ತ್ರಿವಿಕ್ರಮ್ ಭವ್ಯಾಗೆ ಪ್ರಪೋಸ್ ಮಾಡಿದ್ದು ನಿಜನಾ? ಚೈತ್ರಾ ಕುಂದಾಪುರ ಮಾತುಕೇಳಿ ಕುಟುಂಬಸ್ಥರು ಶಾಕ್
ಜೋಡಿ ಹಕ್ಕಿಗಳ ಬಗ್ಗೆ ಸ್ಪಷ್ಟನೆ ಕೊಟ್ಟ ಚೈತ್ರಾ ಕುಂದಾಪುರ...ಲವ್ ಅಗಿದ್ದು ನಿಜವೇ? ಪ್ರಪೋಸಲ್ ಒಪ್ಪಿಕೊಂಡಿಲ್ವಾ? ಆಮೇಲೆ ಏನ್ ಆಯ್ತು....
ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಕೇಲವ 15 ದಿನಗಳು ಉಳಿದಿದೆ. ಈ ವಾರ ಎಲಿಮಿನೇಟ್ ಆಗಿ ಹೊರ ಬಂದಿರುವ ಚೈತ್ರಾ ಕುಂದಾಪುರ ಹಲವಾರು ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅದರಲ್ಲೂ ವೀಕ್ಷಕರು ಪದೇ ಪದೇ ಕೇಳುತ್ತಿರುವುದು ತ್ರಿವಿಕ್ರಮ್ ಮತ್ತು ಭವ್ಯಾ ಪ್ರಪೋಸಲ್ ಬಗ್ಗೆ. ಅಂದು ರಾತ್ರಿ ತ್ರಿವಿಕ್ರಮ್ ಭವ್ಯಾಗೆ ಪ್ರಪೋಸ್ ಮಾಡಿದ್ರಾ? ಭವ್ಯಾ ಒಪ್ಪಿಕೊಂಡ್ರಾ? ಯಾಕೆ ಭವ್ಯಾ ಹೊರ ಬಂದ ಮೇಲೆ ಉತ್ತರ ಕೊಡಲು ಸಮಯ ಕೇಳಿದ್ದಾರೆ? ಪ್ರತಿಯೊಂದನ್ನು ಅಲ್ಪಸ್ವಲ್ಪ ಕ್ಲಾರಿಟಿ ಕೊಟ್ಟಿದ್ದು ಚೈತ್ರಾ ಕುಂದಾಪುರ.
'ಭವ್ಯಾ ಮತ್ತು ತ್ರಿವಿಕ್ರಮ್ ಬಗ್ಗೆ ನಾನು ಮಾತನಾಡುವುದು ಎಷ್ಟು ಸರಿ ತಪ್ಪು ಅನ್ನೋದು ನನಗೆ ಗೊತ್ತಿಲ್ಲ ಆದರೆ ಇದು ಅವರ ಹೊರಗಿನ ಬದುಕಿನ ಬಗ್ಗೆ ದೊಡ್ಡ ಪ್ರಶ್ನೆಯಾಗುತ್ತದೆ. ಇದು ಟೆಲಿಕಾಸ್ಟ್ ಆಗಿಲ್ಲ ಅನ್ಸುತ್ತೆ. ಭವ್ಯಾ ಜೊತೆ ತ್ರಿವಿಕ್ರಮ್ ಏನ್ ಮಾತನಾಡಿದ್ದರು ಅದಾದ ಮೇಲೆ ಇಡೀ ರಾತ್ರಿ ನಾನು ತ್ರಿವಿಕ್ರಮ್ ಮಾತನಾಡಿದ್ದೀವಿ. ಅಕ್ಕ ನಾನು ಇಷ್ಟು ದಿನಗಳ ನಂತರ ಭವ್ಯಾಗೆ ಹೇಳಿದ್ದೀನಿ ಆಟಕ್ಕೆ ಅಡ್ಡ ಆಗಬಾರದು ಅನ್ನೋ ಕಾರಣಕ್ಕೆ ಅಡ್ಡ ಆಗಬಾರದು ಕೂಡ. ಮನೆಯಿಂದ ಆಚೆ ಹೋದ ಮೇಲೆ ನಾನು ಸ್ವಲ್ಪ ಸಮಯ ಕೊಡುತ್ತೀನಿ. ಅಲ್ಲಿಂದ ಆಚೆ ಏನಾಗುತ್ತೆ ಗೊತ್ತಿಲ್ಲ. ಕೆಲವೊಂದು ವಿಚಾರಗಳನ್ನು ನಾವು ಚರ್ಚೆ ಮಾಡಿದ್ದೀವಿ ಆದರೆ ಅದು ವೈಯಕ್ತಿಕ ಜೀವನದ ಬಗ್ಗೆ ಆಗಿರುವ ಕಾರಣ ಅದರ ಬಗ್ಗೆ ಈಗ ಮಾತನಾಡುವುದು ಸೂಕ್ತವಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಚೈತ್ರಾ ಕುಂದಾಪುರ ಮಾತನಾಡಿದ್ದಾರೆ.
