ಧಾರ್ಮಿಕ ಭಾವನೆಗೆ ಧಕ್ಕೆ: ಕ್ಷಮೆ ಕೋರಿದ ‘12th ಫೇಲ್’ ನಟ ವಿಕ್ರಾಂತ್ ಮೆಸ್ಸೆ- ಅಷ್ಟಕ್ಕೂ ಆಗಿದ್ದೇನು?

ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದ ಹಿನ್ನೆಲೆಯಲ್ಲಿ ಕ್ಷಮೆ ಕೋರಿದ್ದಾರೆ ‘12th ಫೇಲ್’ ನಟ ವಿಕ್ರಾಂತ್ ಮೆಸ್ಸೆ- ಅಷ್ಟಕ್ಕೂ ಆಗಿದ್ದೇನು? 
 

Vikrant Massey apologises for viral 2018 tweet featuring Ram Sita cartoon suc

ನಟ ವಿಕ್ರಾಂತ್ ಮೆಸ್ಸೆ ಹೆಸರು ಇದೀಗ ಬಹಳವಾಗಿ ಕೇಳಿ ಬರುತ್ತಿದೆ. ಅವರ ಸೂಪರ್ ಹಿಟ್, ಸ್ಫೂರ್ತಿದಾಯ ‘12th ಫೇಲ್’ ಚಿತ್ರ ಭರ್ಜರಿ ಹಿಟ್​ ಆಗುತ್ತಲೇ ವಿಕ್ರಾಂತ್​ ಅವರು ಮಿಂಚುತ್ತಿದ್ದಾರೆ. ಈಗ ಇವರ ಬಗ್ಗೆ ಇನ್ನಿಲ್ಲದ ಆಸಕ್ತಿ ಜನರಲ್ಲಿ ಮೂಡುತ್ತಿದೆ. ತಿಂಗಳಿಗೆ 35 ಲಕ್ಷ ರೂಪಾಯಿ ಬರುತ್ತಿದ್ದ ಧಾರಾವಾಹಿಯನ್ನು ಬಿಟ್ಟು ಬೆಳ್ಳಿಪರದೆಯನ್ನು ಆಯ್ದುಕೊಂಡಿದ್ದ ವಿಕ್ರಾಂತ್​ ಅವರಿಗೆ ಇದೀಗ ಯಶಸ್ಸಿನ ಸುರಿಮಳೆಯೇ  ಆಗುತ್ತಿದೆ. ವಿಧು ವಿನೋದ್ ಚೋಪ್ರಾ ಅವರ ನಿರ್ದೇಶನದ ‘12th ಫೇಲ್’ ಅನುರಾಗ್ ಪಾಢಕ್ ಅವರ ಪುಸ್ತಕವನ್ನು ಆಧರಿಸಿ ಮಾಡಲಾಗಿದೆ.  ಭಾರತೀಯ ಪೊಲೀಸ್​ ಸೇವೆಯ ಅಧಿಕಾರಿಯಾಗಿರುವ  ಮನೋಜ್ ಕುಮಾರ್ ಶರ್ಮಾ ಅವರ ನಿಜ ಜೀವನದ ಕಥೆ ಈ ಸಿನಿಮಾದಲ್ಲಿದೆ. ಈ ಚಿತ್ರಕ್ಕೆ ಒಳ್ಳೆಯ ರಿಸ್​ಪಾನ್ಸ್​ ಸಿಗುತ್ತಲೇ  ವಿಕ್ರಾಂತ್​ ಅವರು ಭಾರಿ ಯಶಸ್ಸಿನಲ್ಲಿದ್ದಾರೆ.

ಆದರೆ ಇದರ ಬೆನ್ನಲ್ಲೇ ವಿವಾದವೊಂದು ಇವರನ್ನು ಸುತ್ತುಕೊಂಡಿತ್ತು. ಒಬ್ಬರು ಯಶಸ್ಸು ಗಳಿಸಿದರು ಎಂದಾಕ್ಷಣ, ಅವರ ಹಿನ್ನೆಲೆಯೆಲ್ಲವೂ ಮತ್ತೆ ಬೆಳಕಿಗೆ ಬರುವುದು ಸಹಜ. ಇವರ ಬಗ್ಗೆ ಜನರಿಗೆ ಇನ್ನಿಲ್ಲದ ಆಸಕ್ತಿ ತಲೆದೋರುತ್ತದೆ. ಇದೇ ರೀತಿ ವಿಕ್ರಾಂತ್​ ಅವರಿಗೂ ಆಗಿದೆ. ‘12th ಫೇಲ್’ ಯಶಸ್ಸಿನ ಬಳಿಕ ಇವರ  ಹಳೆಯ ಟ್ವೀಟ್ ಒಂದು ವೈರಲ್ ಆಗಿದೆ.  ಇದನ್ನು ನೋಡಿದವರು ವಿಕ್ರಾಂತ್ ಅವರು ಹಿಂದೂ ವಿರೋಧಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.  

ವಿರುಷ್ಕಾ ಪುತ್ರ ಹುಟ್ಟುತ್ತಲೇ ನೂರಾರು ಸೋಷಿಯಲ್​ ಮೀಡಿಯಾ ಅಕೌಂಟ್​! ನೆಟ್ಟಿಗರು ಸುಸ್ತೋ ಸುಸ್ತು...

