ಸೋಶಿಯಲ್‌ ಮೀಡಿಯಾ ತಾರೆ ಭೂಮಿಕಾ ಬಸವರಾಜ್‌ ಲಡಾಕ್‌ನ ಪ್ಯಾಂಗಾಂಗ್‌ ಲೇಕ್‌ನ ದಡದಲ್ಲಿ 'ಧಿರ್‌ ಧಿರ್‌.. ತಿಲ್ಲಾನ..' ಹಾಡಿಗೆ ಕುಣಿದು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಭೂಮಿಕಾ ಅವರನ್ನು ಟೀಕಿಸಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಡಾನ್ಸ್‌ಗಳ ವಿಡಿಯೋಗಳನ್ನು ಹಂಚಿಕೊಂಡೇ ದೊಡ್ಡ ಪ್ರಮಾಣದಲ್ಲಿ ಫಾಲೋವರ್ಸ್‌ಗಳನ್ನು ಸಂಪಾದಿಸಿರುವ ಭೂಮಿಕಾ ಬಸವರಾಜ್‌ ಇತ್ತೀಚೆಗೆ ಲಡಾಕ್‌ ಟ್ರಿಪ್‌ಗೆ ಹೋಗಿ ಜಮಾಯಿಸಿ ಬಂದಿದ್ದಾರೆ. ಲಡಾಕ್‌ನ ರುದ್ರರಮಣೀಯ ರಸ್ತೆಗಳಲ್ಲಿ ಹಿಮಾಲಯನ್‌ ಬೈಕ್‌ ಓಡಿಸಿ ಸಂಭ್ರಮಿಸಿದ್ದಾರೆ. ಹಿಮಾಲಯದ ತಪ್ಪಲು, ಲಡಾಕ್‌ನಂಥ ಪ್ರದೇಶಕ್ಕೆ ಹೋದ ಮೇಲೆ ಸೀರೆಯಲ್ಲಿ ಭೂಮಿಕಾ ಅವರ ಡಾನ್ಸ್‌ ಇಲ್ಲದಿದ್ರೆ ಹೇಗೆ ಅಲ್ವಾ? ಎರಡು ದಿನಗಳ ಹಿಂದೆ ತಮ್ಮ ಇನ್ಸ್‌ಟಾಗ್ರಾಮ್‌ ಅಕೌಂಟ್‌ನಲ್ಲಿ ಲಡಾಕ್‌ನ ಪ್ಯಾಂಗಾಂಗ್‌ ಲೇಕ್‌ನ ದಡದಲ್ಲಿ ಡಾನ್ಸ್‌ ಮಾಡಿದ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ನೇರಳೆ ಬಣ್ಣದ ಸೀರೆಯುಟ್ಟ ಭೂಮಿಕಾ ಬಸವರಾಜ್‌, ರವಿಚಂದ್ರನ್‌, ರಮ್ಯಾಕೃಷ್ಣ ಅಭಿನಯದ ಮಾಂಗಲ್ಯಂ ತಂತುನಾನೇನಾ ಸಿನಿಮಾದ ಸೂಪರ್‌ ಹಿಟ್‌ ಹಾಡು 'ಧಿರ್‌ ಧಿರ್‌.. ತಿಲ್ಲಾನ..' ಎಂದು ಕುಣಿಸಿದ್ದಾರೆ. ಹಿಮಾಲಯದ ಪರ್ವತಗಳು, ಸರೋವರ ಹಾಗೂ ರವಿಚಂದ್ರನ್‌ ಸರ್‌ ಅವರ ಸಾಂಗ್‌ಗಳು ಎಷ್ಟು ಅದ್ಭುತ ಅಲ್ಲವೇ ಎಂದು ಅವರು ಬರೆದುಕೊಂಡಿದ್ದಾರೆ. ಅವರ ಪೋಸ್ಟ್‌ಅನ್ನು ಈವರೆಗೂ 60 ಸಾವಿರಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದು, 1 ಮಿಲಿಯನ್‌ ವೀವ್ಸ್‌ ಆಗಿದೆ. ಇನ್ನು ಎಂದಿನಂತೆ ಅವರ ಪೋಸ್ಟ್‌ಗೆ ಸಾಕಷ್ಟು ನೆಗೆಟಿವ್‌-ಪಾಸಿಟಿವ್‌ ಕಾಮೆಂಟ್‌ಗಳೂ ಬಂದಿವೆ.

ನೀವೆಷ್ಟೇ ರೀಲ್ಸ್‌ ಮಾಡಿದ ಕುಣಿದ್ರೂ ಬಿಗ್‌ ಬಾಸ್‌ಗೆ ಹೋಗೋಕೆ ಸಾಧ್ಯವಾಗಲಿಲ್ಲವಲ್ಲ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಕ್ಕೆ ಉತ್ತರ ನೀಡಿರುವ ಭೂಮಿಕಾ, 'ಅಷ್ಟಕ್ಕೂ ಬಿಗ್‌ ಬಾಸ್‌ ಮನೆಗೆ ಯಾಕೆ ಹೋಗಬೇಕು. ನಮ್ಮ ಮನೆಯೇ ಸ್ವರ್ಗ ನನಗೆ' ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇನ್ನೂ ಕೆಲವರು ಅವಕಾಶ ಸಿಗದೇ ಇದ್ದಾಗ ಎಲ್ಲರೂ ಹೀಗೇ ಹೇಳೋದು ಎಂದು ಭೂಮಿಕಾ ಕಾಲೆಳೆದಿದ್ದಾರೆ.