ಹೆತ್ತವರ ಹೆಣಕ್ಕೆ ಬೆಂಕಿ ಇಡಲು ಗಂಡು ದಿಕ್ಕಿಲ್ಲದ ಮನೆ ಎಂದು ಅವಮಾನ ಮಾಡಿದ್ದಾರೆ: ಕಣ್ಣೀರಿಟ್ಟ ಚೈತ್ರಾ ಕುಂದಾಪುರ
ಇದು ಅವಶ್ಯಕತೆ ಇದ್ಯಾ ಈಗ? ಎಂದು ತ್ರಿವಿಕ್ರಮ್‌ನ ಹಲವು ಸಲ ಪ್ರಶ್ನೆ ಮಾಡಿದ್ದೀನಿ. ಆಗ ತ್ರಿವಿಕ್ರಮ್ ಹೇಳಿದ್ದು ಏನು ಅಂದ್ರೆ ಈಗ ನಾನು ಹೇಳಿಲ್ಲ ಅಂದ್ರೆ ಆಟಕ್ಕೆ ಬಳಸಿಕೊಂಡೆ ಅನ್ನೋ ಮಾತುಗಳು ಬರುತ್ತದೆ ಹೀಗಾಗಿ ಹೇಳಿದ್ದೀನಿ. ಇದರ ಮೇಲೆ ಅವರಿಗೆ ಉಳಿದಿದ್ದು. ತ್ರಿವಿಕ್ರಮ್ ಒಂದು ಕಲ್ಲು ಬಂಡೆ ಇದ್ದಂತೆ ಯಾವತ್ತೂ ಏನೂ ಹೇಳಿಕೊಳ್ಳುವುದಿಲ್ಲ ಹಾಗೂ ನಿರೀಕ್ಷೆ ಮಾಡುವುದಿಲ್ಲ. ನನ್ನ ಕಡೆಯಿಂದ 100% ಕೊಡ್ತೀನಿ ಹಾಗೆ ಅವರಿಂದ 100% ಬರ್ಬೇಕು ಅಂತ ನಾನು ನಿರೀಕ್ಷೆ ಮಾಡುವುದಿಲ್ಲ. ಭವ್ಯಾ ಒಪ್ಪಿಕೊಂಡಿದ್ದಾರಾ ಅನ್ನೋದು ನನಗೆ ಗೊತ್ತಿಲ್ಲ ಆದರೆ ಇದು ಅವರ ವೈಯಕ್ತಿಕ ವಿಚಾರಕ್ಕೆ ಬಂದಿದ್ದು. ತ್ರಿವಿಕ್ರಮ್ ತುಂಬಾ ಮೆಚ್ಯೂರಿಟಿ ಇರುವ ವ್ಯಕ್ತಿ ಆದರೆ ಈ ವಿಚಾರದ ಬಗ್ಗೆ ಭವ್ಯಾ ಜೊತೆ ಮಾತನಾಡಲು ಸಮಯ ಸಿಗಲಿಲ್ಲ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
ಸರಳ ಸುಂದರಿ ಚೈತ್ರಾ ಕುಂದಾಪುರ; ಇದ್ಯಾವುದು ದುಬಾರಿ ಸೀರೆ ಅಲ್ವೇ ಅಲ್ಲ