ಕಾರ್ತಿಕ್ ತಾಯಿ ಬಳಿ ಕ್ಷಮೆ ಕೇಳಿದ ಸಂಗೀತಾ; ವಿನಯ್- ತುಕಾಲಿಗೆ ಖಡಕ್ ವಾರ್ನಿಂಗ್!
ಹಾಡು ಹೇಳಿಕೊಂಡು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಕಾರ್ತಿತ್ ತಾಯಿ. ಸಂಗೀತಾ ಕ್ಷಮೆ ಕೇಳಿದ್ದು ಒಳ್ಳೆಯದು ಎಂದ ನೆಟ್ಟಿಗರು...
ಬಿಗ್ ಬಾಸ್ ಸೀಸನ್ 10ರಲ್ಲಿ ಟಫ್ ಫೈಟ್ ಕೊಡುತ್ತಿರುವ ಕಾರ್ತಿಕ್ ಮಹೇಶ್ ಫಿನಾಲೆಗೆ ಸಿಕ್ಕಾಪಟ್ಟೆ ಹತ್ತಿರವಾಗಿದ್ದಾರೆ. ಈ ಸಮಯದಲ್ಲಿ ಬಿಗ್ ಬಾಸ್ ಸರ್ಪ್ರೈಸ್ ಕೊಟ್ಟಿದ್ದಾರೆ.
70 ದಿನಗಳನ್ನು ಪೂರೈಸಿರುವ ಕಾರಣ ಸ್ಪರ್ಧಿಗಳು ತಮ್ಮ ಮನೆ ಮಂದಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟರು. ಕಾರ್ತಿಕ್ ತಾಯಿ ಎಂಟ್ರಿ ಕೊಟ್ಟರು.
ಕಾರ್ತಿಕ್ ತಾಯಿ ಹಾಡು ಹೇಳಿಕೊಂಡು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುತ್ತಾರೆ. ತಕ್ಷಣವೇ ಮುಖ್ಯ ದ್ವಾರದಿಂದ ಹೊರ ನಡೆಯುತ್ತಾರೆ.
ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟು ಸ್ಪರ್ಧಿಗಳನ್ನು ಚೆನ್ನಾಗಿ ಮಾತನಾಡಿಸಿದರು. 'ತಂಗಿ ಪಾಪು ನೋಡಲು ನಿನ್ನಂತೆ ಇದೆ. ಪುಟ್ಟಿ ಚೆನ್ನಾಗಿದ್ದಾಳೆ' ಎಂದು ಮಗು ಬಗ್ಗೆ ಹೇಳುತ್ತಾರೆ.
'ನಾವಿಬ್ಬರು ಟಾಸ್ಕ್ ವಿಚಾರಕ್ಕೆ ಜಗಳ ಆಡಿದೆವು ಅದನ್ನು ಬಿಟ್ಟು ಏನೂ ಇಲ್ಲ. ನನ್ನಿಂದ ನಿಮ್ಮ ಮಗ ಹೆಡ್‌ಶೇವ್ ಮಾಡಿಕೊಳ್ಳುವ ಹಾಗೆ ಆಯ್ತು. ಕ್ಷಮಿಸಿ ನನಗೆ ಬೈಯ್ಯೋದಿದ್ರೆ ಬೈಯ್ಯಿರಿ'ಎಂದು ಸಂಗೀತಾ ಕ್ಷಮೆ ಕೇಳಿದ್ದಾರೆ.
'ನಿನಗ್ಯಾಕಮ್ಮ ನಾನು ಬೈಯ್ಯಲಿ? ಅಳಬೇಡ. ಜಾಸ್ತಿ ಮಾತನಾಡುತ್ತೀರಾ ಮಾತನಾಡಬೇಡಿ. ವಾದ ಮಾಡಬೇಡಿ' ಎಂದ ಸಂಗೀತಾ ಹೇಳಿದ್ದಾರೆ.
ಕಾರ್ತಿಕ್‌ನ ಆಗಾಗ ಸರಿ ದಾರಿಗೆ ತರುವುದು, ಕಿವಿ ಮಾತುಗಳನ್ನು ಹೇಳುವುದಕ್ಕೆ ಸಿರಿ ಅವರಿಗೆ ಕಾರ್ತಿಕ್ ತಾಯಿ ವಂದನೆ ಹೇಳುತ್ತಾರೆ. ಸಿರಿ ತುಂಬಾ ಖುಷಿ ಪಡುತ್ತಾರೆ.
'ಕೋಪ ಕಮ್ಮಿ ಮಾಡಿಕೊಳ್ಳಿ. ಕೋಪ ಕೈಯಲ್ಲಿ ಬುದ್ಧಿ ಕೊಡಬೇಡಿ. ನೀನು ಕೂಡ ನನ್ನ ಮಗನೇ' ಅಂತ ವಿನಯ್ ಗೌಡ ಅವರಿಗೆ ನೇರವಾಗಿ ಹೇಳಿದ್ದಾರೆ.