ಮರೆಯಲಾಗದ ಕಹಿ ಘಟನೆಗಳ ನೆನಪಿಸಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಬಿಗ್​ಬಾಸ್​ ಸ್ಪರ್ಧಿಗಳು

ಬಿಗ್​ಬಾಸ್​ ಸ್ಪರ್ಧಿಗಳು ತಮ್ಮ ಜೀವನದ ಮರೆಯಲಾಗದ ಕಹಿ ಘಟನೆಗಳ ನೆನಪಿಸಿಕೊಂಡು  ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರು ನೆನಪಿಸಿಕೊಂಡ ಘಟನೆಗಳೇನು?
 

Bigg Boss contestants sharing  unforgettable bitter incidents of their life suc

ಬಿಗ್​ಬಾಸ್ ಎರಡನೆಯ ತಿಂಗಳಿಗೆ ಕಾಲಿಟ್ಟಿದ್ದು, ದಿನದಿಂದ ದಿನಕ್ಕೆ ಕಾಂಟ್ರವರ್ಸಿಗಳು ಹೆಚ್ಚಾಗುತ್ತಲೇ ಸಾಗಿವೆ. ಸ್ಪರ್ಧಿಗಳ ಹುಚ್ಚಾಟ ಒಂದೆಡೆ ಹೆಚ್ಚಾಗುತ್ತಿದ್ದರೆ, ಬಿಗ್​ಬಾಸ್​ ವಿರುದ್ಧ ಒಂದಲ್ಲ ಒಂದು ರೀತಿಯ ದೂರುಗಳು ದಾಖಲಾಗುತ್ತಿವೆ.  ಹುಚ್ಚಾಟ ಹೆಚ್ಚಾದಷ್ಟೂ ಟಿಆರ್​ಪಿ ರೇಟೂ ಏರುತ್ತಿದೆ. ಗದ್ದಲ, ಗಲಾಟೆ, ಅಶ್ಲೀಲತೆಯನ್ನು ನೋಡಿ ಬೈಯುತ್ತಲೇ ಖುಷಿ ಪಡುವ ದೊಡ್ಡ ವರ್ಗವೇ ಇದೆ ಎನ್ನುವುದು ಬಿಗ್​ಬಾಸ್​ನ ಎಲ್ಲಾ ಭಾಷೆಗಳ ಟಿಆರ್​ಪಿ ರೇಟ್​ ನೋಡಿದರೆ ತಿಳಿದುಬರುತ್ತಿದೆ. ಪ್ರತಿದಿನವೂ ಸೋಷಿಯಲ್​ ಮೀಡಿಯಾದಲ್ಲಿ ಈ ಷೋಗೆ ಶಾಪ ಹಾಕುತ್ತಲೇ, ಇದರ ವಿರುದ್ಧ ಕಮೆಂಟ್​ ಮಾಡುತ್ತಲೇ ಅದನ್ನು ಒಂದು ಕ್ಷಣವೂ ಬಿಡದೆ ನೋಡುವ ಅಸಂಖ್ಯ ಪ್ರೇಕ್ಷಕ ವರ್ಗವಿದೆ. ಪ್ರೇಕ್ಷಕರ ಸಂಖ್ಯೆ ಹೆಚ್ಚಿದ್ದಷ್ಟೂ ಬಿಗ್​ಬಾಸ್​ ಮನೆಯಲ್ಲಿ ಅಸಭ್ಯ ವರ್ತನೆಗಳು ಮಿತಿಮೀರುತ್ತಲೇ ಇರುತ್ತವೆ ಎಂದು ಇಂಥ ಷೋ ಇಷ್ಟಪಡದವರು ಹೇಳುತ್ತಲೇ ಇರುತ್ತಾರೆ.  

 ಟಾಸ್ಕ್​ ಸಮಯದಲ್ಲಿ ಡ್ರೋನ್​ ಪ್ರತಾಪ್​ ಮತ್ತು ಸಂಗೀತಾ (Sangeetha Sringeri) ಅವರ ಕಣ್ಣಿಗೆ ಹಾನಿಯಾಗಿದ್ದು, ಇಬ್ಬರೂ ಕಪ್ಪು ಕನ್ನಡಕ ಹಾಕಿಕೊಂಡೇ ಸ್ಪರ್ಧೆ ಮುಂದುವರೆಸಿದ್ದಾರೆ.  ಸೋಪ್​ ನೀರನ್ನು ಪರಸ್ಪರ ಎರೆಚಿಕೊಳ್ಳುವ ಟಾಸ್ಕ್​ನಲ್ಲಿ ಇವರಿಬ್ಬರ ಮುಖಕ್ಕೆ ರಾಸಾಯನಿಕ ನೀರು ಬಿದ್ದಿದೆ ಎನ್ನಲಾಗುತ್ತಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಪಡೆದು ಬಿಗ್​ಬಾಸ್ ಮನೆಗೆ ಬಂದಿರುವ ಇವರಿಬ್ಬರಿಗೆ ಆದ ತೊಂದರೆಯಿಂದ ಭಾರಿ ಪ್ರಮಾಣದ ವಿವಾದ ಸೃಷ್ಟಿಯಾಗಿದ್ದು, ಬಿಗ್​ಬಾಸ್​ ಸ್ಪರ್ಧೆಯ ಬಗ್ಗೆ ಹಲವರು ಪ್ರಶ್ನೆ ಮಾಡುತ್ತಿದ್ದಾರೆ.

