ಹಿಂದಿ ಬಿಗ್ ಬಾಸ್-18 ಶೀಘ್ರದಲ್ಲೇ 'ದಿ ಎಂಡ್'; ಕನ್ನಡ ಬಿಗ್ ಬಾಸ್-11ರ ಕಥೆಯೇನು?
ಬಿಗ್ ಬಾಸ್ 18ರ ಟಿಆರ್‌ಪಿ ಕಡಿಮೆ ಇರೋದ್ರಿಂದ ನಿರ್ಮಾಪಕರು ಆದಷ್ಟು ಶೀಘ್ರವಾಗಿ ಈ ರಿಯಾಲಿಟಿ ಶೋ ಮುಗಿಸುವ ಆಲೋಚನೆ ಮಾಡಿದ್ದಾರಂತೆ. ಆದರೆ, ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಹಿಂದಿ ಬಿಗ್ ಬಾಸ್ ಕಥೆಯೇ ಹೀಗಾದರೆ, ಕನ್ನಡ ಬಿಗ್ ಬಾಸ್ ಕಥೆ ಏನಾಗಲಿದೆ? ಎಂಬುದು ಚಿಂತನೆ ಆಗಿದೆ.
ಮುಂಬೈ/ ಬೆಂಗಳೂರು (ನ.15): ದೇಶದಲ್ಲಿ ಅತಿಹೆಚ್ಚು ವೀಕ್ಷಕರನ್ನು ಹೊಂದಿದ್ದ ಹಿಂದಿ ಭಾಷೆಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್- 18ರಲ್ಲಿ ಟಿಆರ್‌ಪಿ ಕಡಿಮೆ ಬರುತ್ತಿದೆ. ಹೀಗಾಗಿ, ನಿರ್ಮಾಪಕರು ಆದಷ್ಟು ಶೀಘ್ರವಾಗಿ ಈ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಮುಗಿಸುವ ಆಲೋಚನೆ ಮಾಡಿದ್ದಾರಂತೆ. ಆದರೆ, ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಹಿಂದಿ ಬಿಗ್ ಬಾಸ್ ಕಥೆಯೇ ಹೀಗಾದರೆ, ಕನ್ನಡ ಬಿಗ್ ಬಾಸ್ ಕಥೆ ಏನಾಗಲಿದೆ? ಎಂಬುದು ಚಿಂತನೆ ಆಗಿದೆ.
ಸಲ್ಮಾನ್ ಖಾನ್ (Salman Khan)ರ ವಿವಾದಾತ್ಮಕ ಶೋ ಬಿಗ್ ಬಾಸ್ 18 (Bigg Boss 18)ರಲ್ಲಿ ಪ್ರತಿ ಸೀಸನ್‌ನಂತೆ ಈ ಸೀಸನ್‌ನಲ್ಲೂ ಸ್ಪರ್ಧಿಗಳು ಸಖತ್ ಗಲಾಟೆ, ಜಗಳ ಮಾಡ್ತಿದ್ದಾರೆ. ದಿನಾ ಮನೆಯಲ್ಲಿ ಜಗಳ, ಗಲಾಟೆ, ಪರಸ್ಪರ ಬೈಗುಳಗಳು ಕಡಿಮೆ ಆಗ್ತಿಲ್ಲ. ಇಷ್ಟೆಲ್ಲಾ ಆದ್ರೂ ಶೋಗೆ ಟಿಆರ್‌ಪಿ ಸಿಕ್ತಿಲ್ಲ. ಈ ನಡುವೆ ಬಿಗ್ ಬಾಸ್ ಬಗ್ಗೆ ಒಂದು ಸುದ್ದಿ ಹರಿದಾಡ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವರದಿಗಳ ಪ್ರಕಾರ, ನಿರ್ಮಾಪಕರಿಗೆ ಈ ರಿಯಾಲಿಟಿ ಶೋ ಅವಧಿ ವಿಸ್ತರಿಸುವ ಯೋಚನೆ ಇಲ್ಲ. ಶೋನ ಫಿನಾಲೆಯನ್ನು ಬೇಗ ಮಾಡುವ ಯೋಜನೆ ಹಾಕಿಕೊಂಡಿದ್ದಾರಂತೆ. ಇದಕ್ಕೆ ಕಾರಣವೇನು ಅನ್ನೋದು ಕೂಡ ಗೊತ್ತಾಗಿದೆ.
