ಬಿಗ್‌ ಬಾಸ್ ಕ್ಯಾಪ್ಟನ್‌ ಗೌತಮಿ ಹೀಗೆಲ್ಲ ಪ್ರಾಂಕ್ ಮಾಡ್ತಾರ, ಅಷ್ಟಕ್ಕೂ ಅವ್ರು ಕಾಗೆ ಹಾರಿಸಿದ್ದು ಯಾರಿಗೆ ಗೊತ್ತಾ?

 ಸದ್ಯ ಬಿಗ್‌ಬಾಸ್‌ನಲ್ಲಿರುವ ಗೌತಮಿ ಜಾಧವ್ ಸಖತ್ತಾಗಿ ಪ್ರಾಂಕ್ ಮಾಡ್ತಾರೆ. ಅಷ್ಟಕ್ಕೂ ಅವರು ಪ್ರಾಂಕ್ ಮಾಡಿದ್ದು ಯಾರಿಗೆ ಗೊತ್ತಾ?

bigg boss 11 kannada contestant sathya serial fame gauthami jadhav prank call to priyanaka shivanna

ಗೌತಮಿ ಜಾಧವ್ ಬಿಗ್‌ಬಾಸ್ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಗೆದ್ದು ಸದ್ಯ ದೊಡ್ಮನೆಯ ಕ್ಯಾಪ್ಟನ್ ಹ್ಯಾಟ್ ಧರಿಸಿ ಬೀಗುತ್ತಿದ್ದಾರೆ. ಇದರ ಹಿಂದೆ ಒಂದು ಹೈಡ್ರಾಮಾ ನಡೆದಿದೆ. ಇಂಥಾ ನಟಿ ಪ್ರಾಂಕ್ ಕಾಲ್ ಮಾಡಿರೋ ವಿಚಾರ ನಿಮಗೊತ್ತಾ? ತನ್ನ ಹಿಡನ್ ಟ್ಯಾಲೆಂಟನ್ನು ಈ ರೀತಿ ಹೊರಹಾಕಿರೋ ಗೌತಮಿ ಬಗ್ಗೆ ಒಂದಿಷ್ಟು ಜನ 'ಅಯ್ಯಬ್ಬ, ಏನೋ ಅಂದ್ಕೊಂಡಿದ್ವಿ, ಅಂದ್ಕೊಂಡಂಗೆ ಅಲ್ಲ ಈ ಹೆಣ್ಮಗಳು' ಅಂತಿದ್ದಾರೆ. ಬಿಗ್‌ಬಾಸ್ ಮನೆಗೆ ಬರೋದಕ್ಕೂ ಮೊದಲು 'ಸತ್ಯ' ಅನ್ನೋ ಸೀರಿಯಲ್ ಹೀರೋಯಿನ್ ಆಗಿದ್ರು ಈ ಗೌತಮಿ. ಸೀರಿಯಲ್ ಮಾಡ್ತಿದ್ದಾಗ ಎಲ್ಲರೂ ಈಕೆಯನ್ನು 'ಸತ್ಯ' ಅಂತಲೇ ಕರೀತಿದ್ದದ್ದು. ಸೋ ಆ ಸೀರಿಯಲ್, ಅದರಲ್ಲಿ ಈಕೆಯ ನಟನೆಯ ಯಾವ ಪಾಟಿ ವೀಕ್ಷಕರಿಗೆ ಇಷ್ಟ ಆಗಿರಬಹುದು ಊಹಿಸಿ. ಅಂದಹಾಗೆ ಹುಡುಗಿ ಅಂದರೆ ಉದ್ದ ಜಡೆ, ಕಣ್ಣಿಗೆ ಕಾಡಿಗೆ, ಬಳುಕುವ ನಡಿಗೆ ಅನ್ನೋ ಪೂರ್ವಾಗ್ರಹವನ್ನೆಲ್ಲ ಕಿತ್ತೆಸೆದದ್ದು ಈ ಸೀರಿಯಲ್.

