ ಸಣ್ಣ ಘಟನೆಯನ್ನು ದೊಡ್ಡದಾಗಿ ತೋರಿಸಿದ್ದಾರೆ..ಕೇವಲ ಒಂದೆರಡು ನಿಮಿಷ ಆದ ವಿಚಾರವನ್ನು 15 ನಿಮಿಷ ತೋರಿಸಿದ್ದಾರೆ' ಎಂದು ಜಶ್ವಂತ್ ಹೇಳಿದ್ದಾರೆ.
EMIನಿಂದ ಕಾರು, ಪ್ರಮೋಷನ್‌ನಿಂದ ಮನೆ..ಅವನಿಗೆ ಯಾಕೆ ಹಣ ಕೊಡಲಿ?; ವರುಣ್‌ಗೆ ಉತ್ತರ ಕೊಟ್ಟ ವರ್ಷ ಕಾವೇರಿ!
'ನಿಜಕ್ಕೂ ನಿಜಕ್ಕೂ ನಾನು ಕಾರ್ಯಕ್ರಮದಲ್ಲಿ ಒಬ್ಬರನ್ನು ಇಷ್ಟ ಪಟ್ಟಿದ್ದರೆ ಅವರೊಟ್ಟಿಗೆ ಸ್ನೇಹಿತೆಯಾಗಿ ಇರುತ್ತಿರಲಿಲ್ಲ. ನಾನು ಒಬ್ಬ ಹುಡುಗಿ ಜೊತೆ ಚೆನ್ನಾಗಿದ್ದಾರೆ ನನ್ನ ಗರ್ಲ್ ಫ್ರೆಂಡ್‌ಗೆ ಇಷ್ಟ ಆಗಿಲ್ಲ ಅಂದ್ರೆ ದ್ವೇಷ ಮಾಡುತ್ತಿದ್ದರು ಆದರೆ ಅಲ್ಲಿ ತೋರಿಸಿದ ರೀತಿನೇ ಬೇರೆ. ನನ್ನ ಆಕೃತಿ ವಿಡಿಯೋಗಳನ್ನು ನೋಡಿ ನಾನು ಎಲ್ಲಿ ಸರಿಯಾಗಿದ್ದೆ ಎಲ್ಲಿ ತಪ್ಪು ಮಾಡಿದ್ದೆ ಎಂದು ಹೇಳಿದ್ದಾಳೆ ಏಕೆಂದರೆ ಆಕೆ ಹೆಣ್ಣು ಮಕ್ಕಳ ಪರ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಾಳೆ' ಎಂದಿದ್ದಾರೆ ಜಶ್ವಂತ್.