ಸ್ಪರ್ಧಿ ಎಲಿಮಿನೇಶನ್‌ನಿಂದ ಶುರುವಾದ ಜಟಾಪಟಿ ಇದೀಗ ಬಿಗ್ ಬಾಸ್ ಹಿನ್ನಲೆ ಧ್ವನಿ ನೀಡುವ ಕಲಾವಿದನಿಗೆ ಜೀವ ಬೆದರಿಕೆ ಮಟ್ಟಕ್ಕೆ ತಲುಪಿದೆ. ಹಿನ್ನಲೆ ಧ್ವನಿ ನೀಡುವ ಕಲಾವಿದನೆ ಬಿಗ್ ಬಾಸ್ ಸೂತ್ರಧಾರ ಎಂದು ಆತನಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಮುಂಬೈ(ಜ.24) ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಅತ್ಯಂತ ಜನಪ್ರಿಯವಾಗಿದೆ. ನಿರೂಪಕರು, ಸ್ಪರ್ಧಿಗಳ ಜೊತೆಗೆ ಬಿಗ್ ಬಾಸ್ ಧ್ವನಿಗಾಗಿ ಹಲವು ಅಭಿಮಾನಿಗಳಿದ್ದಾರೆ. ಆದರೆ ಹೀಗೆ ಬಿಗ್ ಬಾಸ್ ಎಂದು ಧ್ವನಿ ನೀಡುತ್ತಿದ್ದ ಕಲಾವಿಧನಿಗೆ ಇದೀಗ ಜೀವ ಬೆದರಿಕೆ ಬಂದಿದೆ. ಕಾರಣ ಸ್ಪರ್ಧಿಯ ಎಲಿಮಿನೇಶನ್. ಬಿಗ್ ಬಾಸ್‌ಗೆ ಧ್ವನಿ ನೀಡುತ್ತಿರುವ ಕಲಾವಿಧನೇ ಈ ರಿಯಾಲಿಟಿ ಶೋ ಸೂತ್ರಧಾರ. ಈತನೇ ಸ್ಪರ್ಧಿಯನ್ನು ಎಲಿಮಿನೇಶನ್ ಮಾಡಿದ್ದಾನೆ ಎಂದು ಜೀವ ಬೆದರಿಕೆ ಹಾಕಿದ ಘಟನೆ ಹಿಂದಿ ಬಿಗ್ ಬಾಸ್‌ನಲ್ಲಿ ನಡೆದಿದೆ.
ಕಳೆದ 15 ವರ್ಷಗಳಿಂದ ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋನನಲ್ಲಿ ಬಿಗ್ ಬಾಸ್ ವಾಯ್ಸ್ ಮೂಲಕ ಚಿರಪರಿಚಿತವಾಗಿರುವ ಕಲಾವಿದ ವಿಜಯ್ ವಿಕ್ರಮ್ ಸಿಂಗ್‌ಗೆ ಬೆದರಿಕೆ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಬಾರಿಯ ಸ್ಪರ್ಧಿ ರಜತ್ ದಲಾಲ್ ಎಲಿಮಿನೇಶನ್. ಸ್ಪರ್ಧಿ ರಜತ್ ದಲಾಲ್ ಬೆಂಬಲಿಗರಿಂದ ವಿಜಯ್ ವಿಕ್ರಮ್ ಸಿಂಗ್ಗೆ ಜೀವ ಬೆದರಿಕೆ ಮತ್ತು ಆನ್‌ಲೈನ್ ನಿಂದನೆಗಳು ಬಂದಿವೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ರಜತ್ ದಲಾಲ್ ಬಿಗ್ ಬಾಸ್ ಅಂತಿಮ ಘಟ್ಟ ತಲುಪಿದ್ದರು. ಆದರೆ ಈ ಬಾರಿ ಕರಣ್ ವೀರ್ ಮೆಹ್ರಾ ಬಿಗ್ ಬಾಸ್ 18ನೇ ಆವೃತ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ರಜತ್ ದಲಾಲ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಬಿಬಿ 18 ಫೈನಲ್ ಪ್ರಸಾರವಾದ ತಕ್ಷಣ ವಿಜಯ್ ವಿಕ್ರಮ್ ಸಿಂಗ್ ವಿರುದ್ಧ ಬೆದರಿಕೆಗಳು ಪ್ರಾರಂಭವಾದವು, ಏಕೆಂದರೆ ರಜತ್ ದಲಾಲ್ ಅವರ ಅಭಿಮಾನಿಗಳು ಎಲಿಮಿನೇಶನ್‌ನಿಂದ ಅಸಮಾಧಾನ ಮಾತ್ರವಲ್ಲ ಆಕ್ರೋಶಗೊಂಡಿದ್ದಾರೆ. ರಜತ್ ದಲಾಲ್ ಅಭಿಮಾನಿಗಳು, ಬಿಗ್ ಬಾಸ್ ಧ್ವನಿ ನೀಡುತ್ತಿರುವ ವಿಜಯ್ ವಿಕ್ರಮ್ ಸಿಂಗ್ ಎಲ್ಲವನ್ನು ನಿಯಂತ್ರಿಸುವ, ನಿರ್ಧಾರ ತೆಗೆದುಕೊಳ್ಳುವ ಬಿಗ್ ಬಾಸ್ ಎಂದು ತಪ್ಪಾಗಿ ಅರ್ಥೈಸಿದ್ದಾರೆ. ಈ ಕಾರಣಕ್ಕೆ ಹಲವು ಬೆಂಬಲಿಗರು ವಿಜಯ್ ವಿಕ್ರಮ್ ಸಿಂಗ್‌ಗೆ ಬೆದರಿಕೆ ಹಾಕಿದ್ದಾರೆ.
ಬಿಗ್ ಬಾಸ್ 18ರಿಂದ ಗೆದ್ದ 50 ಲಕ್ಷ ರೂ ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೆ, ವಿನ್ನರ್‌ನಿಂದ ವಿಶೇಷ ಘೋಷಣೆ
ಸಾಮಾಜಿಕ ಮಾಧ್ಯಮ ತಾಣಗಳ ಮೂಲಕ ಜೀವ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದೆ. ಹಲವು ಬೆಂಬಲಿಗರು ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ನೇರ ಸಂದೇಶಗಳು ಮತ್ತು ಸಾರ್ವಜನಿಕ ಪೋಸ್ಟ್‌ಗಳನ್ನು ಕಳುಹಿಸಿದ್ದಾರೆ. 18ನೇ ಆವೃತ್ತಿ ಹಿಂದಿ ಬಾಗ್ ಬಾಸ್ ಮೊದಲೇ ಫಿಕ್ಸ್ ಆಗಿತ್ತು. ಇದು ರಜತ್ ದಲಾಲ್‌ಗೆ ಮಾಡಿದ ಅತೀ ದೊಡ್ಡ ಮೋಸ ಎಂದು ಆರೋಪಿಸಿದ್ದಾರೆ. ವಿಜಯ್ ವಿಕ್ರಮ್ ಸಿಂಗ್ ಹಾಗೂ ಕುಟುಂಬ ತೀವ್ರವಾಗಿ ಬೆದರಿಕೆ ಎದುರಿಸುತ್ತಿದೆ. ಪ್ರಮುಖವಾಗಿ ಸೋಶಿಯಲ್ ಮೀಡಿಯಾ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ಮತ್ತೆ ಕೆಲವರು ವ್ಯಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಈ ರೀತಿಯ ಬೆದರಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಿಜಯ್ ವಿಕ್ರಮ್ ಸಿಂಗ್ ಬಿಗ್ ಬಾಸ್‌ನಲ್ಲಿ ತಾನು ಕೇವಲ ನಿರೂಪಕ ಮಾತ್ರ, ಕಾರ್ಯಕ್ರಮದ ನಿಜವಾದ ಧ್ವನಿ ಅಲ್ಲ ಎಂದು ವಿಜಯ್ ವಿಕ್ರಮ್ ಸಿಂಗ್ ಡಿಸೆಂಬರ್ 2024 ರಲ್ಲಿ ದೃಢಪಡಿಸಿದರು. ಅವರು ವಿಡಿಯೋ ಸಂದೇಶದಲ್ಲಿ, “ದಯವಿಟ್ಟು ಕಾಮೆಂಟ್‌ಗಳ ವಿಭಾಗ ಮತ್ತು ಸಂದೇಶಗಳಲ್ಲಿ ನನ್ನನ್ನು ನಿಂದಿಸುವುದನ್ನು ನಿಲ್ಲಿಸಿ. ನಾನು ಬಿಗ್ ಬಾಸ್‌ನಲ್ಲಿ ಪ್ರೇಕ್ಷಕರಿಗೆ ಕಾರ್ಯಗಳು ಮತ್ತು ಸಮಯಗಳನ್ನು ಮಾತ್ರ ವಿವರಿಸುತ್ತೇನೆ. ಸ್ಪರ್ಧಿಗಳೊಂದಿಗೆ ಮಾತನಾಡುವ ಧ್ವನಿಯ ಬಗ್ಗೆ ನನಗೆ ಏನೂ ತಿಳಿದಿಲ್ಲ. ಅದು ಯಂತ್ರವೋ ಅಥವಾ ನಿಜವಾದ ವ್ಯಕ್ತಿಯೋ ಗೊತ್ತಿಲ್ಲ. ಆದ್ದರಿಂದ ನನ್ನನ್ನು ನಿಂದಿಸುವುದನ್ನು ತಡೆಯುವಂತೆ ನಾನು ಪ್ರೇಕ್ಷಕರನ್ನು ವಿನಂತಿಸುತ್ತೇನೆ” ಎಂದು ವಿವರಿಸಿದ್ದಾರೆ.
ದಿಗ್ವಿಜಯ್ ರಥೀ ಅವರನ್ನು ಹೊರಹಾಕಿದ ನಂತರ ವಿಜಯ್ ಅವರಿಗೂ ಅವಹೇಳನಕಾರಿ ಮೇಲ್‌ಗಳು ಬಂದವು. ಪ್ರತಿಕ್ರಿಯೆಯಾಗಿ, ವಿಜಯ್ ಮತ್ತೊಂದು ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ, “ದಯವಿಟ್ಟು ದ್ವೇಷದ ಕಾಮೆಂಟ್‌ಗಳನ್ನು ಕಳುಹಿಸುವುದನ್ನು ನಿಲ್ಲಿಸಿ. ನಾನು ಬಿಗ್ ಬಾಸ್‌ನ ಎರಡನೇ ಧ್ವನಿ, ಮುಖ್ಯ ಧ್ವನಿ ಅಲ್ಲ ಎಂದಿದ್ದಾರೆ.
ಬಿಗ್ ಬಾಸ್‌ಗೆ ತಮ್ಮ ಧ್ವನಿ ನೀಡುವುದರ ಜೊತೆಗೆ, ವಿಜಯ್ ವಿಕ್ರಮ್ ಸಿಂಗ್ ಹಲವಾರು ಆನ್‌ಲೈನ್ ಸರಣಿಗಳಲ್ಲಿ ನಟಿಸಿದ್ದಾರೆ. ಅವರು ಮನೋಜ್ ಬಾಜಪೇಯಿ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸರಣಿ ದಿ ಫ್ಯಾಮಿಲಿ ಮ್ಯಾನ್ (ಸೀಸನ್ 1 ಮತ್ತು 2), ಕೆ ಕೆ ಮೆನನ್ ಅವರ ಸ್ಪೆಷಲ್ ಆಪ್ಸ್ 1.5: ದಿ ಹಿಮ್ಮತ್ ಸ್ಟೋರಿ ಮತ್ತು ಕಾಜೋಲ್ ಅವರ ದಿ ಟ್ರಯಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