ಬಿಗ್ ಬಾಸ್ 18 ಬೇಗ ಏಕೆ ಮುಗಿಯುತ್ತೆ?
ಸಲ್ಮಾನ್ ಖಾನ್‌ರ ಶೋ ಬಿಗ್ ಬಾಸ್‌ಗೆ ಅಭಿಮಾನಿಗಳ ಬಳಗವೇ ಇದೆ. ಪ್ರತಿ ವರ್ಷ ಅಭಿಮಾನಿಗಳು ಶೋ ಶುರುವಾಗೋದಕ್ಕೆ ಕಾತರದಿಂದ ಕಾಯ್ತಾರೆ. ಸ್ಪರ್ಧಿಗಳು ಮತ್ತು ಬಿಗ್ ಬಾಸ್ ಇಬ್ಬರೂ ತಮ್ಮದೇ ಆದ ಕಾರ್ಯಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರೆ. ಕಳೆದ ಕೆಲವು ವರ್ಷಗಳಿಂದ ಶೋನ ಅವಧಿಯನ್ನು ನಿಗದಿತ ಸಮಯಕ್ಕಿಂತ ಹೆಚ್ಚಿಸಲಾಗ್ತಿತ್ತು, ಆದರೆ ಸೀಸನ್ 18ರ ಶೋನ ಅವಧಿ ಹೆಚ್ಚಾಗುತ್ತೆ ಅಂತ ಕಾಣ್ತಿಲ್ಲ. ಮೇಕರ್ಸ್ ಈ ಸೀಸನ್ ಅನ್ನು ಬೇಗ ಮುಗಿಸಲು ಯೋಚಿಸಿದ್ದಾರಂತೆ. ಇದಕ್ಕೆ ಕಾರಣವೂ ಗೊತ್ತಾಗಿದೆ. ವರದಿಗಳ ಪ್ರಕಾರ, ಬಿಗ್ ಬಾಸ್ ಮನೆಯಲ್ಲಿ ಪ್ರೇಕ್ಷಕರು ನೋಡಲು ಇಷ್ಟಪಡುವ ಎಲ್ಲವೂ ನಡೆಯುತ್ತಿದೆ, ಆದರೆ ಟಿಆರ್‌ಪಿ ಸಿಕ್ತಿಲ್ಲ. ಹಾಗಾಗಿ ಶೋ ಬೇಗ ಮುಗಿಯಬಹುದು. ಆದರೆ, ಮೇಕರ್ಸ್ ಅಥವಾ ಚಾನೆಲ್ ಇದನ್ನು ಅಧಿಕೃತವಾಗಿ ಘೋಷಿಸಿಲ್ಲ.
ಇದನ್ನೂ ಓದಿ: 'ಪುಷ್ಪ 2' ಟ್ರೇಲರ್ ಬಿಡುಗಡೆಗೂ ಮುನ್ನ ರಶ್ಮಿಕಾ ಭಾವನಾತ್ಮಕ ಪೋಸ್ಟ್; ಡಾಲಿ ಧನಂಜಯ ಮಿಸ್ಸಿಂಗ್!
ಬಿಗ್ ಬಾಸ್ 18ರ ಸ್ಪರ್ಧಿಗಳು : ಬಿಗ್ ಬಾಸ್ 18ರ ಸ್ಪರ್ಧಿಗಳ ಬಗ್ಗೆ ಹೇಳುವುದಾದರೆ, ಈ ಬಾರಿ ಚಾಹತ್ ಪಾಂಡೆ, ಶಿಲ್ಪಾ ಶಿರೋಡ್ಕರ್, ವಿವಿಯನ್ ಡಿಸೇನಾ, ರಜತ್ ದಲಾಲ್, ತೇಜಿಂದರ್ ಸಿಂಗ್ ಬग्ಗಾ, ಶ್ರುತಿಕಾ ಅರ್ಜುನ್, ಚುಮ್ ದರಾಂಗ್, ಅವಿನಾಶ್ ಮಿಶ್ರಾ, ಈಶಾ ಸಿಂಗ್, ಐಲಿಸ್ ಕೌಶಿಕ್, ಕರಣ್‌ವೀರ್ ಮೆಹ್ರಾ, ನೈರಾ ಬ್ಯಾನರ್ಜಿ, ಮುಸ್ಕಾನ್ ಬಾಮನೆ, ಅರ್ಫೀನ್ ಖಾನ್, ಸಾರಾ ಅರ್ಫೀನ್ ಖಾನ್, ಹೇಮಾ ಶರ್ಮಾ, ಗುಣರತ್ನ ಸದಾವರ್ತೆ, ಶಹಜಾದಾ ಧಾಮಿ ಭಾಗವಹಿಸಿದ್ದರು. ಇವರಲ್ಲಿ 6 ಸ್ಪರ್ಧಿಗಳು