Niveditha Gowda Love Story:ಬಿಗ್ ಬಾಸ್ ವೈಷ್ಣವಿ ಜೊತೆ ಲವ್ ಸ್ಟೋರಿ ಹಂಚಿಕೊಂಡ ನಿವಿ!
ವೈಷ್ಣವಿ ಯುಟ್ಯೂಬ್ ಚಾನೆಲ್‌ನಲ್ಲಿ ಲವ್ ಸ್ಟೋರಿ ಹಂಚಿಕೊಂಡ ಬಾರ್ಬಿ ಡಾಲ್. ಮೊದಲು ಪ್ರಪೋಸ್ ಮಾಡಿದ್ದು ಯಾರು ಗೊತ್ತಾ?
ಬಿಗ್ ಬಾಸ್ ವೈಷ್ಣವಿ ಗೌಡ ಯುಟ್ಯೂಬ್ ಚಾನೆಲ್‌ನಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ. ಯಾರಿಗೂ ಗೊತ್ತಿರದ ಲವ್ ವಿಚಾರವನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್‌ನಲ್ಲಿ ನಿವಿ ಮತ್ತು ಚಂದನ್ ಕಾಂಬಿನೇಷನ್ ವೀಕ್ಷಕರಿಗೆ ಇಷ್ಟವಾಗಿತ್ತು. ಹೊರ ಬಂದ ನಂತರವೂ ಇವರಿಬ್ಬರ ಸ್ನೇಹದ ಬಗ್ಗೆ ಮಾತನಾಡುತ್ತಿದ್ದರಂತೆ.
ಚಂದನ್ ಮತ್ತು ನಿವಿ ಸ್ನೇಹಿತರಾಗಿದ್ದರೂ ಮದುವೆ ಮಾಡಿಕೊಳ್ಳಿ ಎಂದು ನೆಟ್ಟಿಗರು ಅಡ್ವಾಸ್ ಮಾಡಿದ್ದರಂತೆ. ಹೀಗಾಗಿ ನಾವಿಬ್ಬರು ಇದರ ಬಗ್ಗೆ ಥಿಂಕ್ ಮಾಡಿದೆವು ಎಂದಿದ್ದಾರೆ.
ಚಂದನ್ ಶೆಟ್ಟಿ ಮೊದಲು ಪ್ರಪೋಸ್ ಮಾಡಿದ್ದು. ನಿವಿಗೆಂದು ಹಾಡು ಬರೆದು ಪ್ರಪೋಸ್ ಮಾಡಿದ್ದರಂತೆ. ಈ ವಿಚಾರ ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ.
ನಿವಿ ಲವ್ ಒಪ್ಪಿಕೊಂಡ ನಂತರ ಪೋಷಕರ ಜೊತೆ ಹಂಚಿಕೊಂಡಿದ್ದಾರೆ. ಆ ನಂತರ ಮೈಸೂರು ಯುವ ದಸರಾದಲ್ಲಿ ಚಂದನ್ ಮತ್ತೊಮ್ಮೆ ಪ್ರಪೋಸ್ ಮಾಡಿದ್ದಾರೆ.
ಮೈಸೂರಿನಲ್ಲಿ ಪ್ರಪೋಸ್ ಮಾಡಿದ ಕೆಲವೇ ದಿನಗಳಲ್ಲಿ ಇಬ್ಬರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಿತ್ರರಂಗ ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ದರಂತೆ.