ಜಗಳ ಮಾಡದೆಯೂ ಕುತಂತ್ರಿ ಅತ್ತೆ-ನಾದಿನಿಯರನ್ನು ಮಟ್ಟ ಹಾಕ್ಬೋದಾ? ಭೇಷ್​ ಭೇಷ್ ಎಂದ ಫ್ಯಾನ್ಸ್​

ಯಾವುದೇ ಗಲಾಟೆ, ಗೊಂದಲ, ಜಗಳವಿಲ್ಲದೇ ಅತ್ತೆಯ ಕುತಂತ್ರ ಬಯಲು ಮಾಡಿದ್ದಾಳೆ ಭೂಮಿಕಾ. ಅಷ್ಟಕ್ಕೂ ಅವಳು ಮಾಡಿದ್ದೇನು?  
 

Bhoomika exposed the machination of the mother-in-law without fight in  Amrutadhare suc

ಹಾವು ಸಾಯಬೇಕು, ಆದ್ರೆ ಕೋಲು ಮುರಿಯಬಾರದು ಎನ್ನುವ ಗಾದೆ ಮಾತನ್ನು ಸಂಸಾರದಲ್ಲಿ ಅಳವಡಿಸಿಕೊಳ್ಳುವುದು ತುಸು ಕಷ್ಟವೇ. ಅತ್ತೆಯೋ ಇಲ್ಲವೇ ಸೊಸೆಯೋ ಕುತಂತ್ರಿಯಾದ ಸಂದರ್ಭದಲ್ಲಿ, ಸದಾ ಕೆಟ್ಟದ್ದನ್ನೇ ಮಾಡುತ್ತಿರುವ ಸಮಯದಲ್ಲಿ ಜಗಳವಾಡದೇ, ಗಂಡನ ಮನಸ್ಸನ್ನೂ ನೋಯಿಸದೇ, ಕುಟುಂಬದ ಯಾರ ಜೊತೆಯೂ  ಕಿರಿಕ್ಕೂ ಮಾಡಿಕೊಳ್ಳದೇ ಕುತಂತ್ರಿಗಳನ್ನು ಮಟ್ಟ ಹಾಕುವುದು ಎಂದರೆ ಸುಲಭದ ಮಾತೇ ಅಲ್ಲ. ಇದು ಸಂಸಾರ ಮಾತ್ರವಲ್ಲದೇ ನಿಜ ಜೀನದಲ್ಲಿ ಬಹುಶಃ ವೈರಿಗಳನ್ನು ಜಗಳವಾಡದೇ ಮಟ್ಟ ಹಾಕುವುದು ಕಷ್ಟ ಸಾಧ್ಯವೇ. ಆದರೆ ಅಮೃತಧಾರೆ ಸೀರಿಯಲ್​ನಲ್ಲೊಂದು ಕುತೂಹಲ ನಡೆದಿದೆ. ನಿಜ ಜೀವನದಲ್ಲಿಯೂ ಹೀಗೆ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿರೋ ಸೀರಿಯಲ್​ಗೆ ಅಭಿಮಾನಿಗಳು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ತನ್ನ ಅಮ್ಮನ ಮೇಲೆ ಪ್ರಾಣ ಇಟ್ಟುಕೊಂಡಿರೋ ಗಂಡನಿಗೂ ನೋವಾಗದಂತೆ, ಅಮ್ಮನ ಕಂತ್ರಿ ಬುದ್ಧಿಯನ್ನೂ ಶಾಂತ ರೀತಿಯಿಂದಲೇ ಹಿಮ್ಮೆಟ್ಟಿಸಿರುವ ಭೂಮಿಕಾ ಫ್ಯಾನ್ಸ್​ ದೃಷ್ಟಿಯಲ್ಲಿ ನಿಜವಾದ ನಾಯಕಿ ಆಗಿದ್ದಾಳೆ. 

ಹೌದು. ಗೌತಮ್​ ಮತ್ತು ಭೂಮಿಕಾ ಹತ್ತಿರವಾಗುತ್ತಿರುವ ವಿಷಯ ತಿಳಿಯುತ್ತಲೇ ಶಕುಂತಲಾ ದೇವಿ  ಜ್ಯೋತಿಷಿಯನ್ನು ಕರೆತಂದು ಆತನ ಬಾಯಲ್ಲಿ ಸುಳ್ಳು ಹೇಳಿಸಿದ್ದಾಳೆ. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್​ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದಾನೆ. ಇದನ್ನು ಕೇಳಿ ಗೌತಮ್​ಗೆ ಶಾಕ್​ ಆಗಿದೆ. ಶಕುಂತಲಾ ದೇವಿ ಕೂಡ ಶಾಕ್​ ಆದಂತೆ ನಟಿಸಿದ್ದಾಳೆ.  ಗೌತಮ್​ ಅಂತೂ ಚಿಕ್ಕಮ್ಮನ ಮೇಲೆ ಅಭಿಮಾನ, ಪ್ರೀತಿಯನ್ನೇ ಇಟ್ಟವ. ಯಾವುದೇ ಕಾರಣಕ್ಕೂ ಆಕೆಯ ವಿರುದ್ಧ ಅನುಮಾನ ಬರಲು ಸಾಧ್ಯವೇ ಇಲ್ಲ.  ಈ ವಿಷಯವನ್ನು ಗೌತಮ್​ ಗೆಳೆಯ ಆನಂದ್​ಗೆ ಹೇಳಿದ್ದಾನೆ ಬಿಟ್ಟರೆ ಪತ್ನಿಗೆ ಹೇಳಲಿಲ್ಲ. ಆತನಿಗೆ ಈಗ ಭೂಮಿಕಾ ಬೇಕು. ಯಾವುದೇ ಕಾರಣಕ್ಕೂ ಭೂಮಿಕಾಳನ್ನು ಕಳೆದುಕೊಳ್ಳಲು ಇಷ್ಟವಿಲ್ಲ. 