ಇನ್ನು ಬೆಟ್ಟಿಂಗ್‌ ಆಪ್‌ಗಳನ್ನ ನೀವು ಪ್ರಮೋಷನ್‌ ಮಾಡ್ತಿದ್ದೀರಿ ಎಂದು ಅಶ್ಲೀಲ ಪದದಿಂದ ಬೈದ ಮಹಿಳೆಯೊಬ್ಬಳಿಗೂ ಭೂಮಿಕಾ ಕಾಮೆಂಟ್‌ ಬಾಕ್ಸ್‌ನಲ್ಲಿ ಜಾಡಿಸಿದ್ದಾರೆ. 'ಈ ನಿಮ್ಮ ಹೊಲಸು ಬಾಯಿಗೆ ಬ್ರೇಕ್‌ ಕೊಡಿ ಮೇಡಮ್‌, ಹಬ್ಬ ಬೇರೆ ಇದೆ..' ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಹೆಚ್ಚಿನವರು ಭೂಮಿಕಾ ಬಸವರಾಜ್‌ ಈ ಬಾರಿಯ ಬಿಗ್‌ಬಾಸ್‌ನಲ್ಲಿ ಇರಲಿದ್ದಾರೆ ಎಂದು ಹೇಳಿದ್ದರು. ಆದರೆ, ಬಿಗ್‌ ಬಾಸ್‌ ಸ್ಪರ್ಧಿಗಳ ಹೆಸರು ರಿವಲ್‌ ಆದಾಗ ಇವರ ಹೆಸರು ಇದ್ದಿರಲಿಲ್ಲ. ಹಾಗಾಗಿ ಕಾಮೆಂಟ್‌ ಬಾಕ್ಸ್‌ನಲ್ಲಿ ಹೆಚ್ಚಿನವರು ಇದೇ ವಿಚಾರಕ್ಕೆ ಭೂಮಿಕಾ ಅವರನ್ನ ಕಾಲೆಳೆದಿದ್ದಾರೆ. ನೀವು ಬಿಗ್‌ ಬಾಸ್‌ನಲ್ಲಿ ಇರಬೇಕಿತ್ತು ಎಂದು ಕಾಮೆಂಟ್‌ ಮಾಡಿದ್ದಾರೆ. ಮೂಲತಃ ಚಿಕ್ಕಮಗಳುರಿನವರಾದ ಭೂಮಿಕಾ ಬಸವರಾಜ್‌ ಡಿಜಿಟಲ್ ಕಂಟೆಂಟ್ ಕ್ರಿಯೇಟರ್. ರೀಲ್ಸ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಇವರು, ಇನ್‌ಸ್ಟಾಗ್ರಾಮ್‌ನಲ್ಲಿ 2.2 ಮಿಲಿಯಲ್ ಫಾಲೋವರ್ಸ್ ಹೊಂದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಮೋಹಕ ಡಾನ್ಸ್‌ ವಿಡಿಯೋಗಳ ಮೂಲಕವೇ ಅವರು ಜನಪ್ರಿಯರಾಗಿದ್ದಾರೆ.

ಬಿಂದು ಗೌಡ, ಭೂಮಿಕಾ ಬಸವರಾಜ್ ಪ್ರೀತಿಸುವ ಹುಡುಗ ಒಬ್ನೇನಾ? ಒಂದೇ ಸ್ಥಳದಲ್ಲಿ ಬಾಯ್‌ಫ್ರೆಂಡ್ ಹುಡುಕಾಟ!

ಆರಂಭದಲ್ಲಿ ಕೇವಲ ಫೋಟೋಗಳನ್ನು ಅಪ್‌ಲೋಡ್‌ ಮಾಡುತ್ತಿದ್ದ ಭೂಮಿಕಾ ಬಳಿಕ ತಮ್ಮ ಡಾನ್ಸ್‌ ಆಸಕ್ತಿಯನ್ನು ವಿಡಿಯೋಗಳನ್ನು ಪೋಸ್ಟ್‌ ಮಾಡುವ ಮೂಲಕ ಪರಿಚಯಿಸಿದರು. ಇಂದಿಗೂ ಅವರ ಡಾನ್ಸ್‌ಗೆ ಅಪಾರ ವರ್ಗದ ಅಭಿಮಾನಿಗಳಿದ್ದಾರೆ.

ರೀಲ್ಸ್‌ ರಾಣಿ ಭೂಮಿಕಾ ಬಸವರಾಜ್‌ ಗುಡ್ಡು ಇನ್ನಿಲ್ಲ; ಕಣ್ಣೀರಿಡುತ್ತಾ ಪೂಜೆ ಸಲ್ಲಿಸಿದ ಸುಂದರಿ!