ಕನ್ನಡದ ರೀಲ್ಸ್ ರಾಣಿಯರಾದ ಭೂಮಿಕಾ ಬಸವರಾಜ್ ಮತ್ತು ಬಿಂದು ಗೌಡ ಇಬ್ಬರೂ ಪ್ರೀತಿಸುವ ಹುಡುಗ ಒಬ್ನೇನಾ? ಇಬ್ಬರೂ ಸೇರಿ ಒಂದೇ ಸ್ಥಳದಲ್ಲಿ ಪ್ರೀತಿಸುವ ಹುಡುಗನಿಗಾಗಿ ಹುಡುಕಾಡಿದ್ದಾರೆ.

ಬೆಂಗಳೂರು (ಜು.08): ಹಲವು ವರ್ಷಗಳಿಂದ ಪ್ರತ್ಯೇಕವಾಗಿ ಹಲವು ಹಾಡುಗಳಿಗೆ ಹಾಗೂ ಹಿನ್ನೆಲೆ ಧ್ವನಿಗಳಿಗೆ ವಿಭಿನ್ನ ನೃತ್ಯ ಹಾಗೂ ನಟನೆ ಮೂಲಕ ರೀಲ್ಸ್ ಮಾಡುತ್ತಾ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದ ಬಿಂದು ಗೌಡ (Bhindu Gowda) ಹಾಗೂ ಭೂಮಿಕ ಬಸವರಾಜ್ (Bhumika Basavaraj) ಈಗ ಒಂದೇ ರೀಲ್ಸ್‌ನಲ್ಲಿ ಪ್ರೀತಿಸುವ ಗೆಳೆಯನಿಗಾಗಿ ಹುಡುಕಾಡಿದ್ದಾರೆ.

ದೇಶದಲ್ಲಿ ಟಿಕ್‌ ಟಾಕ್ ಬಂದ ನಂತರ ಸಣ್ಣ ಸಣ್ಣ ಗಲ್ಲಿಗಳಲ್ಲಿಯೂ ರೀಲ್ಸ್‌ ಸ್ಟಾರ್‌ಗಳು ಹುಟ್ಟಿಕೊಂಡಿದ್ದರು. ಆದರೆ, ಟಿಕ್‌ಟಾಕ್‌ನಲ್ಲಿ ಅಶ್ಲೀಲ ಕಂಟೆಂಟ್‌ಗಳನ್ನು ಫಿಲ್ಟರ್ ಮಾಡದೇ ತೋರಿಸುತ್ತಿದ್ದರಿಂದ, ಅದನ್ನು ದೇಶದಲ್ಲಿಯೇ ಬ್ಯಾನ್ ಮಾಡಲಾಗಿದೆ. ಆದರೆ, ಟಿಕ್‌ಟಾಕ್ ಬ್ಯಾನ್ ಆದ ನಂತರ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ಗಳ ರೀಲ್ಸ್‌ಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಹಲವು ರೀಲ್ಸ್‌ ಸ್ಟಾರ್‌ಗಳು ತಮ್ಮದೇ ಫಾಲೋವರ್ಸ್‌ಗಳನ್ನು ಹೆಚ್ಚಿಸಿಕೊಂಡು ಆನ್‌ಲೈನ್ ಪ್ಲಾಟ್‌ಫಾರ್ಮ್‌ ಮೂಲಕ ಆರ್ಥಿಕ ಆದಾಯವನ್ನೂ ಗಳಿಸುತ್ತಿದ್ದಾರೆ.

ರೀಲ್ಸ್‌ಗೆ ಕುಣಿದು ಕುಣಿದು ಹಣ ಸಂಪಾದನೆ ಮಾಡಿದ ಆಂಟಿ ಮನೆಗೆ ಬಂತು ಹೊಸ ಸ್ಕೂಟಿ!

