ಮೈಸೂರು(ಆ.28): ಕೋಲುಮಂಡೆ ಹಾಡಿನ ವಿವಾದದಲ್ಲಿ ಸಿಕ್ಕಿರುವ ರಾರ‍ಯಪರ್‌ ಚಂದನ್‌ ಶೆಟ್ಟಿಅವರ ವಿರುದ್ಧ ಅಂತಾರಾಷ್ಟ್ರೀಯ ಕಂಸಾಳೆ ಮಹದೇವಯ್ಯ ಕಲಾ ಸಂಘದ ಅಧ್ಯಕ್ಷ ಕಂಸಾಳೆ ರವಿ ಎಂಬುವರು ಉಪ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

ಕೋಲುಮಂಡೆ ಎಂಬ ಹಾಡಿನಲ್ಲಿ ಶಿವಶರಣೆ ಶಂಕಮ್ಮನನ್ನು ಅಶ್ಲೀಲವಾಗಿ ತೋರಿಸಿದ್ದು ತೀವ್ರ ನೋವುಂಟಾಗಿದೆ. ಇನ್ನು ಕೋಲುಮಂಡೆ ಹಾಡಿಗೆ ಸಾಕಷ್ಟುವಿರೋಧ ವ್ಯಕ್ತವಾದ ಹಿನ್ನೆಲೆ ಕ್ಷಮೆ ಕೋರಿ ಮರು ಚಿತ್ರೀಕರಣ ಮಾಡುವುದಾಗಿ ಚಂದನ್‌ ಶೆಟ್ಟಿಹೇಳಿದ್ದಾರೆ. ಈ ಹಾಡನ್ನು ಮರು ಚಿತ್ರೀಕರಣವೂ ಮಾಡಬಾರದು ಎಂದು ಕಂಸಾಳೆ ರವಿ ದೂರಿನಲ್ಲಿ ತಿಳಿಸಿದ್ದಾರೆ.

ರ್ಯಾಪರ್ ಚಂದನ್ ಶೆಟ್ಟಿ ಮಹದೇಶ್ವರನ ಕೋಲುಮಂಡೆ ಹಾಡನ್ನು ಚಿತ್ರೀಕರಿಸಿದ ರೀತಿ ಸಾಕಷ್ಟು ವಿವಾದಕ್ಕೆ ಈಡಾಗಿತ್ತು. ಶರಣೆ ಸಂಕವ್ವನನ್ನು ಅಶ್ಲೀಲವಾಗಿ ತೋರಿಸಿದ್ದಾರೆ ಎಂದು ಚಂದನ್ ಶೆಟ್ಟಿ ವಿರುದ್ಧ ಸಾಕಷ್ಟು ಪ್ರತಿಭಟನೆ ನಡೆದಿತ್ತು. 

ಕಾಸ್ಟ್ಯೂಮ್ ಇಮ್ಯಾಜಿನೇಷನ್ ತಪ್ಪಾಯ್ತು': ಕೋಲುಮಂಡೆ ಸಾಂಗ್ ಬಗ್ಗೆ ಚಂದನ್ ಹೇಳಿದ್ದಿಷ್ಟು.

ದೇವರ ಹಾಡನ್ನು ಈ ರೀತಿಯಾಗಿ ಚಿತ್ರೀಕರಿಸಿದ್ದು, ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತ್ತು. 

ಚಂದನ್ ಶೆಟ್ಟಿ ವಿವಾದಕ್ಕೆ ಸಿಲುಕುತ್ತಿರುವುದು ಇದೆ ಮೊದಲಲ್ಲ, ಇನ್ನು ಮೂರಿವೆ!

ಈಗಾಗಲೇ ಸಾಕಷ್ಟು ಕನ್ನಡ ರ್ಯಾಪ್ ಸಾಂಗ್‌ಗಳನ್ನು ಮಾಡಿರುವ ಚಂದನ್ ಶೆಟ್ಟಿ ಈ ಹಿಂದೆಯೂ ಕೆಲ ವಿವಾದಕ್ಕೆ ಒಳಗಾಗಿದ್ದು, ಮತ್ತೆ ಕೋಲುಮಂಡೆ ಹಾಡನ್ನು ಚಿತ್ರೀಕರಿಸಿ ವಿವಾದಕ್ಕೆ ಒಳಗಾಗಿದ್ದರು.