* ಬಿಗ್ ಬಾಸ್ ಫಿನಾಲೆಗೆ ಹತ್ತೇ ದಿನ* ಕಳಪೆ ಬೋರ್ಡ್ ಹಾಕಿಸಿಕೊಂಡ ದಿವ್ಯಾ ಸುರೇಶ್* ಅವರಿಂದ್ ಸಹ ಕಳಪೆ ರೇಸ್ ನಲ್ಲಿದ್ದರು* ಬಿಗ್ ಬಾಸ್ ಅಂತಿಮ ಘಟ್ಟಕ್ಕೆ

ಬೆಂಗಳೂರು(ಜು. 30) ಬಿಗ್ ಬಾಸ್ ಮನೆ ಫಿನಾಲೆ ಹಂತಕ್ಕೆ ಬಂದಿದೆ. ಕಳಪೆಯಾಗಿ ದಿವ್ಯಾ ಸುರೇಶ್ ಮನೆಯವರಿಂದ ಆಯ್ಕೆಯಾದರೆ ಅತ್ಯುತ್ತಮರಾಗಿ ಪ್ರಶಾಂತ್ ಸಂಬರಗಿ ಹೊರಹೊಮ್ಮಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೇನ್ ನಲ್ಲಿ ಸಿಕ್ಕ ಅತ್ಯುತ್ತಮ ಖುಷಿಕೊಟ್ಟಿದೆ ಎಂದು ಪ್ರಶಾಂತ್ ಹೇಳಿದ್ದಾರೆ. ಈ ವಾರ ಮನೆಯಲ್ಲಿ ಯಾರೂ ಕಳಪೆ ಇಲ್ಲ.. ಯಾರೂ ಉತ್ತಮ ಇಲ್ಲ ಎಂದು ಮನೆಯವರೇ ತೀರ್ಮಾನ ಮಾಡಿ ಬಿಗ್ ಬಾಸ್ ಗೆ ಹೇಳಲು ಮುಂದಾದರು. ಆದರೆ ಬಿಗ್ ಬಾಸ್ ಮನೆ ನಿಯಮವನ್ನು ಮುರಿಯಲು ಸಾಧ್ಯವಿಲ್ಲ ಎಂದು ಬಿಗ್ ಬಾಸ್ ಆದೇಶ ನೀಡಿದರು.

ಈ ಬಾರಿ ವಿಶೇಷ ಎಂದರೆ ಇಲ್ಲಿಯವರೆಗೂ ಅತ್ಯುತ್ತಮ ಆಗಿ ಹೊರ ಹೊಮ್ಮುತ್ತಿದ್ದ ಅರವಿಂದ್ ಕೆಪಿ ಮತ್ತು ದಿವ್ಯಾ ಸುರೇಶ್ ನಡುವೆ ಕಳಪೆ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿತ್ತು. ಅರವಿಂದ್ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ದಿವ್ಯಾ ಸುರೇಶ್ ಹೇಳಿದರು. ಮಂಜು ಸಹ ದಿವ್ಯಾ ಸುರೇಶ್ ಅವರನ್ನು ಕಳಪೆಯಾಗಿ ಆಯ್ಕೆಮಾಡಿದ್ದು ಮತ್ತೊಂದು ವಿಶೇಷ.

ಮಿಡಲ್ ಫಿಂಗರ್ ತೋರಿಸಿದ ಅರವಿಂದ್ ಕೆಪಿ ಹೈಲೈಟ್ ಆಗಲೇ ಇಲ್ಲ

ಮೊದಲಿಗೆ ನಾನೇ ಕಳಪೆ ಎಂದು ಹೇಳಿದ್ದ ದಿವ್ಯಾ ಸುರೇಶ್ ನಂತರ ಕಳಪೆಯಾಗಿ ಜೈಲು ಸೇರಿದಾಗ ಮಂಜು ಬಳಿ ವಾದಕ್ಕೆ ಇಳಿದರು. ಮಂಜಾ ನೀನು ನನಗೆ ಕಳಪೆ ಹಾಕಿದ್ದೀಯಲ್ಲ ಎಂದು ಅಸಮಾಧಾನದಿಂಲೇ ಹೇಳಿದರು. ಜೈಲಿಗೆ ಹೋಗುವ ಮುನ್ನ ದಿವ್ಯಾ ಸುರೇಶ್ ತುಂಬಾ ಬೇಸರದಿಂದ ಇದ್ದರು.

ಬಿಗ್ ಬಾಸ್ ಈ ವಾರ ಯಾವುದೇ ಗಂಭೀರ ಟಾಸ್ಕ್ ನೀಡಲಿಲ್ಲ. ಮನೆ ಮಂದಿಗೆ ಸಣ್ಣ ಸಣ್ಣ ಟಾಸ್ಕ್ ನೀಡಿ ಎಲ್ಲರ ಶ್ರಮವನ್ನು ಪರೀಕ್ಷಿಸಿದರು. ಅರವಿಂದ್ ದಿವ್ಯಾ ಸುರೇಶ್ ಜಾಗದಲ್ಲಿ ಕಳಪೆಯಾಗಿ ಇರಬೇಕಿತ್ತು. ಮಂಜು ಪಾವಗಡ ದಿವ್ಯಾ ಎಸ್ ಹೆಸರನ್ನು ಹೇಳಿ ಎಡವಟ್ಟು ಮಾಡಿದ ಎಂದು ಪ್ರಶಾಂತ್ ಆರೋಪಿಸಿದರು.