Bigg Boss 15: ಸಹಸ್ಪರ್ಧಿಗೆ ಚಪ್ಪಲಿ ಕೊಟ್ಟ ಶಮಿತಾ
- ಸಹಸ್ಪರ್ಧಿಗೆ ಚಪ್ಪಲಿ ಕೊಟ್ಟ ಶಮಿತಾ ಶೆಟ್ಟಿ
- ಬಿಗ್‌ಬಾಸ್ ಮನೆಯಲ್ಲಿ ಇಷ್ಟೊಂದು ಭಾವುಕರಾಗಿದ್ದೇಕೆ ?
ಬಿಗ್‌ಬಾಸ್ 15ರ ಲೇಟೆಸ್ಟ್ ಎಪಿಸೋಡ್‌ನಲ್ಲಿ ಜಂಗಲ್ ಮೇ ಖೂಂಖರ್ ದಂಗಲ್ ಟಾಸ್ಕ್ ಸಂದರ್ಭ ಶಮಿತಾ ಶೆಟ್ಟಿ ಮಿಶಾ ಐಯ್ಯರ್‌ನ ಚಪ್ಪಲಿ ಹಾಳು ಮಾಡಿದ್ದಕ್ಕೆ ಪಶ್ಚಾತಾಪ ಪಟ್ಟಿದ್ದಾರೆ. ಈ ಬಗ್ಗೆ ಶಮಿತಾ ಮಿಶಾಗೆ ಕ್ಷಮೆ ಕೇಳಿ ಈ ಬಗ್ಗೆ ಪ್ರತೀಕ್ ಸೇಜ್‌ಪಾಲ್‌ಗೆ ಏನೂ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಮಿಶಾ ಐಯ್ಯರ್ ಭಾವುಕಳಾಗಿ ಪ್ರತೀಕ್ ಜೊತೆ ಮಾತನಾಡಿದ್ದು ವೈರಲ್ ಆಗಿದೆ. ಬಿಗ್‌ಬಾಸ್ ಮನೆಯೊಳಗೆ ತನಗೆ ಬೇಕಾಗ ಅಗತ್ಯ ವಸ್ತುಗಳನ್ನು ಪೋರೈಸಲು ಹೊರಗೆ ನನಗೆ ಯಾರೂ ಇಲ್ಲ ಎಂಬುದು ನಿನಗೆ ಗೊತ್ತಲ್ಲಾ ಎಂದು ಭಾವುಕರಾಗಿ ಪ್ರತೀಕ್‌ಗೆ ಹೇಳಿದ್ದಾರೆ ಮಿಶಾ.
ಮಿಶಾಳಲ್ಲಿ ಕ್ಷಮೆ ಕೇಳಿದ ಪ್ರತೀಕ್ ಆಕೆಯನ್ನು ಅಪ್ಪಿಕೊಳ್ಳುತ್ತಾನೆ. ಶಮಿತಾ ಕೂಡಾ ಮಿಶಾಳನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ. ಹಾಗಾಗಿ ಈ ಎಪಿಸೋಡ್ ಸ್ವಲ್ಪ ಎಮೋಷನಲ್ ಆಗಿದೆ.
ಮಿಶಾ ತನ್ನ ಕುಕ್ಕಿಂಗ್ ಡ್ಯೂಟಿಗೆ ಹೊರಟಾಗ ಶಮಿತಾ ಪ್ರತೀಕ್ ಬಳಿ ಬರುತ್ತಾರೆ. ಮಿಶಾ ಯಾಕೆ ತನಗೆ ಯಾರೂ ಇಲ್ಲ ಎಂದು ಹೇಳಿದರು ಎಂದು ಪ್ರತೀಕ್‌ನಲ್ಲಿ ಕೇಳುತ್ತಾರೆ. ಇದಕ್ಕೆ ಪ್ರತೀಕ್ ಮಿಶಾ ಪೋಷಕರು ಬದುಕಿಲ್ಲ ಎಂಬುದನ್ನು ತಿಳಿಸುತ್ತಾರೆ.
ಇದರಿಂದ ಭಾವುಕರಾದ ಶಮಿತಾ ಅಳುತ್ತಾರೆ. ಪ್ರತೀಕ್ ಸಮಾಧಾನ ಂಆಡುತ್ತಾರೆ. ಶಮಿತಾ ತಕ್ಷಣ ಪ್ರತೀಕ್‌ಗೆ ಮಿಶಾಳನ್ನು ಕರೆಯುವಂತೆ ಹೇಳುತ್ತಾರೆ.
ಮಿಶಾಳನ್ನು ಪ್ರತೀಕ್ ಕರೆದಾಗ ಆಕೆ ಬ್ಯುಸಿ ಇರುತ್ತಾಳೆ. ಪ್ರತೀಕ್ ಆಕೆಯ ಕೆಲಸ ಮಾಡೋದಾಗಿ ಹೇಳಿ ಆಕೆಯನ್ನು ಕಳುಹಿಸುತ್ಥಾನೆ. ಶಮಿತಾ ಮತ್ತೊಮ್ಮೆ ಮಿಶಾಳಲ್ಲಿ ಕ್ಷಮೆ ಕೇಳುತ್ತಾರೆ.
ಶಮಿತಾ ಎರಡು ಜೋಡಿ ಶೂಗಳನ್ನು ಬಿಚ್ಚಿಟ್ಟು ನಿನಗೆ ಬೇಕಾದ್ದನ್ನು ತೆಗೆದುಕೋ ಎಂದು ಹೇಳುತ್ತಾರೆ. ಮಿಶಾ ನಿರಾಕರಿಸುತ್ತಾರೆ. ಈಗ ಬೇರೆ ಆಪ್ಶನ್ ಇಲ್ಲ ನಿನಗೆ ಬೇಕಾದ್ದು ತೆಗೆದುಕೋ ಎನ್ನುತ್ತಾರೆ.
ತಾನು 'ಜಂಗಲ್ ವಾಸಿ'(ಕಾಡಿನ ನಿವಾಸಿ) ಆಗಿದ್ದರಿಂದ ಶಮಿತಾರಿಂದ ಏನನ್ನೂ ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ಮೀಶಾ ಅಯ್ಯರ್ ಹೇಳುತ್ತಾರೆ. ಶಮಿತಾ ತಾನು ತನ್ನ ಪೆಟ್ಟಿಗೆಯಲ್ಲಿ ಚಪ್ಪಲಿಗಳನ್ನು ಇಟ್ಟುಕೊಂಡಿದ್ದೇನೆ. ಅವಳು ಯಾವಾಗ ಬೇಕಾದರೂ ತೆಗೆದುಕೊಂಡು ಹೋಗಬಹುದು ಎಂದು ಹೇಳುತ್ತಾರೆ.
ಮೀಶಾ ತನ್ನ ಬೂಟುಗಳು ಶಮಿತಾರಷ್ಟು ದುಬಾರಿಯಲ್ಲ ಎಂದು ಹೇಳುತ್ತಾಳೆ. ಶಮಿತಾ ಅವಳನ್ನು ಯಾವುದರ ಬಗ್ಗೆಯೂ ಯೋಚಿಸದಂತೆ ಕೇಳುತ್ತಾರೆ. ನಾನು ಅದನ್ನು ಪೆಟ್ಟಿಗೆಯಲ್ಲಿ ಇಡುತ್ತಿದ್ದೇನೆ ಎಂದು ಹೇಳುತ್ತಾರೆ.