Asianet Suvarna News Asianet Suvarna News

ದೊಡ್ಮನೆಯಲ್ಲಿ ಡ್ರೋನ್‌ ಹಾರಿಸಿದ ಬಿಗ್‌ ಬಾಸ್‌, 'ನಂದೇ ಡ್ರೋನು, ನಂದೇ ಡ್ರೋನು..' ಎಂದು ಕುಣಿದ ಪ್ರತಾಪ್‌!

ಬಿಗ್‌ ಬಾಸ್‌ನಲ್ಲಿ ಈ ವಾರ ಫ್ಯಾಮಿಲಿ ರೌಂಡ್‌. ಎಲ್ಲಾ ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಭೇಟಿ ನೀಡಿದ್ದರಿಂದ ಮನೆಯ ವಾತಾವರಣ ಭಾವುಕವಾಗಿತ್ತು. ಇದರ ನಡುವೆ ಬಿಗ್‌ ಬಾಸ್‌ ದೊಡ್ಮನೆಯಲ್ಲಿ ಡ್ರೋನ್‌ ಹಾರಿಸಿದ್ದಾರೆ.
 

Big Boss Kannada Season 10 drone flying in House drone prathap Reaction san
Author
First Published Dec 28, 2023, 8:43 PM IST

ಬೆಂಗಳೂರು (ಡಿ.28): ಮಾತಿನ ಚಕಮಕಿ, ಹೊಡೆದಾಟಗಳಿಂದಲೇ ಸುದ್ದಿಯಾಗ್ತಿದ್ದ ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಭಾವುಕ ವಾತಾವರಣ ಅದಕ್ಕೆ ಕಾರಣ, ಬಿಗ್‌ ಬಾಸ್‌ ಮನೆಗೆ ಈ ವಾರ ಸ್ಪರ್ಧಿಗಳ ಕುಟುಂಬದವರ ಎಂಟ್ರಿ. ಈಗಾಗಲೇ ಬಹುತೇಕ ಎಲ್ಲಾ ಸ್ಪರ್ಧಿಗಳ ಕುಟುಂಬದವರು ಮನೆಗೆ ಭೇಟಿ ನೀಡಿದ್ದಾಗಿದೆ. ಗುರುವಾರ ಡ್ರೋನ್‌ ಪ್ರತಾಪ್‌, ವಿನಯ್‌ ಗೌಡ ಹಾಗೂ ತನಿಷಾ ಕುಪ್ಪಂಡ ಅವರ ಕುಟುಂಬದವರು ಬಿಗ್‌ ಮನೆಗೆ ಭೇಟಿ ನೀಡಲಿದ್ದಾರೆ. ಇದರ ನಡುವೆ ಬಿಗ್‌ ಬಾಸ್‌ ಡ್ರೋನ್‌ ಪ್ರತಾಪ್‌ಗೆ ಸಖತ್‌ ಸರ್‌ಪ್ರೈಸ್‌ ನೀಡಿದ್ದಾರೆ. ಬಿಗ್‌ ಬಾಸ್‌ ಮನೆಯ ಹೊರಗಡೆ ಪ್ರತಾಪ್‌ ಸುಮ್ಮನೆ ಕುಳಿತಿದ್ದ ವೇಳೆ ಮನೆಯ ಲಾನ್‌ ಏರಿಯಾದಲ್ಲಿ ಡ್ರೋನ್‌ ಹಾರಾಡಿದೆ. ಸ್ವತಃ ಬಿಗ್‌ ಬಾಸ್‌ ಈ ಡ್ರೋನ್‌ಅನ್ನು ಹಾರಿಸಿದ್ದಾರೆ. ಇದನ್ನು ನೋಡಿ ಸಖತ್‌ ಖುಷಿಯಾಗುವ ಡ್ರೋನ್‌ ಪ್ರತಾಪ್‌, 'ಓಹ್‌ ಇದು ನಂದೇ ಡ್ರೋನು' ಎಂದು ಉದ್ಘಾರ ಮಾಡಿದ್ದಾರೆ. ಈ ವೇಳೆ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದರ ಬೆನ್ನಲ್ಲಿಯೇ ಮನೆಯವರನ್ನು ಕರೆಯುವ ಡ್ರೋನ್‌ ಪ್ರತಾಪ್‌, 'ಏನ್‌ ನನ್‌ ಡ್ರೋನ್‌ ಬಂದೈತೆ..ನನ್‌ ಡ್ರೋನು, ನನ್‌ ಡ್ರೋನು' ಎಂದು ಹೇಳಿದ್ದಾರೆ. ಇದನ್ನು ಕೇಳಿದವರೇ ತುಕಾಲಿ ಸಂತೋಷ್‌, 'ಇದು ನಿಂದೇನಾ?' ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ತನಿಷಾ ಹಾಗೂ ನಮ್ರತಾ ಗೌಡ ಡ್ರೋನ್‌ ನೋಡಲು ಓಡಿ ಬರುತ್ತಿರುವುದು ಪ್ರೋಮೋದಲ್ಲಿ ಕಂಡಿದೆ.

