Asianet Suvarna News Asianet Suvarna News

BBK9 ಯಾರಿಂದಲೂ ಸಾಧ್ಯವಾಗದ ಟಾಸ್ಕ್‌ ಮಾಡಿದ ದಿವ್ಯಾ ಉರುಡುಗ; ಒಂದೇ ಕ್ಷಣದಲ್ಲಿ ಫಿನಿಶ್

ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡ ದಿವ್ಯಾ ಉರುಗುಡ. ಪಾರ್ಟ್‌ನರ್ ಐಶ್ವರ್ಯನೇ ಶಾಕ್.... 

Bigg boss 9 Divya uruduga wins netizens love in pyramind task vcs
Author
First Published Sep 29, 2022, 11:15 AM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಸ್ ಸೀಸನ್ 9 ಮೊದಲ ವಾರವೇ ವಿಭಿನ್ನತೆಯಿಂದ ತುಂಬಿದೆ.  ಮೈಂಡ್‌ ಗೇಮ್ ಆಟವಾಡಿಸುವ ಮೂಲಕ ಸ್ಪರ್ಧಿಗಳ ಎಷ್ಟು ಚಿರುಕಾಗಿರಬೇಕು, ಎಷ್ಟು ಬಲಶಾಲಿಯಾಗಿರಬೇಕು, ಎಷ್ಟು ನೆನಪಿನ ಶಕ್ತಿ ಅಗತ್ಯವಿದೆ ಎಂದು ತಿಳಿಸಿಕೊಡುತ್ತಿದ್ದಾರೆ. ಈ ಟಾಸ್ಕ್‌ನಲ್ಲಿ ಗೆಲ್ಲುವವರು 2ನೇ ವಾರದ ಕ್ಯಾಪ್ಟನ್ ಆಗುತ್ತಾರೆ ಹಾಗೂ ಈ ವಾರದ ಎಲಿಮಿನೇಷನ್‌ನಿಂದ ಪಾರಾಗುತ್ತಾರೆ. ಪ್ರಶಾಂತ್ ಸಂಬರಗಿ ಮತ್ತು ಗೋಬ್ರಾ ಲೀಡ್‌ನಲ್ಲಿದ್ದಾರೆ. 

ಈ ವಾರ ಮೈಂಡ್‌ಗೇಮ್‌ಗೆಂದು ಡಿಫರೆಂಟ್ ಟಾಸ್ಕ್‌ ನೀಡಿದ್ದರು. 24 ಬಾಲ್‌ಗಳನ್ನು ಕೊಟ್ಟು ಪಿರಮಿಡ್ ಮಾಡಲು ಹೇಳಿದ್ದರು. ಕೆಂಪು ಬಾಲ್‌ನ ಅರುಣ್ ಸಾಗರ್ ಮತ್ತು ನವಾಜ್ ಆಯ್ಕೆ ಮಾಡಿಕೊಂಡರು, ನೀಲಿ ಬಾಲ್‌ನ ಆರ್ಯವರ್ಧನ್ ಮತ್ತು ದರ್ಶ್‌ ಆಯ್ಕೆ ಮಾಡಿದ್ದರು. ಅರುಣ್ ಸಾಗರ್ ತಂಡ ಗೆಲುತ್ತದೆ ಎಂದು ಮಯೂರಿ ಮತ್ತು ಸಾನ್ಯಾ ಐಯರ್ ಬೆಟ್ಟಿಂಗ್ ಕಟ್ಟಿದ್ದರು. ಸುಮಾರು ಮೂರು ಗಂಟೆಗಳ ಕಾಲ ಈ ಎರಡು ತಂಡ ಸಾಹಸ ಮಾಡಿದ್ದರೂ ಪಿರಮಿಡ್ ಮಾಡಲು ವಿಫಲರಾದ್ದರು. ಸಾಧ್ಯವೇ ಇಲ್ಲ ಆಗುವುದೇ ಇಲ್ಲ ಎಂದು ಟಾಸ್ಕ್‌ ರೂಮಿನಿಂದ ಹೊರ ನಡೆದರು. ಈ ಗೇಮ್‌ ಹೇಗೆ ಆಟವಾಡಬಹುದು ಎಂದು ಇನ್ನಿತ್ತರ ಸ್ಪರ್ಧಿಗಳು ಮನೆಯಲ್ಲಿ ಚರ್ಚೆ ಮಾಡುತ್ತಿದ್ದ ಕಾರಣ ಬಿಗ್ ಬಾಸ್ ಎರಡನೇ ಅವಕಾಶ ಕೊಡಲು ಪ್ಲ್ಯಾನ್ ಮಾಡುತ್ತಾರೆ. 

