Asianet Suvarna News Asianet Suvarna News

ಬಿಗ್​ಬಾಸ್​ ಮನೆಯಲ್ಲಿಯೇ ಗರ್ಭಿಣಿಯಾದೆ ಅಂದಿದ್ದ ನಟಿಯೀಗ ಬಿಗ್​ಬಾಸ್​ ಮನೆಯಲ್ಲೇ ಡಿವೋರ್ಸ್​?

ಬಿಗ್​ಬಾಸ್​ ಮನೆಯಲ್ಲಿಯೇ ಗರ್ಭಿಣಿಯಾದೆ ಎನ್ನುವ ಮೂಲಕ ಸದ್ದು ಮಾಡಿದ್ದ ನಟಿ ಅಂಕಿತಾ ಲೋಖಂಡೆ ಇದೀಗ ಪತಿಯಿಂದ ಡಿವೋರ್ಸ್​ ಪಡೆಯಲು ಬಯಸಿದ್ದಾರೆ. ಆಗಿದ್ದೇನು? 
 

Bigg Boss 17 Ankita Lokhande and Vicky Jain get into a rift wants to take divorce suc
Author
First Published Dec 22, 2023, 6:04 PM IST

 ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಹಿಂದಿ ಬಿಗ್​ಬಾಸ್​ ಸಕತ್​ ಸುದ್ದಿ ಮಾಡುತ್ತಿದೆ. ಇದಕ್ಕೆ  ಕಾರಣ, ಇದರ ಸ್ಪರ್ಧಿ  ಟಿವಿ ತಾರೆ ಮತ್ತು ನಟಿ ಅಂಕಿತಾ ಲೋಖಂಡೆ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ. ಅಷ್ಟಕ್ಕೂ ಅಂಕಿತಾ ಮತ್ತು ಅವರ ಪತಿ ವಿಕ್ಕಿ ಜೈನ್  ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17ನಿಂದ ಸಕತ್​ ಸುದ್ದಿಯಲ್ಲಿದ್ದಾರೆ. ಈ ಸಲದ  ಬಿಗ್ ಬಾಸ್‌  ಉಳಿದ ಸೀಸನ್​ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಅದರಲ್ಲಿ ಈ ಬಾರಿ ಹೆಚ್ಚು ಸುದ್ದಿಯಾಗುತ್ತಿರುವುದು ಈ ಜೋಡಿ. ಇದಕ್ಕೆ  ಕಾರಣ ಇವರಿಬ್ಬರ ಕಚ್ಚಾಟ.   ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾಗ್ರಾಮ್​ ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡಿ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದರು. ವಿಕ್ಕಿ ಸಾಮಾನ್ಯವಾಗಿ ಅಂಕಿತಾ ಅವರನ್ನು ಇತರ ಸ್ಪರ್ಧಿಗಳ ಮುಂದೆ ಕೀಳಾಗಿ ಕಾಣುತ್ತಿರುವುದನ್ನು ವಿಡಿಯೋ ವೈರಲ್​ ಆಗಿತ್ತು.   

ಇವೆಲ್ಲಾ ಡ್ರಾಮಾಗಳ ನಡುವೆಯೇ ಅಂಕಿತಾ ತಾವು ಗರ್ಭಿಣಿ ಇರಬಹುದು ಎಂದು ಸುದ್ದಿ ಮಾಡಿದ್ದರು.  ತಮಗೆ  ಹುಳಿ ತಿನಬೇಕೆಂದು ಅನಿಸುತ್ತಿದೆ, ತಮಗೆ  ಪಿರಿಯಡ್ಸ್ ಮಿಸ್ ಆಗಿದೆ ಎಂದು ಹೇಳಿದ್ದು, ಬಹುಶಃ ಆಕೆ ಗರ್ಭಿಣಿ ಎಂದು ಈ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿತ್ತು. ಆದರೆ ವೈದ್ಯಕೀಯ ವರದಿಗೆ ಮೂತ್ರವನ್ನು ಕಳುಹಿಸಿರುವುದಾಗಿ ಹೇಳಿ ಹಲವು ದಿನಗಳು ಕಳೆದರೂ ಮೆಡಿಕಲ್​ ರಿಪೋರ್ಟ್​ ಬಗ್ಗೆ ಸುದ್ದಿ ಬರದ ಕಾರಣ, ಇವೆಲ್ಲಾ ಡ್ರಾಮಾ ಎಂಬ ಚರ್ಚೆ ಶುರುವಾಗಿತ್ತು. ನಂತರ ಕೊನೆಗೂ  ವೈದ್ಯಕೀಯ ಪರೀಕ್ಷೆಯ ವರದಿ ಬಂದಿದೆ ಎಂದು ಹೇಳಲಾಗಿತ್ತು.  ಅಂಕಿತಾ ಗರ್ಭಿಣಿ ಅಲ್ಲ ಎಂದು ವರದಿ ಹೇಳಿದೆ ಎಂದು ತಿಳಿಸಲಾಗಿತ್ತು.  

