ಚಿತ್ರನಟಿಯರ ಸೌಂದರ್ಯದ ಹಿಂದೆ ಪ್ಲಾಸ್ಟಿಕ್ ಸರ್ಜರಿ ಅಥವಾ ಮೇಕಪ್ ಇರುವುದು ಸಾಮಾನ್ಯ. ಸುಹಾನಾ, ನ್ಯಾಸಾ ಹಳೆಯ ವಿಡಿಯೋಗಳು ಇದಕ್ಕೆ ಸಾಕ್ಷಿ. ತನಿಷಾ, ನಮ್ರತಾ ಅವರ ಮೇಕಪ್ ರಹಿತ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ತನಿಷಾ ನಿರ್ಮಾಣದ 'ಕೋಣ' ಚಿತ್ರದಲ್ಲಿ ಕೋಮಲ್ ನಾಯಕ, ನಮ್ರತಾ ಕೂಡ ನಟಿಸಿದ್ದಾರೆ.

 ಚಿತ್ರತಾರೆಯರನ್ನು ಸಾಮಾನ್ಯವಾಗಿ ರಂಭೆ, ಊರ್ವಶಿ, ಮೇನಕೆಯರಿಗೆ ಹೋಲಿಸುತ್ತೇವೆ. ಅವರು ನಿಜವಾಗಿಯೂ ಹೇಗೆ ಇದ್ದರು ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೂ ರೂಪದ ಬಗ್ಗೆ ಹೋಲಿಕೆ ಮಾಡುವಾಗ ಅವರನ್ನು ಹೋಲಿಸುವುದು ಸಹಜ. ಅದರಲ್ಲಿಯೂ ಕೆಲ ಚಿತ್ರನಟಿಯರ ಸೌಂದರ್ಯವನ್ನು ಹೊಗಳಿದಷ್ಟೂ ಅಭಿಮಾನಿಗಳಿಗೆ ಸಾಕಾಗುವುದಿಲ್ಲ. ಇವರ ಪೈಕಿ ಬಹುತೇಕ ಮಂದಿ, ಅದರಲ್ಲಿಯೂ ಹೆಚ್ಚಾಗಿ ಬಾಲಿವುಡ್​ ನಟಿಯರು ಅಡಿಯಿಂದ ಮುಡಿಯವರೆಗೂ ಹಲವಾರು ರೀತಿಯ ಪ್ಲಾಸ್ಟಿಕ್​ ಸರ್ಜರಿಯ ಮೊರೆ ಹೋಗಿ ಸೌಂದರ್ಯವತಿಯಂತೆ ಬಿಂಬಿಸುವುದು ಇದೆ. ಇತ್ತೀಚೆಗಷ್ಟೇ ನಟ ಶಾರುಖ್​ ಖಾನ್​ ಅವರ ಪುತ್ರಿ ಸುಹಾನಾ ಖಾನ್​ ಹಳೆಯ ವಿಡಿಯೋ ವೈರಲ್​ ಆಗಿತ್ತು, ಅದೇ ರೀತಿ ಕಾಜೋಲ್ ಪುತ್ರಿ ನ್ಯಾಸಾ ಅವರ ಹಳೆಯ ವಿಡಿಯೋ ನೋಡಿ ಅಭಿಮಾನಿಗಳು ಶಾಕ್​ ಆಗಿದ್ದರು. ಹೀಗೆ ಸುರಸುಂದರಿಯರು ಎಂದೆಲ್ಲಾ ಹೇಳಿಸಿಕೊಳ್ಳುವ ಹಿಂದೆ ಒಂದೋ ಪ್ಲಾಸ್ಟಿಕ್​ ಸರ್ಜರಿಯ ಕೈವಾಡ ಇಲ್ಲವೇ ಮೇಕಪ್​ಮ್ಯಾನ್​ಗಳ ಕೈವಾಡ ಇರುವುದು ಹೊಸ ವಿಷಯವೇನಲ್ಲ.

ನಟಿ ಸಾಯಿಪಲ್ಲವಿಯಂಥ ಕೆಲವೇ ಕೆಲವು ಬೆರಳೆಣಿಕೆ ನಟಿಯರು ಮಾತ್ರ ತಮ್ಮ ಸಹಜ ಸೌಂದರ್ಯದಿಂದ ಮೇಕಪ್​ ರಹಿತವಾಗಿ ಕಾಣಿಸಿಕೊಳ್ಳುವ ಧೈರ್ಯ ಮಾಡುವುದು ಉಂಟು. ಆದರೆ ಇಂಡಸ್ಟ್ರಿಯಲ್ಲಿ ತಳವೂರಿ ಇರಬೇಕು ಎಂದರೆ, ಡಿಮಾಂಡ್​ ಕುದುರಿಸಿಕೊಳ್ಳಬೇಕು ಎಂದರೆ ಈ ಬಾಹ್ಯ ಸೌಂದರ್ಯ ಇರಲೇಬೇಕಾದ ಅನಿವಾರ್ಯತೆಯೂ ಚಿತ್ರತಾರೆಯರಿಗೆ ಇದೆ ಅನ್ನಿ. ಇದೀಗ ಕೋಣ ಶೂಟಿಂಗ್ ಸೆಟ್​ನಿಂದ ಬಿಗ್​ಬಾಸ್​ ಖ್ಯಾತಿಯ ಬ್ಯೂಟಿ ಕ್ವೀನ್​ಗಳೆಂದೇ ಬಿರುದು ಪಡೆದಿರುವ ತನಿಷಾ ಕುಪ್ಪಂಡ ಮತ್ತು ನಮ್ರತಾ ಗೌಡ ಅವರ ಮೇಕಪ್​ ರಹಿತ ವಿಡಿಯೋ ವೈರಲ್​ ಆಗಿದೆ. ಇಬ್ಬರೂ ಮೇಕಪ್​ ಇಲ್ಲದಿದ್ದರೂ ಸುಂದರಿಯರಾಗಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ನಮ್ರತಾ ಮುಖ ಮುಚ್ಚಿಕೊಳ್ಳುವ ಅಗತ್ಯವೇ ಇಲ್ಲ. ಅವರು ಕೂಡ ಸಹಜ ಸುಂದರಿ ಎಂದು ಅವರು ಫ್ಯಾನ್ಸ್​ ಕಮೆಂಟ್​ನಲ್ಲಿ ಹೇಳಿದ್ದಾರೆ. 

