EMIನಿಂದ ಕಾರು, ಪ್ರಮೋಷನ್‌ನಿಂದ ಮನೆ..ಅವನಿಗೆ ಯಾಕೆ ಹಣ ಕೊಡಲಿ?; ವರುಣ್‌ಗೆ ಉತ್ತರ ಕೊಟ್ಟ ವರ್ಷ ಕಾವೇರಿ!

ಮತ್ತೆ ಗರಂ ಆದ ವರ್ಷ ಕಾವೇರಿ. ವರುಣ್ ಆರಾಧ್ಯ ಮಾತನಾಡಿರುವ ವಿಡಿಯೋ ಡಿಲೀಟ್ ಮಾಡ್ಲೇ ಬೇಕು ಅಂತ ಅಗ್ರಾಹ.....

Varsha kaveri angry with Varun aradya podcast for defaming her personal life vcs

ಪ್ರಪಂಚದಲ್ಲಿ ಏನ್ ಏನೋ ಆಗುತ್ತಿದೆ ಆದರೆ ಜನರ ಕಣ್ಣು ಮಾತ್ರ ವರುಣ್ ರಾಧ್ಯಾ ಮತ್ತು ವರ್ಷ ಕಾವೇರಿ ಬ್ರೇಕಪ್ ಜಗಳದ ಮೇಲಿದೆ. ವರುಣ್ ಆರಾಧ್ಯ ಮಾಡಿದ ಬ್ಲಾಕ್ ಮೇಲ್, ಜೀವ ಬೆದರಿಕೆ ಹಾಗೂ ಅಶ್ಲೀಲ ಮೆಸೇಜ್‌ಗಳ ಬಗ್ಗೆ ವರ್ಷ ಏಫ್‌ಐಆರ್‌ ಹಾಕಿದ್ದರು. ವರುಣ್ ಆರಾಧ್ಯ ನಿವಾಸಕ್ಕೆ ಪೊಲೀಸರು ಹೋಗಿ ವಿಚಾರಣೆ ಮಾಡಿದ್ದಾರೆ, ಇದಕ್ಕೆ ಹೆದರಿ ವರುಣ್ ಆರಾಧ್ಯ ತಮ್ಮ ಬಳಿ ಇರುವ ಪ್ರತಿಯೊಂದು ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದರು.ಇದಾಗ ಮೇಲೆ ಕಿರಿಕ್ ಕೀರ್ತಿ ಯೂಟ್ಯೂಬ್‌ ಚಾನೆಲ್‌ನಲ್ಲಿ ವರ್ಷ ಕಾವೇರಿ ಕೆಲವೊಂದು ವಿಚಾರಗಳಿಗೆ ಕ್ಲಾರಿಟಿ ಕೊಟ್ಟರು ಆದರೆ ವರುಣ್ ಇದನ್ನು ಇಲ್ಲಿಗೆ ನಿಲಿಸಲಿಲ್ಲ. 

'ವರ್ಷ ಕಾವೇರಿ ನನಗೆ ಯೂಟ್ಯೂಬ್‌ನಿಂದ ಬಂದಿರುವ ಹಣವನ್ನು ಕೊಟ್ಟಿಲ್ಲ, ನಾನು ಬೈಕ್ ಮಾರಿ ಮನೆ ನಡೆಸಿದೆ, ನನ್ನ ಅಕ್ಕನ ಮದುವೆಗೆ ಯಾರೂ ಸಹಾಯ ಮಾಡಿಲ್ಲ, ನನ್ನ ಫ್ಯಾಮಿಲಿ ನಡೆಸಲು ವರ್ಷ ಸಹಾಯ ಮಾಡಿಲ್ಲ ಇನ್ನೂ ಆಕೆ ಮೂರು ನನ್ನ ಮನೆಯಲ್ಲಿದ್ದಳು' ಎಂದು ವರುಣ್ ನೀಡಿರುವ ಹೇಳಿಕೆಗಳು ಮತ್ತೆ ಸುದ್ದಿಯಾಗುತ್ತಿದೆ. ವರುಣ್ ಸ್ಪಷ್ಟನೆ ವಿಡಿಯೋ ನೋಡಿದ ಮೇಲೆ ಜನರು ವರ್ಷ ಕಾವೇರಿಗೆ ಮೆಸೇಜ್ ಮಾಡಿ ನೆಗೆಟಿವ್ ಆಗಿ ಬೈಯುತ್ತಿದ್ದಾರೆ. ಇದಕ್ಕೆ ಬೇಸರಗೊಂಡು ವರ್ಷ ಮತ್ತೊಂದು ಪೋಸ್ಟ್ ಹಾಕಿಸ್ದಾರೆ.

