ಫೆ.24ರಿಂದ ಸೋಮ​ವಾ​ರ​ದಿಂದ ಶುಕ್ರ​ವಾ​ರದ ವರೆಗೆ ಪ್ರತಿ ರಾತ್ರಿ 8 ಗಂಟೆಗೆ ಪರದೆ ಮೇಲೆ ಮೂಡ​ಲಿದೆ. ವಿಶೇಷ ಅಂದರೆ ಎರ​ಡನೇ ಸಂಚಿ​ಕೆಯ ನಿರೂ​ಪ​ಣೆ​ಯನ್ನು ಬಿಗ್‌​ಬಾಸ್‌ ಶೋನ ಸ್ಪರ್ಧಿ ಆಗಿದ್ದ ಚೈತ್ರಾ ಕೊಟ್ಟೂರು ನಿರ್ವ​ಹಿ​ಸ​ಲಿ​ದ್ದಾರೆ.

ಕೊಳಲೇನು ಪುಣ್ಯವ ಮಾಡಿತೋ 'ಹಾಡು ಕರ್ನಾಟಕ'ದ ವಾರಿಜಾಶ್ರೀ ಕೈ ಸೇರಿ!

ಜಗ​ದೀಶ್‌ ಭಾವೆ ಕಥಾ ಸಂಶೋ​ಧನೆ, ವಿನೋದ್‌ ದೊಡ್ಡ​ಹಾಳೆ ನಿರ್ದೇ​ಶನ ಹಾಗೂ ಡಾವೆಂಕಿ ಪರಿ​ಕ​ಲ್ಪ​ನೆಯ ಈ ಧಾರಾ​ವಾ​ಹಿ​ಗೆ ರಘು ಸಮ​ರ್ಥ, ಸುಜಯ್‌ ಹುಣ​ಸೂ​ರು, ನಿತ್ಯಾ ಲಕ್ಷ್ಮೀ ಪ್ರಹ್ಲಾದ. ಪವನ್‌ ಭಟ್‌, ಪ್ರಮೋದ್‌ ಮರ​ವಂತೆ ಚಿತ್ರ​ಕಥೆ ಇದೆ.

ಆರ್ಯವರ್ಧನ್‌ ಹುಟ್ಟುಹಬ್ಬ; ಪಬ್‌ನಲ್ಲಿ ಗಣ್ಯರ 'ಜೊತೆ ಜೊತೆಯಲಿ'!

ಕುಟುಂಬ ಸಮೇತ ಕುಳಿತು ನೋಡುವಂತಹ ಸತ್ಯಘಟನೆಗಳಿಂದ ಪ್ರೇರಿತ ಕತೆಗಳನ್ನು ಹೇಳುವ ಪ್ರಯತ್ನ ಈ ಧಾರಾ​ವಾ​ಹಿ​ಯದ್ದು. ಒಂದೊಂದು ಎಪಿ​ಸೋ​ಡ್‌ಗೂ ಕಲಾ​ವಿ​ದರು ಬದ​ಲಾ​ಗಲಿದ್ದು, ಪ್ರತಿ ಕಂತಿ​ನಲ್ಲೂ ಹೊಸ ಹೊಸ ತಾರೆ​ಗ​ಳನ್ನು ನೋಡಬಹುದು. ಮೊದಲ ಕತೆ ‘ಮಗಳು ಶಾರದೆ’. ಮನ ಕಲಕುವ ಕತೆಯಾ​ಗಿದ್ದು, ಮಹಿಳಾ ಹೋರಾಟಗಾರ್ತಿ ಆವಂತಿಕಾ ತನ್ನ ಕಾರಿನ ಚಾಲ​ಕನ ಮಗ​ಳನ್ನು ಮನೆ ಕೆಲ​ಸಕ್ಕೆ ಇಟ್ಟು​ಕೊಂಡಿ​ರು​ತ್ತಾಳೆ. ಆಕೆ ಆಕ​ಸ್ಮಿ​ಕ​ವಾಗಿ ಸಾವು ಕಾಣು​ತ್ತಾಳೆ. ಇದು ಯಾಕೆ ಎಂಬು​ದ​ರೊಂದಿಗೆ ಮೊದಲ ಎಪಿ​ಸೋಡ್‌ ಶುರು​ವಾ​ಗಲಿದೆ.