'ದಂತದ ಬೊಂಬೆ' ಶಾರುಖ್​ ಪುತ್ರಿ ಸುಹಾನಾಳ ದೇಹದ ಯಾವ್ಯಾವ ಭಾಗಕ್ಕೆ ಕತ್ತರಿ ಬಿದ್ದಿದೆ ನೋಡಿ...

ಇದರಲ್ಲಿ ಮೊದಲಿಗೆ ತನಿಷಾ ಅವರನ್ನು ಮೇಕಪ್​ ಇಲ್ಲದೇ ನೋಡಬಹುದಾಗಿದೆ. ಬಳಿಕ ಕ್ಯಾಮೆರಾ ನಮ್ರತಾ ಗೌಡ ಅವರ ಬಳಿ ಬಂದಿದೆ. ಕ್ಯಾಮೆರಾ ಇದೆ ಎಂದು ತಿಳಿಯದ ನಮ್ರತಾ ಮುಖ ತೋರಿಸಿದ್ದಾರೆ. ಬಳಿಕ ಅಯ್ಯೋ ಮೇಕಪ್​ ಮಾಡಿಲ್ಲ ಎಂದು ನಾಚಿಕೊಂಡು ಈ ಮುಖ ತೋರಿಸಲಾರೆ ಎಂದು ಮುಚ್ಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ನೆಚ್ಚಿನ ಬಿಗ್​ಬಾಸ್​ ಸ್ಪರ್ಧಿಯರ ಮೂಲ ರೂಪ ನೋಡುವ ಭಾಗ್ಯ ಸಿಕ್ಕ ಖುಷಿಯಲ್ಲಿದ್ದಾರೆ ಅಭಿಮಾನಿಗಳು. ಅಂದಹಾಗೆ, ತನಿಷಾ ಕುಪ್ಪಂಡ ಅವರು ನಟಿ ಮಾತ್ರವಲ್ಲದೇ ಉದ್ಯಮಿಯೂ ಹೌದು. ಇದೀಗ ಅವರು ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ಕೋಣ ಸಿನಿಮಾ ನಿರ್ಮಿಸುತ್ತಿದ್ದಾರೆ. 

ತನಿಷಾ ಕುಪ್ಪಂಡ ತಮ್ಮದೇ ಹೆಸರಿನಲ್ಲಿ ‘ಕುಪ್ಪಂಡ ಪ್ರೊಡಕ್ಷನ್ಸ್’ ಆರಂಭಿಸಿದ್ದು, ಮೊದಲ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದಾಗಲೇ ಇದರ ಟೀಸರ್​ ಬಿಡುಗಡೆಯಾಗಿದೆ. ಚಿತ್ರದಲ್ಲಿ ಕೋಮಲ್ ನಾಯಕ. ನಮ್ರತಾ ಗೌಡ ಕೂಡ ಇದ್ದಾರೆ. ಇನ್ನು ಟೀಸರ್ ನೋಡಿ ಚಿತ್ರದ ಕಥೆ ಹೇಳುವುದಾದರೆ, ಇದರಲ್ಲಿ ಕೋಣವೊಂದು ತಪ್ಪಿಸಿಕೊಂಡಿರುತ್ತದೆ. ಅದನ್ನು ಹಿಡಿಯಲು ಊರಿನವರು ಹಗ್ಗ, ಪಂಜು ಹಿಡಿದು ಹೊರಡುತ್ತಾರೆ. ಆದರೆ ಕೋಮಲ್ ಕೈಯಲ್ಲಿ ರೋಬೋಟ್ ಇರುತ್ತದೆ. ಇದರ ಮೈತುಂಬಾ ಇರುವ ಲೈಟುಗಳು ಮಿನುಗುತ್ತಿರುತ್ತವೆ. ಅಷ್ಟಕ್ಕೂ ಆ ಕೋಣನ ಹಿಂದಿನ ಸ್ಟೋರಿ ಏನು? ಅದರ ಹಿಂದೆ ಯಾಕೆ ಎಲ್ಲಾ ಓಡ್ತಿದ್ದಾರೆ, ಕೋಣಕ್ಕೂ ನಾಯಕನ ಬಳಿ ಇರುವ ರೋಬೋಟ್​ಗೂ ಏನು ಸಂಬಂಧ ಎಂಬೆಲ್ಲಾ ಕುತೂಹಲ ಸಿನಿಮಾದಲ್ಲಿ ಇರಲಿದೆ. 

ಮೇಕಪ್​ ಇಲ್ದೇ ಲೈವ್​ನಲ್ಲಿ ಆ್ಯಂಕರ್​ ಅನುಪಮಾ ಗೌಡ ಪ್ರತ್ಯಕ್ಷ! ಅಭಿಮಾನಿಗಳಿಗೆ ಕೊಟ್ಟರು ಈ ಸುದ್ದಿ...

View post on Instagram