Asianet Suvarna News Asianet Suvarna News

ಮೊದಲ ಸಂಬಳದಲ್ಲಿ ಗೌತಮ್​ ಜೊತೆ ಡೇಟಿಂಗ್! ಕಣ್ಣು ಹೊಡೆದು ಗಂಡನನ್ನು ಬೋಲ್ಡ್​ ಮಾಡೋದಾ ಭೂಮಿಕಾ?

ಭೂಮಿಕಾಳಿಗೆ  ಮೊದಲ ಸಂಬಳ ಸಿಕ್ಕಿದೆ. ಗಂಡ ಗೌತಮ್​ನನ್ನು ಡೇಟಿಂಗ್​ಗೆ ಕರೆದುಕೊಂಡು ಹೋಗಿದ್ದಾಳೆ. ಕ್ರಿಕೆಟ್​ ಆಡುವಾಗ ಏನು ಮಾಡಿದ್ದಾಳೆ ನೋಡಿ...
 

Bhoomika got her first salary and taken her husband Gautam on a date in Amrutadhare suc
Author
First Published Jul 2, 2024, 4:04 PM IST

ಕೋಟಿ ಕೋಟಿ ಎಂದರೂ ಲೆಕ್ಕಕ್ಕೇ ಇಲ್ಲದ ಆಗರ್ಭ ಶ್ರೀಮಂತರ ಮನೆಯ ಸೊಸೆಯಾಗಿರುವ ಸ್ವಾಭಿಮಾನಿ ಭೂಮಿಕಾಗೆ ಮೊದಲ ಸಂಬಳ ಬಂದಿದೆ. ಈ ಸಂಬಳದಲ್ಲಿ ಗಂಡನನ್ನು ಡೇಟಿಂಗ್​ಗೆ ಕರೆದುಕೊಂಡು ಹೋಗಿದ್ದಾಳೆ. ಅದೂ ಅವಳು ಕಲಿತಿರುವ ಶಾಲೆಗೆ ಹೋಗಿದ್ದಾಳೆ. ಅಲ್ಲಿರುವ ಮಕ್ಕಳ ಜೊತೆ ತಾನೂ ಆಟ ಆಡುವುದಾಗಿ ಗೌತಮ್​ ಜಿದ್ದು ಹಿಡಿದಿದ್ದಾನೆ. ತಾನೊಬ್ಬ ಆಗರ್ಭ ಶ್ರೀಮಂತ ಎನ್ನುವುದನ್ನು ಮರೆತು, ತನ್ನೊಳಗೊಬ್ಬ ಮಗು ಇದ್ದಾನೆ ಎನ್ನುವುದನ್ನು ಆಗಲೇ ಅರಿತಿದ್ದಾನೆ ಗೌತಮ್​. ದುಡಿಮೆ, ದುಡ್ಡು ಸಂಪಾದನೆ, ಮೀಟಿಂಗು, ಬಿಜಿಸನು ಎಂದು 24 ಗಂಟೆ ವರ್ಕೋಹಾಲಿಕ್​ ಆಗಿರುವ ಗೌತಮ್​ಗೆ ಈಗ ನಿಜವಾದ ಜೀವನದ ಅರಿವು ಮೂಡಿಸುತ್ತಿದ್ದಾಳೆ ಭೂಮಿಕಾ. ಇವನು ದುಡಿದರೆ, ಮಜಾ ಮಾಡುತ್ತಿದ್ದ ಕುಟುಂಬದವರನ್ನು ಟೈಟ್​ ಮಾಡಿದ್ದಾಳೆ ಭೂಮಿ ಮಿಸ್ಸು. ಇದೀಗ ಮೊದಲ ಸಂಬಳದಲ್ಲಿ ಡೇಟಿಂಗ್​ಗೆ ಕರೆದುಕೊಂಡು ಹೋಗಿ ಡುಮ್ಮಾ ಸರ್​ ಅನ್ನೇ ಬೋಲ್ಡ್​ ಮಾಡಿಬಿಟ್ಟಿದ್ದಾಳೆ!

ಹೌದು. ಕ್ರಿಕೆಟ್​ ಆಡುತ್ತೇನೆ ಎಂದು ಗೌತಮ್​ ಬ್ಯಾಟ್​ ಹಿಡಿದಾಗ ತಾವು ಬೌಲಿಂಗ್​ ಮಾಡುವುದಾಗಿ ಹೇಳಿದ ಭೂಮಿಕಾ ಕಣ್ಣು ಹೊಡೆದಿದ್ದಾಳೆ. ಇದನ್ನು ನೋಡುತ್ತಿದ್ದಂತೆಯೇ ಗೌತಮ್​ ಬೋಲ್ಡ್​ ಆಗಿದ್ದಾನೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಅಭಿಮಾನಿಗಳಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. ನಿಮ್ಮಿಬ್ಬರ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ ಎಂದು ಹಾರೈಸುತ್ತಿದ್ದಾರೆ. ಅಷ್ಟಕ್ಕೂ ಅಮೃತಧಾರೆಯ ಸೊಸೆ ಎಂದ್ರೆ ಸೀರಿಯಲ್​ ಪ್ರೇಮಿಗಳಿಎ ಹಬ್ಬವೋ ಹಬ್ಬ. ಈ ಸೊಸೆ ಉಳಿದ ಬಹುತೇಕ ಸೀರಿಯಲ್​ ಸೊಸೆಯಂತೆ ಅಳುಮುಂಜಿಯಲ್ಲ.

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

ಸಾಧನೆ ಮುಂದೆ ಅಕ್ಷರ, ವಿದ್ಯೆ, ಭಾಷೆ ಎಲ್ಲವೂ ಗೌಣ... ಶ್ರೀನಾಥ್​ ಮಾತಲ್ಲಿ ಎಷ್ಟು ಅರ್ಥವಿದೆಯಲ್ವೆ?

