ವಿಭಿನ್ನವಾಗಿ ಏನಾದರೂ ಪ್ರಯತ್ನ ಮಾಡಬೇಕೆಂದು ಕಣ್ಣಿಗೆ ಬಟ್ಟೆ ಕಟ್ರೊಂಡು ಮೇಕಪ್ ಮಾಡಿಕೊಂಡ ವೈಷ್ಣವಿ. ಮುಖ ನೋಡಿಕೊಳ್ಳಬೇಡಿ ಎಂದ ನೆಟ್ಟಿಗರು... 

ಅಗ್ನಿಸಾಕ್ಷಿ (Agnishakshi) ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನೆ ಮಗಳಾಗಿ, ಸೊಸೆಯಾಗಿ ಹೆಸರು ಮಾಡಿದ ವೈಷ್ಣವಿ (Vaishnavi) ಇದೀಗ ಹೊಸ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ. ಅದುವೇ ಕಣ್ಣು ಮುಚ್ಚಿಕೊಂಡು ಮೇಕಪ್ ಮಾಡಿಕೊಳ್ಳುವುದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಅಗಲು ಕಾರಣವೇ ವೈಷ್ಣವಿಯ ಪ್ರಾಮಾಣಿಕತೆ. ಯಾವುದೇ ರೀತಿಯೂ ವಂಚಿಸಿಕೊಳ್ಳದೇ ಮೇಕಪ್ ಮಾಡಿಕೊಂಡು ಕೊನೆಯಲ್ಲಿ ತಮಗೆ ತಾವೇ ಅಸಹ್ಯ ಮೇಕಪ್ ಎಂದು ಕರೆದುಕೊಂಡಿದ್ದಾರೆ. 

ಹೌದು! ಬಿಗ್ ಬಾಸ್ ಸೀಸನ್ 8ರಲ್ಲಿ (Bigg Boss Kannada) ಕಾಣಿಸಿಕೊಂಡ ನಂತರ ಸನ್ನಿಧಿ ಅಲ್ಲ ರಿಯಲ್ ವೈಷ್ಣವಿ ಯಾರು ಎಂದು ಎಲ್ಲರಿಗೂ ತಿಳಿಯಿತು. ಅವರ ಜನಪ್ರಿಯತೆ ಕೂಡ ಹೆಚ್ಚಾಯಿತು. ಹೀಗಾಗಿ ಬಿಬಿಯಿಂದ ಹೊರ ಬಂದ ನಂತರ ಸೋಷಿಯಲ್ ಮೀಡಿಯಾದಲ್ಲಿ ಸ್ವಲ್ಪ ಆ್ಯಕ್ಟಿವ್ ಆಗಿ ಯುಟ್ಯೂಬ್ ಚಾನೆಲ್ (Youtube channel) ಆರಂಭಿಸಿದ್ದಾರೆ. ಸದಾ ಮೇಕಪ್, ಅಡುಗೆ, ಯೋಗ ಮತ್ತು ಫೋಟೋಶೂಟ್‌ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡು ವೀಕ್ಷಕರಿಗೆ ಬೋರ್ ಮಾಡುವುದು ಬೇಡ, ಎಂದು ವಿಭಿನ್ನವಾಗಿ ಕಣ್ಣು ಮುಚ್ಚಿಕೊಂಡು ಮೇಕಪ್ ಮಾಡಿಕೊಂಡಿದ್ದಾರೆ. 

ಕಣ್ಣು ಮುಚ್ಚಿಕೊಂಡು ವೈಷ್ಣವಿ ಮೊದಲು ಫೌಂಡೇಶನ್ (Foundation) ಹುಡುಕುತ್ತಾರೆ. ಸಾಮಾನ್ಯವಾಗಿ ಎರಡು ಫೌಂಡೇಶನ್ ಮಿಕ್ಸ್ ಮಾಡಿಕೊಂಡು ಬಳುಸುವೆ. ಆದರೆ ಇವತ್ತು ಆ ರಿಸ್ಕ್ ಬೇಡ ಎಂದು ಒಂದನ್ನು ಬಳಸಿದ್ದಾರೆ. ಫೌಂಡೇಶನ್‌ ಮುಖಕ್ಕೆ ಹಚ್ಚಿಕೊಂಡ ನಂತರ ಅದನ್ನು blend ಮಾಡಲು ಬ್ರಶ್ ಹುಡುಕುತ್ತಾರೆ. ಐದಾರು ಬ್ರಶ್‌ ಕೈಗೆ ಸಿಗುತ್ತದೆ. ಅದರಲ್ಲಿ ಸರಿಯಾದ ಬ್ರಶ್ (Brush) ಆಯ್ಕೆ ಮಾಡಿಕೊಂಡು ಮೇಕಪ್ ಶುರು ಮಾಡುತ್ತಾರೆ. 

Tarot Card: ಬಿಗ್ ಬಾಸ್ ವೈಷ್ಣವಿ ಗೌಡ ಮದುವೆ ದಿನಾಂಕ ರಿವೀಲ್?

