Asianet Suvarna News Asianet Suvarna News

ತುಳು ಜನ ಹೆಣ್ಣುಮಕ್ಕಳನ್ನು ಗೌರವಿಸುತ್ತಾರೆ; ಸಾನ್ಯಾ ಜೊತೆ ನಡೆದ ಆ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಟ್ರೋಫಿ ಪಡೆದುಕೊಂಡು ಹೊರ ಬಂದ ರೂಪೇಶ್ ಶೆಟ್ಟಿ. ಕಿಚ್ಚ ಸುದೀಪ್ ಕೊಟ್ಟ ವಾರ್ನಿಂಗ್ ಬಗ್ಗೆ ಮಾತನಾಡಿದ ನಟ...

Bigg boss 9 winner roopesh shetty clarifies about caption room scene with Sanya Iyer vcs
Author
First Published Jan 2, 2023, 1:36 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಸೀಸನ್ 9 ಮುಕ್ತಾಯವಾಗಿದೆ. ಸೀಸನ್ 9ರ ವಿನ್ನಿಂಗ್ ಟ್ರೋಫಿಯನ್ನು ಮಂಗಳೂರಿನ ರೂಪೇಶ್ ಶೆಟ್ಟಿ ಪಡೆದುಕೊಂಡಿದ್ದಾರೆ. ಟ್ರೋಫಿ ಜೊತೆಗೆ 7 ಲಕ್ಷವನ್ನು ಗಿಟ್ಟಿಸಿಕೊಂಡಿದ್ದಾರೆ. ಬಿಬಿ ಓಟಿಟಿಯಿಂದ ಬಿಬಿಕೆ 9 ಟಿವಿ ಜರ್ನಿ ಅಂದ್ರೆ 142 ದಿನಗಳಲ್ಲಿ ರೂಪೇಶ್ ಮರೆಯಲಾಗದ ಘಟನೆ ಅಂದ್ರೆ ಕ್ಯಾಪ್ಟನ್ ರೂಮಿನಲ್ಲಿ ಸಾನ್ಯಾ ಐಯರ್ ಮತ್ತು ಆರ್ಯವರ್ಧನ್ ಗುರೂಜಿ ಜೊತೆ ಹಾಸಿಗೆ ಮೇಲೆ ಮಲಗಿಕೊಂಡು ಮಾತನಾಡುತ್ತಿದ್ದ ಕ್ಷಣ. ಕ್ಯಾಮೆರಾ ಸೆರೆ ಹಿಡಿದಿರುವ ಪ್ರಕಾರ ಇದು ತಪ್ಪು ಎಂದು ಸುದೀಪ್ ಹೇಳುತ್ತಾರೆ. ಘಟನೆ ಬಗ್ಗೆ ಸರಿಯಾಗಿ ಅರಿವಿಲ್ಲದೆ ಸುಮ್ಮನಾಗುತ್ತಾರೆ. ಹೊರ ಬರುತ್ತಿದ್ದಂತೆ ರೂಪೇಶ್ ಕ್ಲಾರಿಟಿ ಕೊಟ್ಟಿದ್ದಾರೆ.

'ಆ ಘಟನೆ ನಡೆದಿದ್ದು ಮೂರನೇ ವಾರಕ್ಕೆ. ಒಳಗಡೆ ಏನಾಗುತ್ತಿದೆ ಎಂದು ಗೊತ್ತಾಗುವುದಿಲ್ಲ. ಓಟಿಟಿಗೆ ಕಾಲಿಟ್ಟಾಗ ಮೊದಲು ಎರಡು ವಾರ ಕ್ಯಾಮೆರಾ ಇದೆ ಅಂತ conciouss ಆಗಿರುತ್ತೀವಿ ಹೊರಗಡೆ ಜನ ನೋಡುತ್ತಿರುತ್ತಾರೆ ಹಾಗೆ ಹೀಗೆ ಅನ್ನೋದೆಲ್ಲಾ ತಲೆಯಲ್ಲಿ ಇರುತ್ತದೆ. ದಿನ ಸಾಂಗ್ ಶುರುವಾದಾಗ ದಿನ ಆರಂಭವಾಗುತ್ತದೆ ದಿನಚರಿ ಅದಕ್ಕೆ ಹೊಂದಿಕೊಂಡ ನಂತರ ಹೊರಗಡೆ ಒಂದು ಪ್ರಪಂಚ ಇದೆ ಅನ್ನೋದು ಮರೆತು ಬಿಡುತ್ತೀವಿ. ಹೊರಗಡೆಯಿಂದ ಜನರ ನೋಡಲು ಆರಂಭಿಸಿದ್ದಾರೆ ಅನ್ನೋದು ಮರೆತು ಬಿಡುತ್ತೀವಿ, ನನ್ನವರು ಜೊತೆ ಇದ್ದಾಗ ಎಲ್ಲವೂ ಮರೆತು ಬಿಡುತ್ತೀವಿ' ಎಂದು ಆ ಘಟನೆ ಬಗ್ಗೆ ರೂಪೇಶ್ ಖಾಸಗಿ ಸಂದರ್ಶನಲ್ಲಿ ಮಾತನಾಡುತ್ತಾರೆ.