ಈದ್​ ಫ್ಯಾಮಿಲಿ ಫೋಟೋದಲ್ಲಿ ಅತ್ತಿಗೆ ಕರೀನಾರನ್ನೇ ಕಟ್​ ಮಾಡಿದ ಸೈಫ್​ ತಂಗಿ ಸೋನಾ! ಆಗಿದ್ದೇನು?

ಪತ್ನಿ ಭೂಮಿಕಾಳಿಗಾಗಿ  ಗೌತಮ್​, ಉರುಳು ಸೇವೆ ಮಾಡಿದ್ದಾನೆ, ನೆಲದ ಮೇಲೆ ಊಟ ಮಾಡಿದ್ದಾನೆ. ಭೂಮಿಕಾ ಇದೆಲ್ಲಾ ಏನು ಎಂದು ಕೇಳಿದಾಗ, ಮನೆಯವರಿಗಾಗಿ ಎಂದು ಗೌತಮ್​ ಹೇಳಿದ್ದಾನೆ.  ಪತಿಯ ಈ ಸ್ಥಿತಿ ಕಂಡು ಭೂಮಿಕಾ ಕಣ್ಣೀರಾಗಿದ್ದಾಳೆ.  ಆದರೆ ಅವಳಿಗೆ ವಿಷಯವೇ ಗೊತ್ತಿಲ್ಲ. ಆದರೆ ಅಸಲಿ ವಿಷಯವೇ ಬೇರೆಯಾಗಿತ್ತು. ಇದೀಗ, ಭೂಮಿಕಾ ಅತ್ತೆ ಶಕುಂತಲಾದೇವಿಯ ಕುತಂತ್ರ ಭೂಮಿಗೆ ತಿಳಿದೆ. ಶಕುಂತಲಾ ದೇವಿ ಮಗಳ ಬಳಿ  ತಾನು ಮಾಡಿದ ಕುತಂತ್ರದ ವಿಷಯ ಹೇಳಿದ್ದನ್ನು ಮಲ್ಲಿ ಕೇಳಿಸಿಕೊಂಡಿದ್ದಳು. ಅದನ್ನೀಗ ಅವಳು ಭೂಮಿಕಾಗೆ ಹೇಳಿದ್ದಾಳೆ. ತನ್ನ ಅಮ್ಮನಿಗೆ ಹುಷಾರು ಇಲ್ಲ ಎಂದುಕೊಂಡು ಗೌತಮ್​ ಕಷ್ಟಪಡುತ್ತಿದ್ದಾನೆ ಎಂದು ಭೂಮಿಕಾ ಅಂದುಕೊಂಡಿದ್ದಳು. ಆದರೆ ಅಸಲಿಗೆ ಗೌತಮ್​ ಭೂಮಿಕಾ ಸಲುವಾಗಿ ಹೀಗೆ ಮಾಡುತ್ತಿದ್ದ, ಅದೂ ಜ್ಯೋತಿಷಿಯ ಸುಳ್ಳು ಮಾತನ್ನು ಕೇಳಿಕೊಂಡು. ಇದೀಗ ಸತ್ಯ ಗೊತ್ತಾಗುತ್ತಿದ್ದಂತೆಯೇ ಭೂಮಿಕಾ ಸಿಟ್ಟು ನೆತ್ತಿಗೇರಿದೆ. 

ತಮ್ಮ ಜಾತಕದಲ್ಲಿ ಯಾವುದೇ ದೋಷವಿಲ್ಲ ಎಂದು ಸಾಬೀತು ಮಾಡಲು ಮನೆಯ ಗುರುಗಳನ್ನು ಕರೆಸಿ ಪಂಚಾಂಗ ಶ್ರವಣ ಮಾಡಿಸೋ ಪ್ಲ್ಯಾನ್​ ಮಾಡಿದ್ದಳು. ಏಕೆಂದರೆ ಏಕಾಏಕಿ ಶಕುಂತಲಾ ದೇವಿಯ ಕುತಂತ್ರವನ್ನು ಬಯಲು ಮಾಡುವುದು ಸುಲಭವಲ್ಲ. ಹೀಗೆ ಮಾಡಿದರೆ, ಗೌತಮ್​ ಪತ್ನಿಯ ಮೇಲೇ ಸಿಟ್ಟು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕೆ ಈ ಪ್ಲ್ಯಾನ್​ ಮಾಡಿದ್ದಾಳೆ.  ಮನೆಗೆ ಗುರೂಜಿಯನ್ನು ಕರೆಸಿದ್ದು, ಇವರಿಬ್ಬರ ಜಾತಕ ಸಿಕ್ಕಾಪಟ್ಟೆ ಚೆನ್ನಾಗಿದೆ ಎಂದು ಗುರೂಜಿ ಹೇಳಿದ್ದಾರೆ. ಈ ಮೂಲಕ ಗೌತಮ್​ಗೆ ಫುಲ್​ ಖುಷ್​ ಆಗಿದೆ. ಅತ್ತೆ ಶಕುಂತಲಾ ಮತ್ತು ನಾದಿನಿ ಮಾತ್ರ ಇಂಗು ತಿಂದ ಮಂಗನಂತಾಗಿದ್ದಾರೆ. 

ದೇವರೇನು ಹೂವಿನ ಸುರಿಮಳೆ ಸುರಿಸ್ತಾನಾ ಎಂದು ಚಾಂದನಿ ಕೇಳ್ತಿದ್ದಂತೆಯೇ ನಡೆದೇ ಹೋಯ್ತು ಪವಾಡ!


Latest Videos
Follow Us:
Download App:
  • android
  • ios