ಸುದೀಪ್ ಬಿಗ್‌ಬಾಸ್ ನಿಂದ ಹೊರನಡೆದಿದ್ದು, ಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗದ ಕಾರಣ ಎಂದಿದ್ದಾರೆ. ಶಿವಣ್ಣ, ಧ್ರುವ ಸರ್ಜಾ, ರಮ್ಯಾ, ಉಪೇಂದ್ರ ಬಿಗ್‌ಬಾಸ್ ಸ್ಪರ್ಧಿಗಳಾಗಿದ್ದರೆ ಹೇಗೆ ಎಂಬ ಪ್ರಶ್ನೆಗಳಿಗೆ ತಮಾಷೆಯಾಗಿ ಉತ್ತರಿಸಿದ್ದಾರೆ. ಶಿವಣ್ಣನನ್ನು ಗೆಲ್ಲಿಸುವುದಾಗಿ, ಧ್ರುವ ಸರ್ಜಾನನ್ನು ಸೈಡ್‌ಗೆ ಹೋಗಲು ಹೇಳುವುದಾಗಿ, ರಮ್ಯಾ ಜೊತೆಗಿದ್ದರೆ ತಾನೇ ಹೊರನಡೆಯುವುದಾಗಿ, ಉಪೇಂದ್ರ ಇದ್ದರೆ ಬಿಗ್‌ಬಾಸೇ ತಪ್ಪು ಎನ್ನುವ ಸನ್ನಿವೇಶ ಸೃಷ್ಟಿಯಾಗಬಹುದು ಎಂದಿದ್ದಾರೆ.

'ಎಲ್ಲರನ್ನೂ ರಿಪೇರಿ ಮಾಡ್ತಾ ಕುಳಿತುಕೊಳ್ಳಲು ನಾನು ಬಂದಿಲ್ಲ, ಎಷ್ಟು ಅಂತ ಮಾಡೋದು, ಸಾಕಾಗಿದೆ ಇಷ್ಟು ವರ್ಷ ಮಾಡಿದ್ದು ಸಾಕು. ಬಿಗ್​ಬಾಸ್​ ಎಂದರೆ ಸುಮ್ಮನೇ ಅಲ್ಲ, ಸಿಕ್ಕಾಪಟ್ಟೆ ಎಫರ್ಟ್​ ಹಾಕಬೇಕು. ಈ ಎಫರ್ಟ್​ ಯಾರಿಗೂ ಅರ್ಥ ಆಗಲ್ಲ ಎಂದು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಸಲದ ಉದಾಹರಣೆಯನ್ನೇ ಕೊಡುತ್ತೇನೆ ನೋಡಿ. ಚೆನ್ನೈನಿಂದ ಒಂದೂವರೆ ಗಂಟೆ ದೂರ ಇರುವ ಮಹಾಬಲಿಪುರಂನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಬೆಂಗಳೂರಿನಿಂದ ನಾನು ಹೋಗುವ ವಿಷಯ ಹೇಳುವುದಾದರೆ, ಮನೆಯಿಂದ ಏರ್​ಪೋರ್ಟ್​ಗೆ ಒಂದೂವರೆ ಗಂಟೆ. ಬಳಿಕ ಒಂದು ಗಂಟೆ ವಿಮಾನಕ್ಕಾಗಿ ವೇಟಿಂಗ್​. ಅಲ್ಲಿಂದ ಚೆನ್ನೈಗೆ ಹೋಗಲು ನಲವತ್ತು ನಿಮಿಷ. ಅಲ್ಲಿಂದ ಒಂದೂವರೆ ಗಂಟೆ ಮತ್ತೆ ಪ್ರಯಾಣ. ಅಲ್ಲಿ ಶೂಟಿಂಗ್​ ನಡೆಯುತ್ತಿತ್ತು. ಇಷ್ಟು ಕಷ್ಟ ಪಡಬೇಕಾಗಿತ್ತು' ಎನ್ನುವ ಮೂಲಕ ಬಿಗ್​ಬಾಸ್​ ಪಯಣಕ್ಕೆ ಸುದೀಪ್​ ಅವರು ವಿದಾಯ ಹೇಳಿದ್ದಾರೆ. ಮುಂದೆ ಯಾರ ನೇತೃತ್ವದಲ್ಲಿ ಬಿಗ್​ಬಾಸ್​ ಬರುತ್ತೆ ಎಂದು ವೀಕ್ಷಕರು ಕಾಯುತ್ತಿದ್ದಾರೆ.