ಜೀ ಕನ್ನಡದಲ್ಲಿ ವರ್ಷಗಳ ಕಾಲ ಪ್ರಸಾರವಾದ ಈ ಸೀರಿಯಲ್ ಇತ್ತೀಚೆಗೆ ಮುಕ್ತಾಯವಾಯ್ತು. ಆ ಬಳಿಕ ಗೌತಮಿ ಬಿಗ್‌ಬಾಸ್‌ಗೆ ಹೋಗ್ತಾರೆ ಅನ್ನೋ ಮಾತಿತ್ತು. ಆ ಮಾತು ಆಮೇಲೆ ನಿಜವಾಯ್ತು. ಸದ್ಯ ಬಿಗ್‌ಬಾಸ್‌ ಮನೆಯಲ್ಲಿ ಗೌತಮಿ ಹವಾ ಜೋರಾಗಿದೆ. ಆಕೆ ಇದೀಗ ಕ್ಯಾಪ್ಟನ್ ಕಿರೀಟವನ್ನೂ ಧರಿಸಿದ್ದಾರೆ. ಅವರು ಕ್ಯಾಪ್ಟನ್ ಆಗಿರೋ ರೀತಿಗೆ ಮೋಕ್ಷಿತಾ ಮೂರ್ಛೆ ಹೋಗೋದೊಂದು ಬಾಕಿ.

ಸೀತಾರಾಮ ಸಿರಿಯಲ್‌ ರಾತ್ರಿ ಶೂಟಿಂಗ್‌ ಮಾಡುವಾಗ ಏನೆಲ್ಲಾ ಆಯ್ತು? ನಟಿ ಮೇಘನಾ ರಿವೀಲ್‌

ಇಂಥಾ ಗೌತಮಿ ಏನ್ ಚೆನ್ನಾಗಿ ಪ್ರಾಂಕ್ ಮಾಡ್ತಾರೆ ಗೊತ್ತಾ? ಹಾಗೆ ನೋಡಿದರೆ ಪ್ರಾಂಕ್ ಮಾಡೋದೂ ಒಂದು ಕಲೆ. ಬಹಳ ಬೇಗ ಮಾತಾಡ್ತಿರೋದು ಇವ್ರೇ ಅಂತ ಹಚ್ಚಬಹುದು. ಆದರೆ ಒಂದಿಷ್ಟು ಜನಕ್ಕೆ ಒಂದು ಸ್ಕಿಲ್ ಇದೆ. ಎಷ್ಟೋ ಒದ್ದಾಡಿದ್ರೂ ಪ್ರಾಂಕ್ ಆಗ್ತಿದ್ದೀವಿ ಅಂತಲೇ ಗೊತ್ತಾಗಲ್ಲ. ಕೊನೆಯಲ್ಲಿ ಗೊತ್ತಾಗುತ್ತಷ್ಟೇ. ಅಷ್ಟೊತ್ತಿಗೆ ಆಗ್ಬೇಕಾದ್ದೆಲ್ಲ ಆಗಿರುತ್ತೆ. ಅಂದ ಹಾಗೆ ಗೌತಮಿ ಜಾಧವ್ ಪ್ರಾಂಕ್ ಮಾಡಿರೋದು ಪ್ರಿಯಾಂಕಾ ಶಿವಣ್ಣ ಅವರಿಗೆ. ಪ್ರಿಯಾಂಕಾ ಶಿವಣ್ಣ ಕೆಲವು ಕಾಲದಿಂದು ಕಿರುತೆರೆಯಲ್ಲಿ ಸಖತ್ ಮೈಲೇಜ್ ಪಡೀತಿರೋ ನಟಿ. ಹೆಚ್ಚು ಆಟಿಟ್ಯೂಡ್ ಇರುವ, ದುರಹಂಕಾರಿ ಹೆಣ್ಣಿನ ರೋಲ್ ಅನ್ನೇ ಜಾಸ್ತಿ ಮಾಡ್ತಿರುತ್ತಾರೆ. ಇವರು 'ಸತ್ಯ' ಸೀರಿಯಲ್‌ನಲ್ಲಿ ಸತ್ಯಾಳ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಸತ್ಯ ಪಾತ್ರ ಮಾಡಿರೋ ಗೌತಮಿಗೂ ಆಕೆಯ ಅಕ್ಕ ದಿವ್ಯ ಪಾತ್ರದಲ್ಲಿ ಕಾಣಿಸಿಕೊಂಡ ಪ್ರಿಯಾಂಕಾಗೂ ಸೀರಿಯಲ್‌ನಲ್ಲಿ ಅಷ್ಟಾಗಿ ಬಾಂಡಿಂಗ್ ಇರಲಿಲ್ಲ. ಅಪ್ಪ ಹೋದ ಮೇಲೆ ಮನೆ ಜವಾಬ್ದಾರಿ ಹೊತ್ತು ಅಕ್ಕನಿಗೆ ಮದುವೆ ಮಾಡಿಸಬೇಕು, ಅವಳ ಲೈಫು ಚೆನ್ನಾಗಿರಬೇಕು ಅಂತ ತಂಗಿ ಸತ್ಯ ಬಯಸಿದ್ರೂ ಅಕ್ಕನಿಗೆ ಮಾತ್ರ ತಂಗಿ ಕಂಡ್ರೆ ಅಷ್ಟಕ್ಕಷ್ಟೇ.