Bigg boss 9 Divya uruduga wins netizens love in pyramind task vcs

ಆಗ ದೀಪಿಕಾ ದಾಸ್ -ಅಮೂಲ್ಯ ಗೌಡ ಒಂದು ತಂಡ, ದಿವ್ಯಾ ಉರುಡುಗ - ಐಶ್ವರ್ಯ ಒಂದು ತಂಡವಾಗಿ ಟಾಸ್ಕ್‌ ರೂಮ್ ಪ್ರವೇಶಿಸುತ್ತಾರೆ. ದೀಪಿಕಾ ದಾಸ್ ತಂಡ ಗೆಲ್ಲುತ್ತದೆ ಎಂದು ರೂಪೇಶ್ ರಾಜಣ್ಣ ಮತ್ತು ರಾಕೇಶ್ ಬೆಟ್ಟಿಂಗ್ ಕಟ್ಟುತ್ತಾರೆ. ಟಾಸ್ಕ್‌ ಆರಂಭವಾಗಿ 2 ನಿಮಿಷ ಆಗುವಷ್ಟರಲ್ಲಿ ದಿವ್ಯಾ ಉರುಗುಡ ಪಿರಮಿಡ್ ನಿರ್ಮಾಣ ಮಾಡುತ್ತಾರೆ. ಕೊನೆಯಲ್ಲಿ ನಾಲ್ಕು ಬಾಲ್ ಉಳಿದುಕೊಳ್ಳುತ್ತದೆ ಆದನ್ನು ಹೇಗೆ ಸರಿ ಮಾಡಬೇಕು ಎಂದು ಯೋಚನೆ ಮಾಡಿ ಗೇಮ್ ಮುಗಿಸುತ್ತಾರೆ. ದಿವ್ಯಾ ಮತ್ತು ಐಶ್ವರ್ಯ ಗೆದ್ದು 1 ಅಂಕ ಪಡೆಯುತ್ತಾರೆ, ಬೆಟ್ಟಿಂಗ್ ಕಟ್ಟಿ ರಾಕೇಶ್ ಮತ್ತು ರೂಪೇಶ್ ಸೋಲುತ್ತಾರೆ. 

ಕಡಿಮೆ ಅವಧಿಯಲ್ಲಿ ಟಾಸ್ಕ್‌ ಮುಗಿಸಲು ದಿವ್ಯಾ ಯಾವ ಪ್ಲ್ಯಾನ್ ಬಳಸಿದ್ದರು ಎಂದು ಬಿಬಿ ಸದಸ್ಯರು ಪ್ರಶ್ನೆ ಮಾಡುತ್ತಾರೆ. 'ಪಿರಮಿಡ್‌ ಹೇಗೆ ಮಾಡಬೇಕು ಎಂದು ನಾವೆಲ್ಲರೂ ಪ್ರಯತ್ನ ಮಾಡುವಾಗ ಯೋಚನೆ ಮಾಡುತ್ತಿದ್ದೆ. ಟಾಸ್ಕ್‌ ಮಾಡುವಾಗ ಯೋಚನೆ ಬಂದು ಪಿರಮಿಡ್‌ ಮಾಡಲು 24 ಬಾಲ್‌ಗಳಿದೆ. ಹಾಗಿದ್ರೆ 4 ಅಥವಾ ಮೂರು ರೀತಿಯಲ್ಲಿ ನಿಲ್ಲಿಸಬೇಕು 2 ಇಲ್ಲ..ಒಂದು ಸಲ ಯೋಚನೆ ಮಾಡಿ ಟ್ರೈ ಮಾಡಿದೆ ಸರಿ ಆಯ್ತು' ಎಂದು ದಿವ್ಯಾ ಉತ್ತರಿಸುತ್ತಾರೆ.

BBK9 ಎರಡೇ ದಿನಕ್ಕೆ 12 ಮಂದಿ ನಾಮಿನೇಟ್; ಕಾರಣ ಕೇಳಿ ಹಾಸ್ಯ ಮಾಡಿದ ನೆಟ್ಟಿಗರು!

