Asianet Suvarna News Asianet Suvarna News

Shamita Shetty health: ಅನ್ನ ತಿನ್ನೋಕೆ ಆಗಲ್ಲ, ಶೆಲ್ಪಾ ಶೆಟ್ಟಿ ತಂಗಿಗಿದೆ ವಿಚಿತ್ರ ಕಾಯಿಲೆ?

ಮೊದಲ ಬಾರಿ ಬಿಗ್ ಬಾಸ್ ಮನೆಯಲ್ಲಿ ಆರೋಗ್ಯ ಸಮಸ್ಯೆ ಬಗ್ಗೆ ಬಿಚ್ಚಿಟ್ಟ ನಟಿ ಶಮಿತಾ ಶೆಟ್ಟಿ. ಲಕ್ಷದಲ್ಲಿ ಒಬ್ಬರಿಗೆ ಬರುವ ಕಾಯಿಲೆ  ಇದಂತೆ... 
 

Bigg boss 15 Shamita Shetty opened up about her colitis health condition vcs
Author
Bangalore, First Published Nov 27, 2021, 4:51 PM IST

ಮಂಗಳೂರು ಸುಂದರಿ, ಬಾಲಿವುಡ್ (Bollywood) ಹಾಟ್ ನಟಿ ಆ್ಯಂಡ್ ಯಂಗ್ ಮಮ್ಮಿ ಶಿಲ್ಪಾ ಶೆಟ್ಟಿ (Shilpa Shetty) ಸಿನಿಮಾ ಮತ್ತು ರಿಯಾಲಿಟಿ ಶೋ (Reality show) ಅಂತ ವೃತ್ತಿ ಜೀವನದಲ್ಲಿ ಸಖತ್ ಬ್ಯುಸಿಯಾಗಿರುತ್ತಾರೆ. ಹೀಗಾಗಿ ಅವರ ಸಹೋದರಿ ಶಮಿತಾ ಶೆಟ್ಟಿಯನ್ನು (Shamita Shetty) ಪದೇ ಪದೇ ಹೊಲಿಸಿ ಕೊಂಕು ಮಾತನಾಡಿ ,ಕೆಲಸಕ್ಕೆ ಬಾರದ ಸುಂದರಿ ಎಂಬ ಪಟ್ಟವನ್ನು ನೆಟ್ಟಿಗರು ಕೊಟ್ಟಿದ್ದರು. ನನಗೂ ವ್ಯಕ್ತಿತ್ವ (Personality) ಇದೆ. ನಾನೂ ಸಾಧನೆ ಮಾಡಬಲ್ಲೆ. ಅಕ್ಕನ ಗುರುತಿನಲ್ಲಿ ಬದುಕುವುದಿಲ್ಲ, ಎಂದು ಹೇಳಿದ ಶಮಿತಾ ಮರುದಿನವೇ ಬಿಗ್ ಬಾಸ್ ಓಟಿಟಿಯಲ್ಲಿ (Bigg boss OTT) ಕಾಣಿಸಿಕೊಂಡರು. 

ಹೌದು! ಖ್ಯಾತ ನಿರ್ದೆಶಕ, ನಿರ್ಮಾಪಕ ಕಮ್ ಕಾಂಟ್ರೋವರ್ಸಿ ಕ್ರಿಯೇಟರ್ ಕರಣ್ ಜೋಹಾರ್ (Karan Johar) ನಿರೂಪಣೆಯಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ಓಟಿಟಿಯಲ್ಲಿ ಶಮಿತಾ ಶೆಟ್ಟಿ ಕೊಂಚ ಜನಪ್ರಿಯತೆ ಪಡೆದುಕೊಂಡರು. ಹೀಗಾಗಿ ಸಲ್ಮಾನ್ ಖಾನ್ (Salman Khan) ನಿರೂಪಣೆಯಲ್ಲಿ ಮೂಡಿ ಬರುವ ಟಿವಿ ಬಿಗ್ ಬಾಸ್ ಸೀಸನ್ 15ರಲ್ಲೂ ಸ್ಪರ್ಧಿಯಾಗಿ ಅಗಮಿಸಿದ್ದಾರೆ. ವಾರ ವಾರವೂ ಒಂದೊಂದು ಅವತಾರದಲ್ಲಿ ಶಮಿತಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ, ಸ್ಟೈಲ್ (Style) ಥೇಟ್ ಅಕ್ಕನ ರೀತಿಯೇ. ಆದರೆ ಶಮಿತಾ ಮನಸ್ಸು ಚುಚ್ಚುವಂತೆ ಮಾತನಾಡುವ ರೀತಿ ಹಲವರಿಗೆ ಇಷ್ಟ ಆಗುವುದಿಲ್ಲ. 