ಆದರೆ ರಿಯಲ್ ಲೈಫ್‌ನಲ್ಲಿ ಇವ್ರಿಬ್ರು ಅಂದರೆ ಸತ್ಯ ಪಾತ್ರ ಮಾಡಿರೋ ಗೌತಮಿ ಹಾಗೂ ದಿವ್ಯಾ ಪಾತ್ರದಲ್ಲಿ ನಟಿಸಿರೋ ಪ್ರಿಯಾಂಕಾ ನಡುವೆ ಒಳ್ಳೆ ಬಾಂಡಿಂಗ್ ಇದೆ. ಅದಕ್ಕೆ ಸಾಕ್ಷಿ ಅನ್ನೋ ಹಾಗೆ ಗೌತಮಿ ಮಾಡಿರೋ ಪ್ರಾಂಕ್‌ ಕಾಲ್ ಇದೀಗ ವೈರಲ್ ಆಗ್ತಿದೆ. ಇದರಲ್ಲಿ ಗೌತಮಿ, 'ನಾನು ನಿಮ್ಮ ಫ್ಯಾನ್. ಕಷ್ಟಪಟ್ಟು ನಿಮ್ಮ ನಂಬರ್ ಸಿಕ್ಕಿದೆ. ನಾನು ನಿಮ್‌ ಹತ್ರ ಮಾತಾಡ್ಬೇಕು' ಅಂತ ಮಾತು ಶುರು ಮಾಡಿದ್ದಾರೆ.

ಚಿನ್ನುಮರಿ ಚಿನ್ನುಮರಿ ಅಂತ ತಲೆ ತಿನ್ನೋ ಜಯಂತ ಸೆಟ್‌ನಲ್ಲಿ ಚಿನ್ನುಮರಿ ಜೊತೆ ಹೇಗಿರ್ತಾರೆ ನೋಡಿ!

ಆದರೆ ಜಾಣೆ ಪ್ರಿಯಾಂಕಾಗೆ ಸ್ವಲ್ಪದರಲ್ಲೇ ಈ ತರಲೆ ಎಲ್ಲ ಮಾಡ್ತಿರೋದು ಗೌತಮಿ ಅಂತ ಗೊತ್ತಾಗಿದೆ. ಆಕೆ ಗೌತಮಿಗೆ ಆವಾಜ್ ಹಾಕಿದ್ದಾರೆ. ಸಖತ್ ಫನ್ನಿ ಆಗಿರೋ ಈ ವೀಡಿಯೋ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ದೊಡ್ಮನೆಯ ಕ್ಯಾಪ್ಟನ್ ಆಗಿರೋ ಗೌತಮಿ ಅಲ್ಲಿಂದಂತೂ ಕಾಲ್ ಮಾಡೋದು ಸಾಧ್ಯ ಇಲ್ಲ. ಸೋ ಇದು ಹಳೇ ವೀಡಿಯೋನೆ. ಆದರೆ ಸದ್ಯ ಗೌತಮಿ ಶೈನಿಂಗ್ ಆಗ್ತಿರೋ ಟೈಮಲ್ಲಿ ವೈರಲ್ ಆಗ್ತಿದೆ.

 

Latest Videos
Follow Us:
Download App:
  • android
  • ios