ಬಿಗ್‌ಬಾಸ್‌ನಲ್ಲಿ ಆತ್ಮೀಯರಾಗಿದ್ದ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಸ್ನೇಹಕ್ಕಿಂತ ಮಿಗಿಲಾದ ಸಂಬಂಧ ಹೊಂದಿದ್ದಾರೆ. ಇಬ್ಬರೂ 2016ರಲ್ಲಿ ಒಟ್ಟಿಗೆ ಸಿನಿಮಾ ಮಾಡಿದ್ದರು. ಬಿಗ್‌ಬಾಸ್‌ ಮನೆಯಲ್ಲಿ ಆತ್ಮೀಯತೆ ಹೆಚ್ಚಿತು. ಪ್ರೀತಿ-ಮದುವೆಯ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಐಶ್ವರ್ಯ ಈಗ ಸಿಂಗಲ್‌ ಆಗಿರಲು ಇಷ್ಟಪಡುತ್ತಾರೆ.

ಬಿಗ್​ಬಾಸ್​ ಅಂದ್ಮೇಲೆ ಅಲ್ಲಿ ಯಾರನ್ನಾದರೂ ಜೋಡಿ ಮಾಡುವುದು ಸಹಜವೇ. ಅವರು ಮದುವೆಯಾದವರೇ ಆಗಿರಲಿ, ಆಗದವರೇ ಆಗಿರಲಿ... ಒಟ್ಟಿನಲ್ಲಿ ಇಬ್ಬರ ಮಧ್ಯೆ ಲವ್​ ಆಗಿದೆ ಎಂದು ಸುದ್ದಿಯಾಗುತ್ತದೆ, ಜೊತೆಗೆ ಈ ಜೋಡಿಗಳು ಕೂಡ ಅದೇ ರೀತಿ ನಡೆದುಕೊಳ್ಳುವ ಕಾರಣದಿಂದ ಹೀಗೊಂದು ಸುದ್ದಿ ಹರಡುತ್ತದೆ. ಕೆಲವೊಮ್ಮೆ ಬಿಗ್​ಬಾಸ್​ನಿಂದ ಹೊರಗೆ ಬಂದ ಮೇಲೆಯೂ ಆ ಜೋಡಿಗಳು ಸದ್ದು ಮಾಡಿದರೆ, ಮತ್ತೆ ಕೆಲವು ಜೋಡಿಗಳು ಹೊರಕ್ಕೆ ಬಂದ ಮೇಲೆ ಬೇರೆ ಬೇರೆಯಾಗುತ್ತವೆ. ಬಿಗ್​ಬಾಸ್​ನಲ್ಲಿ ಲವ್​ ಆಗಿ, ಹೊರಗೆ ಬಂದು ಮದುವೆಯಾಗಿ ಕೊನೆಗೆ ಬೇರ್ಪಟ್ಟ ಉದಾಹರಣೆಗಳೂ ಇವೆ.

