ಬಿಗ್‌ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ, ನಿರಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನ ನೀಡಿದ್ದಾರೆ. ಸಿನಿಮಾ ಆಸಕ್ತಿ ಇಲ್ಲ ಎಂದ ಚೈತ್ರಾ, ಶಿವರಾಜ್‌ಕುಮಾರ್ ಜೊತೆ ನಟಿಸುವ ಅವಕಾಶ ಬಂದರೆ ಒಪ್ಪಿಕೊಳ್ಳುವ ಸುಳಿವು ನೀಡಿದ್ದಾರೆ. ಭಾವಿ ಪತಿಯ ಗುಣಲಕ್ಷಣಗಳನ್ನು ವಿವರಿಸಿದ ಅವರು, ಉದ್ದ ಕೂದಲು, ಗೋಧಿ ಬಣ್ಣ, ಚಿಕ್ಕ ಕಣ್ಣು ಇರಬೇಕೆಂದು ಹೇಳಿದ್ದಾರೆ.

ಫೈರ್​ಬ್ರ್ಯಾಂಡ್ ಭಾಷಣಗಾರ್ತಿ ಎಂದೇ ಫೇಮಸ್​ ಆಗಿರೋ ಚೈತ್ರಾ ಕುಂದಾಪುರ ಅವರು ಸದ್ಯ ಬಿಗ್​ಬಾಸ್​ನ ಲೋಕದಲ್ಲಿ ತೇಲಾಡುತ್ತಿದ್ದಾರೆ. ಬಿಗ್​ಬಾಸ್​ಗೆ ಹೋಗಿ ಬಂದ ತಕ್ಷಣ, ಸಹಜವಾಗಿ ಸ್ಪರ್ಧಿಗಳು ಸೆಲೆಬ್ರಿಟಿ ಆಗುತ್ತಾರೆ. ಅದೇ ರೀತಿ ಚೈತ್ರಾ ಅವರಿಗೆ ಈಗ ಇನ್ನಿಲ್ಲದ ಡಿಮಾಂಡ್​, ಯೂಟ್ಯೂಬ್​ಗಳಲ್ಲಿಯೂ ಅವರದ್ದೇ ಹವಾ. ಇದೀಗ ಕಿರಿಕ್​ ಕೀರ್ತಿ ಮತ್ತು ನಿರಂಜನ್​ ದೇಶ್​ಪಾಂಡೆ ಅವರ ಯೂಟ್ಯೂಬ್​ ಚಾನೆಲ್​ ನಿರಿಕ್​ನಲ್ಲಿ ಕೆಲವು ವಿಷಯಗಳನ್ನು ಚೈತ್ರಾ ಶೇರ್​ ಮಾಡಿಕೊಂಡಿದ್ದಾರೆ. ಇದೇ ವೇಳೆ ವೀಕ್ಷಕರು, ಅಭಿಮಾನಿಗಳು ಕೇಳಿರುವ ಪ್ರಶ್ನೆಗಳಿಗೆ ಚೈತ್ರಾ ಉತ್ತರಿಸಿದ್ದಾರೆ.

ವಿಕಾಸ್​ ಎನ್ನುವವರು ಚೈತ್ರಾ ಕುಂದಾಪುರ ಚೆನ್ನಾಗಿ ಆ್ಯಕ್ಟ್​ ಮಾಡ್ತಾರೆ. ಅವರು ಸಿನಿಮಾಕ್ಕೆ ಹೋಗ್ತಾರೋ ಹೇಗೆ ಎಂದು ಪ್ರಶ್ನಿಸಿದ್ದಾರೆ.ಅದಕ್ಕೆ ಚೈತ್ರಾ ಅವರು ಜೋರಾಗಿ ನಕ್ಕು. ನಾನು ಇರೋದೇ ಹೀಗೆ, ಇನ್ನು ಆ್ಯಕ್ಟ್​ ಮಾಡಿದ್ರೆ ಎಷ್ಟು ಕೆಟ್ಟದ್ದಾಗಿ ಮಾಡಬಹುದು ಎಂದಿದ್ದಾರೆ. ನಾನು ಸಹಜವಾಗಿ ಇರುವುದು ಹೀಗೆ. ಯಾವಾಗ್ಲೂ ಆ್ಯಕ್ಟಿಂಗ್​ ಎಲ್ಲಾ ಮಾಡಲ್ಲ. ಇದು ಮಾಡದೇ ಇರುವುದೇ ಒಳ್ಳೆಯದು ಎಂದಿದ್ದಾರೆ. 

ಚೈತ್ರಾ ಕುಂದಾಪುರ ಭಾವಿ ಪತಿಯ ಫೋಟೋ ರಿವೀಲ್​! ಸಿಲ್ಕಿ ಹೇರ್​, ಗೋಲು ಮುಖ, ದಪ್ಪ ಮೀಸೆ...

