- Home
- Entertainment
- TV Talk
- ಇನ್ನೇನು ಈ ಜೋಡಿ ಒಂದಾಗಬೇಕು ಎನ್ನುವಷ್ಟರಲ್ಲಿ 'ಅಣ್ಣಯ್ಯ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಬದಲಾವಣೆ
ಇನ್ನೇನು ಈ ಜೋಡಿ ಒಂದಾಗಬೇಕು ಎನ್ನುವಷ್ಟರಲ್ಲಿ 'ಅಣ್ಣಯ್ಯ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಬದಲಾವಣೆ
Annayya Serial Zee Kannada: ಕಿರುತೆರೆಯ ಹಿಟ್ ಧಾರಾವಾಹಿಯಲ್ಲಿ ಒಂದಾದ 'ಅಣ್ಣಯ್ಯ'ದಲ್ಲಿ ಇಷ್ಟು ದಿನ ರಂಜಿಸಿದ್ದ ಈ ನಟನ ಜಾಗಕ್ಕೆ ಈಗ ಹೊಸ ನಟ ಬರುತ್ತಿದ್ದು, ಮುಂದಿನ ಸಂಚಿಕೆಗಳಲ್ಲಿ ಕಥೆ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮನೆಮಾಡಿದೆ.

ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆ
ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ 'ಅಣ್ಣಯ್ಯ' ಕೂಡ ಒಂದು. ಅಣ್ಣ ಮತ್ತು ತಂಗಿಯರ ಬಾಂಧವ್ಯ ಹಾಗೂ ವಿಶಿಷ್ಟ ಕಥಾಹಂದರದ ಮೂಲಕ ಅಲ್ಪ ಕಾಲದಲ್ಲೇ ವೀಕ್ಷಕರ ಮನಗೆದ್ದಿರುವ ಈ ಸೀರಿಯಲ್‌ನಲ್ಲಿ ಈಗ ಪ್ರಮುಖ ಬದಲಾವಣೆಯಾಗಲಿದೆ.
ಸೀರಿಯಲ್‌ನಿಂದ ಹೊರಬಂದ ಸುಷ್ಮಿತ್ ಜೈನ್
ಸೀರಿಯಲ್‌ನಿಂದ ಹೊರಬಂದ ಸುಷ್ಮಿತ್ ಜೈನ್
ಹೌದು. ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಒಂದಾದ ಜಿಮ್ ಸೀನಾ ಪಾತ್ರಧಾರಿ ಬದಲಾಗುತ್ತಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಧಾರಾವಾಹಿಯಲ್ಲಿ ಜಿಮ್ ಸೀನಾ ಎಂಬ ಕುತೂಹಲಕಾರಿ ಪಾತ್ರಕ್ಕೆ ಜೀವ ತುಂಬಿದ್ದ ನಟ ಸುಷ್ಮಿತ್ ಜೈನ್ ಈಗ ಧಾರಾವಾಹಿಯಿಂದ ಹೊರಬಂದಿದ್ದಾರೆ. ಈ ಹಿಂದೆ 'ಸತ್ಯಂ ಶಿವಂ ಸುಂದರಂ' ಮತ್ತು 'ದೊರೆಸಾನಿ'ಯಂತಹ ಹಿಟ್ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಸುಷ್ಮಿತ್, ಅಣ್ಣಯ್ಯ ಧಾರಾವಾಹಿಯಲ್ಲೂ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದರು.
ಹೊಸ ನಟನ ಎಂಟ್ರಿ
ಹೊಸ ನಟನ ಎಂಟ್ರಿ
ಸುಷ್ಮಿತ್, ವೈಯಕ್ತಿಕ ಕಾರಣಗಳಿಂದಾಗಿ ಈ ಸೀರಿಯಲ್‌ಗೆ ಗುಡ್‌ಬೈ ಹೇಳಿದ್ದು, ಅವರ ಸ್ಥಾನಕ್ಕೆ ಈಗ ಹೊಸ ನಟನ ಎಂಟ್ರಿಯಾಗಲಿದೆ. ಸದ್ಯದಲ್ಲೇ ಆ ಹೊಸ ಮುಖ ಯಾರು ಎಂಬುದು ವೀಕ್ಷಕರಿಗೆ ತಿಳಿಯಲಿದೆ.