ಅದೇನೇ ಇರಲಿ, ಸದ್ಯ ಬಿಗ್​ಬಾಸ್​ 11ರ ಹವಾ ಇನ್ನೂ ಇರುವ ಕಾರಣ, ಮುಂದಿನ ಸೀಸನ್​ ಬರುವವರೆಗೆ ಈ ಸೀಸನ್​ನ ಸ್ಪರ್ಧಿಗಳು ಹೈಲೈಟ್​ ಆಗಿರುತ್ತಾರೆ. ಈ ಸೀಸನ್​ನಲ್ಲಿ ಕೂಡ ಮಾಮೂಲಿಯಂತೆ ಒಂದಿಷ್ಟು ಜೋಡಿಗಳು ಸದ್ದು ಮಾಡಿದ್ದು ಇವೆ. ಅವರಲ್ಲಿ ಒಬ್ಬರು ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್​ ಶಾಸ್ತ್ರಿ. ಇವರಿಬ್ಬರೂ ಮೊದಲಿನಿಂದಲೂ ಬಿಗ್​ಬಾಸ್​ ಮನೆಯಲ್ಲಿ ಸಕತ್​ ಕ್ಲೋಸ್​ ಆಗಿದ್ದರು. ಅಷ್ಟಕ್ಕೂ ಇವರಿಬ್ಬರೂ ಬಿಗ್​ಬಾಸ್​ಗಿಂತಲೂ ಮುಂಚೆಯೇ ಪರಸ್ಪರ ಬಲ್ಲವರು. ಒಟ್ಟಿಗೇ ಒಂದು ಸಿನಿಮಾ ಕೂಡ ಮಾಡಿದ್ದರು. ಆದ್ದರಿಂದ ಇವರಿಬ್ಬರ ಮೇಲೆ ವೀಕ್ಷಕರ ಕಣ್ಣು ಕೂಡ ನೆಟ್ಟಿತ್ತು. ಒಂದು ಹಂತದಲ್ಲಿ ಒಬ್ಬರ ಮೇಲೆ ಒಬ್ಬರು ತೋರುವ ಪ್ರೀತಿ ನೋಡಿ, ಇವರಿಬ್ಬರೂ ಲವ್​ನಲ್ಲಿ ಬಿದ್ದಿದ್ದಾರೆ ಎಂದೇ ಹೇಳಲಾಗಿತ್ತು. ಇಂಥ ಸನ್ನಿವೇಶಗಳನ್ನು ಬಿಗ್​ಬಾಸ್ ಸೃಷ್ಟಿಸಿ ಟಿಆರ್​ಪಿ ಹೆಚ್ಚಿಸಿಕೊಳ್ಳುವುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಬಿಗ್​ಬಾಸ್​​ನಿಂದ ಹೊರಕ್ಕೆ ಬಂದವರೇ ಈ ಬಗ್ಗೆ ಮಾತನಾಡಿದ್ದಾರೆ. ಜಗಳ, ಲವ್​ ಸನ್ನಿವೇಶಗಳನ್ನು ಹೇಗೆ ಸೃಷ್ಟಿ ಮಾಡಲಾಗುತ್ತದೆ ಎಂಬ ಬಗ್ಗೆ ವಿವರಿಸಿದ್ದಾರೆ. ಅವರಲ್ಲಿ ಒಂದು ಐಶ್ವರ್ಯ ಮತ್ತು ಶಿಶಿರ್​ ಜೋಡಿ.

ಬಿಗ್​ಬಾಸ್​ ವಿನ್ನರ್​ ಹನುಮಂತು 'ಫಸ್ಟ್​ ನೈಟ್​' ಹೀಗಿತ್ತು:​ ಸುಸ್ತಾಗೋದ್ರು ಕಿಚ್ಚ ಸುದೀಪ್​! ವಿಡಿಯೋ ವೈರಲ್​

ಶಿಶಿರ್​ ಅವರು ಬಿಗ್​ಬಾಸ್​ನಿಂದ ಎಲಿಮಿನೇಟ್​ ಆದಾಗ ಐಶ್ವರ್ಯಾ ತುಂಬಾ ನೊಂದುಕೊಂಡಿದ್ದರು. ಬಿಗ್​ಬಾಸ್​ನಿಂದ ಹೊರಕ್ಕೆ ಬಂದಿದ್ದ ಶಿಶಿರ್​ ಅವರು ತಮ್ಮಿಬ್ಬರ ಸಂಬಂಧದ ಬಗ್ಗೆ ಮಾತನಾಡುತ್ತಾ, ಪ್ರೀತಿ, ಕ್ರಷ್​ ಎನ್ನುವುದೆಲ್ಲಾ ನಮ್ಮ ನಡುವೆ ಇಲ್ಲ. ನಮ್ಮಿಬ್ಬರದ್ದು ಪರಿಶುದ್ಧವಾದ ಸ್ನೇಹ ಅಷ್ಟೇ. ನಾವಿಬ್ಬರೂ ಬಿಗ್​ಬಾಸ್​​ಗಿಂತಲೂ ಮೊದಲೇ ಬಲ್ಲವರು ಅಷ್ಟೇ. ಆದರೆ ನಮ್ಮಿಬ್ಬರ ನಡುವೆ ಒಳ್ಳೆ ಬಾಂಧವ್ಯ ಶುರುವಾಗಿದ್ದೇ ಟಾಸ್ಕ್‌ ಬಳಿಕ. ಆ ಸಮಯದಲ್ಲಿ ಪರಸ್ಪರ ಕುಗ್ಗಿದಾಗ ಪ್ರೋತ್ಸಾಹಿಸುತ್ತಿದ್ದೆವು ಅಷ್ಟೇ. ಈ ರೀತಿಯಾಗಿ ನಮ್ಮ ಸ್ನೇಹ ಬೆಳೆದಿದೆ ವಿನಾ ಏನೂ ಇಲ್ಲ ಎಂದಿದ್ದರು. ಇದೇ ವೇಳೆ ಐಶ್ವರ್ಯ ಕುರಿತು ಮಾತನಾಡಿದ್ದ ಅವರು, ಆಕೆ ಮಾನಸಿಕವಾಗಿ ಅವರು ತುಂಬಾ ಗಟ್ಟಿಗಿತ್ತಿ. ಹೊರಗಡೆ ತುಂಬಾ ನೋವುಗಳನ್ನು ಎದುರಿಸಿದ್ದಾಳೆ ಎಂದೂ ಹೇಳಿದ್ದರು.

