ಬಿಗ್ ಬಾಸ್‌ ಮನೆ ಹಿರಿಯಣ್ಣ ಜೈ ಜಗದೀಶ್ ಅವರ ಆಟ ಹಾಗೂ ಮಾತಿನ ಬಗ್ಗೆ ಪುತ್ರಿ ವೈಭವಿ ಸ್ಪಷ್ಟನೆ ನೀಡಿದ್ದು, ಅಪ್ಪ ನಾನ್‌ಸೆನ್ಸ್‌ ವ್ಯಕ್ತಿಯಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಇತರೆ ಸ್ಪರ್ಧಿಗಳ ವಿರುದ್ಧವೂ ಗರಂ ಆಗಿದ್ದಾರೆ. ಅಷ್ಟಕ್ಕೂ ಮನೆಯೊಳಗೆ ನಡೆದಿದ್ದು ಏನು? ಈ ಹಿರಿ ನಟನ ಮಗಳು ಆಕ್ರೋಶಗೊಂಡಿದ್ದೇಕೆ ನೀವೇ ಓದಿ...

ಮೊದಲ ಹೆಂಡತಿ ಮಗಳ ನೆನೆದು ಕಣ್ಣೀರಿಟ್ಟ ಜೈಜಗದೀಶ್, 'ವಿಷ್ಣು ಮನೆಯಲ್ಲೇ ಇದ್ದೆ'

ಮನುಷ್ಯ ಸದಾ ಮುಖವಾಡ ಹಾಕಿಯೇ ಬದುಕುವುದು. ಆ ಮುಖವಾಡ ಕಳಚಬೇಕಾದ ಸಂದರ್ಭ ಬಂದಾಗ ಒದ್ದಾಡಿ ಬಿಡುತ್ತಾನೆ. ಅದರಲ್ಲಿಯೂ ತಾನು ಸಂಭಾವಿತನಲ್ಲದಿದ್ದರೂ ತಾನು ಬಹಳ ಒಳ್ಳೆಯ ವ್ಯಕ್ತಿತ್ವವುಳ್ಳವನು ಎಂಬುದನ್ನು ತೋರಿಸಲು ಆತನಿಗೆ ಎಲ್ಲಿಲ್ಲದ ಉತ್ಸಾಹ. ಆದರೆ, ಎಷ್ಟು ದಿನ ಅಂತ ಒಂದೇ ಕಡೆ ಮುಖವಾಡ ಧರಿಸಿಕೊಂಡು ಬದುಕುವುದು ಹೇಳಿ? ಅದರಲ್ಲಿ ಬಿಗ್ ಬಾಸ್‌ನಂಥ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳ ಒಳ ಮನಸ್ಸು ಒಂದು ರೀತಿಯಲ್ಲಿ ಕಳಚಿಯೇ ಕಳಚುತ್ತೆ.

ಒಂದು ವಾರ ಬಿಗ್ ಬಾಸ್ ಮನೆಯಲ್ಲಿದ್ದ ಬೆಳಗೆರೆ ಪಡೆದುಕೊಂಡ ಗೌರವಧನ?

ಈಗಾಗಲೇ ಬಹುತೇಕ ಎರಡು ವಾರಗಳನ್ನು ಪೂರೈಸಿದ ಬಿಗ್‌ಬಾಸ್‌ನಲ್ಲಿ ವಿಭಿನ್ನ ವ್ಯಕ್ತಿತ್ವವುಳ್ಳ ಹಲವರು ಒಂದೇ ಮನೆಯಲ್ಲಿ ಬಂಧಿಯಾಗಿದ್ದಾರೆ. ದಿನ ಕಳೆದಂತೆ ತಮ್ಮ ಅಸಲೀ ಮುಖಗಳನ್ನೂ ತೋರಿಸಲು ಆರಂಭಿಸಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಕೆಲವು ದಿನಗಳ ಹಿಂದೆ ಹಿರಿಯಣ್ಣ ಜೈ ಜಗದೀಶ್ ಹಾಗೂ ಡ್ಯಾನ್ಸರ್ ಕಿಶನ್ ನಡುವೆ ವಾಕ್ಸಮರ ನಡೆದಿತ್ತು. ಬೇರೆಯವರೊಂದಿಗೆ ಕೆಟ್ಟದಾಗಿ ಮಾತನಾಡುವುದು ಹಾಗೂ ಅವರನ್ನು ಕೆಲವು ಕೆಟ್ಟ ಬದಗಳಿಂದ ಬೈಯುವ ಬಗ್ಗೆ ಆರೋಪಿಸಿದ ಕಿಶನ್ ಮೇಲೆ ಜಗದೀಶ್ ಗರಂ ಆಗಿದ್ದರು.

ರವಿ ಹೊರಬಂದ ಮೇಲೆ ಮನೆಯಲ್ಲಿ ಕಿತ್ತಾಟ ಶುರು, ನಾಮಿನೇಶನ್ ಬಲೆಗೆ ಯಾರೆಲ್ಲ?

ಇದಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಜೈ ಜಗದೀಶ್ ನಡವಳಿಕೆ ಬಗ್ಗೆ ವಿಪರೀತ ಚರ್ಚೆ ನಡೆದಿತ್ತು. ಇದನ್ನು ಗಮನಿಸಿದ ಜಗದೀಶ್ ಪುತ್ರಿ ವೈಭವಿ 'Appa, we are proud of you. ನೀವು ನಾನ್‌ಸೆನ್ಸ್‌ ವ್ಯಕ್ತಿ ಅಲ್ಲ. ಆಡಂಬರದ ವ್ಯಕ್ತಿಯೂ ಅಲ್ಲ. ನೇರ ಮಾತನಾಡುವವರು, ಎಲ್ಲರಿಗೂ ಇಂಥ ವ್ಯಕ್ತಿಯೇ ಬೇಕು ಅಲ್ವಾ? ನಮ್ಮ ಪ್ರೋತ್ಸಾಹ ನಿಮಗಿದೆ. ಪ್ಲೇ ವೆಲ್, ಪ್ಲೇ ಸ್ಟ್ರಾಂಗ್... ' ಎಂದು ತಮ್ಮ ಫೇಸ್‌ ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

ಇನ್ನು ಬಿಗ್‌ಬಾಸ್‌ ಮನೆಯಲ್ಲಿ 'ಒಬ್ಬರಿಗೆ ಸಾರಿ' ಕೇಳುವ ಟಾಸ್ಕ್‌ ಇತ್ತು, ಜಗದೀಶ್ ತಮ್ಮ ಜೀವನದ ನೋವಿನ ಕಥೆ ಹೇಳಿಕೊಂಡಿದ್ದಾರೆ ಅವರ ಮೊದಲ ಮದುವೆ, ಹಿರಿಯ ಪುತ್ರಿ ಅರ್ಪಿತಾಳ ಬಗ್ಗೆಯೂ ಮಾತನಾಡಿದ್ದಾರೆ. ಒಟ್ಟಿನಲ್ಲಿ ಒಂದೇ ಮನೆಯಲ್ಲಿ ದೊಡ್ಡ ದೊಡ್ಡ ಮಂದಿ ಮಲಗಿದ್ದು, ನಿದ್ದೇಲಿ ಡೌಟ್, ಎದ್ದಾಗ ಫೈಟ್ ಅಗುವ ಲಕ್ಷಣಗಳು ಕಾಣುತ್ತಿವೆ.