ಬಿಗ್ ಬಾಸ್ ಸೀಸನ್ 8ರಲ್ಲಿ ಪ್ರಶಾಂತ್ ಸಂಬರಗಿ ಮತ್ತು ದಿವ್ಯಾ ಉರುಡುಗ ಇಬ್ಬರೂ ಇದ್ದರು. ದಿವ್ಯಾ ಟಾಪ್‌ ಮೂರನೇ ಸ್ಥಾನ ಪಡೆದಿರುವ ಕಾರಣ ಪ್ರಶಾಂತ್ ಈ ಸೀಸನ್‌ನಲ್ಲಿ ಆಕೆಯನ್ನು ಟಾರ್ಗೇಟ್ ಮಾಡಿ ಅವಕಾಶ ಸಿಗದಂತೆ ತಡೆಯುತ್ತಿದ್ದಾರೆ. ಕಷ್ಟ ಇರುವ ಟಾಸ್ಕ್‌ ಕೊಟ್ಟು ಸೋಲುವಂತೆ ನೋಡಿಕೊಳ್ಳುತ್ತಿದ್ದಾರೆ ಆದರೆ ದಿವ್ಯಾ ತಂಡ ತಲೆ ಉಪಯೋಗಿಸಿ ಅಂಕ ಗಿಟ್ಟಿಸಿಕೊಂಡಿದ್ದಾರೆ. ಬೇರೆ ಅವರಿಗೂ ಅವಕಾಶ ಸಿಗಬೇಕು ದಿವ್ಯಾ ತುಂಬಾ ಸ್ಟ್ರಾಂಗ್ ಅವರಿಗಿಂತ ಸ್ಟ್ರಾಂಗ್‌ ಇದ್ದಾರೆ ಅನ್ನೋದು ಪ್ರಶಾಂತ್ ವಾದ. 

ಅರುಣ್ ಸಾಗರ್ ಕ್ರಿಯೇಟಿವ್ ಡಿಪಾರ್ಟ್‌ಮೆಂಟ್‌ನಲ್ಲಿದ್ದು ಟಾಸ್ಕ್‌ ಬಿಟ್ಟುಕೊಟ್ಟ ಕಾರಣ ಮಯೂರು ಬೇಸರ ವ್ಯಕ್ತ ಪಡಿಸಿದ್ದಾರೆ. ಸಮಯ ವ್ಯರ್ಥ ಮಾಡುವ ಬದಲು ಯೋಚನೆ ಮಾಡಬೇಕಿತ್ತು ಎಂದಿದ್ದಾರೆ.

ಪ್ರವೀಣರು:
ಅರುಣ್ ಸಾಗರ್
ದೀಪಿಕಾ ದಾಸ್
ದಿವ್ಯಾ ಉರುಡುಗ
ಪ್ರಶಾಂತ್ ಸಂಬರ್ಗಿ
ರೂಪೇಶ್ ಶೇಟ್ಟಿ
ಸಾನ್ಯಾ ಅಯ್ಯರ್
ಅನುಪಮಾ ಗೌಡ
ಆರ್ಯವರ್ಧನ್ ಗುರೂಜಿ
ರಾಕೇಶ್ ಅಡಿಗ

BBK9: ಅನ್ನ ತಿಂದು ಹಿಂದೆಯಿಂದ ಚೂರಿ ಹಾಕಬಾರದು, ಮೊದಲ ದಿನವೇ ಸಿಡಿದೆದ್ದ ಪ್ರಶಾಂತ್, ಆರ್ಯವರ್ಧನ್, ದರ್ಶ್

ನವೀನರು
ನಟಿ ಮಯೂರಿ
ನವಾಜ್
ದರ್ಶ್ ಚಂದ್ರಪ್ಪ
ನಟಿ ಅಮೂಲ್ಯ ಗೌಡ
ವಿನೋದ್ ಗೊಬ್ರಗಾಲ 
ನಟಿ ನೇಹಾ ಗೌಡ
ಬೈಕರ್ ಐಶ್ವರ್ಯ ಪಿಸೆ
ರೂಪೇಶ್ ರಾಜಣ್ಣ
ನಟಿ ಕಾವ್ಯಶ್ರೀ ಗೌಡ

Follow Us:
Download App:
  • android
  • ios