ಸಿಂಪಥಿಗೋಸ್ಕರ್ ವರ್ಷ ಕಾವೇರಿ ಹೊಸ ಗೇಮ್ ಶುರು? ಕೈ ಹಿಡಿಯುವ ಹುಡುಗನ ಬಗ್ಗೆ ಚಿಂತಿಸುತ್ತಿರುವ ರೀಲ್ಸ್ ರಾಣಿ!

ವರ್ಷ ಕಾವೇರಿ ಪೋಸ್ಟ್‌: 

'ಇಷ್ಟು ದಿನ ನಾನು ಸುಮ್ಮನಿದೆ ಆದರೆ ಈಗ ಲಿಮಿಟ್ ಕ್ರಾಸ್ ಆಗಿದೆ ಅಲ್ಲದೆ ಒಂದು ಸಂದರ್ಶನ ಮಾಡಿ ನನ್ನ ಮಾನ ಮರ್ಯಾದೆಯನ್ನು ತೆಗೆಯುವ ಕೆಲಸ ನಡೆಯುತ್ತಿದೆ. ದಯವಿಟ್ಟು ಏನಾಗಿದೆ ಎಂದು ತಿಳಿಯದೆ ನೆಗಟಿವ್ ಆಗಿ ಕಾಮೆಂಟ್ ಮಾಡಬೇಡಿ ನನ್ನನ್ನು ತಪ್ಪಾಗಿ ತೋರಿಸುವುದಕ್ಕೆ ಎಂದು ಮಾಡಿರುವುದು. ಸಂದರ್ಶನ ಮಾಡಿದ ವ್ಯಕ್ತಿಗೆ ಗೊತ್ತಿರಬೇಕಿತ್ತು ಯಾವ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಬೇಕು ಮತ್ತೊಬ್ಬರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು. ಅರ್ಥವಿಲ್ಲದಂತೆ ಮಾತನಾಡಿದ್ದಾರೆ. ಆ ಯೂಟ್ಯೂಬ್ ಚಾನೆಲ್‌ಗೆ ಮೆಸೇಜ್ ಮಾಡಿ ಸಂದರ್ಶನದ ವಿಡಿಯೋವನ್ನು ಡಿಲೀಟ್ ಮಾಡುವಂತೆ ಮನವಿ ಮಾಡಿಕೊಂಡೆ. ನನ್ನ ಮಾನ ಮರ್ಯಾದೆ ಹೋಗುತ್ತಿದೆ ನೀವು ನನಗೆ ಸಂಕಷ್ಟ ತಂದಿದ್ದೀರಿ ಎಂದು ಹೇಳಿದರೂ ಆ ವ್ಯಕ್ತಿ ಕೇರ್ ಮಾಡಿದೆ ಟಿಆರ್‌ಪಿಗೋಸ್ಕರ್ ಮಾಡುತ್ತಿದ್ದೀರಾ ಎಂದರು ಒಂದು ಚೂರು ಕಾಳಜಿ ಮಾಡಲಿಲ್ಲ. ಒಂದು ಹೆಣ್ಣು ಅನುಭಿಸುತ್ತಿರುವುದರ ಬಗ್ಗೆ ಯಾಕೆ ಈ ವ್ಯಕ್ತಿ ಕೇರ್ ಮಾಡುತ್ತಿಲ್ಲ. ಇಲ್ಲಿ ಯಾವ ಗೊಂದಲದಿಂದ ಬ್ರೇಕ್ ಮಾಡಿಕೊಂಡಿಲ್ಲ...