Asianet Suvarna News Asianet Suvarna News

ಡಿ ಗ್ಯಾಂಗ್‌ನಲ್ಲಿ 19 ಮಂದಿ, ಇಂದು ಜೈಲಿಗೆ?, ಪರಪ್ಪನ ಅಗ್ರಹಾರದಲ್ಲಿನ ದರ್ಶನ್ ಆಪ್ತ ರೌಡಿಶೀಟರ್‌ಗಳು ಬೇರೆಡೆಗೆ!

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಡಿ ಗ್ಯಾಂಗ್ ಅನ್ನು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿಡಲು ಪೊಲೀಸರು ಯೋಚಿಸಿದ್ದು, ಪತ್ಯೇಕವಾಗಿಡಲು ಚಿಂತನೆ ನಡೆದಿದೆ.

many people accused in renuka swamy murder case include actor darshan and pavithra gowda gow
Author
First Published Jun 15, 2024, 12:02 PM IST

ಬೆಂಗಳೂರು (ಜೂ.15): ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನಲ್ಲಿ ಕೊಲೆ ಮಾಡಿ ಪೋಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಮತ್ತು ಗ್ಯಾಂಗ್ ಅನ್ನು ಇಂದು ಪ್ರತ್ಯೇಕವಾಗಿ ಬೇರೆ ಬೇರೆ ಜೈಲಿಗೆ ಕಳುಹಿಸಲು ಪೊಲೀಸರು ಚಿಂತನೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ಬಂಧನವಾಗಿರೋ ದರ್ಶನ್ ಅಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿ ನಾಳೆ ಮುಗಿಯಲಿದ್ದು, ಇಂದು ಬಹುತೇಕ ಜೈಲು ಸೇರೋ ಸಾಧ್ಯತೆ ಇದೆ. 

ಪೊಲೀಸ್‌ ಮಹಜರು ಬಹುತೇಜ ಮುಗಿದಿದೆ. ನಾಳೆ ಭಾನುವಾರ ರಜೆ, ಸೋಮವಾರ ಬಕ್ರೀದ್ ಹಬ್ಬದ ಕಾರಣ ರಜೆ ಇರುವ ಹಿನ್ನೆಲೆ ಇಂದೇ ಜೈಲಿಗೆ ಕಳಿಸುವ ಸಾಧ್ಯತೆ ಇದೆ. ಡಿ ಟೀಮ್ ನಲ್ಲಿ ಇದುವರೆಗೂ 18ಜನ ಅರೆಸ್ಟ್ ಆಗಿದ್ದಾರೆ. ಒಟ್ಟು 19 ಜನರ ವಿರುದ್ಧ ಎಫ್‌ಐಆರ್ ಆಗಿದ್ದು, ಓರ್ವನ ಬಂಧನ ಬಾಕಿ ಇದೆ. ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು, ಕೊಲೆ ಬೆದರಿಕೆ ಕೇಸ್‌ಗೆ ಮರು ಜೀವ!

ಇಂದು ಈ ಬಗ್ಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಆರೋಪಿಗಳ ಪ್ರತ್ಯೇಕವಾಗಿ ಬೇರೆ ಜೈಲಿನಲ್ಲಿ ಇಡಲು ಪೊಲೀಸರು ಮನವಿ ಸಲ್ಲಿಸಲಿದ್ದಾರೆ. ಆರೋಪಿಗಳು ಒಂದೇ ಕಡೆ ಇದ್ರೆ ಪ್ರಕರಣದಿಂದ ಬಚಾವ್ ಆಗಲು ಒಂದಷ್ಟು ಪ್ಲಾನ್ ಮಾಡಬಹುದು. ಇಲ್ಲ ಅವರವರ ಮಧ್ಯೆ ಗಲಾಟೆಯಾಗೋ ಸಾಧ್ಯತೆಯಿದೆ. ಈ ಹಿನ್ನೆಲೆ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ.

ಇನ್ನು ಬೆಂಗಳೂರು ಪರಪ್ಪನ ಕಾರಗೃಹಕ್ಕೆ ನಟ ದರ್ಶನ್ ಶಿಫ್ಟ್‌ ಹಿನ್ನೆಲೆ ಸುಮಾರು 30 ರೌಡಿಗಳನ್ನ  ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲು ಕೂಡ ಜೈಲು ಅಧಿಕಾರಿಳು ಚಿಂತನೆ ನಡೆಸಿದ್ದಾರೆ. ಜೈಲಿನಲ್ಲಿ ದರ್ಶನ್ ಆಪ್ತರಾಗಿರೊ ಕೆಲ ರೌಡಿ ಶೀಟರ್ ಗಳು ಇದ್ದಾರೆ. ಹೀಗಾಗಿ  ಅವರ ಜೊತೆಗೆ ಸಂಪರ್ಕ ತಪ್ಪಿಸಲು ಬೇರೆ ಜೈಲಿಗೆ ಶಿಫ್ಟ್ ಮಾಡಲು ಜೈಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರಂತೆ.

ನಾನು ಲಿಂಗಾಯತ, ವೆಜಿಟೇರಿಯನ್‌... ಎಂದಿದ್ದ ರೇಣುಕಾಸ್ವಾಮಿ ಬಾಯಿಗೆ ಚಿಕನ್‌ ಪೀಸ್‌ ತುರುಕಿದ್ದ ದರ್ಶನ್‌!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದುವರೆಗೆ ಅರೆಸ್ಟ್ ಆಗಿರುವ ಆರೋಪಿಗಳ ಪಟ್ಟಿ ಇಂತಿದೆ.
A1 ಪವಿತ್ರಾ ಗೌಡ : ಬಂಧಿತ
A2 ದರ್ಶನ್ ತೂಗುದೀಪ : ಬಂಧಿತ
A3 ಪುಟ್ಟಸ್ವಾಮಿ ಅಲಿಯಾಸ್ ಪವನ್ : ಬಂಧಿತ
A4 ರಾಘವೇಂದ್ರ : ಬಂಧಿತ
A5 ನಂದೀಶ : ಬಂಧಿತ
A6 ಜಗದೀಶ @ ಜಗ್ಗ : ಚಿತ್ರದುರ್ಗ ಪೊಲೀಸ್ ಕಸ್ಟಡಿಯಲ್ಲಿ
A7 ಅನು@ ಅನು ಕುಮಾರ್ : ಚಿತ್ರದುರ್ಗ ಪೊಲೀಸ್ ಕಸ್ಟಡಿಯಲ್ಲಿ
A8 ರವಿ : ಬಂಧಿತ
A9 ರಾಜು : ನಾಪತ್ತೆ
A10 ವಿನಯ್ ; ಬಂಧಿತ
A11 ನಾಗರಾಜು: ಬಂಧಿತ
A12 ಲಕ್ಷ್ಮಣ: ಬಂಧಿತ
A13 ದೀಪಕ್: ಬಂಧಿತ
A14 ಪ್ರದೋಶ್: ಬಂಧಿತ
A15 ಕಾರ್ತಿಕ್: ಬಂಧಿತ
A16 ಕೇಶವಮೂರ್ತಿ : ಬಂಧಿತ
A17 ನಿಖಿಲ್ ನಾಯಕ್: ಬಂಧಿತ
A18 ಪುನೀತ್ : ಬಂಧಿತ
A19 ಹೇಮಂತ್ : ಬಂಧಿತ

Latest Videos
Follow Us:
Download App:
  • android
  • ios