Bigg boss 15 Shamita Shetty opened up about her colitis health condition vcs

ಬಿಬಿ ಮನೆಯಲ್ಲಿದ್ದಾಗ ಶಮಿತಾಗೆ ಆರೋಗ್ಯ (Health) ಸಮಸ್ಯೆ ಆಯ್ತು, ಎಂದು ಕೆಲವು ದಿನಗಳ ಕಾಲ ಮನೆಯಿಂದ ಹೊರ ಬಂದಿದ್ದರು. ಆನಂತರ ವೈಲ್ಡ್‌ ಕಾರ್ಡ್‌ (Wildcard) ಮೂಲಕ ಮತ್ತೆ ಎಂಟ್ರಿ ಆಗಿದ್ದಾರೆ. ಈ ವೇಳೆ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಹಂಚಿಕೊಂಡಿದ್ದಾರೆ.  ಶಮಿತಾ ಶೆಟ್ಟಿಗೆ ಕೊಲೈಟಿಸ್ (colitis)ಎಂದು ಕರೆಯುವ ದೊಡ್ಡ ಕರುಳಿನ ಉರಿಯೂತದ ಅನಾರೋಗ್ಯ ಕಾಡುತ್ತಿದೆಯಂತೆ. ರಕ್ತ  ಹೆಪ್ಪು ಕಟ್ಟಿದಾಗ intestineನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಕೊಲೈಟಿಸ್‌ನ ಸಾಮಾನ್ಯ ಲಕ್ಷಣ ಅಂದರೆ ಹೊಟ್ಟೆ ನೋವು, ಅತಿಸಾರ ಮತ್ತು ಸೆಳೆತ ಎಂದು ವೈದ್ಯರು ಹೇಳುತ್ತಾರೆ. ಒಂದು ವೇಳೆ ಕರುಳಿನ ಒಂದು ಭಾಗಕ್ಕೆ ಮಾತ್ರ ರಸ್ತ ಸಂಚಾರ ಸರಿಯಾಗಿಲ್ಲವಾದರೆ ಅದನ್ನು ಇಸ್ಕೆಮಿಕ್ ಕೊಲೈಟಿಸ್ ಎನ್ನುತ್ತಾರೆ. 

Bigg Boss 15: ಸಹಸ್ಪರ್ಧಿಗೆ ಚಪ್ಪಲಿ ಕೊಟ್ಟ ಶಮಿತಾ

ಹೀಗಾಗಿ 42 ವರ್ಷದ ಶಮಿತಾ ಶೆಟ್ಟಿ ಸಾಮಾನ್ಯರು ಸೇವಿಸುವ ಆಹಾರಕ್ಕಿಂತ ವಿಭಿನ್ನ ಖಾದ್ಯಗಳನ್ನು ಸೇವಿಸಬೇಕು. ಅದರಲ್ಲೂ ಗ್ಲುಟನ್ (Gluten-free) ಮುಕ್ತ ಆಹಾರವನ್ನೇ ಸೇವಿಸಬೇಕು. ಅನ್ನ ಪ್ರಿಯರಾಗಿದ್ದರೆ, ಅನ್ನಕ್ಕೂ ನೋ ಎಂದು ಹೇಳಬೇಕು.  ಆಹಾರ ಕ್ರಮ ಬದಲಾವಣೆ ಮತ್ತು ಔಷಧಿಯನ್ನು (Medicin) ಸರಿಯಾಗಿ ಸೇವಿಸಿದರೆ ಕೊಲೈಟಿಸ್ ಸಮಸ್ಯೆ ನಿವಾರಣೆ ಅಗುತ್ತದೆ.

Follow Us:
Download App:
  • android
  • ios