ಅವರ ಸಂಬಂಧಗಳು ಬಹಿರಂಗವಾದ ಮೇಲೆ ನಿಮಗೆ ಸತ್ಯ ತಿಳಿಯುತ್ತದೆ. ಈಗಾಗಲೆ ಅನೇಕರಿಗೆ ವಿಚಾರ ಗೊತ್ತಿದೆ. ಆ ವ್ಯಕ್ತಿಗೆ ಹಣ ಕೊಟ್ಟುಬಿಡಿ ಎಂದು ಕಾಮೆಂಟ್ ಮಾಡುತ್ತಿರುವವರಿಗೆ ಒಂದು ಪ್ರಶ್ನೆ...ಯಾಕೆ ಹಣ ಕೊಡಬೇಕು, ಯಾರಿಗೆ ಹಣ ಕೊಡಬೇಕು ಮತ್ತು ಯಾವ ಕಾರಣಕ್ಕೆ ಹಣ ಕೊಡಬೇಕು? ನಾನು ಕಾರು ಖರೀದಿಸಿರುವುದು EMI ನಿಂದ, ನನ್ನ ಮನೆಯನ್ನು ಸಂಪೂರ್ಣವಾಗಿ ರೆಡಿ ಮಾಡಿದ್ದು IKEA ಕಾರಣ ನಾನು ಅವರ ಬ್ರಾಂಡ್ ಪ್ರಮೋಷನ್ ಮಾಡಿಕೊಟ್ಟೆ. ನಾವು ಯೂಟ್ಯೂಬ್‌ನಿಂದ ಎಷ್ಟು ಹಣ ಮಾಡಿದ್ದೀನಿ ಎಂದು ತಿಳಿದುಕೊಳ್ಳಬೇಕು ಅಂದ್ರೆ ದಯವಿಟ್ಟು ನನಗೆ ಮೆಸೇಜ್ ಮಾಡಿ ನಾನು ಸಂಪೂರ್ಣ ಮಾಹಿತಿಯನ್ನು ನೀಡುತ್ತೀನಿ. ಏನೂ ಗೊತ್ತಿಲ್ಲದೆ ಸುಮ್ಮನೆ ಬಂದು ಕಾಮೆಂಟ್ ಮಾಡಬೇಡಿ. ದಯವಿಟ್ಟು ಹೋಗಿ ನಿಮ್ಮ ಜೀವನ ನಡೆಸಿ ಸುಖ ಸುಮ್ಮನೆ ಅರ್ಥವಿಲ್ಲದೆ ಮಾತನಾಡಬೇಡಿ ಆ ವ್ಯಕ್ತಿಗೆ ನಾನು ಯಾವ ಹಣವೂ ಕೊಡುವ ಅಗತ್ಯವಿಲ್ಲ. ಇಲ್ಲಿಗೆ ನನಗೆ ಸಾಕಾಗಿದೆ. ಸಂಪೂರ್ಣವಾಗಿ ನಡೆದಿರುವ ಘಟನೆ ಬಗ್ಗೆ ಉತ್ತರ ಸಿಕ್ಕಿರುವುದು ಎಫ್‌ಐಆರ್‌ನಿಂದ. ಎಫ್‌ಐಆರ್‌ ಲೀಕ್ ಆದ ರೀತಿಯಲ್ಲಿ ಸಾಕ್ಷಿಗಳು ಲೀಗಬೇಕು.

ನನಗೆ ಜೀವ ಬೆದರಿಕೆ ಹಾಕಿರುವುದು ನಿಜ, ಈಗಲೂ ತಂದೆ ತಾಯಿಗೆ ಧೈರ್ಯ ಹೇಳುತ್ತಿರುವೆ: ವರ್ಷ ಕಾವೇರಿ

Varsha kaveri angry with Varun aradya podcast for defaming her personal life vcs

Latest Videos
Follow Us:
Download App:
  • android
  • ios