Tarot Card: ಬಿಗ್ ಬಾಸ್ ವೈಷ್ಣವಿ ಗೌಡ ಮದುವೆ ದಿನಾಂಕ ರಿವೀಲ್?
ಟ್ಯಾರೋ ಕಾರ್ಡ್ ಮೂಲಕ ನಟಿ ವೈಷ್ಣವಿ ಗೌಡ ತಮ್ಮ ಮದುವೆ ದಿನಾಂಕ ಮತ್ತು ಹುಡುಗ ಹೇಗಿರಲಿದ್ದಾನೆ ಎಂದು ರಿವೀಲ್ ಮಾಡಿದ್ದಾರೆ.
ಅಗ್ನಿಸಾಕ್ಷಿ ಮತ್ತು ಬಿಗ್ ಬಾಸ್ ಸೀಸನ್ 8ರ ಮೂಲಕ ಜನಪ್ರಿಯತೆ ಪಡೆದ ವೈಷ್ಣವಿ ಗೌಡ ಟ್ಯಾರೋ ಕಾರ್ಡ್ ರೀಡಿಂಗ್ ವಿಡಿಯೋವನ್ನು ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಜಯಶ್ರೀ ಹೆಸರಿನ ಟ್ಯಾರೋ ಕಾರ್ಡ್ ರೀಡರ್ ಅವರು ವೈಷ್ಣವಿ ಅವರ ಮದುವೆ 8 ದಿನ ಅಥವಾ 8 ವಾರ ಅಥವಾ 8 ತಿಂಗಳಲ್ಲಿ ನಡೆಯಲಿದೆ ಎಂದಿದ್ದಾರೆ.
ಮದುವೆ ಹೊಸ ಸಂಬಂಧ ಆಗಿದ್ದು ತುಂಬಾನೇ ಸಿಂಪಲ್ ಹುಡುಗ ಆಗಿರಲಿದ್ದಾನಂತೆ. ವೃಷ್ಣವಿ ಅವರ ಮನಸ್ಥಿತಿ ಹೊಂದಿಕೊಳ್ಳುವ ಹುಡುಗ ಆಗಿರುತ್ತಾನಂತೆ.
'ನಿಮ್ಮ ಮದುವೆ ವಿಚಾರದಲ್ಲಿ ತುಂಬಾನೇ ಕಾಂಪಿಟೇಷನ್ ಇರಲಿದೆ. ತುಂಬಾ ಹುಡುಗರು ಬರಲಿದ್ದಾರೆ' ಎಂದು ಜಯಶ್ರೀ ಅವರು ಹೇಳಿದ್ದಾರೆ.
'ನೀವು ಒಳ್ಳೆಯ ಮ್ಯಾಚ್ ಹುಡುಕುತ್ತೀರಿ, ಅವರು ನಿಮ್ಮ ಜೊತೆ ವಿದೇಶ ಪ್ರಯಾಣ ಮಾಡಲಿದ್ದಾರೆ. ನೀವು ಮದುವೆ ಆದ್ಮೇಲೂ ಕೆಲಸದಲ್ಲಿ ಬ್ಯುಸಿಯಾಗಿರುತ್ತೀರಿ' ಎಂದಿದ್ದಾರೆ.
'ನೀವು ಆಯ್ಕೆ ಮಾಡಿಕೊಳ್ಳುವ ಹುಡುಗ ತುಂಬಾನೇ ಬ್ಯುಟಿಪುಲ್ ಆಗಿರುತ್ತಾರೆ. ಮದುವೆ ನಿಮ್ಮ ಜೀವನದಲ್ಲಿ ಹೊಸ ಆರಂಭ ತರಲಿದೆ. ನಿಮ್ಮ ಜೀವನವನ್ನು ಮತ್ತೊಂದು ರೀತಿಯಲ್ಲಿ ಬದಲಾಯಿಸುತ್ತಾರೆ' ಎಂದಿದ್ದಾರೆ.