Bigg Boss contestant Ashwini Gowda : ಬಿಗ್ ಬಾಸ್ ಮನೆ ಸ್ಪರ್ಧಿ ಅಶ್ವಿನಿ ಗೌಡ ಬಾಯಲ್ಲಿ ಮಾತ್ರವಲ್ಲ ಡಾನ್ಸ್ ನಲ್ಲೂ ಎತ್ತಿದ ಕೈ. ವಿನೋದ್ ರಾಜ್ ಜೊತೆ ಸ್ಟೆಪ್ಸ್ ಹಾಕಿರುವ ಅವರು ಆಗ ಹೆಂಗಿದ್ರು ಗೊತ್ತಾ?
ಬಿಗ್ ಬಾಸ್ (Bigg Boss) ಮನೆಯಲ್ಲಿ ಅತಿ ಹೆಚ್ಚು ಸದ್ದು ಮಾಡ್ತಿರುವ ಸ್ಪರ್ಧಿಗಳಲ್ಲಿ ಅಶ್ವಿನಿ ಗೌಡ (Ashwini Gowda) ಒಬ್ರು. ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ, ಮನೆಯ ಎಲ್ಲ ವಿಷ್ಯಕ್ಕೂ ಮೂಗು ತೂರಿಸ್ತಾರೆ ಎನ್ನುವ ಆರೋಪ ಇದೆ. ಆರಂಭದಿಂದಲೂ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹವಾ ಮೆಂಟೇನ್ ಮಾಡಿದ್ದಾರೆ. ಅವ್ರ ಆಟ ಕೆಲ ಸ್ಪರ್ಧಿಗಳಿಗೆ ಕಿರಿಕಿರಿ ನೀಡಿದ್ರೆ ಮತ್ತೆ ಕೆಲವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಕಾಕ್ರೋಚ್ ಸುಧಿ, ಜಾಹ್ನವಿ ಜೊತೆ ಆಪ್ತವಾಗಿರುವ ಅಶ್ವಿನಿ ಗೌಡ, ಗಿಲ್ಲಿ ಕಂಡ್ರೆ ಉರಿದು ಬೀಳ್ತಾರೆ. ಗಿಲ್ಲಿ ಹಾಗೂ ಕಾವ್ಯಾ ಜೊತೆ ಜಗಳವಾಡ್ತಾ ಕಂಟೆಂಟ್ ಕ್ರಿಯೇಟ್ ಮಾಡೋದ್ರಲ್ಲಿ ಅಶ್ವಿನಿ ಮುಂದಿದ್ದಾರೆ. ಸದ್ಯ ಗಿಲ್ಲಿ ಜೊತೆ ಡಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿರುವ ಅಶ್ವಿನಿ ಈಗಲ್ಲ ಮೊದಲಿನಿಂದ್ಲೂ ಸಖತ್ ಹಾಟ್ ಆಂಡ್ ಕ್ಯೂಟ್.
ಸಖತ್ ಹಾಟ್ ಡಾನ್ಸ್ ಮಾಡಿದ್ದ ಅಶ್ವಿನಿ ಗೌಡ :
ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಹೋಗ್ತಿದ್ದಂತೆ ಅವ್ರ ಹಳೆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋದು ಸಾಮಾನ್ಯ. ಅಶ್ವಿನಿ ಗೌಡ ಈಗ ಆಟದಲ್ಲಿ ಬ್ಯುಸಿ ಇದ್ರೆ ಕಂಟೆಂಟ್ ಕ್ರಿಯೇಟರ್ಸ್ ಹಳೆ ವಿಡಿಯೋ ಸರ್ಚ್ ಮಾಡೋದ್ರಲ್ಲಿ ಬ್ಯುಸಿಯಿದ್ದಾರೆ. ಅಶ್ವಿನಿ ಗೌಡ ಅವರ ಹಳೆ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಶ್ವನಿ ಗೌಡ, ವಿನೋದ್ ರಾಜ್ ಜೊತೆ ಹಾಟ್ ಆಗಿ ಡಾನ್ಸ್ ಮಾಡ್ತಿದ್ದಾರೆ. ಅಶ್ವಿನಿ ಗೌಡ ವಿಡಿಯೋ ಹಾಕಿರುವ ಕಂಟೆಂಟ್ ಕ್ರಿಯೇಟರ್ಸ್, ಇದು ಯಾರು ಗೆಸ್ ಮಾಡಿ ಅಂತ ವೀಕ್ಷಕರಿಗೆ ಪ್ರಶ್ನೆ ಹಾಕಿದ್ದಾರೆ.
Bigg Boss: ಸೀರಿಯಲ್ ಕಲಾವಿದ್ರು ನಿಂಗೆ ಅದ್ರಲ್ಲೇ ಹೊಡೀತಾರೆ- ರಕ್ಷಿತಾಗೆ ಅಶ್ವಿನಿ ಗೌಡ ಆವಾಜ್; ಏನಿದು ಗಲಾಟೆ?