ಐಶ್ವರ್ಯ ಎಕ್ಸ್​ ಸಲ್ಮಾನ್​ರನ್ನು ಹೀಗೆ ತಬ್ಬಿಕೊಳ್ಳೋದಾ ಅಭಿಷೇಕ್​? ಏನಿದರ ಅರ್ಥ? ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​!

ಇದೀಗ ಈ ದಂಪತಿಯ ಇನ್ನೊಂದೆ ದೊಡ್ಡ ಹೈಡ್ರಾಮಾ ನಡೆದಿದೆ. ಅದೇನೆಂದರೆ, ಸದಾ ಕಿತ್ತಾಡುತ್ತಲೇ ಇದ್ದ ಈ ಜೋಡಿ ಈಗ ಡಿವೋರ್ಸ್​ ಪಡೆಯುವುದಾಗಿ ಹೇಳಿದ್ದಾರೆ. ಬಿಗ್​ಬಾಸ್​ ಅಂದ್ರೆ ಇಂಥವರಿಗೇ  ಮಣೆ ಎನ್ನುವುದು ತಿಳಿದ ವಿಷಯವೇ. ಇಲ್ಲಿ ನಡೆಯುವುದು ಎಲ್ಲವೂ ಮೊದಲೇ ನಿಗದಿಯಾಗಿರುತ್ತದೆ, ಸ್ಕ್ರಿಪ್ಟೆಡ್ ಎಂದು ತಿಳಿದಿದ್ದರೂ, ಪ್ರಚಾರಕ್ಕಾಗಿ ನಡೆಯುವ ಇಂಥ ಅಸಂಬಂಧಗಳಲ್ಲಿ ಇದೂ ಒಂದು ಎಂದು ಹೇಳಲಾಗುತ್ತಿದೆ. ಇದೀಗ ಅಂಕಿತಾ ಪತಿಗೆ ತಾವು ಡಿವೋರ್ಸ್​ ಕೊಡುವುದಾಗಿ ಅನೌನ್ಸ್​ ಮಾಡಿದ್ದಾರೆ. ನಮಗಿಬ್ಬರೂ ಬದುಕಲು ಆಗುತ್ತಿಲ್ಲ, ಡಿವೋರ್ಸ್ ಪಡೆದುಕೊಳ್ಳೋಣ ಎಂದು ಹೇಳಿದ್ದು, ಅದೀಗ ಸುದ್ದಿಯಾಗಿದೆ. ನನಗೆ ಡಿವೋರ್ಸ್​ ಬೇಕು, ನಿನ್ನ ಜೊತೆ ಮನೆಗೆ ಹೋಗುವುದಿಲ್ಲ ಎಂದಿದ್ದಾರೆ. ಹಲವರು ಇವೆಲ್ಲಾ ಈ ದಂಪತಿಯ ಹಾಗೂ ಬಿಗ್​ಬಾಸ್​ನ ಪ್ರಚಾರದ ಗಿಮಿಕ್​ ಎಂದೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದಾಂಪತ್ಯದಂಥ ಪವಿತ್ರ ಬಂಧನವನ್ನೂ ಈ ರೀತಿ ಒಂದು ರಿಯಾಲಿಟಿ ಷೋ ಹಾಗೂ ದಂಪತಿ ಪ್ರಚಾರಕ್ಕಾಗಿ ಕೀಳುಮಟ್ಟದಲ್ಲಿ ಬಳಸಿಕೊಳ್ಳುವುದು ವಿಷಾದನೀಯ ಎಂದು ಹಲವರು ಕಮೆಂಟ್​ ಹಾಕುತ್ತಿದ್ದಾರೆ. 

ಅಂದಹಾಗೆ, ಅಂಕಿತಾ ಲೋಖಂಡೆ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅದನ್ನು ಬ್ರೇಕ್ ಮಾಡಿಕೊಂಡು ವಿಕ್ಕಿ ಜೈನ್ ಜೊತೆ ಒಂದಾದರು. ಮದುವೆ ಮಾಡಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ.  ಈ ಹಿಂದೆ ಬಿಗ್​ಬಾಸ್​ ಮನೆಯಲ್ಲಿಯೇ ಅಂಕಿತಾ ಪತಿಗೆ ಚಪ್ಪಲಿಯಿಂದ ಹೊಡೆದಿದ್ದರು. 

ಐಶ್​- ಅಭಿ ಮದ್ವೆ ದಿನ ನಡೆದಿತ್ತು ಹೈಡ್ರಾಮಾ: ಮಣಿಕಟ್ಟು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಜಾಹ್ನವಿ ಕಪೂರ್​!
 

Follow Us:
Download App:
  • android
  • ios