ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ನಟಿ ಅಮೂಲ್ಯ ಗೌಡರೊಂದಿಗಿನ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ಜಗದೀಶ್, ಅಮೂಲ್ಯ ಪತಿ, ಭವ್ಯಾ ಅವರ ದೊಡ್ಡಪ್ಪನ ಮಗ. ಅಮೂಲ್ಯ ಭವ್ಯಾ ಅವರಿಗೆ ಬಿಗ್ ಬಾಸ್ ಸ್ಪರ್ಧೆಯಲ್ಲಿ ಮಾರ್ಗದರ್ಶನ ಮತ್ತು ಬೆಂಬಲ ನೀಡಿದ್ದಾರೆ. ಭವ್ಯಾ ಅವರು ಅಮೂಲ್ಯ ಕುಟುಂಬದೊಂದಿಗಿನ ಉತ್ತಮ ಬಾಂಧವ್ಯವನ್ನು ವಿವರಿಸಿದ್ದಾರೆ.

ಕಿರುತೆರೆ ನಟಿ, ಬಿಗ್ ಬಾಸ್ ಸ್ಪರ್ಧಿ ಭವ್ಯಾ ಗೌಡ ಮತ್ತು ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಗೌಡ ಸಂಬಂಧಿಕರು ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಇವರಿಬ್ಬರು ಅಕ್ಕ- ತಂಗಿನಾ? ಹೇಗೆ ಅನ್ನೋ ಪ್ರಶ್ನೆ ಜನರಲ್ಲಿ ಹುಟ್ಟಿಕೊಂಡಿತ್ತು. ಅಲ್ಲದೆ ಭವ್ಯಾ ಫಿನಾಲೆ ವಾರಕ್ಕೆ ಕಾಲಿಟ್ಟಾಗ ಜಗದೀಶ್ ಮತ್ತು ಅಮೂಲ್ಯ ವಿಡಿಯೋ ಮೂಲಕ ಜನರಿಗೆ ವೋಟ್ ಹಾಕಲು ಮನವಿ ಮಾಡಿದ್ದರು. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಹೇಗೆ ಅಮೂಲ್ಯ ಪರಿಚಯ ಮತ್ತು ಅವರ ಫ್ಯಾಮಿಲಿಯಿಂದ ಸಿಗುತ್ತಿರುವ ಸಪೋರ್ಟ್ ಬಗ್ಗೆ ಭವ್ಯಾ ಹಂಚಿಕೊಂಡಿದ್ದಾರೆ. 

