Rashika Suraj Love Story : ಬಿಗ್ ಬಾಸ್ ಮನೆಯಲ್ಲಿ ಪ್ರಪೋಸ್ ಕಾರ್ಯಕ್ರಮ ನಡೆದಿದೆ. ಸೂರಜ್, ರಾಶಿಕಾಗೆ ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ರಾಶಿಕಾ ಏನಂದ್ರು? ವೀಕ್ಷಕರು ಏನಂತಿದ್ದಾರೆ? ಇಲ್ಲಿದೆ ಉತ್ತರ.
ಬಿಗ್ ಬಾಸ್ (Bigg Boss) ಮನೆಯಲ್ಲಿ ಅದೆಷ್ಟೋ ಪ್ರೀತಿ ಚಿಗುರಿದೆ. ಮನೆಯಿಂದ ಹೊರಗೆ ಬಂದ್ಮೇಲೂ ಸಂಬಂಧ ಉಳಿಸಿಕೊಂಡವರು ಒಂದಿಷ್ಟು ಜೋಡಿಯಾದ್ರೆ ಮತ್ತೆ ಕೆಲವರ ಸಂಬಂಧ ಬಿಗ್ ಬಾಸ್ ಮನೆಗೆ ಮಾತ್ರ ಸೀಮಿತವಾಗಿರುತ್ತೆ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯಾರ್ಯಾರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳುತ್ತೆ ಎನ್ನುವ ಪ್ರಶ್ನೆ ಮೂಡಿತ್ತು. ಆರಂಭದಲ್ಲಿ ಗಿಲ್ಲಿ – ಕಾವ್ಯಾ ಎನ್ನುತ್ತಿದ್ರೂ ಗಿಲ್ಲಿ ಪ್ರೀತಿಗೆ ಕಾವ್ಯಾ ಓಗುಟ್ಟಂತೆ ಕಾಣ್ತಿಲ್ಲ. ಈ ಮಧ್ಯೆ ಎಂಟ್ರಿ ಆಗಿದ್ದು ಸೂರಜ್. ಏಕಾಂಗಿಯಾಗಿದ್ದ ರಾಶಿಕಾ (Rashika)ಗೆ ಸೂರಜ್ (Suraj) ಜೊತೆಯಾದ್ರು. ಇಬ್ಬರು ಆಪ್ತರಾದ್ರು. ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಎಚ್ಚರಿಕೆ ನಂತ್ರ ಸ್ವಲ್ಪ ದೂರವಾದ್ರೂ ಇಬ್ಬರ ಮಧ್ಯೆ ಬಾಂಡಿಂಗ್ ಹಾಗೇ ಇತ್ತು. ಸೂರಜ್ ಹಿಂದೆ ಹಿಂದೆ ಹೋಗ್ತಿದ್ದ ರಾಶಿಕಾ, ಸೂರಜ್ ಪ್ರೀತಿಗೆ ಬಿದ್ದಿದ್ದಾರೆ ಅಂತ ವೀಕ್ಷಕರು ಅಂದ್ಕೊಂಡಿದ್ರು. ಆದ್ರೆ ವೀಕ್ಷಕರ ನಿರೀಕ್ಷೆ ತಪ್ಪಾಗಿದೆ. ರಾಶಿಕಾ ಪ್ರೀತಿಗೆ ಸೂರಜ್ ಬಿದ್ದಂತಿದೆ. ರಾಶಿಕಾಗೆ ಸೂರಜ್ ಪ್ರಪೋಸ್ ಕೂಡ ಮಾಡಿದ್ದಾರೆ.
ರಾಶಿಕಾಗೆ ಪ್ರಪೋಸ್ ಮಾಡಿದ ಸೂರಜ್ ! :
ಸೂರಜ್ ಹಾಗೂ ರಾಶಿಕಾ ಕುಳಿತು ಮಾತನಾಡ್ತಿರುವ ವೇಳೆ ರಾಶಿಕಾಗೆ ಸೂರಜ್ ಪ್ರಪೋಸ್ ಮಾಡಿದ್ದಾರೆ. ಐ ಲವ್ ಯೂ ಎಂದಿದ್ದಾರೆ. ಇದಕ್ಕೆ ರಾಶಿಕಾ ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವ ಕುತೂಹಲ ಸೂರಜ್ ಗೆ ಮಾತ್ರವಲ್ಲ ವೀಕ್ಷಕರಿಗೂ ಇತ್ತು. ರಾಶಿಕಾ, ಲವ್ ಯು ಟೂ ಅಂತಾರೆ ಅಂದ್ಕೊಂಡಿದ್ದರು. ಆದ್ರೆ ಎಲ್ಲ ಉಲ್ಟಾ ಆಗಿದೆ. ರಾಶಿಕಾ, ನನಗೆ ಇಂಟರೆಸ್ಟ್ ಇಲ್ಲ ಎಂದಿದ್ದಾರೆ. ಅದಕ್ಕೆ ಸೂರಜ್, ಗೊತ್ತು ಎನ್ನುತ್ತಲೇ ನಕ್ಕಿದ್ದಾರೆ. ಎಲ್ಲ ಕ್ಯಾಮರಾ ನಮ್ಮನ್ನು ಫೋಕಸ್ ಮಾಡ್ತಿದೆ ಎನ್ನುವ ಕಾರಣಕ್ಕೆ ರಾಶಿಕಾರಿಂದ ಈ ಉತ್ತರ ಬಂದಿದ್ಯಾ ಇಲ್ಲ ನಿಜವಾಗ್ಲೂ ರಾಶಿಕಾಗೆ ಇಂಟರೆಸ್ಟ್ ಇಲ್ವ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ರಾಶಿಕಾ ನಗ್ತಾನೆ ಉತ್ತರ ನೀಡಿದ್ದರಿಂದ ವೀಕ್ಷಕರಿಗೆ ಸಣ್ಣ ಅನುಮಾನವಿದೆ. ಸೂರಜ್ ಗೊತ್ತು ಎಂದಿದ್ರಿಂದ ಅನುಮಾನ ಡಬಲ್ ಆಗಿದೆ.