ಕಥೆಯಲ್ಲಿ ರೋಚಕ ತಿರುವು
ಕಥೆಯಲ್ಲಿ ರೋಚಕ ತಿರುವು
ಧಾರಾವಾಹಿಯ ಕಥೆಯಲ್ಲಿ ಈಗ ಅತ್ಯಂತ ಕುತೂಹಲಕಾರಿ ಘಟ್ಟವೊಂದು ಎದುರಾಗಿದೆ. ರಶ್ಮಿ ಮತ್ತು ಸೀನಾ ಅವರ ಫಸ್ಟ್ ನೈಟ್ ನಡೆಯಬೇಕಿದೆ. ಆದರೆ, ಇದಕ್ಕೆ ಸೀನಾ ಅಮ್ಮ ಅಡ್ಡಗಾಲಾಗಿ ನಿಂತಿದ್ದಾಳೆ. ಇತ್ತೀಚಿನವರೆಗೂ ಪಿಂಕಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸೀನಾ, ಈಗ ದಿಢೀರನೆ ಹೆಂಡತಿ ರಶ್ಮಿ ಜೊತೆ ಸುಖ ಸಂಸಾರ ನಡೆಸಲು ನಿರ್ಧರಿಸಿದ್ದಾನೆ.
ಮುಂದಿನ ಸಂಚಿಕೆಗಳಲ್ಲಿ ಬಯಲಾಗುತ್ತೆ
ಮುಂದಿನ ಸಂಚಿಕೆಗಳಲ್ಲಿ ಬಯಲಾಗುತ್ತೆ
ಸೀನಾ ಈ ದಿಢೀರ್ ಮನಃಪರಿವರ್ತನೆ ವೀಕ್ಷಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸೀನಾ ನಿಜವಾಗಿಯೂ ರಶ್ಮಿಯ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದಾನಾ? ಅಥವಾ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ನಡೆಸುತ್ತಿರುವ ತಂತ್ರವಿದಾ? ಎಂಬುದು ಮುಂದಿನ ಸಂಚಿಕೆಗಳಲ್ಲಿ ಬಯಲಾಗಬೇಕಿದೆ.
ದಿನದಿಂದ ದಿನಕ್ಕೆ ಹೊಸ ತಿರುವು
ದಿನದಿಂದ ದಿನಕ್ಕೆ ಹೊಸ ತಿರುವು
ಪಾತ್ರಧಾರಿಯ ಬದಲಾವಣೆಯ ನಡುವೆಯೇ ಕಥೆಯಲ್ಲೂ ಇಂತಹ ಗಂಭೀರ ತಿರುವು ಬಂದಿರುವುದು ವೀಕ್ಷಕರ ಕುತೂಹಲವನ್ನು ಇಮ್ಮಡಿಗೊಳಿಸಿದೆ.ಹೊಸ ನಟ ಜಿಮ್ ಸೀನಾ ಪಾತ್ರಕ್ಕೆ ಹೇಗೆ ನ್ಯಾಯ ಒದಗಿಸುತ್ತಾರೆ ಮತ್ತು ರಶ್ಮಿ-ಸೀನಾ ಅವರ ಬಾಂಧವ್ಯ ಮುಂದಕ್ಕೆ ಎತ್ತ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ 'ಅಣ್ಣಯ್ಯ' ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ತಿರುವುಗಳ ಮೂಲಕ ಟಿಆರ್‌ಪಿ ರೇಟಿಂಗ್‌ನಲ್ಲಿ ಮುನ್ನುಗ್ಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