Bigg boss 9 winner roopesh shetty clarifies about caption room scene with Sanya Iyer vcs

'ಸುದೀಪ್ ಸರ್ ಆ ಘಟನೆ ಬಗ್ಗೆ ಹೇಳಿದಾಗ ಶಾಕ್ ಆಗಿತ್ತು. ಬಿಗ್ ಬಾಸ್ ಆರಂಭದಲ್ಲಿ ಹೇಳುತ್ತಾರೆ ಟಾಸ್ಕ್‌ ಸಮಯದಲ್ಲಿ ಬ್ಲೈಂಡ್ಸ್‌ ಕ್ಲೋಸ್ ಆದಾಗ ಮಾತ್ರ ನಾವು ಕ್ಯಾಪ್ಟನ್ ರೂಮಿನಲ್ಲಿರುವ ಬಾತ್‌ರೂಮ್ ಬಳಸಬಹುದು ಎಂದು. ಅಲ್ಲಿ ನಾವು ಬೆಡ್‌ ಬಳಸಿದ್ದು ತಪ್ಪು. ಸುದೀಪ್ ಸರ್ ಯಾಕೆ ಖಾರವಾಗಿ ಹೇಳಿದ್ದರು ಅಂದ್ರೆ ನನ್ನ ಫೋಕಸ್ ಆ ಕಡೆ ಇರಬೇಕು ಎಂದು ಅದಾದ ಮುಂದಿನ ವಾರವೂ ನನಗೆ ಫೋಕಸ್‌ ಎಂದು ಹೇಳಿದ್ದರು.  ತುಂಬಾ ಎಮೋಷನಲ್ ವ್ಯಕ್ತಿ ಆಗಿರುವ ಕಾರಣ ನಾನು ಏನ್ ಏನೋ ಯೋಚನೆ ಮಾಡುತ್ತೀನಿ. ನಾನು ಬಂದಿರುವುದು ತುಳು ಬೆಲ್ಟ್‌ನಿಂದ ಅಲ್ಲಿನ ಜನರು ಸಂಪ್ರದಾಯ ಆಚಾರಣೆಗೆ ಎಷ್ಟು ಬೆಲೆ ಕೊಡುತ್ತಾರೆಂದು ನಿಮಗೆ ಗೊತ್ತಿದೆ. ಅಲ್ಲದೆ ನಾವು ಹುಡುಗಿಯರನ್ನು ತುಂಬಾ ಗೌರವದಿಂದ ನೋಡುವ ಜನರು ಅಕೆ ನನ್ನ ಕ್ಲೋಸ್ ಫ್ರೆಂಡ್ ಆಗಿರುವ ಕಾರಣ ನಾನು ಫ್ರೆಂಡ್ಲಿ ಆಗಿ ವರ್ತಿಸುತ್ತಿದ್ದೆವು ಸರ್ ಹೇಳಿದಾಗ ಶಾಕ್ ಆಯ್ತು. ಅಲ್ಲಿ ಗುರೂಜಿ ಜೊತೆ ಮಾತನಾಡುತ್ತಿದ್ದೆವು ಅಷ್ಟೆ.' ಎಂದು ರೂಪೇಶ್ ಹೇಳಿದ್ದಾರೆ.

ಹೊಸ ವರ್ಷ ಅತ್ಯದ್ಭುತವಾಗಿ ಶುರುವಾಗಿದೆ; ರೂಪೇಶ್ ಶೆಟ್ಟಿ ಗೆಲುವನ್ನ ಸಂಭ್ರಮಿಸಿದ ಸಾನ್ಯಾ ಅಯ್ಯರ್

'ನನ್ನ ತಲೆಯಲ್ಲಿ ಮತ್ತೊಂದು ಯೋಚನೆ ಇತ್ತು ನಾನು ಮಂಗಳೂರಿನಿಂದ ಬಂದಿರುವ ಕಾರಣ ಅಲ್ಲಿ ಅಲ್ಲಿನ ಜನರು ನೊಂದಿಕೊಳ್ಳುತ್ತಾರೆಂದು ಬಿಗ್ ಬಾಸ್‌ಗೆ ಬಂದಿರುವುದಕ್ಕೆ ಹೆಮ್ಮೆ ಪಟ್ಟಿರುತ್ತಾರೆ ಆದರೆ ಈ ಘಟನೆಯಿಂದ ಮಂಗಳೂರಿಗೆ ಕೆಟ್ಟ ಹೆಸರು ಬಂದಿದ್ಯಾ? ಆ ಘಟನೆ ನನ್ನ ಮನಸ್ಸಿಗೆ ಮುಟ್ಟಿತ್ತು ಅದಿಕ್ಕೆ ಭಾವುಕನಾದೆ. ಯಾರಿಗೂ ತೊಂದರೆ ಕೊಡದೆ ಯಾವ ಭಾವನೆಗೂ ನೋವು ಮಾಡದೆ ಒಳ್ಳೆ ವ್ಯಕ್ತಿಯಾಗಿರಬೇಕು ಅನ್ನೋದು ನನ್ನ ಜೀವನದ ಪಾಲಿಸಿ. ಇಷ್ಟು ವರ್ಷ ಬದುಕಿರುವ ರೀತಿಗೆ ಆ ಘಟನೆ ಒಂದು ಕಪ್ಪು ಚುಕ್ಕಿ ಆಗಬಹುದು ಅನ್ನೋ ನೋವು ಇತ್ತು.  ಆ ನೋವಿನಲ್ಲಿ ನಾನು ಮನೆಯಿಂದ ಹೊರ ನಡೆಯಲು ನಾನು ರೆಡಿಯಾಗಿದ್ದೆ ನನ್ನನಿಂದ ಶೋಗೆ ಅವಮಾನ ಆಗಬಾರದು ಅನ್ನೋ ಯೋಚನೆಯಲ್ಲಿದ್ದೆ. ಆನಂತರ ಸುದೀಪ್ ಸರ್ ಮಾತನಾಡಿ ಅರ್ಥ ಮಾಡಿಸಿದ್ದರು' ಎಂದಿದ್ದಾರೆ ರೂಪಿ. 

Follow Us:
Download App:
  • android
  • ios