ಬಿಗ್ ಬಾಸ್ 20ರ ಹಲವು ಬದಲಾವಣೆ ಮೂಲಕ ಆರಂಭಗೊಳ್ಳುತ್ತಿದೆ. ವಿಶೇಷವಾಗಿ ಸ್ಪರ್ಧಿಗಳ ಎಲಿಮಿನೇಶನ್ ಪ್ರಕ್ರಿಯೆ ಸಂಪರ್ಣ ಬದಲಾಗುತ್ತಿದೆ. ಸ್ಪರ್ಧಿಗಳಿಗೆ ಜೀವದಾನದ ಆಯ್ಕೆ ನೀಡಲಾಗಿದೆ. ಏನಿದು ಹೊಸ ರೂಲ್ಸ್?
ಮುಂಬೈ (ಆ.12) ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ರಿಯಾಲಿಟಿ ಶೋ ಈ ಬಾರಿ ಕೆಲ ಬದಲಾವಣೆಯೊಂದಿಗೆ ಆರಂಭಗೊಳ್ಳುತ್ತಿದೆ. ಬಿಗ್ ಬಾಸ್ 20ನೇ ಆವೃತ್ತಿಯ ಟ್ರೇಲರ್ ರಿಲೀಸ್ ಮಾಡಲಾಗಿದೆ. ಈ ಟ್ರೇಲರ್‌ನಲ್ಲಿ ಬಿಗ್ ಬಾಸ್ ಆಟದ ಮನೆಯ ನಿಯಮವನ್ನೇ ಬದಲಿಸಲಾಗಿದೆ. ರೋಚಕತೆ, ಟ್ವಿಸ್ಟ್ ಕೊಡಲು ಸ್ಪರ್ಧಿಗಳ ಎಲಿಮಿನೇಶನ್ ಪ್ರಕ್ರಿಯೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಹೌದು, ಸಲ್ಮಾನ್ ಖಾನ್ ಹೋಸ್ಟ್ ಮಾಡುವ ಬಿಗ್ ಬಾಸ್ 20ನೇ ಆವೃತ್ತಿಯಲ್ಲಿ ಭಾರಿ ಬದಲಾವಣೆ ತರಲಾಗಿದೆ. ಈ ಬದಲಾವಣೆ ಕಿಚ್ಚ ಸುದೀಪ್ ಹೋಸ್ಟ್ ಮಾಡುವ ಕನ್ನಡದಲ್ಲೂ ಜಾರಿಯಾಗುವ ಸಾಧ್ಯತೆ ಇದೆ.
ಸ್ಪರ್ಧಿಗಳಿಗೆ ಜೀವದಾನ
ಬಿಗ್ ಬಾಸ್ 20ರಲ್ಲಿ ಹೊಸದಾಗಿ ಜೀವದಾನ ನಿಯಮ ಜಾರಿಗೆ ತರಲಾಗುತ್ತಿದೆ. ಇದರಿಂದ ಕೊನೆಯ ಕ್ಷಣದಲ್ಲಿ ಎಲಿಮಿನೇಶನ್ ಸ್ಪರ್ಧಿಗಿ ಒಂದು ಹೆಚ್ಚಿನ ಜೀವನದಾನ ಸಿಗಲಿದೆ. ಈ ಬದಲಾವಣೆ ಬಿಗ್ ಬಾಸ್ ಆಟದ ಮನೆಯ ಎಲಿಮಿನೇಶನ್ ಪ್ರಕ್ರಿಯೆಯನ್ನೇ ಬದಲಿಸಲಿದೆ.
ಟ್ರೇಲರ್ ಆರಂಭದಲ್ಲಿ ಯುದ್ಧ ಕಾಳಗವನ್ನು ತೋರಿಸಲಾಗಿದೆ. ರೋಚಕ ಯುದ್ಧದ ಕಾದಾಡುವ ದೃಶ್ಯದ ನಡುವೆ ಸಲ್ಮಾನ್ ಖಾನ್ ಎಂಟಿಕೊಡುತ್ತಾರೆ. ಯುದ್ಧವನ್ನು ದಿಢೀರ್ ತಡೆಯುವ ಸಲ್ಮಾನ್ ಖಾನ್, ಬಿಗ್ ಬಾಸ್‌ನಲ್ಲಿ ಸಿಗಲಿದೆ ಮೇರಿ ಜಾನ್, ಎಕ್ಸ್‌ಟ್ರಾ ಜೀವದಾನ್ ಎಂದಿದ್ದಾರೆ. ಈ ಮೂಲಕ ಹೊಸ ಆವೃತ್ತಿ ಹಲವು ಸರ್ಪ್ರೈಸ್‌ಗಳನ್ನು ನೀಡಲಿದೆ ಅನ್ನೋ ಸುಳಿವು ನೀಡಿದ್ದಾರೆ.
ಎಲಿಮಿನೇಶ್ ಟ್ವಿಸ್ಟ್
ಬಿಗ್ ಬಾಸ್ ಆಟದಲ್ಲಿ ಎಲಿಮಿನೇಶನ್ ಮೂಲಕ ಎಲಿಮಿನೇಟ್ ಆದ ಸ್ಪರ್ಧಿಯ ಆಟ ಕೊನೆಗೊಳ್ಳುತ್ತದೆ. ಆಧರೆ ಹೊಸ ನಿಯಮದಲ್ಲಿ ಎಲಿಮಿನೇಟ್ ಆಗೋ ಸ್ಪರ್ಧಿಗೆ ಎರಡನೇ ಅವಕಾಶವೊಂದು ಸಿಗಲಿದೆ. ಜೀವದಾನ ಮೂಲಕ ಸ್ಪರ್ಧಿ ಮತ್ತೆ ಆಟದಲ್ಲಿ ಮುಂದುವರಿಯುವ ಅವಕಾಶವನ್ನು ನೀಡಲಾಗುತ್ತದೆ. ಇದು ಎಲ್ಲಾ ಸ್ಪರ್ಧಿಗಳಿಗೂ ಇದೆಯಾ, ಅಥವಾ ಒಬ್ಬ ಸ್ಪರ್ಧಿಗೆ ಒಂದು ಬಾರಿ ಮಾತ್ರ ಬಳಸುವ ಅವಕಾಶವೇ ಸೇರಿದಂತೆ ಹಲವು ಕುತೂಹಲಕ್ಕೆ ಸ್ಪಷ್ಟ ಉತ್ತ ಸಿಕ್ಕಿಲ್ಲ. ಇದೇ ವೇಳೆ ಸೇಫ್ ಗೇಮ್‌ಗೆ ಯಾವುದೇ ಅವಕಾಶವಿಲ್ಲ. ಏನಿದ್ದರು ಜಿದ್ದಾಜಿದ್ದಿನ ಕಾಳಗ ಅನ್ನೋ ಸ್ಪಷ್ಟನೆ ಸೂಚನೆಯನ್ನು ಬಿಗ್ ಬಾಸ್ ನೀಡಿದೆ.