ಹೊರ ಹೋಗಿದ್ದಾರೆ. ಆರನೇ ವಾರದ ಎಲಿಮಿನೇಷನ್‌ಗೆ ರಜತ್ ದಲಾಲ್, ಕರಣ್‌ವೀರ್ ಮೆಹ್ರಾ, ದಿಗ್ವಿಜಯ್ ರಾಠಿ, ಶ್ರುತಿಕಾ ಅರ್ಜುನ್, ಚುಮ್ ದರಾಂಗ್, ತೇಜಿಂದರ್ ಬಗ್ರಾ, ಕಶಿಶ್ ಕಪೂರ್ ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: ಲಾರಿ ಡ್ರೈವರ್ ತಂದೆಯನ್ನು ಕಳೆದುಕೊಂಡ ತ್ರಿವಿಕ್ರಮ್, ಕಾಲಿಗೆ ಪೆಟ್ಟು ಬಿದ್ದ ಕೆಲಸ ಹೋಯ್ತು; ನೋವು ಕೇಳಿ ನೆಟ್ಟಿಗರು ಶಾಕ್
ಕನ್ನಡ ಬಿಗ್ ಬಾಸ್‌ಗೆ ಭಾರೀ ಟಿಆರ್‌ಪಿ: ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನೇ ಅವಧಿಗಿಂತ ಮುಂಚೆಯೇ ಮುಕ್ತಾಯಗೊಳಿಸಲು ಯೋಚನೆ ಮಾಡಲಾಗಿದೆ ಎಂದರೆ, ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಕಥೆಯೇನು ಎಂದು ನೀವು ಆಲೋಚನೆ ಮಾಡಬಹುದು. ಆದರೆ, ಭಾರತದಲ್ಲಿ ವಿವಿಧ ಭಾಷೆಗಳಲ್ಲಿ ಪ್ರಸಾರವಾಗುವ ಬಿಗ್ ಬಾಸ್ ರಿಯಾಲಿಟಿ ಶೋಗಳಲ್ಲಿ ಕನ್ನಡ ಬಿಗ್ ಬಾಸ್‌ಗೆ ಭಾರೀ ಬೇಡಿಕೆಯಿದೆ. ಅದರಲ್ಲಿಯೂ ನಟ ಕಿಚ್ಚ ಸುದೀಪ್ ನಿರೂಪಣೆ ಮಾಡವ ಶೈಲಿ ಮಾತ್ರ ಹಾಲಿ ಇರುವ ಯಾವುದೇ ನಿರೂಪಕರಿಗೂ ಸಿದ್ಧಿಸಿಲ್ಲ. ಇನ್ನು ಬಿಗ್ ಬಾಸ್ ಕನ್ನಡ-11ರ ಸೀಸನ್ ಭಾರೀ ದೊಡ್ಡ ಟಿಆರ್‌ಪಿಯನ್ನು ಪಡೆಯುತ್ತಿದೆ. ಕನ್ನಡದಲ್ಲಿ ಕಳೆದ ಬಿಗ್ ಬಾಸ್ ಸೀಸನ್-10 ಅತಿಹೆಚ್ಚು ಟಿಆರ್‌ಪಿ ಪಡೆದ ಸೀಸನ್ ಆಗಿತ್ತು. ಇದೀಗ 11ನೇ ಸೀಸನ್ ಕೂಡ ಹೆಚ್ಚಿನ ಟಿಆರ್‌ಪಿ ಗಳಿಸುತ್ತಿದ್ದು, ಇತ್ತೀಚೆಗಿನ ವರದಿಯಂತೆ ಟಿಆರ್‌ಪಿಯಲ್ಲಿ 12 ಅಂಕಗಳನ್ನು ಗಳಿಸಿತ್ತು. ಈ ಮೂಲಕ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಾರದಿಂದಾಗಿ ಅತಿಹೆಚ್ಚು ಟಿಆರ್‌ಪಿ ಪಡೆದ ಸಾಧನೆಯನ್ನು ಕಲರ್ಸ್ ಕನ್ನಡ ವಾಹಿನಿ ಮಾಡಿತ್ತು.