ಬಿಗ್ ಬಾಸ್‌ ಸೀಸನ್-7 ರಲ್ಲಿ ಸ್ಪರ್ಧಿಗಳು ಆಟವನ್ನು ಸ್ಪರ್ಧೆಯಾಗಿ ಸ್ವೀಕರಿಸುತ್ತಿಲ್ಲ. ಅವರದ್ದೇ ಲೋಕದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಪ್ರೇಕಕ್ಷರು ಅಲ್ಲೊಮ್ಮೆ ಇಲ್ಲೊಮ್ಮ ಮಾತನಾಡುತ್ತಿದ್ದರು. ಏನಾದ್ರೂ ಡಿಫರೆಂಟ್ ಆಗಿ ಕ್ರಿಯೇಟ್‌ ಮಾಡಿ ಜನರನ್ನು ಮನೋರಂಜಿಸಬೇಕು ಹಾಗೂ ಸ್ಪರ್ಧಿಗಳನ್ನು ಲವಲವಿಕೆಯಿಂದ ಇಡಬೇಕು ಎಂದೇ ತೀರ್ಮಾನಿಸಿ ಈ ವಾರದ ಲಕ್ಷುರಿ ಟಾಸ್ಕ್‌ ನಿರ್ಧರಿಸಿದ್ದಾರೆ ಅನಿಸುತ್ತದೆ.

BB7: ಕಿರುತೆರೆಯ ರಾಣಿ ಚಂದನ ಅನಂತಕೃಷ್ಣಗೆ ನಿಜ್ವಾಗ್ಲೂ ಲವ್‌ ಆಗಿದ್ಯಾ?

 

ಹೌದು! ಬಿಗ್ ಬಾಸ್ ನೀಡಿದ 'ಕೊಳದಲ್ಲಿ ಮೇಲ್ಯಾವುದೋ' ಟಾಸ್ಕ್‌ನಲ್ಲಿ ಎರಡು ತಂಡದವರಲ್ಲಿ ಒಬ್ಬರು ಖಾಲಿ ಟ್ಯಾಂಕ್‌ಗೆ ನೀರು ತುಂಬಿಸಿ ಜಯ ಶಾಲಿ ಆಗುತ್ತಾರೋ ಅವರು ಅರಮನೆ ಸೇರುತ್ತಾರೆ. ಸೋತವರು ಮನೆ ಹೊರಗಡೆ ನಿರ್ಮಾಣವಾಗಿರುವ ಸಣ್ಣ ಮನೆ ಸೇರುತ್ತಾರೆ. ಆಟದಲ್ಲಿ ಜಗಳ ಶುರುವಾಗಿ ಎರಡು ತಂಡಗಳ ಟ್ಯಾಂಕ್ ಮುರಿದು ನೀರು ಹೊರ ಬಂದಿದ್ದು ಇದನ್ನು ಗಮನಿಸಿದ ಬಿಗ್ ಬಾಸ್ ಟಾಸ್ಕನ್ನು ನೀಡಿದ್ದರು. ಆ ನಂತರ ನಂಬರ್ ಟಾಸ್ಕ್ ನೀಡುವ ಮೂಲಕ ಮನೆಯೊಳಗೆ ಹೋಗಲು ಸಿಡಿಲು ತಂಡ ಪ್ರವೇಶ ಪಡೆಯಿತು.

'ದುನಿಯಾ' ರಶ್ಮಿ ದರ್ಬಾರ್; ಇಷ್ಟೊಂದು ಸಣ್ಣ ಆಗಲು ಕಾರಣವೇನು?

ಫುಲ್ ಗರಂ ಆಗಿದ್ದ ಸ್ಪರ್ಧಿಗಳನ್ನು ಮನರಂಜಿಸಬೇಕೆಂದು ಮನೆಗೆ ಕನ್ನಡ ಚಿತ್ರರಂಗದ ಖ್ಯಾತ ಗಾಯಕ ಗುರುಕಿರಣ್ ಬಂದಿದ್ದರು. ಹಾಡೇಳಿ ಸ್ಪರ್ಧಿಗಳನ್ನು ಎಂಟರ್‌ಟೇನ್ ಮಾಡಿದ್ದರು. ಆದರೆ ಇದರಲ್ಲಿ ಭಾಗಿಯಾಗಿದ್ದು ಮಾತ್ರ ಮನೆಯೊಳಗೆ ಇರುವ ಸಿಡಿಲು ತಂಡ. ಗುರುಕಿರಣ್ ಮನೆಯವರನ್ನು ರಂಜಿಸಿ ಸ್ಪರ್ಧಿಗಳೊಂದಿಗೆ ಒಳ್ಳೆಯ ಸಮಯ ಕಳೆದರು. ಆದರೆ ತಾಂತ್ರಿಕ ತೊಂದರೆಯಿಂದ ಎಪಿಸೋಡ್‌ನಲ್ಲಿ ತೋರಿಸುತ್ತಿದ್ದ ದೃಶ್ಯಕ್ಕೂ ಮಾತಿಗೂ ಲಿಪ್ ಸಿಂಕ್ ಆಗುತ್ತಿರಲಿಲ್ಲ. ಇದನ್ನು ನೋಡುತ್ತಿದ್ದ ಪ್ರೇಕ್ಷಕರಿಗೆ ಕೊಂಚ ಕಸಿವಿಸಿ ಆಗಿತ್ತು. ಅಷ್ಟೇ ಅಲ್ಲದೆ ಇದು ಕೆಲ ಟ್ರೋಲ್ ಪೇಜ್‌ಗೆ ಆಹಾರವಾಗಿತ್ತು.

ಬಿಗ್ ಬಾಸ್ ಸ್ಟೈಲ್‌ವಾಲಿ; ರಿಯಲ್ ಲೈಫ್‌ನಲ್ಲಿ ಯಾಕಿಂಗೆ?