ಆಗ ಕಿರಿಕ್​ ಕೀರ್ತಿ ಮತ್ತು ನಿಜರಂಜ್​, ಸಿನಿಮಾದಲ್ಲಿ ನಟನೆ ಮಾಡಲು ಅಕಸ್ಮಾತ್​​ ಅವಕಾಶ ಬಂದರೆ ಏನು ಮಾಡ್ತೀರಾ ಎಂದು ಪ್ರಶ್ನಿಸಿದರು. ಇದೇ ವೇಳೆ ಕೀರ್ತಿ ಶಿವರಾಜ್​ ಕುಮಾರ್​ ಜೊತೆಗೆ ಚೈತ್ರಾ ಅವರು ಮುಂದಿನ ಚಿತ್ರದ ಹೆಸರನ್ನೂ ಘೋಷಣೆ ಮಾಡಿದರು. ಅದೇನೆಂದರೆ, ತವರಿಗೆ ಬಾ ತಂಗಿ ಪಾರ್ಟ್​-2! ಒಂದು ವೇಳೆ ಶಿವಣ್ಣ ಕರೆದು ಈ ಚಿತ್ರ ಮಾಡೋಣ ಎಂದ್ರೆ ಏನು ಮಾಡ್ತೀರಾ ಎಂದು ಪ್ರಶ್ನಿಸಿದರು. ಅಲ್ಲಿಯವರೆಗೆ ಸಿನಿಮಾ ಬೇಡ ಅಂತಿದ್ದ ಚೈತ್ರಾ ಅವರು, ಸ್ವಲ್ಪ ಮನಸ್ಸು ಮಾಡಿದ ಹಾಗೆ ಕಾಣಿಸಿತು. ಬಳಿಕ ಅವರು, ಹಾಗಿದ್ರೆ ಆವಾಗ ನೋಡೋಣ. ಹಾಗೇನಾದ್ರೂ ಕರೆದ್ರೆ ದೇವರ ಮುಂದೆ ಚೀಟಿ ಇಡ್ತೇನೆ. ಆಮೇಲೆ ಏನಾಗುತ್ತೋ ನೋಡೋಣ ಎನ್ನುವ ಮೂಲಕ ಸಿನಿಮಾಕ್ಕೆ ಅವಕಾಶ ಸಿಕ್ಕರೆ ಬಿಡುವುದಿಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು. 

ಈ ಸಂದರ್ಶನದಲ್ಲಿ ತಮ್ಮ ಭಾವಿ ಪತಿ ಹೇಗೆ ಇರಬೇಕು ಎನ್ನುವ ಬಗ್ಗೆ ಚೈತ್ರಾ ಕುಂದಾಪುರ ಮಾತನಾಡಿದ್ದಾರೆ. ತಲೆ ಕೂದಲಿನಿಂದ ಶುರು ಮಾಡಿ, ಎಐನಲ್ಲಿ ನಾನು ಚಿತ್ರ ರಚಿಸುತ್ತೇನೆ ಎಂದು ನಿರಂಜನ್​ ಹೇಳಿದ್ದರಿಂದ ಚೈತ್ರಾ ಅವರು, ತಮ್ಮ ಭಾವಿ ಪತಿಯ ಮುಖಚೆಹರೆ ಹೇಗಿರಬೇಕು ಎಂದು ಹೇಳಿದ್ದಾರೆ. ಅದರಲ್ಲಿ ಅವರು ಹೇಳಿದ್ದು ಇಷ್ಟು: ಸಿಲ್ಕಿ ಹೇರ್​ ಇರಬೇಕು, ಉದ್ದ ಕೂದಲು ಬೇಕು, ಅಷ್ಟು ಶಿಖೆ ಕಟ್ಟುವಷ್ಟು ಉದ್ದ ಇರಬೇಕು, ಕೂದಲು ಸ್ಟ್ರೇಟ್​ ಆಗಿರಬೇಕು ಎಂದಿದ್ದಾರೆ. ಇನ್ನು ಹಣೆ ಅಗಲ ಬೇಕು, ಹಣೆಯಲ್ಲಿ ವಿಭೂತಿ, ಕುಂಕುಮ ಇಟ್ಟಿರಬೇಕು. ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಇರಬೇಕು ಎಂದು ಚೈತ್ರಾ ಹೇಳಿದ್ದಾರೆ. ಭಾವಿ ಪತಿಯ ಮುಖ ಗೋಲು ಆಗಿರಬೇಕು. ಚಿಕ್ಕ ಕಣ್ಣು, ಚಿಕ್ಕ ಕಿವಿ ಇರಬೇಕು, ಹುಬ್ಬು ದಪ್ಪ ಇರಬೇಕು ಎಂದಿದ್ದಾರೆ. ಇದಕ್ಕೆ ವಿವರಣೆ ನೀಡಿರುವ ಚೈತ್ರಾ ಅವರು, ನಾನು ಯಾವಾಗಲೂ ದೊಡ್ಡ ಕಣ್ಣು ಬಿಡ್ತೇನಲ್ಲ, ಅದಕ್ಕೇ ಅವರ ಕಣ್ಣು ಚಿಕ್ಕದು ಇರಬೇಕು ಎಂದಿದ್ದಾರೆ.

ಕಿರಿಕ್​ ಕೀರ್ತಿ ವಿರುದ್ಧ ಚೈತ್ರಾ ಕುಂದಾಪುರ ಪೊಲೀಸ್​ ಕಂಪ್ಲೇಂಟ್​! ಕಣ್ಣೀರಿಟ್ಟು ಎಫ್​ಬಿ ಪೋಸ್ಟ್​ ಡಿಲೀಟ್: ನಡೆದದ್ದೇನು?

YouTube video player