ಇದೇ ರೀತಿ ಟಿಕ್‌ ಟಾಕ್ ರೀಲ್ಸ್ ಸ್ಟಾರ್ಸ್‌ಗಳಾಗಿದ್ದ ಬಿಂದು ಗೌಡ ಹಾಗೂ ಭೂಮಿಕಾ ಬಸವರಾಜ್ ಅವರು ಕೂಡ ತಮ್ಮ ನೃತ್ಯಗಳಿಂದ ಹಾಗೂ ಮೈಮಾಟದಿಂದ ಲಕ್ಷಾಂತರ ಫಾಲೋವರ್ಸ್‌ಗಳನ್ನು ಗಳಿಸಿದ್ದಾರೆ. ಆದರೆ, ಟಿಕ್‌ಟಾಕ್ ಬ್ಯಾನ್ ಆದ ನಂತರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಕ್ರಿಯರಾದ ಇವರು, ಇಲ್ಲಿ ಲಕ್ಷಾಂತರ ಫಾಲೋವರ್ಸ್‌ಗಳನ್ನು ಹೊಂದಿದ್ದು, ಆರ್ಥಿಕ ಆದಾಯ ಪಡೆಯುತ್ತಿದ್ದಾರೆ. ಇನ್ನು ಇವರ ಫಾಲೋವರ್ಸ್‌ಗಳು ಇಬ್ಬರ ಡ್ಯಾನ್ಸ್ ರೀಲ್ಸ್‌ಗಳನ್ನು ಶೇರ್ ಮಾಡಿಕೊಂಡು ಯಾರ ಡ್ಯಾನ್ಸ್ ಚೆನ್ನಾಗಿದೆ? ಯಾರ ಡ್ಯಾನ್ಸ್ ಇಸ್ಟ ಆಯ್ತು ಕಾಮೆಂಟ್ ಮಾಡಿ ಎಂದೆಲ್ಲಾ ತಮ್ಮದೇ ರೀಲ್ಸ್ ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಈಗ ಇಬ್ಬರೂ ಒಂದೇ ವಿಡಿಯೋನಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ಹಲವು ರೀಲ್ಸ್‌ ಸ್ಟಾರ್‌ಗಳು ಕೊಲ್ಯಾಬ್ರೇಷನ್ (collab) ಮಾಡಿಕೊಂಡು ವಿಡಿಯೋ ಮಾಡುತ್ತಿರುತ್ತಾರೆ. ಅದರಲ್ಲಿ ಇಬ್ಬರೂ ಟ್ಯಾಗ್ ಮಾಡಿಕೊಂಡು ರೀಲ್ಸ್ ಪೋಸ್ಟ್ ಮಾಡಿಕೊಳ್ಳುವುದರಿಂದ ಇಬ್ಬರ ಫಾಲೋವರ್ಸ್‌ಗಳಿಗೂ ರೀಲ್ಸ್ ತಲುಪುತ್ತದೆ. ಆಗ ವೀಕ್ಷಣೆ ಮಾಡಿದವರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಉತ್ತಮ ಆದಾಯ ಗಳಿಸಬಹುದು ಎಂಬುದು ಇವರ ಲೆಕ್ಕಾಚಾರ ಆಗಿರುತ್ತದೆ. ಇನ್ನು ಫಾಲೋವರ್ಸ್‌ಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳಬಹುದು ಎಂಬುದು ಇನ್ನೊಂದು ಲೆಕ್ಕಾಚಾರವಾಗಿದೆ.

ಬಿಂದುಗೌಡ ಹಾಗೂ ಭೂಮಿಕಾ ಬಸವರಾಜ್ ಸೇರಿ ಇಬ್ಬರೂ 'ಎಕ್ಸ್‌ಕ್ಯೂಸ್ ಮಿ' ಚಿತ್ರದ 'ಪ್ರೀತ್ರೆ ಅಂತಾ ಪ್ರಾಣ ತಿನ್ನೋ ಗೆಳೆಯ ನೀನು ಯಾರೋ..' ಹಾಡಿಗೆ ಸುಂದರವಾದ ಮಲೆನಾಡಿದ ತಾಣದಲ್ಲಿ ನೃತ್ಯ ಮಾಡಿದ್ದಾರೆ. ಹೀಗೆ ಇಬ್ಬರೂ ಸೀರೆಯುಟ್ಟು ನಿಸರ್ಗದ ಮಡಿಲಿನಲ್ಲಿ ರೀಲ್ಸ್ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, 'ಪ್ರೀತ್ಸೆ ಅಂತ ಪ್ರಾಣ ತಿನ್ನೋ ಗೆಳೆಯ ಬೇಕು' ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಮುಂದುವರೆದು, ನಿಮಗೆ ನೆನಪಿದೆಯೇ ನಮ್ಮ ಮೊದಲ ಕೊಲ್ಯಾಬ್ ಯಾವುದೆಂದು ಎಂದು ತಮ್ಮ ಅಭಿಮಾನಿಗಳಿಗೆ ಪ್ರಶ್ನೆಯನ್ನೂ ಕೇಳಿದ್ದಾರೆ.

ನಟ ದರ್ಶನ್ ಕೊಲೆ ಕೇಸ್; ಕೋರ್ಟ್‌ ವಿಚಾರಣೆಗೆ ಮುನ್ನವೇ ಜಾಮೀನು ಅರ್ಜಿ ವಾಪಸ್ ಪಡೆದ ವಕೀಲರು

ಭೂಮಿಕಾ ಬಸವರಾಜ್ ಹಾಗೂ ಬಿಂದು ಗೌಡ ಸೇರಿ ಮಾಡಿದ ಈ ರೀಲ್ಸ್‌ಗೆ 2 ದಿನದಲ್ಲಿ ಬರೋಬ್ಬರಿ 1.51 ಲಕ್ಷಕ್ಕೂ ಅಧಿಕ ಲೈಕ್ಸ್‌ಗಳು 700ಕ್ಕೂ ಅಧಿಕ ಕಾಮೆಂಟ್‌ಗಳು ಬಂದಿವೆ. ಇದಕ್ಕೆ ತರಹೇವಾರಿ ಕಾಮೆಂಟ್ ಮಾಡಿರುವ ನೆಟ್ಟಿಗರು, ಒಂದೇ ಹಾಡು ಇಬ್ಬರು ಹುಡುಗಿಯರು ಪ್ರೇಮಿಯನ್ನು ಹುಡುಕುತ್ತಾ ಇದ್ದಾರೆ, ಇದೊಂತರಹ ಚನ್ನಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ನಿಮ್ಮಿಬ್ಬರ ಕಾನ್ಸೆಪ್ಟ್‌ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇವರಿಬ್ಬರ ರೀಲ್ಸ್ ನೋಡಿದರೆ ಇಬ್ಬರೂ ಹುಡುಗಿಯರು ಸೇರಿ ಒಬ್ಬನೇ ಹುಡುಗನನ್ನು ಪ್ರೀತಿ ಮಾಡುತ್ತಿದ್ದಾರೆ ಎಂಬ ಚಿಂತನೆ ಬರುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.

View post on Instagram