ಎರಡನೇ ಎಪಿಸೋಡ್‌ನಲ್ಲಿ ಕಾಣಿಸದ ಡ್ರೋನ್ ಮತ್ತು ಇಶಾನಿ. ಔಟ್ ಆದ್ರಾ ಅಥವಾ ಬೇರೆ ಕೆಲಸನಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು.... 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಕಾಮಿಡಿ ರಿಯಾಲಿಟಿ ಶೋ 3ರಲ್ಲಿ ಬಿಗ್ ಬಾಸ್ ಖ್ಯಾತಿಯ ರ್ಯಾಪರ್ ಇಶಾನಿ ಮತ್ತು ಡ್ರೋನ್ ಪ್ರತಾಪ್‌ ಸ್ಪರ್ಧಿಸುತ್ತಿದ್ದಾರೆ. ಓಪನಿಂಗ್ ಎಪಿಸೋಡ್‌ನಲ್ಲಿ ಇಬ್ಬರು ನೀಡಿದ ಪ್ರಾಮಿಸ್‌ ಪ್ರಕಾರ ಮೊದಲನೇ ಎಪಿಸೋಡ್‌ನಲ್ಲಿ ವಾರೇ ವಾ ಪರ್ಫಾರ್ಮೆನ್ಸ್ ಮಾಡಿಬಿಟ್ಟರು. ಅಲ್ಲದೆ ಜಡ್ಜ್‌ಗಳಿಂದ ಗೋಲ್ಡನ್ ಬಜರ್ ಪಡೆದರು. ಆದರೆ ಇದ್ದಕ್ಕಿದ್ದಂತೆ ಎರಡನೇ ಎಪಿಸೋಡ್‌ನಿಂದ ಮಿಸ್‌ ಆಗಿರುವುದು ವೀಕ್ಷಕರಲ್ಲಿ ಗೊಂದಲ ಸೃಷ್ಟಿ ಮಾಡಿದೆ. ಹೀಗಾಗಿ ಉತ್ತರ ಇಲ್ಲಿದೆ....

ಗಿಚ್ಚಿ ಗಿಲಿಗಿಲಿ ಎರಡನೇ ಎಪಿಸೋಡ್ ಚಿತ್ರೀಕರಣ ನಡೆಯುವ ಸಮಯದಲ್ಲಿ ಹೊಸ ಪೇಟೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಬಿಗ್ ಬಾಸ್ ಸೀಸನ್ 10 ಸ್ಪರ್ಧಿಗಳಾದ ವಿನಯ್ ಗೌಡ, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್ ಮತ್ತು ಡ್ರೋನ್ ಪ್ರತಾಪ್ ಭಾಗಿಯಾಗಿದ್ದರು. ಹೀಗಾಗಿ ಡ್ರೋನ್ ಪ್ರತಾಪ್‌ ಶೂಟಿಂಗ್‌ಗೆ ಬರಲು ಸಾಧ್ಯವಾಗಲಿಲ್ಲ. ಇನ್ನು ಅನಾರೋಗ್ಯದ ಸಮಸ್ಯೆಯಿಂದ ಇಶಾನಿ ವಿಶ್ರಾಂತಿ ಪಡೆಯುತ್ತಿದ್ದ ಕಾರಣ ಭಾಗಿಯಾಗಲು ಸಾಧ್ಯವಾಗಲಿಲ್ಲ. 

ಸೈನ್ಸ್‌ ಟೀಚರ್‌ ಕೆಲಸಕ್ಕೆ ಗುಡ್‌ ಬೈ; 'ಗಿಚ್ಚಿ ಗಿಲಿಗಿಲಿ'ಯಲ್ಲಿ ಕಾಮಿಡಿ ಮಾಡಲು ಬಂದ ರೀಲ್ಸ್‌ ಕ್ವೀನ್ ಯಾರು?

ಸೀಸನ್‌ 3ರ ತೀರ್ಪುಗಾರರ ಸ್ಥಾನದಲ್ಲಿ ಶ್ರುತಿ ಕೃಷ್ಣ, ಕೋಮಲ್ ಮತ್ತು ಸಾಧು ಕೋಕಿಲ್ ಇದ್ದಾರೆ. ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಮೊದಲನೇ ಎಪಿಸೋಡ್‌ನಲ್ಲಿ ಡ್ರೋನ್‌ ಪ್ರತಾಪ್ ಕನ್ನಡ ಮಾತನಾಡಿದ ಶೈಲಿ ಸಖತ್ ವೈರಲ್ ಆಗಿತ್ತು.ಕನ್ನಡ ಗೊತ್ತಿದ್ದರೂ ಸ್ಪಷ್ಟವಾಗಿ ಮಾತನಾಡಲು ಕಷ್ಟ ಪಡುತ್ತಿದ್ದರೂ ವೀಕ್ಷಕರಿಗೆ ಮನೋರಂಜನೆಯಾಗಿತ್ತು. ಇನ್ನು ಕನ್ನಡ ಕಲಿಯುವ ಆಸೆ ಇದ್ದರೂ ಇಶಾನಿ ಮಾತನಾಡಲು ಕಷ್ಟ ಪಡುತ್ತಾರೆ. ಆದರೂ ಚಂದ್ರಪ್ರಭಾ ಕಾಂಬಿನೇಷನ್‌ನಲ್ಲಿ ಸೂಪರ್ ಆಗಿ ಮೂಡಿ ಬಂದಿದೆ.