Asianet Suvarna News Asianet Suvarna News

72 ಲಕ್ಷ ವೋಟ್‌ ಪಡೆದ ಬಿಗ್‌ ಬಾಸ್‌ ಸ್ಪರ್ಧಿ, ಕಿಚ್ಚ ರಿವಿಲ್‌ ಮಾಡಿದ್ರು ಅಚ್ಚರಿಯ ನಂಬರ್‌!

ಬಿಗ್‌ ಬಾಸ್‌ ಕನ್ನಡದ ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್‌, ವರ್ತೂರ್‌ ಸಂತೋಷ್‌ಗೆ ಪಾಠ ಮಾಡಿರುವ ಪ್ರೋಮೋ ರಿಲೀಸ್‌ ಆಗಿದೆ. ಇದರ ನಡುವೆ ಕಿಚ್ಚ ಸುದೀಪ್‌ ಅಚ್ಚರಿಯ ನಂಬರ್‌ ರಿವಿಲ್‌ ಮಾಡಿದ್ದು, ಈ ಬಗ್ಗೆ ಚರ್ಚೆ ಆರಂಭವಾಗಿದೆ.

Big Boss Kannada Season 10 kiccha sudeep says one contestant Got 72 Lakh Votes san
Author
First Published Dec 30, 2023, 8:15 PM IST

ಬೆಂಗಳೂರು (ಡಿ.30): ಬಿಗ್‌ ಬಾಸ್‌ ಕನ್ನಡ 10 ಸೀಸನ್‌ ಮುಗಿಯುವ ಹಂತ ಬಂದಿದೆ. ಇನ್ನೇನು ಕೆಲವೇ ವಾರಗಳಿದ್ದು, ಈ ಬಗ್ಗೆ ಸ್ಪರ್ಧಿಗಳಲ್ಲೂ ಉತ್ಸಾಹ ಬಂದಿದೆ. ಇನ್ನೇನು ಮೂರು ವಾರಗಳಲ್ಲಿ ಬಿಗ್‌ ಬಾಸ್‌ ಮುಗಿಯಲಿದೆ. ಇದರ ನಡುವೆ ಈ ವಾರದ ಪಂಚಾಯ್ತಿಗೆ ಬಂದಿರುವ ಕಿಚ್ಚ ಸುದೀಪ್‌, ಬಿಗ್‌ ಬಾಸ್‌ ಸ್ಪರ್ಧಿಯೊಬ್ಬ ಪಡೆದಿರುವ ವೋಟ್‌ಅನ್ನು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಕಳೆದ ವಾರ ಕೆಸಿಸಿ ಕ್ರಿಕೆಟ್‌ ಕಾರಣ ಕಿಚ್ಚ ಸುದೀಪ್‌ ವಾರದ ಪಂಚಾಯ್ತಿಗೆ ಹಾಗೂ ಸೂಪರ್‌ ಸಂಡೇ ವಿತ್‌ ಸುದೀಪ ಎರಡೂ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಅದಲ್ಲದೆ, ಮನೆಯ ವಾತಾವರಣ ಕೂಡ ತಿಳಿಯಾಗಿತ್ತು. ನಮ್ರತಾ ಗೌಡ ಕ್ಯಾಪ್ಟನ್‌ ಆದ ನಂತರದ ವಾರದಲ್ಲಿ ಬಿಗ್‌ ಬಾಸ್‌ ಮನೆಗೆ ಎಲ್ಲಾ ಸ್ಪರ್ಧಿಗಳ ಕುಟುಂಬದವರು ಬಂದಿದ್ದರು. ಇವರೊಂದಿಗೆ ಬಿಗ್‌ ಬಾಸ್‌ ಪ್ಲೇ, ಪೌಸ್‌, ರಿವೈಂಡ್‌, ಫಾಸ್ಟ್‌ ಫಾರ್ವರ್ಡ್‌ ಆಟ ಆಡಿದ್ದು ಬಿಟ್ಟರೆ, ಇಡೀ ವಾರ ಗಲಾಟೆಗಳೇನೂ ನಡೆದಿರಲಿಲ್ಲ. ಆದರೆ, ಕಳಪೆ, ಉತ್ತಮ ಹಾಗೂ ಕ್ಯಾಪ್ಟನ್‌ಶಿಫ್‌ಗೆ ಮೂವರ ನಡುವೆ ಇಬ್ಬರನ್ನು ಆಯ್ಕೆ ಮಾಡುವ ವೇಳೆ ಕೊಂಚ ಮಟ್ಟಿಗೆ ಮನಸ್ತಾಪಗಳು ನಡೆದಿದ್ದವು. ಇದಕ್ಕಿಂತ ಮುಖ್ಯವಾಗಿ ವರ್ತೂರ್‌ ಸಂತೋಷ್‌ ಅವರಿಗೆ ಕಳಪೆ ಕೊಟ್ಟಿದ್ದಕ್ಕೆ ಅವರು ಆಡಿದ ಮಾತುಗಳು ಮನೆಯಲ್ಲಿದ್ದವರಿಗೆ ಬೇಸರ ತರಿಸಿದ್ದವು.