ಆಟದ ವೇಳೆ ಕುಸಿದು ಬಿದ್ದ Bigg Boss Mallamma- ಆಸ್ಪತ್ರೆಗೆ ಶಿಫ್ಟ್? ಏನಿದು ಶಾಕಿಂಗ್ ವೈರಲ್ ವಿಡಿಯೋ ಅಸಲಿಯತ್ತು?
ಇಬ್ಬರು ಹತ್ತಿರವಾಗಿದ್ದು ಹೇಗೆ? :
ಬಿಗ್ ಬಾಸ್ ಮನೆಗೆ ಮಂಜುಭಾಷಿಣಿ ಜೊತೆ ಜೋಡಿಯಾಗಿ ಎಂಟ್ರಿ ನೀಡಿದ ರಾಶಿಕಾ ಆರಂಭದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲ್ಲಿಲ್ಲ. ಮಂಜುಭಾಷಿಣಿ ಹೊರಗೆ ಹೋಗ್ತಿದ್ದಂತೆ ರಾಶಿಕಾ ಒಂಟಿಯಾಗಿದ್ರು. ಇದೇ ಟೈಂನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ನೀಡಿ ಬಂದವರು ಸೂರಜ್. ಬಿಗ್ ಬಾಸ್ ಮನೆಗೆ ಸೂರಜ್ ಎಂಟ್ರಿ ಜಕಾಸ್ ಆಗಿತ್ತು. ಬಾಡಿ ತೋರಿಸಿಯೇ ಹುಡುಗಿಯರನ್ನು ಬಲೆಗೆ ಬೀಳಿಸಿಕೊಂಡಿದ್ರು. ಗುಡ್ ಲುಕ್ಕಿಂಗ್ ಅಂತ ರಾಶಿಕಾಗೆ ರೆಡ್ ರೋಸ್ ನೀಡಿದ್ದೇ ನೀಡಿದ್ದು ಸೂರಜ್ ಮೇಲೆ ರಾಶಿಕಾ ಕಣ್ಣು ಬಿತ್ತು. ಬಿಗ್ ಬಾಸ್ ಸ್ಪರ್ಧಿಗಳ ಮಧ್ಯೆ ರಾಶಿಕಾ ಹಾಗೂ ಸೂರಜ್ ಬೇರ್ಪಟ್ಟಿದ್ದರು. ಇಬ್ಬರೇ ಕಳೆದು ಹೋಗಿದ್ರು.
Bigg Boss Kannada: ಲೇಡಿ ಡಾನ್ ಅಶ್ವಿನಿ ಗೌಡ ಹಿಂದೆ ಹೇಗಿದ್ರು? ಹಾಟ್ ಡಾನ್ಸ್ ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯನ್ನು ಮೆಚ್ಚಿಕೊಳ್ಳುವ ಬದಲು ತೆಗಳಿದ್ದೇ ಹೆಚ್ಚು. ವೀಕ್ಷಕರಿಗೆ ಯಾಕೂ ರಾಶಿಕಾ ಸೂರಜ್ ಇಷ್ಟವಾಗ್ಲಿಲ್ಲ. ವೀಕೆಂಡ್ ನಲ್ಲಿ ಸುದೀಪ್ ಕೂಡ ಎಚ್ಚರಿಕೆ ನೀಡಿದ್ದಾಗಿದೆ. ಇದೇ ಕಾರಣಕ್ಕೆ ರಾಶಿಕಾ – ಸೂರಜ್ ಸ್ವಲ್ಪ ಅಂತರ ಕಾಯ್ದುಕೊಂಡರೂ ಸಂಪೂರ್ಣ ದೂರ ಆಗಿಲ್ಲ. ರಾಶಿಕಾ ಈ ವೀಕ್ ಸ್ವಲ್ಪ ಆಕ್ಟಿವ್ ಆಗಿದ್ದು, ಸೂರಜ್ ನಿರೀಕ್ಷೆಯಂತೆ ಆಟ ಆಡ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಸೂರಜ್ ಬಿರುಗಾಳಿ ಎಬ್ಬಿಸ್ತಾರೆ ಅಂದ್ಕೊಂಡಿದ್ದ ವೀಕ್ಷಕರಿಗೆ ನಿರಾಸೆಯಾಗಿದೆ. ಪ್ರಪೋಸ್ ಗೆ ರಾಶಿಕಾರಿಂದ ರಿಯಾಕ್ಷನ್ ಸಿಕ್ಕಿದ ಮೇಲಾದ್ರೂ ಸೂರಜ್ ಸುಧಾರಿಸ್ತಾರಾ ಕಾದು ನೋಡ್ಬೇಕಿದೆ.