ಅಷ್ಟಕ್ಕೂ ವಿಕ್ರಾಂತ್​ ಅವರು, 2018ರಲ್ಲಿ ಮಾಡಿರುವ ಟ್ವೀಟ್​ ಇದಾಗಿದೆ. ಇದರಲ್ಲಿ ವಿಕ್ರಾಂತ್ ಅವರು ಶ್ರೀರಾಮಚಂದ್ರನಿಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.  ರಾಮನ ಭಕ್ತರಿಗೆ ಅಪಮಾನವಾಗುವಂಥ ಸಾಲುಗಳಿವೆ ಎನ್ನುವ ಕಾರಣಕ್ಕೆ ಇವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ,  ಹಿಂದೂ ಕಾರ್ಯಕರ್ತರು ಬಾಲಕಿಯೊಬ್ಬರನ್ನು ಅತ್ಯಾಚಾರ ಮಾಡಿದ ಸುದ್ದಿಗಾಗಿ ಒಂದು ಕಾರ್ಟೂನ್​ ರಚಿಸಲಾಗಿತ್ತು. ಈ  ಕಾರ್ಟೂನ್ ಅನ್ನು  ವಿಕ್ರಾಂತ್ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದರು. ಅದರಲ್ಲಿ  ಸೀತಾದೇವಿಯು ರಾಮನೊಂದಿಗೆ, ‘ಪುಣ್ಯಕ್ಕೆ ನನ್ನನ್ನು ರಾವಣ ಅಪಹರಣ ಮಾಡಿದ, ನಿನ್ನ ಭಕ್ತರು ಅಪಹರಣ ಮಾಡಿದ್ದರೆ ಕಷ್ಟವಾಗುತ್ತಿತ್ತು’ ಎಂದು ಬರೆಯಲಾಗಿತ್ತು. ಈ ಕಾರ್ಟೂನನ್ನು ಸೋಷಿಯಲ್​  ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದ  ವಿಕ್ರಾಂತ್  ಅವರು, ‘ಅರ್ಧ ಬೆಂದ ಆಲೂಗಡ್ಡೆ, ಅರ್ಧ ಬೆಂದ ರಾಷ್ಟ್ರೀಯವಾದಿಗಳು ದೇಹಕ್ಕೆ ನೋವನ್ನೇ ನೀಡುತ್ತವೆ’ ಎಂದು ಬರೆದುಕೊಂಡಿದ್ದರು. 

ಇದೀಗ ಈ ಟ್ವೀಟ್​ ವೈರಲ್​ ಆಗಿದ್ದು, ಇವರು ಹಿಂದೂ ವಿರೋಧಿ ಎನ್ನಲಾಗುತ್ತಿದೆ. ವೈರಲ್​ ಆಗುತ್ತಲೇ ವಿಕ್ರಾಂತ್​ ಅವರು, ಕ್ಷಮೆ ಕೋರಿದ್ದಾರೆ.  ‘2018ರ ನನ್ನ ಆ ಟ್ವೀಟ್​ ಬಗ್ಗೆ ನಾನು ಈಗ ಕೆಲವು ಮಾತನ್ನು ಹೇಳುತ್ತೇನೆ.  ನಾನು ಇದರಲ್ಲಿ ಹಿಂದೂ ಧರ್ಮಕ್ಕೆ ಅಪಮಾನ ಮಾಡುವ ಅಥವಾ ಕೇಡು ಬಯಸುವ ಉದ್ದೇಶವಿರಲಿಲ್ಲ.  ಆಗ ನನ್ನ ಸಹಜ ಬೇಸರವನ್ನು ವ್ಯಂಗ್ಯದ ಮೂಲಕ ಹೇಳಿದ್ದೆ ಅಷ್ಟೇ.   ನಾನು ಆ ಕಾರ್ಟೂನ್ ಅನ್ನು ನನ್ನ ಟ್ವೀಟ್​ ಜೊತೆಗೆ ಸೇರಿಸಿರುವುದು ದೊಡ್ಡ ಪ್ರಮಾದವಾಗಿದೆ.  ಯಾರಿಗಾದರೂ  ನನ್ನ ಟ್ವೀಟ್​ನಿಂದ ನೋವಾಗಿದ್ದರೆ ನಾನು ಮನಃಪೂರ್ವಕವಾಗಿ ಕ್ಷಮೆ ಕೋರುತ್ತೇನೆ.  ನಿಮಗೆಲ್ಲರಿಗೂ ತಿಳಿದೇ ಇರುವಂತೆ, ನಾನು ಎಲ್ಲಾ ನಂಬಿಕೆಗಳನ್ನ ಮತ್ತು ಧರ್ಮಗಳನ್ನು ಸಾಧ್ಯವಾದಷ್ಟು ಹೆಚ್ಚಿನ ಗೌರವಿಸುತ್ತೇನೆ. ನಾವೆಲ್ಲರೂ ಸಮಯದೊಂದಿಗೆ ಬೆಳೆಯುತ್ತೇವೆ ಮತ್ತು ನಮ್ಮ ತಪ್ಪುಗಳಿಂದ ಕಲಿಯುತ್ತೇವೆ ಎಂದಿದ್ದಾರೆ.

 ಬಿಗ್​ಬಾಸ್​ ವಿನಯ್​ ಕನಸು ಏನಿತ್ತು? ಡ್ರೋನ್​ ಪ್ರತಾಪ್​ ಗೆಲ್ಲದ ಕಾರಣವೇನು? ಅವ್ರ ಬಾಯಲ್ಲೇ ಕೇಳಿ....
 

Latest Videos
Follow Us:
Download App:
  • android
  • ios