ಇದೀಗ ನಿರಿಕ್​ (ನಿರಂಜನ್​ ದೇಶಪಾಂಡೆ ಮತ್ತು ಕಿರಿಕ್​ ಕೀರ್ತಿ) ಚಾನೆಲ್​ನಲ್ಲಿ ಮಾತನಾಡಿರುವ ಅವರಿಗೆ ಎದುರಾದದ್ದು ಕೂಡ ಇದೇ ಪ್ರಶ್ನೆ. ಅದಕ್ಕೆ ಐಶ್ವರ್ಯ ಅವರು, ನನ್ನ ಮತ್ತು ಶಿಶಿರ್​ ನಡುವೆ ಇರುವುದು ಬರೀ ಸ್ನೇಹ ಅಲ್ಲ. ಅದಕ್ಕಿಂತ ಮಿಗಿಲಾದ ಮಚ್ಚ, ಮಚ್ಚಿ ಸಂಬಂಧ. ಹಾಗೆಂದು ಇದು ಪ್ರೀತಿ-ಮದುವೆಯ ಬಗ್ಗೆ ಅಲ್ಲ. ನಮ್ಮಿಬ್ಬರಿಗೂ ಆ ಭಾವನೆ ಇಲ್ಲ. ನಾವಿಬ್ಬರೂ 2016ರಲ್ಲಿ ಒಟ್ಟಿಗೆ ಮೂವಿ ಮಾಡಿದ್ವಿ. ಆಗಿಂದ ಪರಿಚಯವಷ್ಟೇ. ಹಾಗೆಂದು ಫಿಲ್ಮ್​ ಬಳಿಕವೂ ಫೋನ್​ ಸಂಪರ್ಕ ಕೂಡ ಇರಲಿಲ್ಲ. ಬಿಗ್​ಬಾಸ್​ನಲ್ಲಿಯೇ ಅಷ್ಟು ಸ್ನೇಹ ಬೆಳೆದದ್ದು. ಅದನ್ನು ಬಿಟ್ಟು ಏನೂ ಇಲ್ಲ. ಅವರು ತುಂಬಾ ಒಳ್ಳೆಯ ವ್ಯಕ್ತಿ ಅಷ್ಟೇ. ನನಗೆ ಈಗಾಗಲೇ ಒಂದು ಬ್ರೇಕ್​ ಅಪ್​ ಆಗಿ ಅದರಿಂದ ಹೊರಕ್ಕೆ ಬಂದಿದ್ದೇನೆ. ಸದ್ಯ ಮದುವೆಯ ಬಗ್ಗೆ ಯೋಚನೆಯನ್ನೂ ಮಾಡಲ್ಲ, ಸಿಂಗಲ್​ ಆಗಿರುವುದೇ ನನಗೆ ಇಷ್ಟ ಎಂದಿದ್ದಾರೆ ಐಶ್ವರ್ಯ.

ಮೇಕಪ್​ ಇಲ್ಲದ ಮುಖ ತೋರಿಸಲು ನಾಚಿಗೊಂಡ ಬಿಗ್​ಬಾಸ್​ ನಮ್ರತಾ! ಬಣ್ಣ ರಹಿತ ತನಿಷಾರನ್ನೂ ನೋಡಿಬಿಡಿ

YouTube video player