ರೀಲ್ಸ್ ರಾಣಿ ಭೂಮಿಕಾ ಬಸವರಾಜ್ ಗುಡ್ಡು ಇನ್ನಿಲ್ಲ; ಕಣ್ಣೀರಿಡುತ್ತಾ ಪೂಜೆ ಸಲ್ಲಿಸಿದ ಸುಂದರಿ!
ಪ್ರೀತಿಯ ಶ್ವಾನವನ್ನು ಕಳೆದುಕೊಂಡು ಭೂಮಿಕಾ ಬಸವರಾಜ್. ಕಣ್ಣೀರಿಟ್ಟ ನೆಟ್ಟಿಗರು.....
ವಿಭಿನ್ನವಾಗಿರುವ ರೀಲ್ಸ್ ಮತ್ತು ಯೂಟ್ಯೂಬ್ ವ್ಲಾಗ್ ಮಾಡುವ ಮೂಲಕ ನೆಟ್ಟಿಗರನ್ನು ಮನೋರಂಜಿಸುತ್ತಿರುವ ಭೂಮಿಕಾ ಬಸವರಾಜ್ ಪ್ರೀತಿಯ ಗುಡ್ಡುವನ್ನು ಕಳೆದುಕೊಂಡಿದ್ದಾರೆ.
Shih Tzu ಜಾತಿಯ ಶ್ವಾನಕ್ಕೆ ಗುಡ್ಡು ಎಂದು ನಾಮಕರಣ ಮಾಡಿ ಪ್ರೀತಿಯಿಂದ ಸಾಕುತ್ತಿದ್ದ ಭೂಮಿಕಾ ಬಸವರಾಜ್ 11ನೇ ದಿನದ ಕಾರ್ಯ ಮುಗಿದ ನಂತರ ಜನರೊಟ್ಟಿಗೆ ವಿಷಯ ಹಂಚಿಕೊಂಡಿದ್ದಾರೆ.
'ನನ್ನ ಪ್ರೀತಿಯ ಗುಡ್ಡುವನ್ನು ಕಳೆದುಕೊಂಡು ಇಂದಿಗೆ 11 ದಿನಗಳು ಕಳೆದಿದೆ. ಹಲವು ದಿನಗಳಿಂದ ಜ್ವರ ಮತ್ತು ಹೊಟ್ಟೆ ಇನ್‌ಫೆಕ್ಷನ್‌ನಿಂದ ಬಳಲುತ್ತಿದ್ದ' ಎಂದು ಭೂಮಿಕಾ ಬರೆದುಕೊಂಡಿದ್ದಾರೆ.
'ಸಾವು ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ ಆದರೆ ಡಾಕ್ಟರ್ ನೀಡಿದ ಹೈ ಡೋಸ್ ಮಾತ್ರ ಮತ್ತು ಇಂಜೆಕ್ಷನ್‌ನಿಂದ ಗುಡ್ಡು ಸತ್ತೋದ'
'ಇಂದು ಹಾಗೂ ಎಂದೆಂದಿಗೂ ಆ ವೈದ್ಯರ ಬಳಿ ನನ್ನ ಗುಡ್ಡುವನ್ನು ಕರೆದುಕೊಂಡು ಹೋಗಿದ್ದಕ್ಕೆ ಪಶ್ಚಾಪಾತ ಪಡುತ್ತೀನಿ. ಆತನಿಲ್ಲದೆ ಬದುಕುವುದು ಇಷ್ಟು ಕಷ್ಟ ಎಂದು ಗೊತ್ತಿರಲಿಲ್ಲ'
ಗುಡ್ಡು ಜೊತೆ ಕಳೆದಿರುವ ಪ್ರತಿಯೊಂದು ಸುಂದರ ಕ್ಷಣಗಳನ್ನು ವಿಡಿಯೋ ಮೂಲಕ ಭೂಮಿಕಾ ಹಂಚಿಕೊಂಡಿದ್ದಾರೆ. ಹಲವು ಜನಪ್ರಿಯ ರೀಲ್ಸ್ ಸ್ಟಾರ್‌ಗಳು ಸಾಂತ್ವನ ಹೇಳಿದ್ದಾರೆ.