ಮಲ್ಲಿ ಹೊಟ್ಟೆಯಲ್ಲಿರುವುದು  ತನ್ನದೇ ಮಗು ಎಂದು ಜೈದೇವ್​ ಹೇಳಿದ್ದನ್ನು ಭೂಮಿಕಾ ಕೇಳಿಸಿಕೊಂಡಿದ್ದಾಳೆ. ಮದುವೆಯ ಶಾಸ್ತ್ರ ಭರ್ಜರಿಯಾಗಿ ನಡೆಯುತ್ತಿದೆ. ಮುಂದೇನು?  

ಭೂಮಿಕಾ ತಂಗಿ ಮದ್ವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಕೆಲಸದ ಹುಡುಗಿಗೆ ಗರ್ಭಿಣಿ ಮಾಡಿರುವ ಈತ ರಾಜಾರೋಷವಾಗಿ ಮದುವೆಗೆ ರೆಡಿಯಾಗಿದ್ದಾನೆ. ಆತ ಕೆಲಸದಾಕೆಯ ಜೊತೆ ಸಂಬಂಧ ಇಟ್ಟುಕೊಂಡಿರುವ ವಿಷ್ಯ ಯಾರಿಗೂ ಗೊತ್ತಿಲ್ಲ. ಪಾರ್ಥನನ್ನು ಪ್ರೀತಿಸ್ತಿರೋ ಭೂಮಿಕಾ ತಂಗಿ ಪೇಚಿಗೆ ಸಿಲುಕಿದ್ದಾಳೆ. ಇಷ್ಟವಿಲ್ಲದ ಮದ್ವೆಗೆ ಈಕೆ ರೆಡಿಯಾಗುವ ಅನಿವಾರ್ಯತೆ ಉಂಟಾಗಿದೆ. ಜೈದೇವನಿಂದ ಕೆಲಸದಾಕೆ ಗರ್ಭಿಣಿಯಾಗಿರುವ ವಿಷಯ ಭೂಮಿಕಾಗೆ ತಿಳಿದಿದೆ. ಇದನ್ನು ಆಕೆ ಹೋಗಿ ಹೋಗಿ ಅತ್ತೆಗೆ ಹೇಳಿದ್ದಾಳೆ. ಭೂಮಿಕಾಗೆ ವಿಷಯ ತಿಳಿದಿರುವುದನ್ನು ಕೇಳಿ ಅತ್ತೆ ಶಾಕ್​ ಆಗಿದ್ದಾಳೆ. ಆದರೆ ಹೆತ್ತ ಮಗನನ್ನು ಕೆಲಸದವನ ಜೊತೆ ಮದುವೆ ಮಾಡಿಸುತ್ತಾಳಾ ಅವಳು? ಹೇಗಾದರೂ ಮಾಡಿ ಕೆಲಸದಾಕೆಯನ್ನೇ ನಾಪತ್ತೆ ಮಾಡುವ ಪ್ಲ್ಯಾನ್​ ಮಾಡಿದ್ದಾಳೆ ಜೈದೇವನ ಅಮ್ಮ ಅರ್ಥಾತ್​ ಭೂಮಿಕಾಳ ಅತ್ತೆ.

ಮದುವೆಗೆ ಸಿದ್ಧತೆ ನಡೆಯುತ್ತಿರುವ ನಡುವೆಯೇ, ಭೂಮಿಕಾ ತನ್ನ ಸ್ವಂತ ತಂಗಿಗೆ ಒಂದೆಡೆ ಅನ್ಯಾಯ ಆಗುತ್ತಿದ್ದರೆ, ಇನ್ನೊಂದೆಡೆ ಕೆಲಸದಾಕೆಗೆ ಅನ್ಯಾಯವಾಗುವುದನ್ನು ಕಂಡು ತಲ್ಲಣಗೊಂಡಿದ್ದಾಳೆ. ಹೇಗಾದರೂ ಮಾಡಿ ಈ ಸತ್ಯವನ್ನು ಎಲ್ಲರ ಎದುರು ಇಡಲು ಆಕೆ ನೋಡಿದ್ದಾಳೆ.ಆದರೆ ಮದುವೆಯ ತಯಾರಿಯಲ್ಲಿ ಇರುವಾಗಲೇ ಕೆಲಸದಾಕೆ ನಾಪತ್ತೆಯಾಗಿದ್ದಾಳೆ. ಅಂಥ ಒಬ್ಬಳು ಕೆಲಸದಾಕೆ ಇರಲೇ ಇಲ್ಲ ಎಂದು ಎಲ್ಲರ ಬಾಯಲ್ಲಿಯೂ ಹೇಳಿಸುವಲ್ಲಿ ಜೈದೇವನ ಅಮ್ಮ ಸಕ್ಸಸ್​ ಆಗಿದ್ದಾಳೆ. ಇದನ್ನು ಕೇಳಿ ಭೂಮಿಕಾಗೆ ಶಾಕ್​ ಆಗಿದೆ. ಈಗ ಮುಂದೇನು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿದೆ. 