ನನ್ನಮ್ಮ ಕಣ್ಣೀರು ಹಾಕಿದ್ಲು! ಕೀಳು ಮಟ್ಟದ ಪ್ರಚಾರ ಬೇಕಾ? ಪಾಪಿಗಳ ಸಂತೆಯಲ್ಲಿ ಪ್ರಾಣಕ್ಕೆ ಬೆಲೆಯೇ ಇಲ್ವಾ?

ಇದರ ನಡುವೆಯೇ, ಇದೀಗ ಹೊಸ ಪ್ರೊಮೋ ರಿಲೀಸ್​ ಮಾಡಲಾಗಿದೆ. ಅದರಲ್ಲಿ, ಬಿಗ್​ಬಾಸ್​ ಸ್ಪರ್ಧಿಗಳು ಎಂದೂ ಮರೆಯದ ತಮ್ಮ ಕಹಿ ಘಟನೆಗಳನ್ನು ಹೇಳಿಕೊಂಡು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಬಿಗ್​ಬಾಸ್​​ ನಿಮ್ಮ ಮನದಾಳದ  ಮಾತುಗಳಿಗೆ ಕಿವಿಯಾಗುತ್ತಾರೆ ಎಂದು ಬಿಗ್​ಬಾಸ್​ ಹೇಳುತ್ತಿದ್ದಂತೆಯೇ ಸ್ಪರ್ಧಿಗಳು ಮರೆಯಲಾಗದ ವಿಷಯಗಳ ಬಗ್ಗೆ ಹೇಳಿಕೊಂಡಿದ್ದಾರೆ. ವಿನಯ್​ ತಮ್ಮ ತಂಗಿಯ ಡೆಲವರಿಯ ಕುರಿತು ಮಾತನಾಡಿದ್ದಾರೆ. ತಂಗಿಯ ಡೆಲವರಿ ಡೇಟ್​ ಇತ್ತು. ಆ ಒಂದು ವಿಷಯ... ಎನ್ನುತ್ತಲೇ ಕಣ್ಣೀರಾಗಿದ್ದಾರೆ.

ಇನ್ನು ನಮ್ರತಾ, ನನಗೆ ಒಂದೊಂದು ಸಲ ಒಬ್ಬಂಟಿ ಫೀಲ್​ ಆಗುತ್ತದೆ ಎಂದು ಅತ್ತಿದ್ದಾರೆ. ನಾನು ಮಾತನಾಡಿದರೆ ಇಲ್ಲಿ ಯಾರಿಗೂಇಷ್ಟ ಆಗುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಡ್ರೋನ್​ ಪ್ರತಾಪ್​ ಕನ್ನಡಕ ಹಾಕಿಕೊಂಡು ಓಡಾಡುವುದನ್ನು ನೋಡಿದರೆ ಬೇಜಾರು ಆಗುತ್ತದೆ. ಇದಕ್ಕೆ ಒಂದು ರೀತಿಯಲ್ಲಿ ನಾನೇ ಕಾರಣನಾ ಎನಿಸುತ್ತದೆ ಎಂದು ವರ್ತೂರು ಸಂತೋಷ್​ ಬೇಸರಿಸಿದ್ದಾರೆ. ಕಾಲೇಜಿನ ದಿನಗಳನ್ನು ನೆನಪಿಸಿಕೊಂಡು ಬಿಕ್ಕಿಬಿಕ್ಕಿ ಅತ್ತ ಸಂಗೀತಾ, ಸ್ಕೂಲ್​-ಕಾಲೇಜಿನಲ್ಲಿ ನನ್ನನ್ನು ಯಾವಾಗಲೂ ಕಾರ್ನರ್​ ಮಾಡುತ್ತಿದ್ದರು. ಇಲ್ಲಿಯೂ ಹಾಗೆಯೇ ಎನಿಸುತ್ತಿದೆ ಎಂದಿದ್ದಾರೆ. 
 

ಸ್ವರ್ಗದಷ್ಟೇ ಬಿಗ್​ಬಾಸ್​ ಸುರಕ್ಷಿತ ಎಂದದ್ದು ಇದಕ್ಕೇನಾ? ಸಂಗೀತಾ ಸಹೋದರ ಕಿಡಿ- ಸುದೀಪ್​ಗೆ ಪತ್ರ?

Latest Videos
Follow Us:
Download App:
  • android
  • ios