ಇಲ್ಲಿ ವಿಲನ್​ಗಳ ಕೈ ಮೇಲಾಗಲ್ಲ. ಬದಲಿಗೆ ವಿಲನ್​ಗಳನ್ನು ಹಂತಹಂತಕ್ಕೂ ವಿಲವಿಲ ಆಗಿಸೋಳು ಸೀರಿಯಲ್​ ಹೀರೋಯಿನ್ನು. ವಿಲನ್​ಗಳು ಕೆಟ್ಟವರು ಎನ್ನುವುದನ್ನು ಅರಿಯದ ಮುಗ್ಧ ಗಂಡನನ್ನೂ ಎದುರು ಹಾಕಿಕೊಳ್ಳದೇ, ಅವರನ್ನು ಒಳ್ಳೆಯವರೆಂದು ನಂಬಿರುವ ಮನೆಯ ಇತರರಿಗೂ ಯಾವುದೇ ಸಂದೇಹ ಮೂಡದಂತೆ ನಗುನಗುತ್ತಲೇ ಅವರ ಬುಡಕ್ಕೆ ಕತ್ತರಿ ಹಾಕುವಲ್ಲಿ ಈ ಸೊಸೆ ಸಿಕ್ಕಾಪಟ್ಟೆ ಎಕ್ಸ್​ಪರ್ಟ್​. ಅವಳೇ ಅಮೃತಧಾರೆಯ ಭೂಮಿಕಾ. ಇದೀಗ ಯಾರಿಗೂ ಅರಿವಿಗೆ ಬಾರದೇ ಖಳನಾಯಕರ ಬುಡಕ್ಕೇ ತಂದಿಟ್ಟಿದ್ದಾಳೆ ಈ ಭೂಮಿ ಮಿಸ್ಸು.   

 


 ಆಗರ್ಭ ಶ್ರೀಮಂತರ ಮನೆಯಲ್ಲಿ ಕೋಟಿಯೂ ಕಸಕ್ಕೆ ಸಮ. ಅದೇ ಮಧ್ಯಮ ವರ್ಗದ ಕುಟುಂಬದವರಲ್ಲಿ ನೂರು ರೂಪಾಯಿನೂ ಕೋಟಿಗೆ ಸಮ. ಇದೀಗ ಆಗರ್ಭ ಮನೆಯ ಸೊಸೆಯಾಗಿರುವ ಭೂಮಿಕಾಗೆ ಆ ಮನೆಯನ್ನು ಬ್ಯಾಲೆನ್ಸ್​ ಮಾಡುವುದು ಕಷ್ಟವೇ. ಶ್ರೀಮಂತಿಕೆಯಲ್ಲಿ ಬೆಳೆದ ಹೆಣ್ಣುಮಕ್ಕಳು ಮಧ್ಯಮ ವರ್ಗದ ಮನೆಗೆ ಮದುವೆಯಾಗಿ ಹೋದರೆ ಪಡುವ ಕಷ್ಟ ಒಂದೆಡೆಯಾದರೆ, ಸ್ವಾಭಿಮಾನದ ಮಧ್ಯಮ ವರ್ಗದ ಹೆಣ್ಣು ಶ್ರೀಮಂತರ ಮನೆಗೆ ಸೊಸೆಯಾಗಿ ಹೋದರೂ ಅದೇ ರೀತಿ ಆಗುತ್ತದೆ. ಇದಕ್ಕೆ ಉದಾಹರಣೆ ಅಮೃತಧಾರೆ. ಮಿಡ್ಲ್​ಕ್ಲಾಸ್​ ಭೂಮಿಕಾ ಆಗರ್ಭ ಶ್ರೀಮಂತನ ಮನೆಯ ಸೊಸೆಯಾಗಿದ್ದೂ ಅಲ್ಲದೇ ಮನೆಯ ಯಜಮಾನಿ ಪಟ್ಟ ಬೇರೆ ಸಿಕ್ಕಿಬಿಟ್ಟಿದೆ. ಆ ಮನೆಯವರ ಖರ್ಚಿಗೆ ಕಡಿವಾಣ ಹಾಕುವ ಪಣ ತೊಟ್ಟಿದ್ದಾಳೆ ಭೂಮಿಕಾ. ಆದರೆ ವಿಲನ್​ಗಳೇ ಮನೆಯಲ್ಲಿ ತುಂಬಿದ್ದರೂ ಎಲ್ಲರನ್ನೂ ಒಳ್ಳೆಯವರು ಎಂದು ಬಗೆಯುತ್ತಿರುವ ಪತಿಗೆ ತಿಳಿಯದಂತೆ ಮನೆಯವರಿಗೆಲ್ಲಾ ಬುದ್ಧಿ ಕಲಿಸುವುದು ಅಷ್ಟು ಸುಲಭದ ಮಾತಲ್ಲ. ಆದರೂ ಭೂಮಿಕಾ ಗಂಡನ ಪ್ರೀತಿ ಗೆಲ್ಲುತ್ತಲೇ ಮನೆಯವರಿಗೆ ಬುದ್ಧಿ ಕಲಿಸುತ್ತಿದ್ದಾಳೆ. 

ಫಲಿಸಿತು ತಂತ್ರ- ಕೊನೆಗೂ ಅಪ್ಪ ಎಂದ ಮಗ! ಮಾಧವನ ನಟನೆಗೆ ಕಣ್ಣೀರಾದ ಅಭಿಮಾನಿಗಳು


Latest Videos
Follow Us:
Download App:
  • android
  • ios