ಇದರ ನಡುವೆಯೇ ಸುದೀಪ್​ ಅವರು ಕೆಲವು ಕಡೆಗಳಲ್ಲಿ ಸಂದರ್ಶನ ನೀಡಿದ್ದಾರೆ. ಮಿರ್ಚಿ ಕನ್ನಡದಲ್ಲಿ ಅವರು ನೀಡಿರುವ ಸಂದರ್ಶನದಲ್ಲಿ ಬಿಗ್​ಬಾಸ್​ ಸ್ಪರ್ಧಿಯಾಗಿ ಒಳಗೆ ಹೋದರೆ ಏನೆಲ್ಲಾ ಆಗಬಹುದು ಎನ್ನುವ ತಮಾಷೆಯ ಪ್ರಶ್ನೆಗಳಿಗೆ ತಮಾಷೆಯ ಉತ್ತರವನ್ನು ಕೊಟ್ಟಿದ್ದಾರೆ. ಮೊದಲಿಗೆ ನೀವು ಬಿಗ್​ಬಾಸ್​ ಮನೆಯಲ್ಲಿ ಇದ್ದಾಗ, ನಿಮ್ಮ ಸಹ ಸ್ಪರ್ಧಿಯಾಗಿ ಶಿವರಾಜ್​ ಕುಮಾರ್​ ಇದ್ದರೆ ಎನ್ನುವ ಪ್ರಶ್ನೆಗೆ, ಸುದೀಪ್​ ಅವರು, ಶಿವಣ್ಣ ಇದ್ರೆ ನಾವೇ ಗೆಲ್ಲಿಸಿ ಬಿಡ್ತಿವಿ. ಅವರು ಶ್ರಮ ಪಡುವ ಅಗತ್ಯವೇ ಇಲ್ಲ. ಶಿವಣ್ಣ ಗೆಲ್ಲಬೇಕು ಎಂದೇ ಎಲ್ಲರೂ ಅಂದುಕೊಳ್ಳುತ್ತೇವೆ ಎಂದಿದ್ದಾರೆ. ಒಂದು ವೇಳೆ ಧ್ರುವ ಸರ್ಜಾ ಇದ್ದರೆ ಎನ್ನುವ ಪ್ರಶ್ನೆಗೆ. ಅವನು ಇದ್ರೆ ಅವನನ್ನು ಹತ್ತಿರ ಕರೆದು ನೋಡಪ್ಪಾ ನಾನ್​ ಗೆಲ್ಲಬೇಕು, ಸುಮ್ನೆ ನೀನು ಸೈಡ್​ಗೆ ಬಾ ಅಂತೇನೆ, ಇಲ್ಲಾಂದ್ರೆ ಮರ್ಯಾದೆ ಹೋಗತ್ತೆ ಅಂದ್ರೆ ಆತ ಪಾಪ ಆಯ್ತಪ್ಪ ನೋ ಪ್ರಾಬ್ಲೆಮ್​ ಅಂತ ಸೈಡ್​ಗೆ ಹೋಗ್ತಾನೆ ಎಂದರು ಸುದೀಪ್​.

ಆ್ಯಂಕರ್​ ಅನುಶ್ರೀ ಜೊತೆ ಕಿಚ್ಚ ಸುದೀಪ್! ಅಭಿಮಾನಿಗಳು ಕಾತರದಿಂದ ಕಾಯ್ತಿರೋ ದಿನ ಬಂದೇ ಬಿಡ್ತು...