ಈ ಬಗ್ಗೆ ವಾರದ ಪಂಚಾಯ್ತಿಯಲ್ಲಿ ಚರ್ಚೆ ಮಾಡಲಾಗಿರುವುದು ಪ್ರೋಮೋದಲ್ಲಿ ತಿಳಿಸಲಾಗಿದೆ. ನೇರವಾಗಿ ವರ್ತೂರ್‌ ಸಂತೋಷ್‌ ಅವರಿಗೆ ಮಾತನಾಡಿಸುವ ಕಿಚ್ಚ ಸುದೀಪ್‌, 'ಕ್ಲಾರಿಟಿ ಅಂದ್ರೇನು?' ಅಂತಾ ಪ್ರಶ್ನೆ ಮಾಡಿದ್ದಾರೆ. ;ನಾನು ಯಾರಿಗೂ ಕ್ಲಾರಿಟಿ ಕೊಡೋದಿಲ್ಲ. ನನಗೆ ಯಾರಿಂದಲೂ ಕ್ಲಾರಿಟಿ ಬೇಕಾಗಿಲ್ಲ...' ಅಂತಾ ಸುದೀಪ್‌ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮಾತನಾಡಿರುವ ಕಾರ್ತಿಕ್‌, 'ಮಾತೆತ್ತಿದರೆ, ಜನಕ್ಕೆ ನಾನು ಕ್ಲಾರಿಟಿ ಕೊಡೋದು ಅಂತಾ ಬರ್ತಾರೆ' ಎಂದು ಹೇಳಿದ್ದಾರೆ.

ಏನೇ ಮಾಡಿದ್ರೂ ವೋಟ್‌ ಹಾಕ್ತಾರೆ, ಗೆಲ್ಲಿಸ್ತಾರೆ.. ಇವತ್ತು ಒಂದು ಫಿಗರ್‌ ಹೇಳ್ತೀನಿ. ಈ ಸೀಸನ್‌ನ ಒಬ್ಬ ಟಾಪ್‌ ಕಂಟೆಸ್ಟೆಂಟ್‌ ತೆಗೆದುಕೊಂಡಿರುವ ವೋಟ್‌. 72,83,090 ವೋಟ್‌. ಫಾರ್‌ ಯುವರ್‌ ಇನ್ಫಾರ್ಮೇಷನ್‌ ವರ್ತೂರ್‌ ಸಂತೋಷ್‌. ಈ ವೋಟ್‌ ನಿಮಗೆ ಬಂದಿದ್ದಲ್ಲ. ಇದು ನಾನಿ ನಿಮಗೆ ಕೊಡ್ತಾ ಇರೋ ಒಂದು ಹಿಂಟ್‌ ಎಂದು ಹೇಳುವಲ್ಲಿಗೆ 30 ಸೆಕೆಂಡ್‌ನ ಪ್ರೋಮೋ ಮುಕ್ತಾಯವಾಗಿದೆ.

