- Home
- Entertainment
- TV Talk
- ಆಟದ ವೇಳೆ ಕುಸಿದು ಬಿದ್ದ Bigg Boss Mallamma- ಆಸ್ಪತ್ರೆಗೆ ಶಿಫ್ಟ್? ಏನಿದು ಶಾಕಿಂಗ್ ವೈರಲ್ ವಿಡಿಯೋ ಅಸಲಿಯತ್ತು?
ಆಟದ ವೇಳೆ ಕುಸಿದು ಬಿದ್ದ Bigg Boss Mallamma- ಆಸ್ಪತ್ರೆಗೆ ಶಿಫ್ಟ್? ಏನಿದು ಶಾಕಿಂಗ್ ವೈರಲ್ ವಿಡಿಯೋ ಅಸಲಿಯತ್ತು?
ಬಿಗ್ಬಾಸ್ ಮನೆಯಲ್ಲಿ ಆಟವಾಡುವಾಗ ಸ್ಪರ್ಧಿ ಮಲ್ಲಮ್ಮ ಕುಸಿದು ಬಿದ್ದಿದ್ದಾರೆ ಎನ್ನಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಮಲ್ಲಮ್ಮ ಅವರನ್ನು ಸ್ಟ್ರೆಚರ್ನಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರ ಸತ್ಯಾಸತ್ಯತೆ ಏನು?

ಕುಸಿದು ಬಿದ್ದ ಮಲ್ಲಮ್ಮ?
ಬಿಗ್ಬಾಸ್ (Bigg Boss) ಮನೆಯಿಂದ ಶಾಕಿಂಗ್ ವರದಿಯೊಂದು ಹೊರಬಂದಿದೆ. ಅದೇನೆಂದರೆ ಆಟವಾಡುವ ಸಮಯದಲ್ಲಿ ಸ್ಪರ್ಧಿ ಮಲ್ಲಮ್ಮ ಅವರು ಕುಸಿದು ಬಿದ್ದಿರುವುದಾಗಿ ವರದಿಯಾಗಿದೆ. ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ.
ಶಾಕಿಂಗ್ ವಿಡಿಯೋ ವೈರಲ್
ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇದನ್ನು ನೋಡಬಹುದಾಗಿದೆ. ಮಲ್ಲಮ್ಮ ಅವರನ್ನು ಸ್ಟ್ರೆಚರ್ನಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. ಅಲ್ಲಿರುವ ಸ್ಪರ್ಧಿಗಳೆಲ್ಲಾ ಶಾಕ್ ಆಗಿ ನೋಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಹೊರಕ್ಕೆ ಬಂದಿದ್ದರು ಎನ್ನೋ ಸುದ್ದಿ
ಎರಡು ದಿನಗಳ ಹಿಂದೆ ಮಲ್ಲಮ್ಮ ಅವರು ಬಿಗ್ಬಾಸ್ನಿಂದ ಹೊರಕ್ಕೆ ಬಂದಿದ್ದರು ಎಂದು ಸುದ್ದಿಯಾಗಿತ್ತು. ಸೊಸೆ ಡೆಲವರಿ ಆದ ಕಾರಣ ಬಂದಿರುವುದಾಗಿ ಕೆಲವರು ಹೇಳಿದ್ದರು. ಆದರೆ, ಅವರು ಹೊರಕ್ಕೆ ಬಂದಿಲ್ಲ ಎಂದು ಅವರ ಅಧಿಕೃತ ಇನ್ಸ್ಟಾ ಖಾತೆಯಿಂದಲೇ ವಿವರಣೆ ಬಂದಿತ್ತು.
ಗಾಳಿ ಸುದ್ದಿ ಅಲ್ಲವಾಗಿತ್ತಾ?
ವಾಹಿನಿಯಾಗಲೀ ಅಥವಾ ಯಾವುದೇ ಅಧಿಕೃತ ಮಾಹಿತಿ ಈ ಬಗ್ಗೆ ಬಹಿರಂಗಗೊಂಡಿರಲಿಲ್ಲ. ಅವರು ಎಲಿಮಿನೇಟ್ ಆಗುವ ಸಾಧ್ಯತೆ ಸದ್ಯಕ್ಕಂತಲೂ ಇಲ್ಲದ ಹಿನ್ನೆಲೆಯಲ್ಲಿ, ಇದು ಊಹಾಪೋಹದ ಗಾಳಿ ಸುದ್ದಿ ಎಂದೇ ಹೇಳಲಾಗಿತ್ತು.
ಅಧಿಕೃತ ಮಾಹಿತಿ ಇಲ್ಲ
ಇದರ ಬೆನ್ನಲ್ಲೇ ಇಂಥದ್ದೊಂದು ವಿಡಿಯೋ ಹರಿದಾಡುತ್ತಿದೆ. ಆದರೆ ಇದರ ಸತ್ಯಾಸತ್ಯತೆ ಏನು ಎನ್ನುವುದು ಅಧಿಕೃತವಾಗಿ ಹೊರಬಂದಿಲ್ಲ. ಈ ವಿಡಿಯೋ ಹೇಗೆ ಔಟ್ ಆಗಿದೆ ಎನ್ನುವ ಮಾಹಿತಿಯನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿಲ್ಲ.
ಶೀಘ್ರ ಚೇತರಿಸಿಕೊಳ್ಳಲಿ
ಒಟ್ಟಿನಲ್ಲಿ ಅತ್ಯಂತ ಪ್ರಬಲ ಸ್ಪರ್ಧಿ ಎನ್ನಿಸಿಕೊಂಡಿರುವ ಮಲ್ಲಮ್ಮನವರಿಗೆ ಈ ರೀತಿ ಆಗಿರುವುದು ಅವರ ಅಭಿಮಾನಿಗಳಿಗೆ ಆಘಾತ ತಂದಿದೆ.
ಇದರ ಅಸಲಿಯತ್ತೇನು?
ಆದರೆ ಇದು ನಿಜವಾದ ವಿಡಿಯೋ ಅಲ್ಲ, ಬದಲಿಗೆ ಬಿಗ್ಬಾಸ್ ಮನೆಯಲ್ಲಿ ಮಾಡಿರುವ ಸ್ಕಿಟ್ ಎಂದು ಹೇಳಲಾಗುತ್ತಿದೆ. ಇದನ್ನೇ ಅಸಲಿ ವಿಷಯ ಎನ್ನುವ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ ಎಂದೂ ಹೇಳಲಾಗ್ತಿದೆ. ಆದರೆ ಅಸಲಿಯತ್ತು ಏನೆಂದು ಇನ್ನಷ್ಟೇ ತಿಳಿಯಬೇಕಿದೆ.