ಬಳಿಕ ರಮ್ಯಾ ಇದ್ದರೆ? ಎನ್ನುವ ಪ್ರಶ್ನೆಗೆ ಸ್ವಲ್ಪ ಮೌನ ತಾಳಿದ ಸುದೀಪ್​ ಅವರು, ಅವರು ಇದ್ದರೆ, ಬಿಗ್​ಬಾಸ್​ನ ಮುಖ್ಯ ಗೇಟ್​ ಇರತ್ತಲ್ಲ, ಅದರ ಒಂದು ಕೀಯನ್ನು ನನ್ನ ಬಳಿ ಇಟ್ಟುಕೊಳ್ಳುತ್ತೇನೆ. ಒಂದೇ ನಾನು ಓಡಿಹೋಗ್ತೇನೆ, ಇಲ್ಲಾ ಅವ್ರು ಹೋಗ್ತಾರೆ. ಇಬ್ಬರಲ್ಲಿ ಒಬ್ಬರು ಓಡಿ ಹೋಗ್ತೇವೆ ಎಂದಿದ್ದಾರೆ. ಇದಕ್ಕೆ ಸಮಜಾಯಿಷಿಯನ್ನೂ ಕೊಟ್ಟು, ಹಾಗಂತ ನಾವಿಬ್ರೂ ವೆರಿ ಗುಡ್​, ಗ್ರೇಟ್​ ಫ್ರೆಂಡ್ಸ್​. ಆದ್ರೆ ನಾವಿಬ್ಬರೂ ಜೊತೆಗೆ ಕೆಲವು ಗಂಟೆ ಮಾತ್ರ ಇರೋಕೆ ಸಾಧ್ಯ, ಸುದೀರ್ಘ ಅಲ್ಲ ಎಂದೂ ಹೇಳಿದ್ದಾರೆ.

ಕೊನೆಗೆ ಉಪೇಂದ್ರ ಅವರು ಇದ್ದರೆ? ಎಂದು ಪ್ರಶ್ನಿಸಿದಾಗ, ಸುದೀಪ್​ ಅವರು ತಮಾಷೆಯಾಗಿ, ಉಪ್ಪಿ ಸರ್​ ಇರೋ ಕಡೆ ಬಿಗ್​ಬಾಸ್​ಗೆ ಏನು ಕೆಲ್ಸ ಹೇಳಿ ಎಂದಿದ್ದಾರೆ. ಬಿಗ್​ಬಾಸ್​ ಟಾಸ್ಕ್​ ಕೊಟ್ರೆ, ಅವರೊಂದು ಕೊಟ್ಟರೆ ಇವರೊಂದು ಕ್ರಿಕೇಟ್​ ಮಾಡುತ್ತಾ ಇರುತ್ತಾರೆ. ಕೊನೆಗೆ ನನ್ನ ಬಳಿ, ನೋಡ್ರಿ ಸುದೀಪ್​... ಅವ್ರು ಕೊಟ್ಟಿದ್ದು ಸರಿಯಾದ ಟಾಸ್ಕ್​ ಅಲ್ಲಾರಿ... ಇದುರೀ ಹೇಳ್ತೀನಿ ಕೇಳ್ರಿ ಎನ್ನುತ್ತಾರೆ. ಕೊನೆಗೆ ಬಿಗ್​ಬಾಸ್​ ಮಾಡ್ತಿರೋದೆಲ್ಲಾ ತಪ್ಪುರೀ... ಬಿಗ್​ಬಾಸೇ ತಪ್ಪು ಅಂತ ಹೇಳಿದ್ರೂ ಆಶ್ಚರ್ಯ ಇಲ್ಲ ಎಂದು ತಮಾಷೆ ಮಾಡಿದ್ದಾರೆ. ಕೊನೆಗೆ, ಉಪೇಂದ್ರ ಅವರು ಮನೆಯೊಳಗೆ ಇದ್ದರೆ ಉಳಿದ ಎಲ್ಲಾ ಸ್ಪರ್ಧಿಗಳೂ ಕಳಪೆಗೆ ಹೋಗ್ತಾರೆ ಅಷ್ಟೇ ಎಂದಿದ್ದಾರೆ. 

ಬಿಗ್​ಬಾಸ್​ನಿಂದ ಹೊರಬರಲು ಕೊನೆಗೂ ಕಾರಣ ನೀಡಿದ ಸುದೀಪ್​: ಅಭಿಮಾನಿಗಳ ಪ್ರಶ್ನೆಗೆ ಸಿಕ್ಕಿತು ಉತ್ತರ...

View post on Instagram