ಈಗಿನ ಟ್ರೆಂಡ್‌ನಲ್ಲಿ ಐ ಬ್ರೋ (Eye Brow) ಬರೆದುಕೊಳ್ಳುವುದು ತುಂಬಾನೇ ಕಾಮನ್. ಹೀಗಾಗಿ ಅದಕ್ಕೂ ಒಂದು ಬ್ರಶ್ ಬಳಸಿಕೊಂಡು ಬರೆಯಲು ಶುರು ಮಾಡುತ್ತಾರೆ. ಆದರೆ ಅದು ನೋಡದೇ ತೀಡಿಕೊಳ್ಳಲು ಯತ್ನಿಸಿದ ಕಾರಣ ಹಣೆಯ ಮೇಲೆ ಮಾರ್ಕ್ ಆಗುತ್ತದೆ. ದೊಡ್ಡ Eye Shadow ಪ್ಯಾಲೇಟ್‌ ತೆಗೆದುಕೊಂಡು ಕಣ್ಣಿನ ಮೇಲೆ ಹಾಕಿಕೊಳ್ಳಲು ಶುರು ಮಾಡಿದಾಗ ಬಣ್ಣ ತಿಳಿಯುವುದಿಲ್ಲ. ಸಣ್ಣದಾಗಿ ಕಣ್ಣು ತೆರೆಯಲು ಪ್ರಯತ್ನ ಪಟ್ಟಾಗ ಕ್ಯಾಮೆರಾ ಹಿಂದಿರುವವರು ಜೋರಾಗಿ ಕೂಗಲು ಶುರು ಮಾಡುತ್ತಾರೆ. ಆದರೂ ಹೇಗೋ ಒಂದು ಪಿಂಕ್ ಮತ್ತು ಪರ್ಪಲ್ ಅನ್ನು ಮಿಕ್ಸ್ ಮಾಡಿ ಹಚ್ಚಿಕೊಳ್ಳುತ್ತಾರೆ. 

ಕಣ್ಣು ತೆರೆದಿರುವಾಗಲೇ Eye Liner ಹಾಕಿಕೊಳ್ಳುವುದು ಕಷ್ಟ. ಒಂದು ಕಣ್ಣಿಗೆ ಸರಿ ಬಂದರೆ ಮತ್ತೊಂದು ಕಣ್ಣಿಗೆ ಬೇರೆ ದಿಕ್ಕು ಹಿಡಿದಿರುತ್ತದೆ. ರಿಸ್ಕ್‌ ಬೇಡ ಎಂದು ವೈಷ್ಣವಿ ಸಣ್ಣದಾಗಿ ಐ ಲೈನರ್ ಬಳಸುತ್ತಾರೆ. Blush ಬಳಸುತ್ತಾರೆ ಹಾಗೇ ಲಿಪ್‌ಸ್ಟಿಕ್‌ ಹಾಕಿಕೊಳ್ಳುತ್ತಾರೆ. ಕಣ್ಣು ಮುಚಿಕೊಂಡಿರುವ ಕಾರಣ ಯಾವ್ದೋ ಬಣ್ಣದ ಲಿಪ್‌ಸ್ಟಿಕ್ ಹಾಕಿಕೊಳ್ಳುತ್ತಾರೆ. ಎಲ್ಲಾ ಆಯ್ತು ಅಂದುಕೊಂಡು ಕಣ್ಣು ತೆರೆದು ನೋಡಿ, ಶಾಕ್ ಆಗುತ್ತಾರೆ.

Niveditha Gowda Love Story:ಬಿಗ್ ಬಾಸ್‌ ವೈಷ್ಣವಿ ಜೊತೆ ಲವ್ ಸ್ಟೋರಿ ಹಂಚಿಕೊಂಡ ನಿವಿ!

'ಅಯ್ಯೋ ಇಷ್ಟೊಂದು ಬಳ್ಕೊಂಡಿದ್ದೀನಿ. ಕೈಗೆ ಏನೋ ಸಿಗ್ತು ಅಂತ ಚೆನ್ನಾಗಿ ಮಾಡಿಕೊಂಡಿದ್ದೀನಿ ನೋಡಿ. ತುಂಬಾ ಅಸಹ್ಯವಾಗಿ ಮಾಡಿಕೊಂಡಿದ್ದೀನಿ ನಾನು. ನನ್ನ ಪ್ರಮಾಣಿಕ ಪ್ರಯತ್ನಕ್ಕೆ ಎಲ್ಲರೂ ಎಷ್ಟು ಅಂಕ ಕೊಡುತ್ತಾರೆ ನೋಡೋಣ. ನನ್ನ ನೋಡಿಕೊಳ್ಳುವುದಕ್ಕೆ ನನಗೇ ನಗು ಬರುತ್ತಿದೆ. ಈ ವಿಡಿಯೋ ನೋಡಿ ನೀವು ಕೂಡ ಇದೇ ರೀತಿ ನಗುತ್ತೀರಿ' ಎಂದು ವೈಷ್ಣವಿ ಮಾತನಾಡಿದ್ದಾರೆ.