ಜಗದೀಶ್ ಅಣ್ಣ ನನಗೆ ದೊಡ್ಡಪ್ಪನ ಮಗ ಆಗಬೇಕು ಅವರಿಗೆ ಅಮೂಲ್ಯ ಅವರನ್ನು ಕೊಟ್ಟಿರುವುದು. ಅಮೂಲ್ಯ ಅವರು ನನಗೆ ಅತ್ತಿಗೆ ಆಗಬೇಕು. ಅಮೂಲ್ಯ ಅಕ್ಕ ತುಂಬಾ ಸಪೋರ್ಟಿವ್. ಏನೇ ಡೌಟ್‌ ಇದ್ದರೂ ಕರೆ ಮಾಡಿದಾಗ ಒಂದು ನಿಮಿಷವೂ ಕಡ ಮಾಡದೆ ಪ್ರತಿಕ್ರಿಯೆ ನೀಡುತ್ತಾರೆ. ಯಾವ ರೀತಿ ಮಾಡಬೇಕು ಯಾವ ರೀತಿ ಮಾಡಿದರೆ ಒಳ್ಳೆಯದು ಎಂದು ನನಗೆ ಸಲಹೆ ನೀಡುತ್ತಾರೆ. ಆರಂಭದಲ್ಲಿ ನನಗೆ ತುಂಬಾನೇ ಭಯ ಇತ್ತು ಹೇಗ್ ಮಾತನಾಡುತ್ತಾರೆ ಹೇಗ್ ಮಾತನಾಡಿಸಬೇಕು ಎಂದು ಆದರೆ ಅವರು ತುಂಬಾನೇ ಸ್ವೀಟ್ ವ್ಯಕ್ತಿ. ಮೊದಲ ಸಲ ಮಾತನಾಡಿದಾಗಲೇ ಅಭಿಪ್ರಾಯ ಬದಲಾಗಿತ್ತು. ತುಂಬಾ ಚೆನ್ನಾಗಿ ಮಾತನಾಡಿಸುತ್ತಾರೆ ಅಂತ ಖುಷಿ ಕೂಡ ಆಯ್ತು.ನಾನು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ಸಲ ಮನೆಗೆ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿದ್ದಾರೆ. ಅಣ್ಣ ಮತ್ತು ಅತ್ತೆಗೆ ನನಗೆ ತುಂಬಾ ಸಪೋರ್ಟಿವ್ ಆಗಿದ್ದಾರೆ. ನಿಮ್ಮ ಮನೆಗೆ ನೀವೇ ಗಂಡು ಮಕ್ಕಳು ಎಂದು ಹೇಳುತ್ತಿರುತ್ತಾರೆ ಎಂದು ಖಾಸಗಿ ಟಿವಿ ಸಂದರ್ಶನಲ್ಲಿ ಭವ್ಯಾ ಗೌಡ ಮಾತನಾಡಿದ್ದಾರೆ. 

ದೂರ ಆಗಿರೋದು ಕೂಡ ಒಂದು ಕಾರಣಕ್ಕೆ; ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್‌ ಬಗ್ಗೆ ಅನುಪಮಾ ಗೌಡ ಹೇಳಿಕೆ

ಅಮೂಲ್ಯ ಅಕ್ಕ ಅವರ ಗಂಡು ಮಕ್ಕಳು ಅಥರ್ವ್ ಮತ್ತು ಆಧವ್ ತುಂಬಾನೇ ಕ್ಯೂಟ್. ಹಲವು ಸಲ ಅವರ ಮನೆಗೆ ಹೋಗಿದ್ದೀನಿ. ಹೋಗಿ ಅವರೊಟ್ಟಿಗೆ ಮಾತನಾಡಿಸಿಕೊಂಡು ಆಟವಾಡಿಕೊಂಡು ಬರುತ್ತೀನಿ....ಅಡ್ಜಸ್ಟ್‌ ಆಗಲು ಸಮಯ ತೆಗೆದುಕೊಳ್ಳುತ್ತಾರೆ ಆಮೇಲೆ ಚೆನ್ನಾಗಿ ಆಟವಾಡಿಸಿಕೊಂಡು ಇರುತ್ತಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ನಾನೇ ಕಾಲ್ ಮಾಡಿ ಮಾತನಾಡಬೇಕು ಅಂದುಕೊಂಡಿರುವೆ. ಈಗ ಇಂಟರ್ವ್ಯೂಗಳಲ್ಲಿ ಬ್ಯುಸಿಯಾಗಿರುವುದಕ್ಕೆ ಆಗುತ್ತಿಲ್ಲ....ಫ್ರೀ ಆಗುತ್ತಿದ್ದಂತೆ ಕಾಲ್ ಮಾಡುತ್ತೀನಿ ಎಂದು ಭವ್ಯಾ ಗೌಡ ಹೇಳಿದ್ದಾರೆ. 

ಎಲ್ಲಾ ಸೀರೆಗಳು ಫ್ರೀ ಆಗಿ ಬರುತ್ತಿತ್ತು, ಆ ಒಂದು ಕ್ಯಾಮೆರಾದಲ್ಲಿ ಮನೆಯವರಿಂದ ಏನ್ ಬೇಕು ಅಂತ ಹೇಳ್ಬೇಕಿತ್ತು: ಭವ್ಯಾ ಗೌಡ