ಹಾಯ್‌ ಡ್ರೋನ್‌, ಕೆಳಗಿಳಿಸೋ..ಡ್ರೋನ್‌ ಪ್ರತಾಪ್‌ ಎಂದು ಮನೆಯವರು ಹೇಳುತ್ತಿದ್ದರೆ, ಡ್ರೋನ್‌ ಪ್ರತಾಪ್‌ ಮಾತ್ರ ಇದು ನಂದೇ ಡ್ರೋನು ಎಂದು ಸಂತೋಷದಿಂದ ಕುಣಿದಾಡಿದ್ದು ವಿಡಿಯೋದಲ್ಲಿ ಕಂಡಿದೆ. ಕೇವಲ 46 ಸೆಕೆಂಡ್‌ನ ಪ್ರೋಮೋ ಇದಾಗಿದೆ. ಆದರೆ, ಬಿಗ್‌ ಬಾಸ್‌ ದೊಡ್ಮನೆಯಲ್ಲಿ ಡ್ರೋನ್‌ ಹಾರಿಸಿದ್ದಕ್ಕೆ ಕಾರಣವೇನು? ಇದರ ಹಿಂದೆಯೋ ಏನಾದರೂ ರಹಸ್ಯ ಇದ್ಯಾ? ಅನ್ನೋದು ಇಂದಿನ ಎಪಿಸೋಡ್‌ನಲ್ಲಿಯೇ ತಿಳಿಯಲಿದೆ.

ಪ್ರೋಮೋ ಶೇರ್‌ ಮಾಡಿರುವ ಕಲರ್ಸ್‌ ಕನ್ನಡ ವಾಹಿನಿ, 'ಮನೆಯೊಳಗೆ ಡ್ರೋಣ್ ಹಾರಾಟ! ಯಾಕಿರಬಹುದು?' ಎಂದು ಪ್ರಶ್ನೆ ಮಾಡಿದೆ. ಇದಕ್ಕೆ ಜನರು ಕೂಡ ಭಿನ್ನ ಭಿನ್ನ ಕಾಮೆಂಟ್‌ಗಳನ್ನು ಮಾಡಿದ್ದಾರೆ. 'ಏಕಿರಬಹುದು ಎಂದರೆ, ನಿಮ್ಮ ಟಿಆರ್‌ಪಿಗೆ ಇರಬಹುದು' ಎಂದು ಬರೆದಿದ್ದಾರೆ. 'ಚೀನಾದಿಂದ ಇದರ ಪಾರ್ಟ್‌ಗಳು ಆಮದಾಗಿದೆ. ಇಂಡಿಯಾದಲ್ಲಿ ಅಸೆಂಬಲ್‌ ಆಗಿದೆ. ಡ್ರೋನಾರ್ಕ್‌ ಏರೋಸ್ಪೇಸ್‌ ಸ್ಟಾಂಪ್‌ ಬಿದ್ದಿರೋ ಡ್ರೋನ್‌' ಡ್ರೋನ್‌ ಪ್ರತಾಪ್‌ ಇಲ್ಲದೆ ಅವರು ಈ ಡ್ರೋನ್‌ಅನ್ನು ಹೇಗೆ ಹಾರಿಸಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಕಾರ್ತಿಕ್‌ ಮಹೇಶ್‌ಗೆ ಅನ್ಯಾಯ? ಪಾಜ್ ಕೊಟ್ಟ ಕ್ಷಣದಲ್ಲಿ ಬಂದು ಹೋದ ಅಮ್ಮ!

'ನಂದೇ ದ್ರೋನು... ದುಡ್ಡು ಕೊಟ್ಟು ಖರೀದಿ ಮಾಡಿ ನನ್ ಹೆಸ್ರು ಹಾಕಿದಿನಿ. ನಂದೇ ಡ್ರೋನು.' ಏನಾಗ್ತಿದೆ ಇಲ್ಲಿ, ಕಾಗೆನಾ ನೀವು ಎಷ್ಟು ಮರೆಸ್ತೀರಾ? ಇದು ಅತ್ಯಂತ ಕೆಟ್ಟ ಸೀಸನ್‌' 'ಇಡೀ ಸೀಸನ್‌ ಸಂಪೂರ್ಣವಾಗಿ ಪ್ರತಾಪ್‌ ಹಾಗೂ ಸಂಗೀತಾಗೆ ತಾರತಮ್ಯ ಮಾಡಲಾಗಿತ್ತು. ಬಿಗ್‌ಬಾಸ್‌ 10 ಅತ್ಯಂತ ಕೆಟ್ಟಟೀಮ್‌' 'ಇದನ್ನು ನೋಡುತ್ತಿದ್ದರೆ, ನಾನು ಓದೋದೇ ಬೇಡ ಎನಿಸುತ್ತದೆ. ಜನರಿಗೆ ಮೋಸ ಮಾಡಿ ಹಣ ಮಾಡುತ್ತೇನೆ. ಕೊನೆಗೆ ಯಾವುದೋ ಒಂದು ರಿಯಾಲಿಟಿ ಶೋ ನನಗೆ ನನ್ನ ಹೆಸರನ್ನು ವಾಪಾಸ್‌ ಕೊಡುತ್ತದೆ' ಎಂದು ಜನರು ಕಾಮೆಂಟ್‌ ಮಾಡಿದ್ದಾರೆ.

 

ಕೋವಿಡ್ ವೇಳೆ ವೈದ್ಯರಿಂದ ಹಲ್ಲೆ ಆರೋಪ ಡ್ರೋಣ್ ಪ್ರತಾಪ್ ಗೆ ಲೀಗಲ್ ನೋಟಿಸ್ ಕಳುಹಿಸಿದ ಡಾ.ಪ್ರಯಾಗ್

 

 

Follow Us:
Download App:
  • android
  • ios