ಬಿಗ್‌ಬಾಸ್‌ನಲ್ಲಿ ಭವ್ಯಾ ಗೌಡರ ಉಡುಗೆ ತೊಡುಗೆಗಳ ಆಯ್ಕೆ ಅಕ್ಕ ದಿವ್ಯಾ ಅವರದ್ದು. ವಾರದ ಡ್ರೆಸ್‌ಗಳನ್ನು ತಂಗಿ ಮತ್ತು ಸ್ನೇಹಿತೆ ನಿಧಿ ಆಯ್ಕೆ ಮಾಡುತ್ತಿದ್ದರು. ಸೀರೆಗಳು ಕೊಲಾಬರೇಷನ್ ನಿಂದ ಬಂದವು. ಆರಂಭದಲ್ಲಿ ಬಟ್ಟೆಗಳು ಸಡಿಲವಾಗಿದ್ದವು ನಂತರ ಸರಿಹೊಂದಿದವು. ಭವ್ಯಾ ಕುಟುಂಬದಲ್ಲಿ ಉಡುಗೆ ತೊಡುಗೆಗಳ ಆಯ್ಕೆಯನ್ನು ಸಹೋದರಿಯರು ಮಾಡುತ್ತಾರೆ.

ಕಿರುತೆರೆ ನಟಿ ಭವ್ಯಾ ಗೌಡ ಬಿಗ್ ಬಾಸ್ 11 ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಪಟ್ಟ ಪಟ್ಟ ಅಂತ ಮಾತನಾಡಿಕೊಂಡು ಜನರ ಗಮನ ಸೆಳೆದಿರುವುದಲ್ಲದೆ ಹುಡುಗರ ಸಮಕ್ಕೆ ಫೈಟ್ ಮಾಡುತ್ತಿದ್ದ ಹುಡುಗಿ ಭವ್ಯಾ. ವಾರ ಪೂರ್ತಿ ಕಲರ್‌ಫುಟ್‌ ಡ್ರೆಸ್ ಧರಿಸುವುದು ವೀಕೆಂಡ್‌ ಎಪಿಸೋಡ್‌ನಲ್ಲಿ ಡಿಸೈನರ್‌ ಉಡುಪುಗಳನ್ನು ಧರಿಸುತ್ತಿದ್ದರು. ಭವ್ಯಾ ಡ್ರೆಸ್ ಆಯ್ಕೆ ಮಾಡುವುದು ಯಾರು? ಇಷ್ಟು ದಿನ ಡಿಸೈನ್ ಮಾಡಿದ್ದು ಯಾರು? ಯಾವ ಬ್ರ್ಯಾಂಡ್ ಬಟ್ಟೆಗಳನ್ನು ಇಷ್ಟ ಪಡುತ್ತಾರೆ ಎಂದು ಪ್ರಶ್ನೆ ಮಾಡಿದಾಗ ಹಂಚಿಕೊಂಡ ಮಾತುಗಳಿದು.

'ಬಿಗ್ ಬಾಸ್ ಮನೆಯಲ್ಲಿ ನಾನು ಧರಿಸಿರುವ ಪ್ರತಿಯೊಂದು ಡ್ರೆಸ್‌ಗಳನ್ನು ನನ್ನ ಅಕ್ಕ ದಿವ್ಯಾನೇ ಸ್ಟೈಲಿಂಗ್ ಮಾಡಿರುವುದು. ನಾನು ಎಲ್ಲಿಗೆ ಹೋಗುವುದಿದ್ದರು ಅಕ್ಕ ಮತ್ತು ತಂಗಿ ನನ್ನ ಡ್ರೆಸ್‌ ಆಯ್ಕೆ ಮಾಡಿ ತೆಗೆದು ಇಡುತ್ತಿದ್ದರು. ಯಾವ ಡ್ರೆಸ್‌ಗೆ ಯಾವ ಚಪ್ಪಲಿ ಹಾಕಿಕೊಳ್ಳಬೇಕು ಎಂದು ಫೋಟೋ ಕಳುಹಿಸಿ ಕೇಳುತ್ತಿದ್ದೆ. ನನ್ನ ಬಗ್ಗೆ ನನಗಿಂತ ಅವರಿಗೆ ಚೆನ್ನಾಗಿದೆ ಗೊತ್ತಿದೆ. ನನಗೆ ಸ್ಲೀವ್‌ಲೆಸ್‌ ಡ್ರೆಸ್‌ಗಳು ಅಷ್ಟು ಇಷ್ಟ ಆಗುತ್ತಿರಲಿಲ್ಲ ಆದರೆ ವೀಕೆಂಡ್‌ನಲ್ಲಿ ಅದೇ ರೀತಿ ಕಳುಹಿಸುತ್ತಿದ್ದಾರೆ ಎಂದು ಬೈಯುತ್ತಿದ್ದೆ. ನನ್ನ ಆಪ್ತ ಸ್ನೇಹಿತಿ ನಿಧಿ ಮತ್ತು ಅಕ್ಕ ಪ್ರತಿ ವೀಕೆಂಡ್ ನನಗೆ ಡ್ರೆಸ್ ಕೊಟ್ಟು ಕಳುಹಿಸುವುದಕ್ಕೆ ಕಷ್ಟ ಪಟ್ಟಿದ್ದಾರೆ. ನಾನು ಧರಿಸುವ ಸೀರೆಗಳ ಬಗ್ಗೆ ಜಾಸ್ತಿ ಪ್ರಶ್ನೆ ಬಂದಿದೆ, ಅದನ್ನು ಕೊಟ್ಟಿರುವುದು ಕೋಲಾಬೋರೇಷನ್‌ನಿಂದ, ಇಡೀ ಬಿಗ್ ಬಾಸ್ ಮುಗಿಯುವವರೆಗೂ ನನಗೆ ಸೀರೆ ಕೊಟ್ಟಿದ್ದಾರೆ. ನಮಗೆ ಏನೇ ಬೇಕಿದ್ದರೂ ಒಂದು ಕ್ಯಾಮೆರಾ ಮುಂದೆ ಹೋಗಿ ಹೇಳಬೇಕು...ನನಗೆ ಬರುತ್ತಿದ್ದ ಬಟ್ಟೆಗಳು ತುಂಬಾ ಲೂಸ್ ಆಗಿರುತ್ತಿತ್ತು, ಪದೇ ಪದೇ ಅದೇ ಕ್ಯಾಮೆರಾ ಮುಂದೆ ನಿಂತುಕೊಂಡು ಹೇಳುತ್ತಿದ್ದೆ. ಸ್ವಲ್ಪ ಸಮಯಗಳ ಕಾಲ ಡ್ರೆಸ್ ಫಿಟ್ಟಿಂಗ್ ಇರಲಿಲ್ಲ.. ಆಮೇಲೆ ಫಿಟ್ಟಿಂಗ್ ಇರುವುದು ಬರಲು ಶುರುವಾಯ್ತು. ನನಗಿಂತ ಹೆಚ್ಚಿನ ಒತ್ತಡ ಇದ್ದಿದ್ದು ಮನೆಯವರಿಗೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಭವ್ಯಾ ಮಾತನಾಡಿದ್ದಾರೆ.