ಇದರ ಬೆನ್ನಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ಇಷ್ಟು ವೋಟ್‌ಗಳು ಪಡೆದಿರುವ ಕಂಟೆಸ್ಟೆಂಟ್‌ ಯಾರಾಗಿರಬಹುದು ಎನ್ನುವ ಪ್ರಶ್ನೆಗಳು ಎದುರಾಗಿದೆ. ಹೆಚ್ಚಿನವರು ಸಂಗೀತಾ ಅಥವಾ ಕಾರ್ತಿಕ್‌ ಇಬ್ಬರಲ್ಲಿ ಒಬ್ಬರಿಗೆ ಬಂದಿರುವ ವೋಟ್‌ ಇದಾಗಿರಬಹುದು ಎಂದಿದ್ದಾರೆ. 'ತುಕಾಲಿ ಹಾಗೂ ವರ್ತೂರ್‌ ಇಬ್ಬರೂ ಕೂಡ ಜನ ಏನ್‌ ಮಾಡಿದ್ರೂ ತಮ್ಮ ಸೇವ್‌ ಮಾಡ್ತಾರೆ ಅನ್ನೋ ಭ್ರಮೆಯಲ್ಲಿದ್ದಾರೆ' ಎಂದು ಜನ ಪ್ರೋಮೋಗೆ ಕಾಮೆಂಟ್‌ ಮಾಡಿದ್ದಾರೆ.

 

ದೊಡ್ಮನೆಯಲ್ಲಿ ಡ್ರೋನ್‌ ಹಾರಿಸಿದ ಬಿಗ್‌ ಬಾಸ್‌, 'ನಂದೇ ಡ್ರೋನು, ನಂದೇ ಡ್ರೋನು..' ಎಂದು ಕುಣಿದ ಪ್ರತಾಪ್‌!

ವರ್ತೂರ್‌ಗೆ ಭಯ ಈಗ ಸ್ಟಾರ್ಟ್‌ ಆಗಿದೆ, ನೀವು ಎಷ್ಟೇ ವೋಟ್‌ ಹೇಳಿದ್ರು ನಾನು ನೋಡೋದಿಲ್ಲ. ಕಳೆದ ವಾರವೇ ಬಿಗ್‌ ಬಾಸ್‌ ನೋಡೋದನ್ನ ನಿಲ್ಲಿಸಿದ್ದೇನೆ. ನೀವೇನೇ ಹೇಳಿದ್ರೂ ಈ ಬಾರಿ ಚಾಂಪಿಯನ್‌ ಆಗೋದು ವಿನಯ್‌, ಈ ವೋಟ್‌ ಬಂದಿರೋದು ಪ್ರತಾಪ್‌ಗೆ, ಇದರೊಂದಿಗೆ ವರ್ತೂರ್‌ ಸಂತೋಷ್‌ ಟಾಪ್‌ 5 ಯಿಂದ ಹೊರಗೆ ಇದ್ದಾರೆ ಅನ್ನೋದನ್ನ ಸುದೀಪ್‌ ಹೇಳಿದ್ದಾರೆ. ತುಕಾಲಿಗಿಂತ ಮುಂಚೆನೇ ಅವರು ಹೋಗುವ ಸಾಧ್ಯತೆಯೂ ಇದೆ ಎಂದು ಜನರು ಅಭಿಪ್ರಾಯ ತಿಳಿಸಿದ್ದಾರೆ.

ಕಾರ್ತಿಕ್ ತಾಯಿ ಬಳಿ ಕ್ಷಮೆ ಕೇಳಿದ ಸಂಗೀತಾ; ವಿನಯ್- ತುಕಾಲಿಗೆ ಖಡಕ್ ವಾರ್ನಿಂಗ್!

Follow Us:
Download App:
  • android
  • ios