ರವಿ ಹೊರಬಂದ ಮೇಲೆ ಮನೆಯಲ್ಲಿ ಕಿತ್ತಾಟ ಶುರು, ನಾಮಿನೇಶನ್ ಬಲೆಗೆ ಯಾರೆಲ್ಲ?
ಬಿಗ್ ಬಾಸ್ ಮನೆಯಲ್ಲಿ ಶುರುವಾದ ಕಿಡಿ/ ಜೈಜಗದೀಶ್ ಮತ್ತು ಡ್ಯಾನ್ಸರ್ ಕಿಶನ್ ನಡುವೆ ವಾಕ್ಸಮರ/ 2ನೇ ವಾರದ ನಾಮಿನೇಶನ್ ಗೆ ಸಿಕ್ಕಿಹಾಕಿಕೊಂಡವರು ಯಾರು?

ಬಿಗ್ ಬಾಸ್ ಮನೆಯಲ್ಲಿ ನಿಧಾನವಾಗಿ ಬೆಂಕಿ ಕಾಣಿಸಿಕೊಂಡಿದೆ. ಬಿಗ್ ಬಾಸ್ ಹಾಕಿದ ಕಪ್ಪು ಚುಕ್ಕೆ ಗೇಮ್ ಎಲ್ಲವನ್ನು ಒಂದೊಂದಾಗಿ ಬದಲಾಯಿಸುತ್ತಿದೆ. ಈ ಮದ್ಯೆ ಎರಡನೇ ವಾರದ ನಾಮಿನೇಶನ್ ಸಹ ನಡೆದು ಹೋಗಿದೆ.
ಚಿಕಿತ್ಸೆ ಪಡೆದುಕೊಂಡು ಮನೆಗೆ ಹಿಂದೆ ಬಂದಿರುವ ಕಿಶನ್ ಮತ್ತು ಮತ್ತು ಹಿರಿಯ ಜೈಜಗದೀಶ್ ನಡುವೆ ವಾಕ್ಸಮರ ನಡೆದಿದೆ. ನೀವು ಕೆಟ್ಟ ಭಾಷೆಯಲ್ಲಿ ಉಳಿದವರನ್ನು ಬೈಯುತ್ತೀರಿ ಎಂದು ಮಾಡಿದ ಆರೋಪಕ್ಕೆ ಜೈಜಗದೀಶ್ ಗರಂ ಆಗಿಯೇ ಉತ್ತರ ನೀಡಿದರು .
ಎರಡನೇ ವಾರದ ನಾಮಿನೇಶನ್ ಬಲೆಗೆ ಚೈತ್ರಾ ವಾಸುದೇವನ್, ಚೈತ್ರಾ ಕೊಟ್ಟೂರು, ಸುಜಾತಾ, ದೀಪಿಕಾ ಬಿದ್ದರು. ಇದರ ಜತೆಗೆ ಗುರುಲಿಂಗ ಸ್ವಾಮೀಜಿ ಅವರಿಂದ ನೇರವಾಗಿ ನಾಮಿನೇಟ್ ಆದ ಚಂದನ್ ಆಚಾರ್ ಮತ್ತು ಕ್ಯಾಪ್ಟನ್ ರಶ್ಮಿ ಅವರಿನಂದ ಪ್ರಿಯಾಂಕಾ ನೇರವಾಗಿ ನಾಮಿನೇಟ್ ಆದರು.
ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ಚಂದನ್ ಆಚಾರ್, ಪ್ರಿಯಾಂಕಾ ಮತ್ತು ರಶ್ಮಿ ಪಾಲ್ಗೊಂಡಿದ್ದರು. ಇದರಲ್ಲಿ ಗೆದ್ದ ರಶ್ಮಿ ಎರಡನೇ ವಾರದ ನಾಯಕರಾಗಿ ಆಯ್ಕೆಯಾದರು. ಬಿಗ್ ಬಾಸ್ ಮನೆಯಲ್ಲಿ ಕಪ್ಪು ಚುಕ್ಕೆ ಟಾಸ್ಕ್ ನಡೆಯುತ್ತಿದ್ದು ಎಲ್ಲರಿಗೂ ಬಿಗ್ ಬಾಸ್ ಪತ್ರಗಳನ್ನು ರವಾನೆ ಮಾಡಿದ್ದಾರೆ. ಮನೆಯೊಳಗೆ ಕಪ್ಪು ಚುಕ್ಕೆಯೊಂದಿದ್ದು ಅದನ್ನು ಗುರುತು ಮಾಡಿದರೆ ಈ ವಾರದ 10 ಸಾವಿರ ಪಾಯಿಂಟ್ಸ್ ಲಕ್ಸುರಿ ಟಾಸ್ಕ್ ನೀವು ಗೆದ್ದ ಹಾಗೆ ಎಂದು ಮನೆ ಮಂದಿಗೆ ಸವಾಲೊಂದನ್ನು ಬಿಗ್ ಬಾಸ್ ಮುಂದಿಟ್ಟಿದ್ದಾರೆ.
ಚೈತ್ರಾ ಕೊಟ್ಟೂರು ಅವರು ಕವನವೊಂದನ್ನು ಬರೆದು ಅದನ್ನು ಶೈನ್ ಶೆಟ್ಟಿಯವರ ಬ್ಯಾಗ್ ನಲ್ಲಿ ಇಟ್ಟರು. ಇದು ಮರುದಿನ ಗೊತ್ತಾಗಿ ಒಬ್ಬೊಬ್ಬರ ಕೈಯಲ್ಲಿ ಹರಿದಾಡಿತು. ಚೈತ್ರಾ ತಾವು ಬರೆದಿಲ್ಲ ಎಂದು ವಾದಿಸಿದರು.