ಬದುಕು ಸೀರಿಯಲ್‌ನಲ್ಲಿ ಗಂಡನಾಗಿದ್ದವನನ್ನೇ ರಿಯಲ್ ಲೈಫ್ ನಲ್ಲಿ ಕೈ ಹಿಡಿದ ನಟಿ ಸಿರಿ!
ತಮ್ಮ ಬಹುಕಾಲದ ಗೆಳೆಯನನ್ನು ಮದುವೆಯಾದ ಕಿರುತೆರೆ ನಟಿ ಸಿರಿ ಅವರು ಮದುವೆಯಾದ ಬಳಿಕ ಮೊದಲ ಬಾರಿಗೆ ತಮ್ಮ ಗಂಡನೊಂದಿಗೆ ಪೋಟೋ ಹಂಚಿಕೊಂಡಿದ್ದಾರೆ.
ಬೆಂಗಳೂರು (ಜೂ.15): ಬಿಗ್‌ಬಾಸ್ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ, ಕಿರುತೆರೆ ನಟಿ ಸಿರಿ (ಸಿರಿಜಾ) ಅವರು ಮಂಡ್ಯ ಮೂಲದ ಉದ್ಯಮಿ, ನಟ ಪ್ರಭಾಕರ್ ಬೋರೇಗೌಡ ಅವರನ್ನು ವಿವಾಹವಾಗಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ಬಳಿಕ ಇಂದು ಮೊದಲ ಬಾರಿಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಗಂಡನ ಜೊತೆಗಿನ ಹಲವು ಫೋಟೋವನ್ನು ಹಂಚಿಕೊಂಡು ನಿಮ್ಮೆಲ್ಲರ ಆಶೀರ್ವಾದ ಇರಲಿ ಥ್ಯಾಂಕ್ಯೂ ಎಂದಿದ್ದಾರೆ
ತುಂಬಾ ಖಾಸಗಿಯಾಗಿ ಅತ್ಯಂತ ಸರಳವಾಗಿ ಮದುವೆಯಾದ ನಟಿ ಸಿರಿ, ಕುಟುಂಬಸ್ಥರ, ಅತ್ಯಂತ ಆಪ್ತರ ಸಮ್ಮುಖದಲ್ಲಿ ಚಿಕ್ಕಬಳ್ಳಾಪುರದ ನಂದಿ ದೇವಸ್ಥಾನದಲ್ಲಿ ತಮ್ಮ ಬಹುಕಾಲದ ಗೆಳೆಯನನ್ನು ಜೂನ್ 13ಕ್ಕೆ ಮದುವೆಯಾದರು. 'ಬದುಕು' ಧಾರಾವಾಹಿಯಲ್ಲಿ ಇವರಿಬ್ಬರೂ ಒಟ್ಟಿಗ ನಟಿಸಿದ್ದರು. ಈ ಧಾರಾವಾಹಿ ಸೂಪರ್ ಹಿಟ್ ಆಗಿತ್ತು.
ಡಿ ಗ್ಯಾಂಗ್‌ನಲ್ಲಿ 19 ಮಂದಿ, ಇಂದು ಜೈಲಿಗೆ?, ಪರಪ್ಪನ ಅಗ್ರಹಾರದಲ್ಲಿನ ದರ್ಶನ್ ಆಪ್ತ ರೌಡಿಶೀಟರ್‌ಗಳು ಬೇರೆಡೆಗೆ!
ನಟಿ ಸಿರಿ ಅವರು ಕಳೆದ 20ಕ್ಕೂ ಹೆಚ್ಚು ವರ್ಷದಿಂದ ಚಿತ್ರರಂಗದಲ್ಲಿದ್ದಾರೆ. ಸಿರಿ ಮತ್ತು ಪ್ರಭಾಕರ್ ಅವರು ಬದುಕು ಧಾರವಾಹಿಯಲ್ಲಿ ಒಟ್ಟಿಗೇ ನಟಿಸಿದ್ದು, ಅಲ್ಲಿ ಗಂಡ-ಹೆಂಡತಿ ಪಾತ್ರದಲ್ಲಿ ಮಿಂಚಿದ್ದರು. ಹೀಗಾಗೊ ಇವರಿಬ್ಬರೂ ದಶಕಗಳಿಂದ ಸ್ನೇಹಿತರಾಗಿದ್ದರು. ಬದುಕು ಸೀರಿಯಲ್ 2014 ಸೆಪ್ಟೆಂಬರ್ ನಲ್ಲಿ 3100 ಸಂಚಿಕೆಗಳನ್ನು ಪೂರೈಸಿತ್ತು. ಈ ಧಾರವಾಹಿ ಸಿರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.
ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು, ಕೊಲೆ ಬೆದರಿಕೆ ಕೇಸ್‌ಗೆ ಮರು ಜೀವ!
ಸೋಷಿಯಲ್ ಮೀಡಿಯಾದಲ್ಲಿ ಸಿರಿ ಮತ್ತು ಪ್ರಭಾಕರ್ ಬೋರೇಗೌಡ ಮದುವೆಯಾಗಿರುವ ಫೋಟೋ ಮತ್ತು ಸಣ್ಣ ಪುಟ್ಟ ವಿಡಿಯೋ ವೈರಲ್ ಆದ ಬಳಿಕ ಮದುವೆಯಾದ ಬಗ್ಗೆ ಸ್ಪಷ್ಟನೆ ಸಿಕ್ಕಿತ್ತು. ಇವರು ಅತ್ಯಂತ ಸರಳವಾಗಿ ಮದುವೆಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆಂದು ಹಲವರು ಕಾಮೆಂಟ್ ಮಾಡಿ ಅಭಿನಂದಿಸಿದ್ದಾರೆ.