ʼಬಿಗ್‌ ಬಾಸ್‌ ಕನ್ನಡ 5ʼ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿರುವ ನಿವೇದಿತಾ ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ನಿತ್ಯವೂ ಒಂದಲ್ಲ ಒಂದು ಪೋಸ್ಟ್‌ ಮಾಡುತ್ತಾರೆ. ಇದಕ್ಕೆ ಕಾರಣ ಏನು?

ಕೆಲವು ತಿಂಗಳುಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ʼಬಿಗ್‌ ಬಾಸ್ ಕನ್ನಡʼ‌ ಖ್ಯಾತಿಯ ನಿವೇದಿತಾ ಗೌಡ ಅಬ್ಬರ ಜಾಸ್ತಿ ಆಗಿದೆ ಎಂದು ವೀಕ್ಷಕರು ಅಭಿಪ್ರಾಯಪಡುತ್ತಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳು, ವೀಕ್ಷಕರ ಜೊತೆ ಸಂಪರ್ಕ ಹೊಂದಲು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ಪೋಸ್ಟ್‌ ಮಾಡುತ್ತಿರುತ್ತಾರೆ. ಆದರೆ ನಿವೇದಿತಾ ಗೌಡ ಮಾತ್ರ ನಿತ್ಯವೂ ಒಂದಲ್ಲ ಒಂದು ಪೋಸ್ಟ್‌ ಹಾಕುತ್ತಲೇ ತಮ್ಮ ಫಾಲೋವರ್ಸ್‌ ಗಮನಸೆಳೆಯುತ್ತಾರೆ.

ಸ್ನೇಹ-ಪ್ರೀತಿ- ಮದುವೆ-ಡಿವೋರ್ಸ್!‌ 
2024 ಜೂನ್‌ ಸಮಯದಲ್ಲಿ ನಿವೇದಿತಾ ಗೌಡ ಹಾಗೂ ಚಂದನ್‌ ಶೆಟ್ಟಿ ಅವರು ವಿಚ್ಛೇದನ ಪಡೆದರು. ಈ ಮೂಲಕ ಇವರು ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದರು. ‘ಬಿಗ್‌ ಬಾಸ್‌ ಕನ್ನಡ 5’ ಮನೆಯಲ್ಲಿ ಹುಟ್ಟಿಕೊಂಡ ಸ್ನೇಹ, ಆಮೇಲೆ ಪ್ರೀತಿಗೆ ತಿರುಗಿತ್ತು. ಅದಾದ ಬಳಿಕ ಕುಟುಂಬಸ್ಥರು, ಚಿತ್ರರಂಗದವರ ಸಾಕ್ಷಿಯಾಗಿ ಈ ಜೋಡಿ ಮೈಸೂರಿನಲ್ಲಿ ಮದುವೆ ಆಯ್ತು. ಇನ್ನು ಮೈಸೂರು ದಸರಾ ವೇದಿಕೆಯಲ್ಲಿ ಚಂದನ್‌ ಶೆಟ್ಟಿ ಅವರು ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿ ಒಂದು ಕಾಂಟ್ರವರ್ಸಿ ಸೃಷ್ಟಿ ಮಾಡಿಕೊಂಡರು. ಅದಾದ ಬಳಿಕ ಈ ಜೋಡಿ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗುತ್ತಿತ್ತು. ಇನ್ನು ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಇಲ್ಲ, ಹತ್ತಿರ ಇದ್ದು ಕಷ್ಟಪಡುವ ಬದಲು ದೂರ ಇರೋದು ಒಳ್ಳೆಯದು ಎಂದು ಈ ಜೋಡಿ ವಿಚ್ಛೇದನ ಪಡೆದುಕೊಂಡಿದೆಯಂತೆ.

ಅರಗಿಸಿಕೊಳ್ಳಲಾಗದ ಶಾಕ್​ ಕೊಟ್ಟ ನಿವೇದಿತಾ! 24 ಗಂಟೆಗಳಲ್ಲಿ ಸುನಾಮಿ ಎಚ್ಚರಿಸಿದ ಕಮೆಂಟಿಗರು- ಅಂಥದ್ದೇನಿದೆ ನೋಡಿ!