View post on Instagram

ಬಿಗ್​ಬಾಸ್​ ವಿನಯ್​ ಕನಸು ಏನಿತ್ತು? ಡ್ರೋನ್​ ಪ್ರತಾಪ್​ ಗೆಲ್ಲದ ಕಾರಣವೇನು? ಅವ್ರ ಬಾಯಲ್ಲೇ ಕೇಳಿ....

ಸತ್ಯವನ್ನು ಸಾಬೀತು ಮಾಡಲು ಸಾಧ್ಯವಾಗದ ಭೂಮಿಕಾ ಒದ್ದಾಡುತ್ತಿದ್ದಾಳೆ. ಒಂದೆಡೆ ಸ್ವಂತ ತಂಗಿ ಮತ್ತು ಇನ್ನೊಂದೆಡೆ ಕೆಲಸದಾಕೆ. ಇಬ್ಬರಿಗೂ ನ್ಯಾಯ ಒದಗಿಸಲು ಹೋದ ಭೂಮಿಕಾಗೆ ಜೈದೇವನ ಕುತಂತ್ರವನ್ನು ಬಯಲು ಮಾಡಲು ಸಾಕ್ಷ್ಯಾಧಾರಗಳೇ ಸಿಗುತ್ತಿಲ್ಲ, ಏನು ಮಾಡುವುದು ಎಂದು ಸುಸ್ತಾಗಿದ್ದಾಳೆ.

ಅದೇ ಇನ್ನೊಂದೆಡೆ, ಭೂಮಿಕಾ ತಂಗಿಯ ಹಳದಿ ಶಾಸ್ತ್ರ ಶುರುವಾಗಿದೆ. ಇಷ್ಟವಿಲ್ಲದ ಮದುವೆಯನ್ನು ಮಾಡಿಕೊಳ್ಳಲು ಹೊರಟಿದ್ದಾಳೆ ಭೂಮಿಕಾ ತಂಗಿ. ಹಳದಿ ಶಾಸ್ತ್ರದ ಬೆನ್ನಲ್ಲೇ ಜೈದೇವ್​ಗೆ ಇದೀಗ ತನ್ನ ಸಹೋದರನಿಂದ ಪ್ರೇಯಸಿಯನ್ನು ಕಿತ್ತುಕೊಂಡು, ಗರ್ಭಿಣಿಯಾದ ಮಲ್ಲಿಯ ವಿಷಯವನ್ನು ಮುಚ್ಚಿಟ್ಟು ಮದುವೆಯಾಗುತ್ತಿರುವ ಸಂತಸ. ಇತ್ತ ಭೂಮಿಕಾ ಏನು ಮಾಡುವುದು ಎಂದು ತಿಳಿಯದೇ ಕಂಗಾಲಾಗಿದ್ದಾಳೆ. ಆದರೆ ಗೆದ್ದೆನೆಂದು ಬೀಗುತ್ತಿದ್ದ ಜೈದೇವ, ತನ್ನ ಪೌರುಷತ್ವವನ್ನು ಸಾರಿ ಹೇಳುತ್ತಿದ್ದಾನೆ. ಮಲ್ಲಿಯ ಹೊಟ್ಟೆಯಲ್ಲಿ ತನ್ನ ಕುಟುಂಬದ ವಂಶ ಬೆಳೆಯುತ್ತಿದ್ದರೆ, ಚಿಟ್ಟೆ ಅರ್ಥಾತ್​ ಭೂಮಿಕಾಳ ತಂಗಿಯನ್ನು ತಾನು ಹೇಗೆ ಲಪಟಾಯಿಸಿದೆ ಎಂದು ಹೇಳಿದ್ದಾನೆ. ಭೂಮಿಕಾ ತಂಗಿಯ ಜೊತೆ ಹೇಗೆ ಸಲೀಸಾಗಿ ಮದುವೆಯಾಗುತ್ತಿದೆ ಎಂದು ಕೊಚ್ಚಿಕೊಳ್ಳುತ್ತಿದ್ದಾನೆ. ಇದನ್ನು ಭೂಮಿಕಾ ಕೇಳಿಸಿಕೊಂಡಿದ್ದಾಳೆ. ಅವಳಿಗೆ ಆಕಾಶವೇ ಕಳಚಿಬಿದದ್ದ ಅನುಭವವಾಗಿದೆ. ಇದರ ಪ್ರೊಮೋ ರಿಲೀಸ್​ ಆಗಿದ್ದು, ಇನ್ನು ನಿಂಗೈತೆ ಮಾರಿಹಬ್ಬ ಅಂತಿದ್ದಾರೆ ಜೈದೇವ್​ಗೆ ಫ್ಯಾನ್ಸ್​. ಇದೇ ವೇಳೆ ಇನ್ನು ಕೆಲವರು ಜೈದೇವಗೆ ಕರಿಮಣಿ ಮಾಲಿಕ ನೀನಲ್ಲ ಎಂದು ಹೇಳುತ್ತಿದ್ದಾರೆ.

ಧಾರ್ಮಿಕ ಭಾವನೆಗೆ ಧಕ್ಕೆ: ಕ್ಷಮೆ ಕೋರಿದ ‘12th ಫೇಲ್’ ನಟ ವಿಕ್ರಾಂತ್ ಮೆಸ್ಸೆ- ಅಷ್ಟಕ್ಕೂ ಆಗಿದ್ದೇನು?

View post on Instagram