ಬಾತ್‌ರೂಮ್‌ನಲ್ಲಿ ಅಪ್ಪ ಬಿದ್ದು ಧ್ವನಿ ಕಳೆದುಕೊಂಡರು, ಆಪರೇಷನ್‌ ಮಾಡಿಸಲು ಹಣ ಇಲ್ಲ: ಭವ್ಯಾ ಗೌಡ ಕಣ್ಣೀರು

ಮೂರ್ನಾಲ್ಕು ಹೆಣ್ಣು ಮಕ್ಕಳು ಇರುವ ಮನೆಯಲ್ಲಿ ಬಟ್ಟೆ,ಚಪ್ಪಲಿ ಹಾಗೂ ಬ್ಯಾಗ್‌ ವಿಚಾರಕ್ಕೆ ತುಂಬಾ ಜಗಳವಾಗುತ್ತದೆ. ಅಕ್ಕ ತಮ್ಮ, ಅಣ್ಣ ತಂಗಿ ಇದ್ರೆ ಊಟದ ವಿಚಾರದಲ್ಲಿ ಜಗಳ ಆಗುತ್ತೆ. ಆದರೆ ಭವ್ಯಾ ಮನೆಯಲ್ಲಿ ಈ ಸಮಸ್ಯೆನೇ ಇರುತ್ತಿರಲಿಲ್ಲ. ಭವ್ಯಾ ಏನು ಧರಿಸಬೇಕು, ಎಲ್ಲಿಗೆ ಯಾವಾಗ ಯಾವುದನ್ನು ಧರಿಸಬೇಕು ಅನ್ನೋದನ್ನು ನಿರ್ಧಾರ ಮಾಡುವುದು ಸಹೋದರಿಯರಂತೆ. ಸೋಷಿಯಲ್ ಮೀಡಿಯಾದಲ್ಲಿ ಭವ್ಯಾ ಮತ್ತು ಸಹೋದರಿಯರು ಒಮ್ಮೊಮ್ಮೆ ಒಂದೇ ರೀತಿ ಬಟ್ಟೆಗಳನ್ನು ಧರಿಸುತ್ತಾರೆ. ಫ್ಯಾಮಿಲಿ ರೌಂಡ್‌ನಲ್ಲಿ ಭವ್ಯಾ ಗೌಡ ಅಕ್ಕ ದಿವ್ಯಾ ಗೌಡ ಆಗಮಿಸಿದ್ದರು. ಆರೇಂಜ್‌ ಬಣ್ಣದ ಸೆಲ್ವಾರ್‌ನಲ್ಲಿ ಮಿಂಚಿದ್ದು, ಭವ್ಯಾಗಿಂತ ಅಭಿಮಾನಿಗಳನ್ನು ಗಳಿಸಿದ್ದರು. ಹೀಗಾಗಿ ಫಿನಾಲೆ ದಿನ ಸುದೀಪ್‌ ಈ ಬಗ್ಗೆ ಪ್ರಶ್ನೆ ಮಾಡುತ್ತಾರೆ. 'ನನ್ನನ್ನು ತುಂಬಾ ಜನ ಗುರುತಿಸುತ್ತಾರೆ...ಭವ್ಯಾ ಬದಲು ನೀವು ಬಿಗ್ ಬಾಸ್‌ಗೆ ಹೋಗಬೇಕಿತ್ತು ಅಂತಿದ್ದಾರೆ' ಎಂದು ದಿವ್ಯಾ ಹೇಳಿದ್ದಾರೆ. 

ಗೆದ್ದು ಬಂದು ಕೇಳಿದ್ರೆ ಓಕೆ ಅಂತಿದ್ದೆ, ಈಗ ಹೊರ ಬಂದ್ಮೇಲೆ ಹೇಳ್ತೀನಿ: ತ್ರಿವಿಕ್ರಮ್ ಪ್ರಪೋಸಲ್‌ಗೆ ಭವ್ಯಾ ಉತ್ತರ