ನಿತ್ಯವೂ ಒಂದಲ್ಲ ಒಂದು ಪೋಸ್ಟ್!‌ 
ಡಿವೋರ್ಸ್‌ ಸಿಕ್ಕಿ ಕೆಲ ದಿನಗಳ ಬಳಿಕ ನಿವೇದಿತಾ ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ ಆಗಿದ್ದಾರೆ. ನಿತ್ಯ ಒಂದಲ್ಲ ಒಂದು ರೀತಿಯ ಡ್ಯಾನ್ಸ್‌ ವಿಡಿಯೋ, ರೀಲ್ಸ್‌, ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಇತ್ತೀಚೆಗೆ ಅವರು ಶ್ರೀಲಂಕಾ ಪ್ರವಾಸ ಮಾಡಿದ್ದರು. ಹೊಸ ವರ್ಷವನ್ನು ಬೇರೆ ದೇಶದಲ್ಲಿ ಕಳೆದ ನಿವೇದಿತಾ ಗೌಡ ಅವರು ಅಲ್ಲಿನ ಸುಂದರ ಸ್ಥಳಗಳಲ್ಲಿ ಫೋಟೋ ತೆಗೆಸಿಕೊಂಡು, ಅದನ್ನು ಶೇರ್‌ ಮಾಡಿದ್ದರು. ಇತ್ತೀಚೆಗೆ ಅವರ ಪೋಸ್ಟ್‌ಗಳನ್ನು ಗಮನಿಸುತ್ತ ಬಂದರೆ ನಿತ್ಯವೂ ಅವರು ಒಂದಲ್ಲ ಒಂದು ಫೋಟೋ ಅಥವಾ ವಿಡಿಯೋಗಳನ್ನು ಶೇರ್‌ ಮಾಡುತ್ತಾರೆ. ಈ ಪೋಸ್ಟ್‌ಗಳನ್ನು ಮೆಚ್ಚುವ ವೀಕ್ಷಕರಿಗಿಂತ ನೆಗೆಟಿವ್‌ ಕಾಮೆಂಟ್‌ ಮಾಡೋರೇ ಜಾಸ್ತಿ. ಅಂದಹಾಗೆ ಇನ್‌ಸ್ಟಾಗ್ರಾಮ್‌ನಲ್ಲಿ ಎರಡು ಮಿಲಿಯನ್‌ ಫಾಲೋವರ್ಸ್‌ ಹೊಂದಿರುವ ನಿವೇದಿತಾ ಗೌಡ ಅವರು ಯಾರನ್ನೂ ಫಾಲೋ ಮಾಡ್ತಿಲ್ಲ. ಈ ಹಿಂದೆ ಚಂದನ್‌ ಶೆಟ್ಟಿಯನ್ನು ಫಾಲೋ ಮಾಡ್ತಿದ್ರು, ಡಿವೋರ್ಸ್‌ ಆದ್ಮೇಲೆ ಅವರನ್ನು ಅನ್‌ಫಾಲೋ ಮಾಡಿದ್ದಾರೆ.

ಶ್ರೀಲಂಕಾದ ಜೂಜು ಅಡ್ಡೆಯಿಂದ ಬಾತ್​ರೂಮ್​ ಸೇರಿದ ನಿವೇದಿತಾ: 'ಐ ಮಿಸ್​ ಯು' ಎನ್ನುತ್ತಲೇ ಕೊಟ್ಟ ಪೋಸ್​ಗೆ ಫ್ಯಾನ್ಸ್​ ಸುಸ್ತು!

ಸಿನಿಮಾದಲ್ಲಿ ಬ್ಯುಸಿ ಆಗ್ತಾರಾ? 
ಸದ್ಯ ಗೊಂಬೆ ನಿವೇದಿತಾ ಗೌಡ ಅವರು ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಅಷ್ಟಾಗಿ ವಿಡಿಯೋ ಅಪ್‌ಲೋಡ್‌ ಮಾಡ್ತಿಲ್ಲ. ಅಷ್ಟೇ ಅಲ್ಲದೆ ಸೋಶಿಯಲ್‌ ಮೀಡಿಯಾದಲ್ಲಿ ಬೇರೆ ಪ್ರಾಡಕ್ಟ್‌ಗಳ ಪ್ರಚಾರವನ್ನು ಮಾಡೋದಿಲ್ಲ. ಇನ್ನು ಕಲರ್ಸ್‌ ಕನ್ನಡ ವಾಹಿನಿಯ ʼಬಾಯ್ಸ್‌ v/s ಗರ್ಲ್ಸ್‌ʼ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರಂತೆ. ʼಗಿಚ್ಚಿ ಗಿಲಿಗಿಲಿʼ, ʼರಾಜಾ ರಾಣಿʼ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಇವರು ಚಿತ್ರರಂಗದಲ್ಲಿ ಆಕ್ಟಿವ್‌ ಆಗಿರೋದಂತೂ ಸತ್ಯ. ಇನ್ನು ಸಿನಿಮಾ ಕೂಡ ಮಾಡ್ತಿರುವ ನಿವೇದಿತಾ ಗೌಡ ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿ ಬ್ಯುಸಿ ಆಗ್ತಾರಾ? ಕಿರುತೆರೆಯಲ್ಲಿಯೇ ಆಕ್ಟಿವ್‌ ಆಗಿರ್ತಾರಾ? ಅಂತ ಕಾದು ನೋಡಬೇಕಿದೆ. ಕೆಲ ದಿನಗಳ ಹಿಂದೆ ಅವರು ಮ್ಯೂಸಿಕ್‌ ವಿಡಿಯೋದಲ್ಲಿಯೂ ಕಾಣಿಸಿಕೊಂಡಿದ್ದರು. ಒಟ್ಟಿನಲ್ಲಿ ಗೊಂಬೆ ಭಾರೀ ಸದ್ದು ಮಾಡ್ತಿದ್ದಾರೆ. ಈ ಬಗ್ಗೆ ನೀವು ಏನು ಹೇಳ್ತೀರಿ? ನಿಮ್ಮ ಅಭಿಪ್ರಾಯ ಏನು ಎಂದು ತಿಳಿಸಿ.