ವೈರಲ್ ಆಗಿರುವ ವಿಡಿಯೋ ಅಶ್ವಿನಿ ಗೌಡ ಅವರ ಯಾರದು ಸಿನಿಮಾ ಸೀನ್. ಈ ಸಿನಿಮಾ 2009ರಲ್ಲಿ ತೆರೆಗೆ ಬಂದಿತ್ತು. ಸಖತ್ ಸಸ್ಪೆನ್ಸ್ ಸಿನಿಮಾ ಇದಾಗಿದ್ದು, ಇದ್ರಲ್ಲಿ ವಿನೋದ್ ರಾಜ್, ಲೀಲಾವತಿ ಹಾಗೂ ಅಶ್ವಿನಿ ಗೌಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಗೌಡ ವಿನೋದ್ ರಾಜ್ ಪ್ರೇಯಸಿಯಾಗಿ ನಟಿಸಿದ್ದು, ಸಖತ್ ಹಾಟ್ ಫಿಜ್ಜಾ ಹಾಡಿನಲ್ಲಿ ವಿನೋದ್ ರಾಜ್ ಜೊತೆ ಅಶ್ವಿನಿ ಸ್ಟೆಪ್ಸ್ ಹಾಕಿದ್ದರು.
ನಟಿ, ನಿರ್ಮಾಪಕಿ ಹಾಗೂ ಕನ್ನಡಪರ ಹೋರಾಟಗಾರ್ತಿಯಾಗಿರುವ ಅಶ್ವಿನಿ ಗೌಡ ಅವರ ರೋಮ್ಯಾಂಟಿಕ್ ಡಾನ್ಸ್ ನೋಡಿದ ಫ್ಯಾನ್ಸ್, ಅಶ್ವಿನಿ ಕಾಲೆಳೆದಿದ್ದಾರೆ. ಹೂ ತರ ಇದ್ದ ಅಶ್ವಿನಿ ಹೂಕೋಸ್ ತರ ಆಗಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಬಿಗ್ ಬಾಸ್ ಮನೆಯಲ್ಲಿರುವ ಅಶ್ವಿನಿ ಆಟವನ್ನು ಮೆಚ್ಚಿಕೊಂಡಿದ್ದಾರೆ. ಅಶ್ವಿನಿ ತುಂಬಾ ಸುಂದರವಾಗಿದ್ದಾರೆ. ಗಲಾಟೆ ಹೆಚ್ಚಿದ್ರೂ ಲೇಡಿ ವಿಲನ್ ಅಂತ ಕಮೆಂಟ್ ಮಾಡಿದ್ದಾರೆ.
Bigg Boss ಮನೆಯಲ್ಲಿ ಗಿಲ್ಲಿ ಈಗ ಕಿಲಕಿಲ! ಕಾವ್ಯಾ ಜೊತೆ ರೊಮಾನ್ಸ್ಗೆ ಅವಕಾಶ ಕೊಟ್ಟೇ ಬಿಟ್ರಲ್ಲ
ಅಶ್ವಿನಿ – ವಿನೋದ್ ವಿವಾದ ಏನು? :
ಅಶ್ವಿನಿ ಗೌಡ ಜೊತೆ ವಿನೋದ್ ರಾಜ್ ಹೆಸರು ಥಳುಕು ಹಾಕಿಕೊಂಡಿತ್ತು. ಅಶ್ವಿನಿ ಹಾಗೂ ವಿನೋದ್ ಹಗ್ ಮಾಡಿರುವ ಸಿನಿಮಾ ಫೋಟೋ ಹಾಕಿ, ವಿನೋದ್ ಯಾಕೆ ಇನ್ನೂ ಮದುವೆ ಆಗಿಲ್ಲ ಎನ್ನುವ ಶೀರ್ಷಿಕೆಯಲ್ಲಿ ಒಂದು ಸುದ್ದಿ ಪ್ರಸಾರವಾಗಿತ್ತು. ಅದನ್ನು ನೋಡಿದ ಜನರು, ಅಶ್ವಿನಿ ಹಾಗೂ ವಿನೋದ್ ಮಧ್ಯೆ ಸಂಬಂಧವಿದೆ ಅಂತ ಗುಲ್ಲೆಬ್ಬಿಸಿದ್ದರು. ಏನೂ ಮಾಡದೆ ಅಶ್ವಿನಿ ಈ ವಿವಾದದಲ್ಲಿ ಸಿಕ್ಕಿ ಬಿದ್ದಿದ್ದರು. ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಳ್ಳೋದು ಅಶ್ವಿನಿ ಗೌಡ ಗುರಿಯಾಗಿದ್ದು, ಈ ಬಾರಿ ಮತದಾರರು ಅಶ್ವಿನಿ ಪರ ಇರ್ತಾರಾ, ಅಶ್ವಿನಿ ಮನೆಯಲ್ಲಿ ಆಟ ಮುಂದುವರೆಸ್ತಾರಾ ಕಾದು ನೋಡ್ಬೇಕಿದೆ.
